ಸರ್ಕಾರದಿಂದ ಉಚಿತ ಘೋಷಣೆ ವಿಚಾರವಾಗಿ ಯತ್ನಾಳ ಅವರು ಫೇಸ್‌ಬುಕ್ ಹಾಗೂ ಟ್ವೀಟರ್‌ನಲ್ಲಿ ಯಾವುದೇ ