ರಾಜ್ಯ ಸಚಿವರ ಪಟ್ಟಿ ತಯಾರು ಮಾಡೋ ಹೊಣೆ ಈ ಮೂವರು ನಾಯಕರ ಹೆಗಲಿಗೆ!

Published : Apr 08, 2022, 04:33 PM ISTUpdated : Apr 08, 2022, 05:32 PM IST
ರಾಜ್ಯ ಸಚಿವರ ಪಟ್ಟಿ ತಯಾರು ಮಾಡೋ ಹೊಣೆ ಈ ಮೂವರು ನಾಯಕರ ಹೆಗಲಿಗೆ!

ಸಾರಾಂಶ

ಕರ್ನಾಟಕದ ಕೊನೆಯ ಸಂಪುಟ ಕಸರತ್ತನ್ನು ಮುಗಿಸಿಲು ಬಿಜೆಪಿ ಹೈಕಮಾಂಡ್ ಸಚಿವರ ಪಟ್ಟಿ ಸಿದ್ದಪಡಿಸಲು ತ್ರಿಮೂರ್ತಿಗಳಿಗೆ ಹೊಣೆ ಹೊರಿಸಿದೆ. ಅಷ್ಟಕ್ಕೂ ಯಾರು ಆ ನಾಯಕರು? ಇಲ್ಲಿದೆ ವಿವರ

ಇಂಡಿಯಾ ರೌಂಡ್ಸ್, ಡೆಲ್ಲಿ ಮಂಜು

ನವದೆಹಲಿ(ಏ.08): `ತ್ರಿಮೂರ್ತಿಗಳೇ ಕೂತು ಸಚಿವರ ಪಟ್ಟಿ ತಯಾರು ಮಾಡಿ'..! ಇದು ಭಾರತೀಯ ಜನತಾ ಪಕ್ಷದ ಹೈಕಮಾಂಡ್ ಫಾರ್ಮಾನು. ಎರಡು ದಿನಗಳ ಪ್ರವಾಸ ಮುಗಿಸಿ ದೆಹಲಿಯಿಂದ ಬೆಂಗಳೂರಿಗೆ ಹೊರಟ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರಿಗೆ ಪಕ್ಷದ ವರಿಷ್ಠರು ಕೊಟ್ಟಿರುವ ಸೂಚನೆಯೂ ಕೂಡ ಇದೆ.

ಕೊನೆಯ ಅಥವಾ ಫೈನಲ್ ಸಂಪುಟದ ಕಸರತ್ತು ಮುಗಿಸಬೇಕು ಅನ್ನೋ ಒತ್ತಡ ಸಚಿವಾಕಾಂಕ್ಷಿಗಳಿAದ ಶುರುವಾಗಿತ್ತು. ಇದೇ ವೇಳೆ ದೆಹಲಿ ಭೇಟಿಯನ್ನು ಮುಖ್ಯಮಂತ್ರಿಗಳು ನಿಗಧಿ ಮಾಡಿಕೊಂಡ ಬೆನ್ನಲ್ಲೇ ಏನಾದರೂ ಸರಿ ಕೊನೆಯ ಭಾರಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕು ಎನ್ನುವವರು ದೆಹಲಿ ಮಟ್ಟದಲ್ಲಿ ತಮ್ಮ ಗಾಡ್‌ಫಾದರ್‌ಗಳನ್ನು ಹಿಡಿದು ಲಾಬಿ ಶುರು ಮಾಡಿದರು. ಅಲ್ಲದೇ ಕೆಲವರೂ ದೆಹಲಿಗೆ ಬಂದು ಖುದ್ದೂ ಗಾಡಫಾದರ್‌ಗಳನ್ನು ಮಾತಾಡಿಸಿ, ಅವಕಾಶಕ್ಕೆ ಕೋರಿಕೆ ಇಟ್ಟರು. ಕರ್ನಾಟಕದ ನೀರಾವರಿ ಯೋಜನೆಗಳಿಗೆ ಕೇಂದ್ರದ ಅನುದಾನ ಮತ್ತು ಅನುಮತಿ ಪಡೆಯಲು ಬಂದಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಸಹಜ ಅನ್ನಿಸಿದರೂ ಒಲ್ಲದ ಮನಸ್ಸಿನಿಂದಲೇ ಹೈಕಮಾಂಡ್ ನಾಯಕರು, ಪಕ್ಷದ ರಾಷ್ಟಿçÃಯ ಅಧ್ಯಕ್ಷರನ್ನು ಭೇಟಿ ಮಾಡಿ ಚರ್ಚಿಸಿದರು.

