ಭಟ್ಕಳ, ಶಿರಸಿ ಹಾಗೂ ಶ್ರೀರಂಗಪಟ್ಟಣದಲ್ಲಿರುವ ಮಸೀದಿಗಳು ಹಿಂದೊಮ್ಮೆ ಹಿಂದು ದೇವಾಲಯಗಳೇ ಆಗಿದ್ದವು ಎಂದು ಅನಂತ್ ಕುಮಾರ್ ಹೆಗಡೆ ಹೇಳಿದ್ದು, ಬಾಬರಿ ಮಸೀದಿ ಒಡೆದಂತೆ ದೇವಸ್ಥಾನದ ಮೇಲೆ ಕಟ್ಟಿರುವ ಮಸೀದಿಗಳನ್ನು ಒಡೆಯುವ ಸುಳಿವನ್ನೂ ನೀಡಿದ್ದಾರೆ.
ಕಾರವಾರ (ಜ.13): ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತೆ ತಮ್ಮ ಮಾತುಗಳ ಮೂಲಕ ವಿವಾದ ಎಬ್ಬಿಸಿದ್ದಾರೆ. ಭಟ್ಕಳ, ಶಿರಸಿ ಹಾಗೂ ಶ್ರೀರಂಗಪಟ್ಟಣದಲ್ಲಿ ಇರುವ ಮಸೀದಿಗಳು ಹಿಂದೊಮ್ಮೆ ದೇವಸ್ಥಾನಗಳೇ ಆಗಿದ್ದವು ಎಂದು ಅವರು ಹೇಳಿದ್ದಾರೆ. ಕುಮಟಾದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಇದನ್ನು ಥ್ರೆಟ್ ಅಂತಾ ಬೇಕಾದರೂ ಅಂದುಕೊಳ್ಳಲಿ ಈ ಮಸೀದಿಗಳನ್ನು ಒಡೆಯುತ್ತೇವೆ ಎಂದು ಹೇಳಿದ್ದಾರೆ. 'ಭಟ್ಕಳದ ಚಿನ್ನದಪಳ್ಳಿಯ ಮಸೀದಿ ಹಿಂದೂ ದೇವಸ್ಥಾನವಾಗಿತ್ತು. ಶಿರಸಿಯ ಸಿಪಿ ಬಜಾರ್‌ನಲ್ಲಿರುವ ದೊಡ್ಡ ಮಸೀದಿಯೇನಿದೆ ಅದು ವಿಜಯ ವಿಠ್ಠಲ ದೇವಸ್ಥಾನವಾಗಿತ್ತು. ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಮಾರುತಿ ದೇವಸ್ಥಾನ, ಇವತ್ತು ಹೋದ್ರೂ ಅಲ್ಲಿ ಮಾರುತಿ ಮೂರ್ತಿ ಕಾಣುತ್ತದೆ. ದೇಶದ ಮೂಲೆ ಮೂಲೆಗಳಲ್ಲಿ, ಹಳ್ಳಿಯ ಮೂಲೆ ಮೂಲೆಗಳಲ್ಲಿ ಅಪಮಾನಗೊಂಡ ಸಂಕೇತಗಳಿವೆ. ಅದನ್ನು ಕಿತ್ತು ಹಾಕುವ ತನಕ ಹಿಂದೂ ಸಮಾಜ ಮತ್ತೆ ವಾಪಾಸ್ ಕುಳಿತುಕೊಳ್ಳಲ್ಲ. ನಮಗೇನೂ ಮುಲಾಜು ಗಿಲಾಜು ಇಲ್ಲ, ಪತ್ರಿಕೆಯವರು ನೇರವಾಗಿ ಬರೆದುಕೊಳ್ಳಲಿ, ಕೆಲವರು ಇದನ್ನು ಥ್ರೆಟ್ ಅಂತಾನೂ ಅಂದುಕೊಳ್ಳಲಿ. ನಾವು ಮಾಡೋದು ಗ್ಯಾರಂಟಿಯೇ. ಇದು ಹಿಂದೂ ಸಮಾಜದ ತೀರ್ಮಾನ, ಅನಂತ ಕುಮಾರ್ ಹೆಗಡೆಯ ತೀರ್ಮಾನವಲ್ಲ ಎಂದು ಹೇಳಿದ್ದಾರೆ.
