Karnataka Politics: ಎರಡನೇ ಯೋಗಿ ಆದಿತ್ಯನಾಥ್ ಆಗ್ತಾರಾ ಅನಂತ್ ಕುಮಾರ್ ಹೆಗಡೆ?

By Govindaraj SFirst Published Apr 8, 2022, 10:01 PM IST
Highlights

ಜಿಲ್ಲೆಯಿಂದ 6 ಬಾರಿ ಗೆದ್ದು ಸಂಸದರಾಗಿ ಮುಂದುವರಿದಿರುವ ಸಂಸದ ಅನಂತ್ ಕುಮಾರ್ ಹೆಗಡೆ ಈ ಬಾರಿ ರಾಜ್ಯ ರಾಜಕಾರಣಕ್ಕೆ ಎಂಟ್ರಿ‌ ನೀಡುತ್ತಿದ್ದಾರೆ ಎಂಬ ವಿಷಯ ಎಲ್ಲೆಡೆ ಹಬ್ಬಲಾರಂಭಿಸಿದೆ.

ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಏ.08): ಜಿಲ್ಲೆಯಿಂದ 6 ಬಾರಿ ಗೆದ್ದು ಸಂಸದರಾಗಿ (MP) ಮುಂದುವರಿದಿರುವ ಸಂಸದ ಅನಂತ್ ಕುಮಾರ್ ಹೆಗಡೆ (Ananth Kumar Hegde) ಈ ಬಾರಿ ರಾಜ್ಯ ರಾಜಕಾರಣಕ್ಕೆ (State Politics) ಎಂಟ್ರಿ‌ ನೀಡುತ್ತಿದ್ದಾರೆ ಎಂಬ ವಿಷಯ ಎಲ್ಲೆಡೆ ಹಬ್ಬಲಾರಂಭಿಸಿದೆ. ಈ ವಿಚಾರ ಕೇಳಿ ಬಿಜೆಪಿ (BJP) ಫೇವರ್ ಆಗಿರೋ ಜನರಿಗೆ ಸಾಕಷ್ಟು ಖುಷಿಯಾಗಿದ್ದು, ಹೆಗಡೆ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟರೆ ಅವರು ಎರಡನೇ ಯೋಗಿ ಆದಿತ್ಯನಾಥ್ (Yogi Adityanath) ಆಗೋದಲ್ಲದೇ, ಕರ್ನಾಟಕ (Karnataka) ಉತ್ತರ ಪ್ರದೇಶವಾಗುತ್ತದೆ (Uttar Pradesh) ಅನ್ನೋ ಅಭಿಪ್ರಾಯ ಜನರಿಂದ ವ್ಯಕ್ತಪಡಿಸಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ.

Latest Videos

ರಾಜ್ಯ ರಾಜಕಾರಣಕ್ಕೆ ಎಂಟ್ರಿಯಾಗ್ತಾರಾ: ಹಠವಾದಿ, ನಿಷ್ಠುರವಾದಿ, ಮುಖಕ್ಕೆ ಹೊಡೆದಂತೆ ಮಾತನಾಡುವಾತ, ಯಾರಿಗೂ ಕ್ಯಾರೇ ಅನ್ನದ ಸೊಕ್ಕಿನ ವ್ಯಕ್ತಿ, ಪ್ರಖರ ಭಾಷಣಕಾರ, ಕಠೋರ ಹಿಂದುತ್ವವಾದಿ ಹೀಗೆ ಹಲವು ಖ್ಯಾತಿ, ಅಪಖ್ಯಾತಿಗಳನ್ನು ಪಡೆದಿರುವವರು ಉತ್ತರಕನ್ನಡ ಜಿಲ್ಲೆಯ ಸಂಸದ ಅನಂತ ಕುಮಾರ್ ಹೆಗಡೆ. ಉತ್ತರಕನ್ನಡ ಜಿಲ್ಲೆಯಿಂದ ಸಂಸದ ಸ್ಥಾನಕ್ಕೆ 6 ಬಾರಿ ಗೆದ್ದಿರುವ ಅವರು ಕೊಂಚ ಸಮಯಗಳ ಕಾಲ ಕೇಂದ್ರ ಕೌಶಲ್ಯಾಭಿವೃದ್ಧಿ ಇಲಾಖೆಯ ಸಚಿವರಾಗಿದ್ದರು. ಆದರೆ, ಕಾರಣಾಂತರಗಳಿಂದ ಈ ಸ್ಥಾನವನ್ನು ಕಳೆದುಕೊಂಡು ಸಂಸದರ ಸ್ಥಾನಕಷ್ಟೇ ಸದ್ಯಕ್ಕೆ ತೃಪ್ತಿ ಪಡೆದುಕೊಂಡಿದ್ದಾರೆ. 

