ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವಿನ ಮೈತ್ರಿ ವಿರುದ್ಧ ತೀವ್ರ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಎರಡೂ ಪಕ್ಷಗಳು ಪಾಕಿಸ್ತಾನದ ಪರ ಅನುಕಂಪ ಹೊಂದಿವೆ. ಪಾಕ್ ಬಳಿ ಪರಮಾಣು ಬಾಂಬ್ ಇದೆ ಎಂದು ಈ ಪಕ್ಷಗಳ ನಾಯಕರು ಭಾರತೀಯರನ್ನೇ ಹೆದರಿಸುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.
ಬಸ್ತಿ/ ಶ್ರಾವಸ್ತಿ (ಉ.ಪ್ರ.) : ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವಿನ ಮೈತ್ರಿ ವಿರುದ್ಧ ತೀವ್ರ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಎರಡೂ ಪಕ್ಷಗಳು ಪಾಕಿಸ್ತಾನದ ಪರ ಅನುಕಂಪ ಹೊಂದಿವೆ. ಪಾಕ್ ಬಳಿ ಪರಮಾಣು ಬಾಂಬ್ ಇದೆ ಎಂದು ಈ ಪಕ್ಷಗಳ ನಾಯಕರು ಭಾರತೀಯರನ್ನೇ ಹೆದರಿಸುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.
ಬುಧವಾರ ಉತ್ತರಪ್ರದೇಶದ ಬಸ್ತಿ ಮತ್ತು ಶ್ರಾವಸ್ತಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಮೋದಿ, ‘ಹಿಂದೆ ಬಾಂಬ್ ಹಿಡಿದುಕೊಂಡು ನಮಗೇ ಹೆದರಿಸಲು ಯತ್ನಿಸುತ್ತಿದ್ದ ಭಯೋತ್ಪಾದನೆಯ ಆಶ್ರಯದಾತರು, ಇಂದು ಆಹಾರಕ್ಕಾಗಿಯೇ ಬೇಡುವ ಪರಿಸ್ಥಿತಿ ಇದೆ. ಪಾಕಿಸ್ತಾನದ ಕಥೆ ಮುಗಿದೇ ಹೋಗಿದ್ದರೂ ಅವರ ಪರ ಅನುಕಂಪ ಹೊಂದಿರುವ ಕಾಂಗ್ರೆಸ್ ಮತ್ತು ಎಸ್‌ಪಿ, ಅವರ ಬಳಿ ಪರಮಾಣು ಬಾಂಬ್ ಇದೆ, ‘ಅವರ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು’ ಎಂದು ನಮಗೇ ಎಚ್ಚರಿಕೆ ನೀಡುತ್ತಿದ್ದಾರೆ. ಆದರೆ ಹಾಲಿ ಭಾರತದಲ್ಲಿರುವುದು ದುರ್ಬಲ ಕಾಂಗ್ರೆಸ್ ಸರ್ಕಾರ ಅಲ್ಲ, ಬಲಿಷ್ಠ ಮೋದಿ ಸರ್ಕಾರ ಎಂಬುದು ಅವರಿಗೆ ಗೊತ್ತಿಲ್ಲವೇ?
INDIA ಕೂಟ ಗೆದ್ದರೆ ಪ್ರಧಾನಿ ಆಗುವ ಯಾವುದೇ ಉದ್ದೇಶವಿಲ್ಲ: ಕೇಜ್ರಿವಾಲ್
ಭಾರತವನ್ನು ಹೆದರಿಸುವವರನ್ನು ಅವರ ನೆಲಕ್ಕೆ ನುಗ್ಗಿ ಹೊಡೆದು ಬರ್ತೀವಿ. 56 ಇಂಚಿನ ಎದೆ ಬಗ್ಗೆ ಅವರಿಗೆ ಗೊತ್ತಿಲ್ಲವೇ’ ಎಂದು ಮೋದಿ ಪ್ರಶ್ನಿಸಿದರು.ಈ ನಡುವೆ, ಈ ಬಾರಿ ಉತ್ತರಪ್ರದೇಶದಲ್ಲಿ ಇಂಡಿಯಾ ಮೈತ್ರಿಕೂಟ 80ರ ಪೈಕಿ 79 ಸ್ಥಾನ ಗೆಲ್ಲಲಿದೆ ಎಂಬ ಅಖಿಲೇಶ್ ಯಾದವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮೋದಿ, ಜೂ.4ರಂದು ಮತದಾರರು ಎರಡೂ ಪಕ್ಷಗಳ ನಾಯಕರನ್ನು ನಿದ್ದೆಯಿಂದ ಎಬ್ಬಿಸಲಿದ್ದಾರೆ. ಬಳಿಕ ಎರಡೂ ಪಕ್ಷಗಳು ಇವಿಎಂ ಮೇಲೆ ದೂಷಣೆ ಆರಂಭಿಸಲಿವೆ ಎಂದು ತಿರುಗೇಟು ನೀಡಿದರು.
