Karnataka Politics: ಅಲ್‌ ಖೈದಾ ಮತ್ತು ಕಾಂಗ್ರೆಸ್ ಒಂದೇ ಕಡೆ ಬ್ಯಾಟಿಂಗ್: ಸಿ.ಟಿ.ರವಿ

By Govindaraj S  |  First Published Apr 8, 2022, 6:41 PM IST

ಕಾಂಗ್ರೆಸ್ ಹೋಲಿಕೆ ಮಾಡುವುದಾದರೆ ಕಾಂಗ್ರೆಸ್-ಅಲ್‌ ಖೈದಾ ಮಧ್ಯೆ ಹೋಲಿಕೆ ಮಾಡಿಕೊಳ್ಳಲಿ, ಆರ್.ಎಸ್.ಎಸ್. ಮೇಲೆ ಅಲ್ಲ. ಆರ್.ಎಸ್.ಎಸ್. ದೇಶಭಕ್ತ ಸಂಘಟನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಜಿ ಸಿಎಂ ಸಿದ್ದು ವಿರುದ್ಧ ಕಿಡಿಕಾರಿದ್ದಾರೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಏ.08): ಕಾಂಗ್ರೆಸ್ (Congress) ಹೋಲಿಕೆ ಮಾಡುವುದಾದರೆ ಕಾಂಗ್ರೆಸ್-ಅಲ್‌ ಖೈದಾ ಮಧ್ಯೆ ಹೋಲಿಕೆ ಮಾಡಿಕೊಳ್ಳಲಿ, ಆರ್.ಎಸ್.ಎಸ್. ಮೇಲೆ ಅಲ್ಲ. ಆರ್.ಎಸ್.ಎಸ್. (RSS) ದೇಶಭಕ್ತ ಸಂಘಟನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಮಾಜಿ ಸಿಎಂ ಸಿದ್ದು ವಿರುದ್ಧ ಕಿಡಿಕಾರಿದ್ದಾರೆ. ಅಲ್‌ ಖೈದಾ ಬಿಡುಗಡೆ ಮಾಡಿರುವ ವಿಡಿಯೋ ಕುರಿತು ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸೋಲಿನ ಹತಾಶೆಯಿಂದ ಬುದ್ಧಿ ಭ್ರಮಣೆಯಾದಂತೆ ಮಾತನಾಡುತ್ತಿದೆ. 

Tap to resize

Latest Videos

ಉತ್ತರ ಪ್ರದೇಶದಲ್ಲಿ (Uttar Pradesh) 399 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ 387ರಲ್ಲಿ ಠೇವಣಿ ಸಿಗದಿದ್ದರೆ ಹೇಗಾಗಬೇಡ, ಈ ಮಧ್ಯೆ ಪಂಜಾಬ್‌ನಲ್ಲೂ (Punjab) ಸರ್ಕಾರ ಕಳ್ಕೊಂಡು ಹತಾಶರಾಗಿ ಬುದ್ಧಿ ಭ್ರಮಣೆಯಾದಂತೆ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಆರ್.ಎಸ್.ಎಸ್. ದೇಶಭಕ್ತ ಹಾಗೂ ದೇಶಕಾಯುವ ಸಂಘಟನೆ. ಅಲ್‌ ಖೈದಾ ಬಾಂಬಿನ ಮೇಲೆ ವಿಶ್ವಾಸವಿಟ್ಟಿರೋ ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆ. ಅಲ್‌ ಖೈದಾ-ಕಾಂಗ್ರೆಸ್ ಒಂದೇ ಕಡೆ ಬ್ಯಾಟಿಂಗ್ ಮಾಡುತ್ತಿದ್ದಾರೆ. 

ಕಾಂಗ್ರೆಸ್ ಹೋಲಿಕೆ ಮಾಡುವುದಾದರೆ ಕಾಂಗ್ರೆಸ್-ಅಲ್‌ ಖೈದಾ ಮಧ್ಯೆ ಹೋಲಿಕೆ ಮಾಡಬೇಕು, ಆರ್.ಎಸ್.ಎಸ್. ಮಧ್ಯೆ ಅಲ್ಲ. ಆಗ ಸೂತ್ರಧಾರಿ ಅಲ್‌ ಖೈದಾನೋ, ಪಾತ್ರದಾರಿ ಕಾಂಗ್ರೆಸ್ಸೋ ಗೊತ್ತಿಲ್ಲ ಅದು ಗೊತ್ತಾಗಬೇಕು ಎಂದರು. ಇವೆರಡರ ನಡುವೆ ಹೋಲಿಕೆ ಬುದ್ಧಿ ಇಲ್ಲದವರು ಮಾತ್ರ ಮಾಡುತ್ತಾರೆ. ಕಾಂಗ್ರೆಸ್ಸಿಗರು ಅಲ್‌ ಖೈದಾ ಮೇಲೆ ಸಿಂಪಥಿ ತೋರುತ್ತಿದ್ದಾರೆ. ರಾಷ್ಟ್ರಭಕ್ತ ಸಂಘಟನೆ ಜೊತೆ ಹೋಲಿಕೆ ಮಾಡುತ್ತಾ ಅಲ್‌ ಖೈದಾಗೆ ವಕಾಲತ್ತು ವಹಿಸಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. 