ಆದರೆ, ‘ಫೈರ್ ಬ್ರಾಂಡ್’ ಖ್ಯಾತಿಯ ಸಂಸದ ಅನಂತಕುಮಾರ್ ಹೆಗಡೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವುದು ಡೌಟು ಎನ್ನಲಾಗುತ್ತಿದ್ದು, ಕೇಂದ್ರ ಬಿಟ್ಟು ರಾಜ್ಯ ರಾಜಕಾರಣದತ್ತ ಮುಖ ಮಾಡಲಿದ್ದಾರೆ ಎಂದು ಸುದ್ದಿ ಹರಿದಾಡತೊಡಗಿದೆ. ಉತ್ತರಕನ್ನಡ‌ ಜಿಲ್ಲೆಯಲ್ಲಿ ಬಿಜೆಪಿಯ ಜನಪ್ರತಿನಿಧಿಗಳ ಪಾಲಿಗೆ ಒಂದು ರೀತಿಯ ಹೈಕಮಾಂಡ್. ತನ್ನ ಬೆಂಕಿ ಭಾಷಣ ಹಾಗೂ ಜನಪರ ಕಾರ್ಯಗಳ ಮೂಲಕ ಮತ ಬ್ಯಾಂಕ್ ಗಳಿಸಿ ಸಂಸದರಾಗಿರುವ ಅನಂತ ಕುಮಾರ್ ಹೆಗಡೆ 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆದ ನಂತರ ಮುಂದಿನ ಚುನಾವಣೆಯಲ್ಲಿ ನಿಲ್ಲುವ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ 2019ರಲ್ಲಿ ಮತ್ತೆ ಬಿಜೆಪಿಯಿಂದ ಅಭ್ಯರ್ಥಿಯಾಗಿ ಅನಂತ್ ಭರ್ಜರಿ ಗೆಲುವು ಗಳಿಸಿದ್ದರು. 

MM Kalburgi Murder Case: ಕಲಬುರ್ಗಿ ಹತ್ಯೆ ಕೇಸ್ ವಿಚಾರಣೆ ಮೇ 10ಕ್ಕೆ ಮುಂದೂಡಿಕೆ

ಆದರೆ, ಅನಾರೋಗ್ಯ ಮತ್ತು ರಾಜಕೀಯ ವೈರಾಗ್ಯದಿಂದಾಗಿ ಮುಂದಿನ ಬಾರಿ ರಾಜಕೀಯ ಜೀವನಕ್ಕೆ ಇತಿಶ್ರೀ ಹಾಡೋದಾಗಿ ಸಾರ್ವಜನಿಕವಾಗಿಯೇ ಹೇಳಿಕೆಯೂ ನೀಡಿದರು. ರಾಜಕೀಯದಲ್ಲಿ ತೀವ್ರ ನಿರಾಸಕ್ತಿ ತೋರಿಸುತ್ತಿದ್ದ ಅನಂತ‌ ಕುಮಾರ್ ಹೆಗಡೆ ಇದೀಗ  ಮುಂದಿನ ಚುನಾವಣೆಯಲ್ಲಿ ಶಿರಸಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎನ್ನಲಾಗಿದ್ದು, ಶಿರಸಿ ಕ್ಷೇತ್ರದಿಂದ ಗೆದ್ದು ಬಂದಿರುವ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಲೋಕಸಭೆಗೆ ಸ್ಪರ್ಧಿಸುವಂತೆ ಮನವೊಲಿಸಲಿದ್ದಾರೆ. ಒಂದು ವೇಳೆ ಅನಂತ ಕುಮಾರ್ ಹೆಗಡೆ ರಾಜ್ಯ ರಾಜಕಾರಣಕ್ಕೆ ಎಂಟ್ರಿಕೊಟ್ಟರೆ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯೂ ಆಗಬಹುದಲ್ಲದೇ, ಕರ್ನಾಟಕದ ಯೋಗಿ ಆದಿತ್ಯನಾಥ್ ಕೂಡಾ ಆಗೋದ್ರಲ್ಲಿ ಎರಡು ಮಾತಿಲ್ಲ ಅಂತಾರೆ ಜನರು. 

