3 ಡಿಸಿಎಂಗಾಗಿ 7 ಸಚಿವರಿಂದ ಸುರ್ಜೇವಾಲಾ ಮೇಲೆ ಒತ್ತಡ

Published : Jan 09, 2024, 06:23 AM ISTUpdated : Jan 09, 2024, 01:13 PM IST
3 ಡಿಸಿಎಂಗಾಗಿ 7 ಸಚಿವರಿಂದ ಸುರ್ಜೇವಾಲಾ ಮೇಲೆ ಒತ್ತಡ

ಸಾರಾಂಶ

ಲೋಕಸಭೆ ಚುನಾವಣೆ ಸಿದ್ಧತೆ ಹಿನ್ನೆಲೆಯಲ್ಲಿ ಸೋಮವಾರ ನಗರಕ್ಕೆ ಆಗಮಿಸಿದ್ದ ಸುರ್ಜೇವಾಲಾ ಅವರನ್ನು 7 ಸಚಿವರು ಹಾಗೂ ಸಿಎಂರ ಆರ್ಥಿಕ ಸಲಹೆಗಾರರು ಭೇಟಿ ಮಾಡಿ ಡಿಸಿಎಂ ಹುದ್ದೆ ಸೃಷ್ಟಿಸುವ ಅಗತ್ಯತೆ ಕುರಿತು ಸುರ್ಜೇವಾಲಾಗೆ ಮನದಟ್ಟು ಮಾಡಿಕೊಡುವ ಪ್ರಯತ್ನ ನಡೆಸಿದರು ಎನ್ನಲಾಗಿದೆ.

ಬೆಂಗಳೂರು(ಜ.09):  ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ 3 ಹೊಸ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾಗಬೇಕು ಎಂಬ ಆಗ್ರಹ ಕಾಂಗ್ರೆ ಸ್‌ನಲ್ಲಿ ಕ್ರಮೇಣ ಬಲಗೊಳ್ಳುತ್ತಿದ್ದು, ಸರ್ಕಾರದಲ್ಲಿ ಸಂಪುಟ ದರ್ಜೆ ಹೊಂದಿರುವ ಎಂಟು ಮಂದಿಯ ಬಣವೊಂದು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಮೇಲೆ ಒತ್ತಡ ನಿರ್ಮಾಣ ಮಾಡಿದೆ. ಲೋಕಸಭೆ ಚುನಾವಣೆ ಸಿದ್ಧತೆ ಹಿನ್ನೆಲೆಯಲ್ಲಿ ಸೋಮವಾರ ನಗರಕ್ಕೆ ಆಗಮಿಸಿದ್ದ ಸುರ್ಜೇವಾಲಾ ಅವರನ್ನು 7 ಸಚಿವರು ಹಾಗೂ ಸಿಎಂರ ಆರ್ಥಿಕ ಸಲಹೆಗಾರರು ಭೇಟಿ ಮಾಡಿ ಡಿಸಿಎಂ ಹುದ್ದೆ ಸೃಷ್ಟಿಸುವ ಅಗತ್ಯತೆ ಕುರಿತು ಸುರ್ಜೇವಾಲಾಗೆ ಮನದಟ್ಟು ಮಾಡಿಕೊಡುವ ಪ್ರಯತ್ನ ನಡೆಸಿದರು ಎನ್ನಲಾಗಿದೆ.

ಡಿಸಿಎಂ ಹುದ್ದೆ ಕೂಗು ಹುಟ್ಟುಹಾಕಿರುವ ಸಚಿವ ರಾದ ಸತೀಶ್ ಜಾರಕಿಹೊಳಿ, ಪರಮೇಶ್ವರ್, ರಾಜಣ್ಣ, ಮಹದೇವಪ್ಪ ಅವರೊಂದಿಗೆ ಮತ್ತೆ ದಿನೇಶ್ ಗುಂಡೂ ರಾವ್, ಮುನಿಯಪ್ಪ, ಎಂ.ಬಿ.ಪಾಟೀಲ್ ಹಾಗೂ ಸಿಎಂರ ಆರ್ಥಿಕ ಸಲಹೆಗಾರ ರಾಯರಡ್ಡಿ ಅವರು ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ. ಈ ಬೆಳವಣಿಗೆಯಿಂದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತುಸು ನೇಪಥ್ಯದಲ್ಲಿದ್ದ ಕಾಂಗ್ರೆಸ್‌ನ ಬಣ ರಾಜಕಾರಣ ಡಿಸಿಎಂ ಹುದ್ದೆ ಆಗ್ರಹದೊಂದಿಗೆ ಮತ್ತೆ ಮುನ್ನೆಲೆಗೆ ಬಂದಂತಾಗಿದೆ.