ಬೆಲೆ ಏರಿಕೆ ಖಂಡಿಸಿ ತಾಲೂಕು ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ

ಕಾಂಗ್ರೆಸ್ ಸತ್ಯದ ಪರ ನಿಲ್ಲಲಿ: ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಲೆಕ್ಕಾಚಾರ ಹಾಕಿತ್ತು. ಹಿಜಾಬ್ ವಿವಾದ ಪಂಚರಾಜ್ಯ ಚುನಾವಣೆಯಲ್ಲಿ ಲಾಭ ತರಲಿದೆ ಎಂದು ಭಾವಿಸಿತ್ತು. ಆದರೆ, ಅದು ಆಗಲಿಲ್ಲ. ಈಗಲಾದರೂ ಕಾಂಗ್ರೆಸ್ ಸತ್ಯದ ಪರ ನಿಲ್ಲಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್‌ಗೆ ಸತ್ಯದ ದಾರಿ ತೋರಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಹಿಜಬ್ ಒಂದು ಸ್ಕೂಲಿನ ಸಮಸ್ಯೆಯಾಗಿತ್ತು. ಮೊದಲು ಟ್ವೇಟ್ ಮಾಡಿದ್ದು ಸಿದ್ದರಾಮಯ್ಯ.

ಆಮೇಲೆ ರಾಹುಲ್ ಗಾಂಧಿ-ಪ್ರಿಯಾಂಕ ಗಾಂಧಿ. ಆಗ ಅದು ನ್ಯಾಷನಲ್ ನ್ಯೂಸ್ ಆಯ್ತು, ಪಿ.ಎಫ್.ಐ. ಹೋರಾಟಕ್ಕೆ ಇಳಿಯಿತು. ವಕೀಲರ ಮೂಲಕ ಅವರಿಗೆ ಕಾನೂನಿನ ಅರಿವನ್ನು ಕೊಡುವ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು. ಯಾರ್ಯಾರು ವಕಾಲತ್ತು ವಹಿಸಿದ್ದರೋ ಅವರೆಲ್ಲಾ ಕಾಂಗ್ರೆಸ್ ಬೆಂಬಲಿಗರೇ ಆಗಿದ್ದರು. ಅವರು ವಕಾಲತ್ತು ವಹಿಸಿರುವುದು ಕಾಕತಾಳಿಯ ಎಂದು ಭಾವಿಸುವುದಿಲ್ಲ ಎಂದರು. ಇದರ ಹಿಂದೆ ಯಾರ್ಯಾರಿದ್ದಾರೆ ಎಂದು ಸ್ಪಷ್ಟವಾಗುತ್ತೆ. ನಾವು ಮೊದಲು ಪಿ.ಎಫ್.ಐ. ಹಾಗೂ ಕಾಂಗ್ರೆಸ್ ಮಾತ್ರ ಇದೆ ಎಂದು ಭಾವಿಸಿದ್ದೇವೆ. ಈಗ ಅಲ್ಖೈದಾ ಕೂಡ ಇದೆ. 

ಕಾಂಗ್ರೆಸ್ ಯೂನಿಫಾರಂ ಪರ ನಿಲ್ಲಲಿ. ಯೂನಿಫಾರಂ ಮಾಡಿದ್ದು ನಾವಲ್ಲ. 1983ರಲ್ಲಿ. ಆಗ ನಮ್ಮ ಸರ್ಕಾರ ಇರಲಿಲ್ಲ. ನಮ್ಮದು ಈಗೀಗ ಬಂದ ಸರ್ಕಾರ. ಅಂದು ಜನತಾ ಸರ್ಕಾರ ಯೂನಿಫಾರಂ ಮಾಡಿದ್ದು. ಈಗ ಯೂನಿಫಾರಂ ಇರಬೇಕಾ, ಹಿಜಾಬ್ ಇರಬೇಕಾ ಎಂಬ ಪ್ರಶ್ನೆ ಬಂದರೆ ಹೊರಗಡೆ ಹಿಜಾಆಬ್ ಹಾಕಬಹುದು. ಸ್ಕೂಲಿನಲ್ಲಿ ಯೂನಿಫಾರಂ. ಕಾಂಗ್ರೆಸ್ ನಿಲುವೇನು. ಯೂನಿಫಾರಂ ಪರವೋ-ಇಲ್ಲವೋ ಮೊದಲು ಅದನ್ನ ಸ್ಪಷ್ಟಪಡಿಸಲಿ. ಆಗ ಯಾರು ಅಲ್ಖೈದಾಕೆ ಮ್ಯಾಚ್ ಆಗುತ್ತಾರೆ ಗೊತ್ತಾಗುತ್ತೆ ಎಂದು ಸಿದ್ದು-ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದ್ದಾರೆ