ಅಂದಹಾಗೆ, ಕೇಂದ್ರ ಸರಕಾರ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥರನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸಿ ಮುಖ್ಯಮಂತ್ರಿ ಮಾಡಿದಂತೆ ರಾಜ್ಯದಲ್ಲಿ ಅನಂತ ಕುಮಾರ್ ಹೆಗಡೆಯವರನ್ನು ಕೂಡಾ ರಾಜ್ಯ ರಾಜಕಾರಣ ಪ್ರವೇಶ ಮಾಡುವಂತೆ ಮಾಡಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸಬಹುದು ಎಂಬ ಮಾತುಗಳೂ ಕೇಳಿಬಂದಿದೆ. ಆದರೆ, ಅನಂತ ಕುಮಾರ್ ಹೆಗಡೆಯವರಿಗಿಂತಲೂ ಹಿರಿಯರಾಗಿರುವ ಹಾಗೂ ಅಂಕೋಲಾ ಮತ್ತು ಶಿರಸಿ ವಿಧಾನಸಭಾ ಕ್ಷೇತ್ರದಿಂದ ಒಟ್ಟು 6 ಬಾರಿ ಗೆದ್ದಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಸಮರ್ಥರಾಗಿದ್ದಾರೆ. 

ಆದರೆ, ಅನಂತ ಕುಮಾರ್ ಹೆಗಡೆಯವರಿಗೆ ಹೋಲಿಸಿದಲ್ಲಿ ಕೊಂಚ ಸಾಫ್ಟ್ ಆಗಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಆರ್‌ಎಸ್‌ಎಸ್‌ಗೆ ಬದ್ಧರಾಗಿರುವುದರಿಂದ ಅನಂತ ಕುಮಾರ್ ಹೆಗಡೆಯವರ ಹಿಂದೆ ನಿಂತು ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತನ್ನ ಕ್ಷೇತ್ರವನ್ನು ಹೆಗಡೆಯವರಿಗೆ ಬಿಟ್ಟುಕೊಡಬಹುದು ಅನ್ನೋ ಮಾತುಗಳೂ ಕೇಳಿಬಂದಿದೆ. ಇನ್ನು ಕಳೆದ ಬಾರಿಯೂ ಅನಂತ ಕುಮಾರ್ ಹೆಗಡೆಯವರು ತಾನು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿ ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ಆದರೆ, ಬಳಿಕ ಮತ್ತೆ ಸಂಸದ ಸ್ಥಾನಕ್ಕೇ ಸ್ಪರ್ಧಿಸಿ ಗೆದ್ದಿದ್ದರು. ಇವರ ಪ್ರವೇಶ ರಾಜ್ಯ ರಾಜಕಾರಣಕ್ಕಾದಲ್ಲಿ ಹೊಸ ಮನ್ವಂತರ ಸೃಷ್ಠಿಯಾಗಬಹುದು ಅನ್ನೋ ಅಭಿಪ್ರಾಯಗಳೂ ವ್ಯಕ್ತವಾಗಿವೆ. 

ಪಂಚನದಿಗಳ ಬೀಡು ವಿಜಯಪುರದಲ್ಲಿ ನೀರಿಗಾಗಿ ಶುರುವಾಗಿದೆ ರೈತರ ಪರದಾಟ.!

ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಸಂಸದ ಅನಂತ‌ಕುಮಾರ್ ಹೆಗಡೆ ಈ ಬಾರಿ ರಾಜ್ಯ ರಾಜಕಾರಣಕ್ಕೆ ಎಂಟ್ರಿಯಾಗ್ತಾರೆ ಅನ್ನೋ ಮಾತುಗಳು ಕೇಳಿಬಂದಿದ್ದು, ಅವರು ನಿಜವಾಗಿಯೂ ರಾಜ್ಯ ರಾಜಕಾರಣಕ್ಕೆ ಎಂಟ್ರಿಯಾಗ್ತಾರಾ ಅಥವಾ ಸಂಸದ ಸ್ಥಾನಕ್ಕೇ‌ ಮತ್ತೆ ಸ್ಪರ್ಧಿಸ್ತಾರಾ ಅನ್ನೋದು ಕಾದು ನೋಡಬೇಕಷ್ಟೇ. ಆದರೆ, ಅನಂತ ಕುಮಾರ್ ಹೆಗಡೆಯವರು ರಾಜ್ಯದ ರಾಜಕಾರಣದಲ್ಲಿ ಸ್ಪರ್ಧಿಸಿದಲ್ಲಿ ಬಿಜೆಪಿ ಕಾರ್ಯಕರ್ತರು ಖುಷಿ ಪಡೋದ್ರಲ್ಲಿ ಎರಡು ಮಾತಿಲ್ಲ. 

click me!