ರಣಭೈರವ ಎದ್ದಾಗಿದೆ, ಮತ್ತೆ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ಇದು ಸೇಡು, ಸೇಡು, ಸೇಡು... ಸಾವಿರ ವರ್ಷದ ಸೇಡು ತೀರಿಸಿಕೊಳ್ಳದಿದ್ರೆ ಇದು ಹಿಂದೂ ರಕ್ತವಲ್ಲ ಎಂದು ಹಿಂದೂ ಸಮಾಜ ಹೇಳ್ತಿದೆ. ನಮ್ಮದು ಋಣವಿಟ್ಟುಕೊಂಡಿರುವ ಸಮಾಜವಲ್ಲ, ಋಣವನ್ನು ತೀರಿಸಿಯೇ ತೀರಿಸ್ತೇವೆ. ಸಾವಿರ ವರ್ಷಗಳ ಋಣವಿದೆ ನಮಗೆ, ಅದನ್ನು ತೀರಿಸದೇ ಸುಮ್ಮನೆ ಕುಳಿತರೆ ಅದಕ್ಕೆ ಹಿಂದೂ ರಕ್ತ ಅಂತಾ ಕರಿಯೋದೆ ಇಲ್ಲ ರಾಮಜನ್ಮಭೂಮಿಯ ಜತೆ ಮೊದಲ ಪ್ರಾರಂಭ ಶುರುವಾಗಿದೆ. ಇಡೀ ಹಿಂದೂ ಸಮಾಜವನ್ನು ಜಾತಿ, ಪ್ರಾದೇಶಿಕ, ಭಾಷೆ ಹೆಸರಿನಲ್ಲಿ ಒಡೆದರು. ಮೂರ್ಖರಾಮಯ್ಯನಂತವರು (ಸಿದ್ಧರಾಮಯ್ಯ) ಇನ್ನೂ ಒಡೆಯುತ್ತಲೇ ಇದ್ದಾರೆ. ಆದರೂ ಇಂದು ಹಿಂದೂ ಸಮಾಜ ಒಟ್ಟಾಗಿ ನಿಂತುಕೊಂಡಿದೆ, ಹೊಸ ಗೆಲವನ್ನು ಮುಂದಿನ ಶತಮಾನದಲ್ಲಿ ಕಾಣುವಂತಾಗಬೇಕು ಎಂದು ಹೇಳಿದ್ದಾರೆ.
undefined
ಪುನರ್ ಜನ್ಮ ಕೂಡ ಸಿಗಬಾರದು: ಈ ಬಾರಿ ಗೆಲವು ಹೇಗಿರಬೇಕೆಂದರೆ, ಅದನ್ನು ಮುಂದೆ ಅಳಿಸಲು ನಮ್ಮಿಂದಲೂ ಆಗಬಾರದು ಎಂದು ಅಮಿತ್ ಶಾ ಹೇಳಿದ್ದರು. ಹೊಡೆದ ಹೊಡೆತ ಹೇಗಿರಬೇಕೆಂದರೆ, ಅವನಿಗೆ ಪುನರ್‌ಜನ್ಮ ಕೂಡ ಸಿಗಬಾರದು. ಈ ಜನ್ಮ ಅಂತೂ ಕಳೆದು ಹೋಗುತ್ತೆ, ಮುಂದಿನ ಜನ್ಮದಲ್ಲೂ ಅವನು ಇವತ್ತೇ ಸಾಯಬೇಕು. ಈ ರೀತಿಯ ಹೊಡೆತ ನಮ್ಮ ವಿರೋಧಿಗಳಿಗೆ ಆಗಬೇಕು. ಕಾಂಗ್ರೆಸ್ ನಮ್ಮ ವಿರೋಧಿಯಲ್ಲ, ಕಾಂಗ್ರೆಸಿಗೆ ನಮ್ಮನ್ನು ವಿರೋಧ ಮಾಡುವ ಕೆಪಾಸಿಟಿಯೂ ಇಲ್ಲ. ನಮ್ಮ ವಿರೋಧಿಗಳು ನಮ್ಮ ತಲೆಯಲ್ಲಿ ಹುಚ್ಚು ಹುಳವನ್ನು ಬಿಡ್ತಾರೆ. ಹಿಂದುತ್ವದ ವಿರೋಧಿ ಹುಳಗಳು, ಸನಾತನದ ವಿರೋಧಿ ಹುಳಗಳೇ ನಮ್ಮ ವಿರೋಧಿಗಳು ಎಂದು ಹೇಳಿದ್ದಾರೆ.