ರಾಮಮಂದಿರ ವಿವಾದ:ಇದೇ ವೇಳೆ ರಾಮಮಂದಿರ ಉದ್ಘಾಟನೆಗೆ ನೀಡಲಾದ ಆಹ್ವಾನ ತಿರಸ್ಕರಿಸಿದ ಎರಡೂ ಪಕ್ಷಗಳ ನಾಯಕರ ಬಗ್ಗೆ ಕಿಡಿಕಾರಿದ ಮೋದಿ, ‘ಕಾಂಗ್ರೆಸ್‌ನ ಶೆಹಜಾದಾ ರಾಮಮಂದಿರದ ಕುರಿತ ಸುಪ್ರೀಂಕೋರ್ಟ್ ತೀರ್ಪನ್ನೇ ಬದಲಾಯಿಸುವ ಮಾತಾಡುತ್ತಾರೆ. ಅವರು ರಾಮಮಂದಿರಕ್ಕೆ ಮತ್ತೆ ಬಾಬ್ರಿ ಬೀಗ ಹಾಕುವ ಕನಸು ಕಾಣುತ್ತಿದ್ದಾರೆ. ರಾಮಲಲ್ಲಾನನ್ನು ಮರಳಿ ಟೆಂಟ್‌ಗೆ ಕಳುಹಿಸಲು ಉದ್ದೇಶಿಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಗೆ 305 ಸ್ಥಾನ: ಅಮೆರಿಕ ರಾಜಕೀಯ ತಜ್ಞ ಬ್ರೆಮ್ಮರ್ ಭವಿಷ್ಯ !
ಕೇಸರಿ ಉಲ್ಲೇಖಿಸಿ ಚಾಟಿ:ಕಾಂಗ್ರೆಸ್ ಪದೇ ಪದೇ ಸಂವಿಧಾನದ ಬಗ್ಗೆ ಮಾತನಾಡುತ್ತದೆ. ಆದರೆ ಅವರು ತಮ್ಮದೇ ಪಕ್ಷದ ಸಂವಿಧಾನವನ್ನೇ ಪಾಲಿಸುವುದಿಲ್ಲ. ಈ ಹಿಂದೆ ಸೀತಾರಾಂ ಕೇಸರಿ ಅವರನ್ನು ಸ್ನಾನದ ಕೋಣೆಯಲ್ಲಿ ಕೂಡಿ ಹಾಕಿ ಸೋನಿಯಾ ಗಾಂಧಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು ಎಂದು ಮೋದಿ ಕಿಡಿಕಾರಿದರು.ಕಾಂಗ್ರೆಸ್ ಸಂವಿಧಾನವನ್ನು ಬದಲಿಸಿ ದಲಿತರು ಮತ್ತು ಹಿಂದುಳಿದವರ ಮೀಸಲು ಕಿತ್ತುಕೊಂಡು ಮುಸ್ಲಿಮರಿಗೆ ನೀಡಲು ನಿರ್ಧರಿಸಿದೆ. ಕಾಂಗ್ರೆಸ್‌ನ ಈ ದಲಿತ ಮತ್ತು ಹಿಂದುಳಿದ ವಿರೋಧಿ ಸಂಚಿಗೆ ಸಮಾಜವಾದಿ ಪಕ್ಷ ಕೂಡಾ ಕೈಜೋಡಿಸಿದೆ ಎಂದು ಮೋದಿ ಆರೋಪಿಸಿದರು.ಜೊತೆಗೆ ಕಳೆದ 60 ವರ್ಷಗಳಿಂದ ಏನೂ ಮಾಡದ ಕಾಂಗ್ರೆಸ್, ಇದೀಗ ಬಿಜೆಪಿ ಮತ್ತು ಮೋದಿ ಮಾಡಿದ ಕೆಲಸಗಳನ್ನು ತಡೆಯಲು ಬಯಸಿದೆ. ಇದಕ್ಕಾಗಿ ವಿಪಕ್ಷಗಳು ಒಂದಾಗಿವೆ ಎಂದು ಮೋದಿ ಆರೋಪಿಸಿದರು.