ಎಚ್‌ಡಿಕೆ ಸಹವಾಸ ಮಾಡಿದವರು ಯಾರೂ ಉದ್ಧಾರವಾದ ಇತಿಹಾಸ ಇಲ್ಲ: ವೀರಪ್ಪ ಮೊಯ್ಲಿ

Published : Jan 29, 2024, 06:59 AM IST
ಎಚ್‌ಡಿಕೆ ಸಹವಾಸ ಮಾಡಿದವರು ಯಾರೂ ಉದ್ಧಾರವಾದ ಇತಿಹಾಸ ಇಲ್ಲ: ವೀರಪ್ಪ ಮೊಯ್ಲಿ

ಸಾರಾಂಶ

 ವಿಶ್ವದ ಇತರ ಎಲ್ಲಾ ರಾಷ್ಟ್ರಗಳಲ್ಲಿಯೂ ರಾಜಕಾರಣದ ಮೇಲೆ ಧರ್ಮ ಪ್ರಭಾವ ಬೀರುವುದು ಕಡಿಮೆ ಆಗುತ್ತಿದೆ. ಆದರೆ ಭಾರತದಲ್ಲಿ ದುರದೃಷ್ಟಾವಶಾತ್ ರಾಜಕಾರಣದ ಮೇಲೆ ಧರ್ಮದ ಪ್ರಭಾವ ಹೆಚ್ಚುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಮಾಜಿ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ತಿಳಿಸಿದರು.

ಚಿಕ್ಕಬಳ್ಳಾಪುರ (ಜ.29):  ವಿಶ್ವದ ಇತರ ಎಲ್ಲಾ ರಾಷ್ಟ್ರಗಳಲ್ಲಿಯೂ ರಾಜಕಾರಣದ ಮೇಲೆ ಧರ್ಮ ಪ್ರಭಾವ ಬೀರುವುದು ಕಡಿಮೆ ಆಗುತ್ತಿದೆ. ಆದರೆ ಭಾರತದಲ್ಲಿ ದುರದೃಷ್ಟಾವಶಾತ್ ರಾಜಕಾರಣದ ಮೇಲೆ ಧರ್ಮದ ಪ್ರಭಾವ ಹೆಚ್ಚುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಮಾಜಿ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ತಿಳಿಸಿದರು.

ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಯಲುವಹಳ್ಳಿ.ಎನ್.ರಮೇಶ್ ಅಭಿಮಾನಿಗಳು ಹಾಗೂ ಸಮಾನ ಮನಸ್ಕರ ಸೇವಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಸಾಮೂಹಿಕ ಸೀಮಂತ ಕಾರ್ಯಕ್ರಮ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

 

ಪ್ರಧಾನಿ ಮೋದಿ ಉಪವಾಸದ ಬಗ್ಗೆ ಮೊಯ್ಲಿ ವ್ಯಂಗ್ಯ; ಬಿಜೆಪಿ ಮುಖಂಡರು ಆಕ್ರೋಶ

ಎಚ್ಡಿಕೆ ನಂಬಿದವರು ಗುಂಡಿಗೆ

ರಾಜ್ಯದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕ ಸ್ಥಾನಗಳನ್ನು ಗಳಿಸುತ್ತದೆ. ಆದರೆ ಇಷ್ಟೇ ಸ್ಥಾನ ಗಳಿಸುತ್ತದೆ ಎಂದು ಭವಿಷ್ಯ ಖಚಿತವಾಗಿ ಹೇಳುವುದಕ್ಕೆ ಆಗಲ್ಲ. ರಾಜ್ಯದಲ್ಲಿ ಬಿಜೆಪಿ ಮತ್ತು ಜಾತ್ಯತೀತ ಜನತಾದಳ ಪಕ್ಷ ಚುನಾವಣಾ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿರುವ ಬಗ್ಗೆ ವಿಶ್ಲೇಷಿಸಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧಿಕಾರಕ್ಕಾಗಿ ಯಾರ ಬಳಿಗಾದರೂ ಹೋಗುತ್ತಾರೆ, ಯಾರಿಗಾದರೂ ನಮಸ್ಕರಿಸುತ್ತಾರೆ ಅವರನ್ನು ಒಪ್ಪಿಕೊಂಡವರು ಗುಂಡಿಗೆ ಬೀಳುವುದಂತೂ ಖಚಿತ ಎಂದರು.

ನಾನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಪ್ರತಿನಿಧಿಸಿ ಕೇಂದ್ರದಲ್ಲಿ ಹಲವು ಖಾತೆಗಳನ್ನು ನಿಭಾಯಿಸಿದ್ದೇನೆ. ಮುಂಬರುವ 2024ರ ಚುನಾವಣೆಯಲ್ಲಿ ನನಗೆ ಟಿಕೆಟ್ ದೊರೆತು ಅವಕಾಶ ದೊರೆತರೆ ಈ ಕ್ಷೇತ್ರದ ಜನತೆ ನಾನು ಹಿಂದೆ ಮಾಡಿರುವ ಜನಪರ ಯೋಜನೆಗಳ ಕಾರಣದಿಂದ ನನ್ನನ್ನು ಬೆಂಬಲಿಸುವರು ಎಂಬ ನಿರೀಕ್ಷೆ ನನಗೆ ಇದೆ ಎಂದರು.

ಯೂಟರ್ನ್ ಹೊಡೆದ ಮೊಯ್ಲಿ

11 ದಿನ ಉಪವಾಸ ಮಾಡಿದ್ರೆ ಮನುಷ್ಯ ಬದುಕಲು ಸಾಧ್ಯವಿಲ್ಲ, ಮೋದಿ ವ್ರತದ ಮೇಲೆ ಅನುಮಾನ, ನಿಜವಾದ ಬ್ರಾಹ್ಮಣರು, ಸ್ವಾಮೀಜಿಗಳು ಮೋದಿಯನ್ನು ಗರ್ಭಗುಡಿಗೆ ಬಿಡಬಾರದಿತ್ತು ಎಂದು ಕಳೆದ ಮಂಗಳವಾರ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ತಾವು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಮೋಯ್ಲಿ, ಮೋದಿ ರವರ ಉಪವಾಸದ ಬಗ್ಗೆ ನಾನು ಹೇಳಿರುವ ಹೇಳಿಕೆಯನ್ನು ತಿರುಚಿ ಪ್ರಚಾರ ಮಾಡಲಾಗುತ್ತಿದೆ. ಡಾಕ್ಟರ್‌ಗಳು ಹೇಳಿರುವುದನ್ನು ನಾನು ಹೇಳಿದ್ದೇನೆ ಹೊರತು ಮೋದಿಯವರು 11 ದಿನ ಮಾಡಿದ ಉಪವಾಸದ ಬಗ್ಗೆ ಪ್ರತಿಕ್ರಿಯೆ ನನ್ನ ಸ್ವಂತದಲ್ಲ ಎಂದರು.

ಶ್ರೀರಾಮನಿಗೆ ಬಿಜೆಪಿಯವರ ಮೇಲೆ ವಿಶ್ವಾಸವಿಲ್ಲ: ವೀರಪ್ಪ ಮೊಯ್ಲಿ

ನಿತೀಶ್ ಕುಮಾರ್ ಅವರು ಇಂಡಿಯಾ ಮಹಾ ಘಟಬಂಧನ್‌ನಿಂದ ದೂರವಾಗುವುದರಿಂದ ಮಹಾ ಘಟಬಂಧನ್ ಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಅವರು ಇಂದಲ್ಲದಿದ್ದರೂ ನಾಳೆ ಆದರೂ ಹೋಗುವವರೇ ಆಗಿದ್ದರು ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಯಲವ ಹಳ್ಳಿ ಎನ್. ರಮೇಶ್, ಯುವ ಮುಖಂಡ ಯಲವಹಳ್ಳಿ ಜನಾರ್ಧನ್, ಲಕ್ಷ್ಮಣ್ ಪುರದ ಗಡ್ಡೆ ಕೃಷ್ಣಪ್ಪ, ಅವಲ ರೆಡ್ಡಿ, ಚಂದ್ರಣ್ಣ, ಕಳವಾರ ಶ್ರೀಧರ್, ಮತ್ತಿತರರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