
ಬೆಂಗಳೂರು (ಸೆ.25): ಈ ದಿನ ಐತಿಹಾಸಿಕ ಸಭೆ ನಡೆದಿದೆ. ಹಿಂದುಳಿದ ವರ್ಗ ಎಂದು ಗುರುತಿಸಿಕೊಂಡ ಸಚಿವರು, ಶಾಸಕರು ಬಂದಿದ್ದಾರೆ. ಈ ಸಭೆ ಮೊದಲೇ ಆಗಬೇಕಿತ್ತು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು. ಹಿಂದುಳಿದ ವರ್ಗಗಳ ಕಾಂಗ್ರೆಸ್ ನಾಯಕರ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ದೇಶ ಪ್ರಜಾಪ್ರಭುತ್ವ ಅಡಿಯಲ್ಲಿ ನಡೆಯಬೇಕು. ಹಿಂದುಳಿದ ವರ್ಗಗಳಿಗೆ ಸರಿಯಾದ ಮೀಸಲಾತಿ ಸಿಗಬೇಕು. ಸಾಮಾಜಿಕ, ಶೈಕ್ಷಣಿಕ ಹಕ್ಕನ್ನ ಕಸಿಯಲು ಸಾಧ್ಯವಿಲ್ಲ. ಇದನ್ನ ವಿರೋಧಿಸುವ ಕೆಲಸ ಆಗಬಾರದು. ಕೇಲ್ಕರ್ ಆಯೋಗ, ಮಂಡಲ ಆಯೋಗ ಮಾಡಿದಾಗಲೂ ವಿರೋಧ ಬಂದಿತ್ತು. ಆದರೂ ಕಾಂಗ್ರೆಸ್ ಪಕ್ಷ ಮಂಡಲ ಆಯೋಗ ವರದಿ ಜಾರಿ ಮಾಡಿದ್ವಿ. ಮಂಡಲ ಆಯೋಗ ಶಿಫಾರಸು ಜಾರಿ ಆದಮೇಲೆ ಹಿಂದುಳಿದ ವರ್ಗಗಳಿಗೆ ಸೆಂಟ್ರಲ್ ಸರ್ವೀಸ್ ನಲ್ಲಿ ಮೀಸಲಾತಿ ಅವಕಾಶ ಸಿಕ್ತು ಎಂದರು.
ಸಿದ್ದರಾಮಯ್ಯ ಅವರಿಗೆ ಸಮಾನತೆ ಬಗ್ಗೆ ಕಾಳಜಿ ಇದೆ. ಯಾವ ತುಳಿಯಲ್ಪಟ್ಟಿದ್ದಾರೆ ಅವರನ್ನ ಮೇಲೆತ್ತುವ ಕೆಲಸ ಮಾಡಲು ಹೊರಟ್ಟಿದ್ದಾರೆ. ಕಾಂತರಾಜ್ ಆಯೋಗದ ವರದಿ ಬಗ್ಗೆ ಆಕ್ಷೇಪ ಕೇಳಿ ಬಂದಿದ್ರಿಂದ ಹೊಸದಾಗಿ ಮಾಡಲು ಹೊರಟಿದ್ದು, ಈಗ ಅದಕ್ಕೂ ವಿರೋಧ ಮಾಡಲು ಹೊರಟ್ಟಿದ್ದಾರೆ. ಈ ರೀತಿ ತಡೆ ಒಡ್ಡಲು ಹೋದ್ರೆ ಏನಾಗತ್ತೆ ಅಂತ ಗೊತ್ತಿದೆ. ಇದು ಒಂದು ವರ್ಗದ ಪ್ರಶ್ನೆ ಅಲ್ಲ. ಇವತ್ತು ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಜಿಲ್ಲೆ ಜಿಲ್ಲೆಗಳಲ್ಲೂ ಜಾಗೃತಿ ಮೂಡಿಸುವ ಕೆಲಸ ಆಗಿದೆ. ನಾವೆಲ್ಲಾ ಧ್ರುವೀಕರಣ ಮಾಡಿಕೊಂಡು ಆಯೋಗಕ್ಕೆ ಭೇಟಿ ನೀಡಲಿದ್ದೇವೆ. ನಾವೆಲ್ಲಾ ಹೋಗಿ ಹಿಂದುಳಿದ ವರ್ಗಗಳ ಆಯೋಗಕ್ಕೆ ನಿಯೋಗ ಹೋಗಿ ಮನವರಿಕೆ ಮಾಡಿಕೊಡ್ತೀವಿ.