'ಗಾಂಧಿ ಕುಟುಂಬಕ್ಕಿದೆ ಗೋಪಾಷ್ಟಮಿ ಶಾಪ..' ಅನಂತ್ ಕುಮಾರ್ ಹೆಗಡೆ ಮಾತಿನ ಅಸಲಿಯತ್ತೇನು?
ಕಾಂಗ್ರೆಸ್ ನಮ್ಮ ವಿರೋಧಿ ಅಲ್ವೇ ಅಲ್ಲ, ರಾಜಕಾರಣಕ್ಕೋಸ್ಕರ ಒದರಾಡ್ತಿದೆಯಷ್ಟೇ. ನಮ್ಮ ವಿರೋಧಿ ಸಿಎಂ ಸಿದ್ಧರಾಮಯ್ಯ, ಕಾಂಗ್ರೆಸ್ ಅಲ್ಲ. ಗತಿಗೆಟ್ಟ ಮಾನಸಿಕತೆ, ಹರಾಜಾಗಿರುವ ಅಲ್ಪಸಂಖ್ಯಾತರ ಓಟಿಗೆ ಹರಾಜಾಗಿ ಹೋಗಿರುವ ಮಾನಸಿಕತೆ ನಮ್ಮ ವಿರೋಧ. ರಾಜಕೀಯ ನಮ್ಮ ವಿರೋಧವಲ್ಲ, ಡೆಮಾಕ್ರಸಿಯಲ್ಲಿ ಒಂದು ಪಕ್ಷ ಬರುತ್ತೆ, ಒಂದು ಪಕ್ಷ ಹೋಗುತ್ತೆ, ಅದು ಸ್ವಾಭಾವಿಕ. ನಾಳೆ ನಾವೇನು ಪರ್ಮನೆಂಟ್ ಇರೋದಿಲ್ಲ, ಮತ್ತೊಂದು ಪಕ್ಷ ಬರುತ್ತೆ. ಆದರೆ, ಗತಿಗೆಟ್ಟ ಮಾನಸಿಕತೆಗೆ ನಮ್ಮ ವಿರೋಧವಿದೆ, ಅಹಿಂದು ಮಾನಸಿಕತೆ ಅದು ನಮ್ಮ ವಿರೋಧ. ರಾಮಜನ್ಮ ಭೂಮಿ ಆಹ್ವಾನ ಪತ್ರಿಕೆ ನಮಗೆ ಬಂದಿಲ್ಲ ಎಂದಿದ್ದರು. ಆಮೇಲೆ ಬಂದರೂ ನಾವು ಹೋಗುವುದಿಲ್ಲ ಎಂದರು. ನೀನು ಬರ್ಲಿ ಬಿಡು, ರಾಮಜನ್ಮಭೂಮಿ ನಿಲ್ಲುವುದಿಲ್ಲ ಮಗನೇ.. ಬಳಿಕ ಹೇಳ್ತಾರೆ ಅಯೋಧ್ಯೆಗೆ ಹೋಗ್ತೇನೆ, ಅವತ್ತು ಹೋಗಲ್ಲ, ಆಮೇಲೆ ಹೋಗ್ತೀನಿ ಅಂತಾ. ಇದು ಹಿಂದೂ ಸಮಾಜದ ತಾಕತ್ತು, ಕೇವಲ 8 ದಿನಗಳಲ್ಲಿ ಇವರ ಧ್ವನಿ ಬದಲಾಯ್ತು. ಮೊದಲು ಇನ್ವಿಟೇಶನ್ ಬಂದಿಲ್ಲ ಅಂದ್ರು, ಆಮೇಲೆ ಬಂದ್ರೂ ಹೋಗಲ್ಲ ಅಂದ್ರು, ನಂತ್ರ ಹೋಗ್ತೀನಿ ಅಂತಿದ್ದಾರೆ ಇದು ಹಿಂದೂ ಸಮಾಜದ ಧಮ್ ಎಂದು ಹೇಳಿದ್ದಾರೆ.
ಚುನಾವಣಾ ಸಂಗ್ರಾಮಕ್ಕೆ ನಮ್ಮ ಟೀಂ ಈಗಿನಿಂದಲೇ ಸಿದ್ಧ: ಸಂಸದ ಅನಂತಕುಮಾರ ಹೆಗಡೆ