39 ಶಾಸಕರಿಗೆ ನಿಗಮಾಧ್ಯಕ್ಷ ಪಟ್ಟ: ಸುರ್ಜೇವಾಲಾ, ಸಿದ್ದು, ಡಿಕೆಶಿ ಸಭೆಯಲ್ಲಿ ಪಟ್ಟಿ ಫೈನಲ್‌!

ಬೇಡಿಕೆ ಆಲಿಸಿದ ಸುರ್ಜೇವಾಲಾ: ಸಾಮಾನ್ಯವಾಗಿ

ಸುರ್ಜೇವಾಲಾ ಇಂತಹ ಬೇಡಿಕೆಗಳಿರುವ ಸಂದರ್ಭ ದಲ್ಲಿ ಒಬ್ಬೊಬ್ಬರೊಂದಿಗೆ ನೇರಾನೇರ ಮಾತುಕತೆ ನಡೆಸುತ್ತಾರೆ. ಅದೇ ರೀತಿ ಈ ಬಾರಿಯೂ ಒಬ್ಬೊಬ್ಬರೇ ಸಚಿವರು ಸುರ್ಜೇವಾಲಾ ಭೇಟಿಗೆ ಆಗಮಿಸಿದ್ದಾರೆ. ಆದರೆ, ಮೊದಲೇ ಆಗಮಿಸಿದ್ದ ಸಚಿವರು ಸ್ಥಳದಿಂದ ತೆರಳಿಲ್ಲ, ಹೀಗೆ ಸಚಿವರ ಗುಂಪಿನೊಂದಿಗೆ ಮಾತುಕತೆ ನಡೆಸುವ ಸ್ಥಿತಿಯನ್ನು ಅವರು ಎದುರಿಸಬೇಕಾಯಿತು ಎಂದು ಮೂಲಗಳು ಹೇಳಿವೆ.

ಗುಂಪು ಕಟ್ಟಿಕೊಂಡು ಭೇಟಿಯಾಗಿದ್ದು ಏಕೆ?

ಲೋಕಸಭಾ ಚುನಾವಣೆ ಸಾಮೀಪ್ಯದಲ್ಲಿ ಉಪ ಮುಖ್ಯಮಂತ್ರಿಯಂತಹ ಕೂಗನ್ನು ವೈಯಕ್ತಿಕ ಮಟ್ಟ ದಲ್ಲಿ ಹುಟ್ಟುಹಾಕಿದರೆ ಕಾಂಗ್ರೆಸ್ ಹೈಕಮಾಂಡ್ ಅದಕ್ಕೆ ಕಿವಿಗೊಡುವ ಸಾಧ್ಯತೆ ಕಡಿಮೆ. ಒಬ್ಬರೋ ಅಥವಾ ಇಬ್ಬರೋ ಸಚಿವರು ಇಂತಹ ಕೂಗು ಹಾಕಿದರೆ ಅವರನ್ನು ಕರೆಸಿ ಮನವೊಲಿಸುವ ಅಥವಾ ಸದ್ಯಕ್ಕೆ ಇಂತಹ ಬೇಡಿಕೆಯಿಂದ ವಿಮುಖರಾ ಗುವಂತೆ ತಾಕೀತು ಮಾಡುವ ಸಾಧ್ಯತೆ ಇರುತ್ತದೆ. ಇಂತಹ ಅಪಾಯ ನಿರ್ಮಾಣವಾಗಬಾರದು ಎಂಬ ಕಾರಣಕ್ಕೆ ಎಂಟು ಮಂದಿ ಒಟ್ಟೋಟ್ಟಿಗೆ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದರು ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿದೆ.

ವೇಣುಗೋಪಾಲ್ ಜತೆ ಡಿಕೆಶಿ ಮಾತುಕತೆ: ಎಂಟು

ಮಂದಿ ಪ್ರಭಾವಿಗಳು ಒಟ್ಟುಗೂಡಿ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರ ಮೇಲೆ ಡಿಸಿಎಂ ಪದವಿಗೆ ಒತ್ತಡ ಹಾಕುವ ಬೆಳವಣಿಗೆಗೂ ಮುನ್ನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್‌ನ ಪ್ರಭಾವಿ ನಾಯಕ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಸುಮಾರು ಮಕ್ಕಾಲು ತಾಸು ಮುಖಾಮುಖಿ ಮಾತುಕತೆ ನಡೆಸಿದ್ದು ಕುತೂಹಲ ಮೂಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್