ಗಾಂಧಿಗಳೇ ಅಧಿಕಾರದಲ್ಲಿದ್ದರೆ ವೋಟು ಬೀಳೋದಿಲ್ಲ, ಗಾಂಧಿಗಳು ಅಧಿಕಾರ ಬಿಟ್ರೆ ಪಕ್ಷ ಉಳಿಯೋದಿಲ್ಲ..!

ಸಂಪುಟ ಮತ್ತು ಸಂಘಟನೆ ಎರಡೂ ವಿಷಯಗಳ ಬಗ್ಗೆ ಮುಖ್ಯಮಂತ್ರಿಗಳು ಜೆ.ಪಿ.ನಡ್ಡಾ ಅವರ ಮುಂದೆ ಸುಮಾರು ೪೫ ನಿಮಿಷಗಳ ಕಾಲ ಬಿಚ್ಚಿಟ್ಟರು. ಒಂದಲ್ಲ ಅಂತ ಎರಡ ಬಾರಿ ನಡ್ಡಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ ಬೊಮ್ಮಾಯಿ, ಸಂಪುಟ ಪುನರ್ ರಚನೆ ಮಾಡಿದರೆ ಏನು ? ವಿಸ್ತರಣೆ ಮಾಡಿದರೆ ಏನು ? ಅನ್ನೋ ವಿವರಗಳನ್ನು ನಡ್ಡಾ ಅವರ ಮುಂದೆ ಇಟ್ಟರಾದರೂ ಈ ವಿಚಾರದಲ್ಲಿ ಹೈಕಮಾಂಡ್ ಇನ್ನೂ ಹೆಚ್ಚಿನ ಮಾಹಿತಿ ನಿರೀಕ್ಷೆ ಮಾಡಿತು.

ತ್ರಿಮೂರ್ತಿಗಳಿಗೆ ಹೊಣೆ : ಕರ್ನಾಟಕದ ಕೊನೆಯ ಸಂಪುಟ ಕಸರತ್ತನ್ನು ಮುಗಿಸಿಲು ಬಿಜೆಪಿ ಹೈಕಮಾಂಡ್ ಸಚಿವರ ಪಟ್ಟಿ ಸಿದ್ದಪಡಿಸಲು ತ್ರಿಮೂರ್ತಿಗಳಿಗೆ ಹೊಣೆ ಹೊರಿಸಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮೂರು ಮಂದಿ ಕೂತು ಚರ್ಚಿಸಿ ಪಟ್ಟಿ ಸಿದ್ದ ಪಡಿಸಬೇಕಿದೆ.