Chikkamagaluru Communal Harmony: ಧರ್ಮ ಸಂಘರ್ಷದ ಕಿಚ್ಚಿನ ನಡುವೆ ಮಲೆನಾಡಲ್ಲಿ ಸಾಮರಸ್ಯದ ಹೆಜ್ಜೆ

ಬೆಲೆ ಏರಿಕೆ ಉಕ್ರೇನ್ ಯುದ್ದ ಕಾರಣ: ಕೊವೀಡ್ ಮತ್ತು ಉಕ್ರೇನ್- ರಷ್ಯ ನಡುವೆ ನಡೆಯುತ್ತಿರುವ ಯುದ್ದದ ಕಾರಣಕ್ಕೆ ನಮ್ಮ ದೇಶದಲ್ಲಿ ತೈಲ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ ಎಂದು ಶಾಸಕ ಸಿ.ಟಿ.ರವಿ ಸಮರ್ಥಸಿಕೊಂಡರು.ಯುದ್ಧ ಆರಂಭವಾದ ನಂತರ ಎಲ್ಲ ದೇಶಗಳಲ್ಲೂ ಬೆಲೆ ಜಾಸ್ತಿ ಆಗಿದೆ. ಹಾಗೆಯೇ ಭಾರತದಲ್ಲೂ ಜಾಸ್ತಿ ಆಯ್ತು. ಇದಕ್ಕೆ ಮೋದಿ ಕಾರಣ ಎನ್ನುವುದು ನಾನು ಒಪ್ಪುವುದಿಲ್ಲ. ಕೋವಿಡ್, ಯುದ್ಧದಿಂದ ಬೆಲೆ ಏರಿಕೆಗೆ ಕಾರಣ. ಬೆಲೆಏರಿಕೆಗೆ ಮೋದಿ ಕಾರಣ ಎನ್ನುವವರಿಗೆ ಜಗತ್ತಿನ ವಿದ್ಯಮಾನಗಳ ಅರಿವಿಲ್ಲವೇ ಎಂದು ಪ್ರಶ್ನಿಸಿದರು.

ಪತ್ರಕರ್ತರಿಗಂತೂ ಮಂತ್ರಿ ಭಾಗ್ಯ ಸಿಗಲ್ಲ: ಮಂತ್ರಿ ಆಗುವವರೇ ತಲೆ ಕೇಡಿಸಿಕೊಂಡಿಲ್ಲ. ಅವರೇ ಚುನಾವಣಾ ಮೂಡ್‍ಗೆ ಹೋಗಿದ್ದಾರೆ. ನೀವ್ಯಾಕೆ ಇಷ್ಟ ತಲೆ ಕೆಡಿಸಿಕೊಂಡಿದ್ದೀರಾ. ಪತ್ರಕರ್ತರಿಗಂತೂ ಸಿಗಲ್ಲ ಎಂದು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಸಚಿವ ಸಂರ್ಪು ವಿಸ್ತರಣೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ನಗೆ ಚಟಾಕಿ ಹಾರಿಸಿ ಮಂತ್ರಿ ಆಗುವವರೇ ತಲೆ ಕೆಡಿಸಿಕೊಂಡಿಲ್ಲ ನೀವ್ಯಾಕೆ ಟೆನ್ಷನ್ ಆಗ್ತೀರಾ ಸುಮ್ಮನಿರಿ ಎಂದಿದ್ದಾರೆ. ಸಿ.ಟಿ.ರವಿಯವರ ಈ ಮಾರ್ಮಿಕ ಉತ್ತರ ರಾಜ್ಯ ಬಿಜೆಪಿಗೆ ಹೈಕಮಾಂಡ್ ಸಚಿವ ಸಂಪುಟ ವಿಸ್ತರಣೆಗಿಂತ ಚುನಾವಣೆಗೆ ತಯಾರಾಗುವಂತೆ ಸೂಚನೆ ನೀಡದ್ಯಾ ಎಂಬ ಪ್ರಶ್ನೆ ಮೂಡಿಸಿದೆ.

click me!