ಜೊತೆಗೆ ಹಿಂದುಳಿದ ವರ್ಗಗಳ ಸಚಿವರು ಸಮುದಾಯಗಳಿಗೆ ಜಾಗೃತಿ ಮೂಡಿಸಲು ತೀರ್ಮಾನ ಮಾಡಿದ್ದೇವೆ. ಹಿಂದುಳಿದ ಆಯೋಗ ಅದರ ಕೆಲಸ ಮಾಡುತ್ತೆ. ನಾವು ಜಿಲ್ಲೆ ಜಿಲ್ಲೆಗಳಿಗೆ ಹೋಗಿ ಹಿಂದುಳಿದ ವರ್ಗಗಳ ನಾಯಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತೀರ್ಮಾನ ಮಾಡಿದ್ದೇವೆ. ಅನೇಕ ದಶಕಗಳಿಂದ ನಿರಾಕರಿಸ್ಪಟ್ಟ ಹಕ್ಕುಗಳನ್ನ ನೀಡಬೇಕು. ಸಂವಿಧಾನ ತಿದ್ದುಪಡಿ ಆದ್ಮೇಲೆ ರಾಜ್ಯಗಳಿಗೆ ಮೀಸಲಾತಿ ಬಂತು. 1993ರಲ್ಲಿ ಸುಪ್ರೀಂ ಕೋರ್ಟ್ ಇದೇ ತೀರ್ಪನ್ನ ಎತ್ತಿ ಹಿಡೀತು. ಪ್ರತಿ 10 ವರ್ಷಕ್ಕೆ ಮೀಸಲಾತಿ ಹೆಚ್ಚಳ ಮಾಡ್ಬೇಕು, ವಂಚಿತರಿಗೆ ನೀಡಬೇಕು ಸುಪ್ರೀಂಕೋರ್ಟ್ ಆದೇಶ ಮಾಡುತ್ತೆ. ಆಯಾ ರಾಜ್ಯಗಳಲ್ಲಿ ಶಾಶ್ವತ ಆಯೋಗ ಮಾಡಬೇಕು ಅಂತ ಕೊಡ್ತು. ಸಂವಿಧಾನ ಹಕ್ಕನ್ನ ನಿರಾಕರಿಸುವ ಹಕ್ಕನ್ನ ನಾವೆಲ್ಲ ಮಾಡಿದ್ದೇವೆ. ಇದನ್ನೆಲ್ಲ ತನಿಖೆ ಮಾಡಬೇಕು ಎಂದರು.
ಎಸ್‌ಸಿ, ಎಸ್ಟಿ ಮೀಸಲಾತಿ ಮುಂದುವರಿಸಬೇಕು ನಾವು ತೀರ್ಮಾನ ಮಾಡಿದ್ವಿ. ಆದರೆ ಬಿಜೆಪಿಯವರು ಇದನ್ನೂ ವಿರೋಧ ಮಾಡಿದ್ರು. ಸಂವಿಧಾನದ ಪ್ರಕಾರ ಮೀಸಲಾತಿಗೆ ಬಿಜೆಪಿ ಫುಲ್ ಸ್ಟಾಪ್ ಹಾಕೋಕೆ ಹೊರಟ್ರು. ಆದ್ರೂ ನಾವು ಮುಂದುವರಿಸಿಕೊಂಡು ಬಂದಿದ್ದೇವೆ. ಹಿಂದುಳಿದವರು ಅಲ್ಲ ಸಂವಿಧಾನದ ಬಗ್ಗೆ ಸಿಎಂ ಸಿದ್ದರಾಮಯ್ಯ ಮುತುವರ್ಜಿ ಇದೆ. ವೈಜ್ಞಾನಿಕ ಸರ್ವೆ ಮಾಡೋಣ. ಬಿಜೆಪಿಯವರಿಗೆ ಎಲ್ಲವೂ ಅವೈಜ್ಞಾನಿಕವಾಗಿ ಕಾಣುತ್ತೆ. ಆಯೋಗಕ್ಕೂ ತಡೆ ಮಾಡಬೇಕು ಅಂತ ಮಾಡ್ತಿದ್ದಾರೆ. ಈಗಾಗಲೇ 33 ವರ್ಷಗಳಿಂದ ಹಿನ್ನಡೆಯಾಗಿದೆ. ತಡೆದ್ರೆ ಅವರ ಆಶೋತ್ತರಗಳಿಗೆ ತೊಂದರೆ ಆಗಲಿದೆ ಎಂದು ವೀರಪ್ಪ ಮೊಯ್ಲಿ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.