ಗುಜರಾತ್ ಮಾಡೆಲ್, ಯುವ ಸಂಪುಟ, ಹೊಸಬರಿಗೆ ಅವಕಾಶ, ಹಳಬರಿಗೆ ಕೋಕ್, ಪ್ರಾಂತ್ಯ, ಜಿಲ್ಲೆ ಹೀಗೆ ನಾನಾ ಆಯಾಮಗಳನ್ನು ಇಟ್ಟುಕೊಂಡು ಪಕ್ಷದ ಭವಿಷ್ಯದ ದೃಷ್ಟಿಯಿಂದಲೂ ಸಂಪುಟದ ಪಟ್ಟಿಯನ್ನು ಸಿದ್ದಪಡಿಸಲು ಹೈಕಮಾಂಡ್ ನಾಯಕರು ತ್ರಿಮೂರ್ತಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಸಂಸತ್ ಅಧಿವೇಶನ ಇದ್ದ ಕಾರಣಕ್ಕೆ ಜೋಷಿಯವರು ಬಿಝಿ, ಅದೇ ರೀತಿ ಅಧಿವೇಶನ ಬಿಝಿಯಲ್ಲಿ ಕಟೀಲ್ ಕೂಡ ಇದ್ದ ಕಾರಣಕ್ಕೆ ಸಿಎಂ ದೆಹಲಿಯ ಭೇಟಿಯ ವೇಳೆ ಪಟ್ಟಿ ತಯಾರು ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಮೂರು ಮಂದಿ ಕೂತು ಚರ್ಚಿಸಿ ಪಟ್ಟಿ ತಯಾರಿಸುವಂತೆ ನಡ್ಡಾ ಸೂಚಿಸಿದ್ದಾರೆ.

ಅಲ್ಲದೇ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆ ಕುರಿತು ಸಿಎಂ ಬೊಮ್ಮಾಯಿಯವರು, ಅಭ್ಯರ್ಥಿಗಳ ಕುರಿತು ಹೈಕಮಾಂಡ್ ನಿರೀಕ್ಷೆ ಮಾಡಿದಷ್ಟು ಪಕ್ಕಾ ಮಾಹಿತಿ ದೆಹಲಿಗೆ ತಂದಿರಲಿಲ್ಲ. ಇದು ಕೂಡ ಸಂಪುಟದ ಕಸರತ್ತಿಗೆ ವಿಘ್ನವಾಯಿತು.

ಹೊಸ ಸಂಪ್ರದಾಯಕ್ಕೆ ನಾಂದಿ, ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದ ಪದ್ಮಪ್ರಶಸ್ತಿ ಪುರಸ್ಕೃತರು!

ಶಾ & ಜಿ ಇಬ್ಬರೂ ಸಿಗಲಿಲ್ಲ : ರಾಷ್ಟಿçÃಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜೊತೆ ಮಾತುಕತೆ ಎಷ್ಟು ಸುತ್ತು ನಡೆಸಿದರೂ ಅಂತಿಮವಾಗಿ ಪಟ್ಟಿಗೆ ಮುದ್ರೆ ಹೊತ್ತುವ ಅಧಿಕಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇದೆ. ಸಾಲದಕ್ಕೆ ಕರ್ನಾಟಕದ ಕುರಿತಾಗಿ ಅಂತಿಮ ತೀರ್ಮಾನ ಪ್ರಕಟಿಸುವ ವಿಚಾರ ಬಂದಾಗ ಹೈಕಮಾಂಡ್ ನಾಯಕರು ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಅಭಿಪ್ರಾಯ ಪಡೆಯದೆ ಮುಂದೆ ಹೋಗಲ್ಲ. ಹೀಗಾಗಿ ಸಿಎಂ ದೆಹಲಿಗೆ ಬಂದು, ಎರಡು ದಿನ ಇದ್ದಗಲೂ ಸಹ ಈ ಇಬ್ಬರ ನಾಯಕರನ್ನು ಭೇಟಿ ಮಾಡಲು ಸಾಧ್ಯವಾಗಲೇ ಇಲ್ಲ. ಇದು ಕೂಡ ಸಂಪುಟ ಕಸರತ್ತಿಗೆ ಹಿನ್ನಡೆಯಾಯ್ತು.

