ಯಡಿಯೂರಪ್ಪ ಅವಧಿಯ ಅನುದಾನ ಬಳಸಿ: ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದೇನು?

Published : Sep 25, 2025, 07:34 PM IST
BY Raghavendra

ಸಾರಾಂಶ

ಪಟ್ಟಣದ ಸರ್ವಾಂಗೀಣ ಅಭಿವೃದ್ದಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾದ ಅವಧಿಯಲ್ಲಿ ಕೋಟ್ಯಂತರ ರು. ಅನುದಾನ ನೀಡಲಾಗಿದ್ದು, ಅಧಿಕಾರಿಗಳ ಜತೆ ಸಾರ್ವಜನಿಕರು ಜವಾಬ್ದಾರಿಯುತವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಶಿಕಾರಿಪುರ (ಸೆ.25): ಪಟ್ಟಣದ ಸರ್ವಾಂಗೀಣ ಅಭಿವೃದ್ದಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾದ ಅವಧಿಯಲ್ಲಿ ಕೋಟ್ಯಂತರ ರು. ಅನುದಾನ ನೀಡಲಾಗಿದ್ದು, ಅಭಿವೃದ್ದಿ ಕಾರ್ಯಗಳು ಸಮರ್ಪಕವಾಗಿ ಬಳಕೆಯಾಗುವ ರೀತಿಯಲ್ಲಿ ಅಧಿಕಾರಿಗಳ ಜತೆ ಸಾರ್ವಜನಿಕರು ಜವಾಬ್ದಾರಿಯುತವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಪಟ್ಟಣದ ಪುರಸಭೆ ಆವರಣದಲ್ಲಿ ವಿವಿಧ ಅನುದಾನಗಳಡಿ ಪುರಸಭಾ ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿಗಳ ಗುದ್ದಲಿಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪುರಸಭೆಯ 5 ವರ್ಷದ ಆಡಳಿತ ಅವಧಿ ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದ್ದು, ಈ ಅವಧಿಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಜನತೆಗೆ ಉತ್ತಮ ಆಡಳಿತ ನೀಡುವ ಪ್ರಯತ್ನವನ್ನು ಶ್ಲಾಘಿಸುವುದಾಗಿ ತಿಳಿಸಿದ ಅವರು, ಪಟ್ಟಣದ ಪ್ರಮುಖ ವೃತ್ತದಲ್ಲಿ ಜಗಜ್ಯೋತಿ ಬಸವೇಶ್ವರ, ಅಕ್ಕಮಹಾದೇವಿ, ಸಂಗೊಳ್ಳಿ ರಾಯಣ್ಣ ಸಹಿತ ಡಾ.ಅಂಬೇಡ್ಕರ್ ಪುತ್ಥಳಿಯನ್ನು ಕುಟುಂಬದ ವತಿಯಿಂದ ಪ್ರತಿಷ್ಠಾಪಿಸಲಾಗಿದೆ ಎಂದರು.

ಪುರಸಭೆ ಮೂಲಕ ಸಂಪರ್ಕ

ಯಡಿಯೂರಪ್ಪ ಮುಖ್ಯಮಂತ್ರಿಯಾದ ಅವಧಿಯಲ್ಲಿ ಪಟ್ಟಣದ ಸೌಂದರ್ಯ ಹೆಚ್ಚಳಕ್ಕೆ ಕೋಟ್ಯಂತರ ರು. ವೆಚ್ಚದಲ್ಲಿ ಕೈಗೊಂಡ ಒಳಚರಂಡಿ ಕಾಮಗಾರಿ ನಂತರದಲ್ಲಿ ರಸ್ತೆ, ಪೈಪ್‌ಲೈನ್, ಚರಂಡಿ ಮತ್ತಿತರ ವ್ಯವಸ್ಥೆಗೆ ಹೆಚ್ಚುವರಿಯಾಗಿ ಅನುದಾನ ನೀಡಲಾಗಿದ್ದು ಪ್ರತಿ ಮನೆಗೆ ಸಂಪರ್ಕಕ್ಕೆ ಕನಿಷ್ಠ 2 ಸಾವಿರ ರು. ಹೊರೆಯಾಗದಂತೆ ಪುನಃ ಪುರಸಭೆ ಮೂಲಕ ಸಂಪರ್ಕ ನೀಡುವಂತೆ ಸೂಚಿಸಲಾಗಿದೆ ಎಂದರು. ಶಾಸಕ ವಿಜಯೇಂದ್ರ ಮಾತನಾಡಿ, ತಾಲೂಕು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಯಡಿಯೂರಪ್ಪ ಕಾರಣಕರ್ತರಾಗಿದ್ದು,ಅಭಿವೃದ್ದಿ ಹೆಚ್ಚಾಗಿ ಪಟ್ಟಣ ಕಲ್ಪನೆ ಮೀರಿ ಬೆಳೆಯುತ್ತಿದೆ. ಇದರೊಂದಿಗೆ ಸಮಸ್ಯೆ ಸಹ ಉಲ್ಭಣವಾಗುತ್ತಿದೆ ಎಂದರು.

ಪುರಸಭಾಧ್ಯಕ್ಷೆ ಸುನಂದಾ ಮಂಜುನಾಥ್ ವಹಿಸಿ ಮಾತನಾಡಿದರು. ಈ ಸಂದರ್ಬದಲ್ಲಿ ಪ್ರಧಾನಮಂತ್ರಿ ಆತ್ಮನಿರ್ಭರ ಯೋಜನೆಯಡಿ ಬೀದಿಬದಿ 950 ವ್ಯಾಪಾರಿಗಳಿಗೆ 50 ಸಾವಿರ ರು. ಕಿರುಸಾಲದ ಚೆಕ್, ಡಿಜಿಟಲೀಕರಣಕ್ಕೆ ಕ್ಯೂಆರ್‌ ಕೋಡ್, ವೈಜ್ಞಾನಿಕವಾಗಿ ಹಸಿ, ಒಣ ಕಸ ಬೇರ್ಪಡಿಸುವ 10 ಸಾವಿರ ಮನೆಗೆ ಡಸ್ಟ್‌ಬಿನ್‌ಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ಉಪಾಧ್ಯಕ್ಷೆ ರೂಪ,ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಸದಸ್ಯ ಉಳ್ಳಿ ದರ್ಶನ್,ಮಹಮ್ಮದ್ ರೋಷನ್, ರೂಪಕಲಾ ಹೆಗ್ಡೆ, ರೇಖಾಬಾಯಿ, ಪಾಲಾಕ್ಷಪ್ಪ, ಶೈಲಾ ಮಡ್ಡಿ, ಪ್ರಶಾಂತ್, ರೇಣುಕಸ್ವಾಮಿ, ಉಮಾವತಿ, ಜಯಶ್ರೀ, ಶಕುಂತಲಮ್ಮ, ಸುರೇಶ್ ಧಾರವಾಡದ, ನಗರದ ರವಿಕಿರಣ್, ಮುಖ್ಯಾಧಿಕಾರಿ ಭರತ್, ಸುರೇಶ್, ರಾಜಕುಮಾರ್ ಮತ್ತಿತರರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ
ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