ಇಷ್ಟು ಬೆಳವಣಿಗೆಗಳ ನಡುವೆ ಏಪ್ರಿಲ್ ತಿಂಗಳ ಎರಡನೇ ವಾರ ಬಳ್ಳಾರಿಯ ಹೊಸಪೇಟೆಯಲ್ಲಿ ಬಿಜೆಪಿ ಕರ‍್ಯಕಾರಣಿ ನಡೆಯಲಿದ್ದು ಅದು ಮುಗಿದ ಬಳಿಕ ಸಂಪುಟ ಕಸರತ್ತಿಗೆ ಮತ್ತೆ ಚಾಲನೆ ಸಿಗಲಿದೆ. ಜೊತೆಗೆ ಕರ‍್ಯಕಾರಣಿ ವೇಳೆಯಲ್ಲಿ ಸಮಯ ಸಿಕ್ಕರೆ ರಾಷ್ಟಿçÃಯ ಅಧ್ಯಕ್ಷರ ಜೊತೆ ಈ ಬಗ್ಗೆ ಒಂದು ಸುತ್ತು ಮಾತುಕತೆ ನಡೆಸುವ ಸಾಧ್ಯತೆ ಇದೆ. ಬಳಿಕ ತ್ರಿಮೂರ್ತಿಗಳು ಸಿದ್ದಪಡಿದ ಪಟ್ಟಿಯನ್ನು ಹೊತ್ತು ಬೊಮ್ಮಾಯಿ ಸಾಹೇಬರು ಮತ್ತೆ ದೆಹಲಿಗೆ ಬರಲಿದ್ದಾರೆ. ಆಗ ಅಮಿತ್ ಶಾ ಮತ್ತು ಬಿ.ಎಲ್.ಸಂತೋಷ್ ಅವರು ಅಂತಿಮ ಮುದ್ರೆ ಹೊತ್ತಿದ್ದ ಬಳಿಕ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ನಡೆಯಲಿದೆ.  

ರಾಷ್ಟಿçÃಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಕೊಟ್ಟರೇ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೋಪ. ಯತ್ನಾಳ್ ಸಂಪುಟಕ್ಕೆ ಬಂದರೆ ಬಿಎಸ್‌ವೈಗೆ ಕೋಪ, ಸಿ.ಪಿ.ಯೋಗೇಶ್ವರ್ ಅವರಿಗೆ ಕೊಟ್ಟರೂ ಬಿಎಸ್‌ವೈ ಕೋಪ ಎದುರಿಸಬೇಕಾಗುತ್ತದೆ. ಹಳಬರಿಗೆ ಕೋಕ್ ಕೊಟ್ಟರೇ ಸಮುದಾಯಗಳು, ಮಠಮಾನ್ಯಗಳು ಪ್ರಶ್ನಿಸಲು ಶುರು ಮಾಡಲಿವೆ. ಇಂಥ ಇಕ್ಕಟಿನ ಸ್ಥಿತಿಯಲ್ಲಿ ಇರುವುದಾಗಿ ಬೊಮ್ಮಾಯಿ ನಡ್ಡಾ ಅವರ ಬಳಿ ೪೫ ನಿಮಿಷಗಳ ಕಾಲ ನಡೆದ ಚರ್ಚೆಯಲ್ಲಿ ಪ್ರಸ್ತಾಪಿಸಿದ್ದಾರೆ. ಹಾಗಾಗಿ ಮೂವರು ಕೂತು ಸಚಿವರ ಪಟ್ಟಿ ಸಿದ್ದಪಡಿಸಲು ನಡ್ಡಾ ಅವರು ಸೂಚನೆ ಕೊಟ್ಟಿದ್ದಾರೆ. ಜೊತೆಗೆ ಈಗ ತಯಾರಾಗುವ ಪಟ್ಟಿ ೨೦೨೩ರ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ತರುವಂತೆ ಇರಬೇಕು ಅನ್ನೋ ನಿರ್ದೇಶನವೂ ಒಳಗೊಂಡಿದೆ ಎನ್ನುತ್ತಿವೆ ಬಿಜೆಪಿ ಹೈಕಮಾಂಡ್ ಮೂಲಗಳು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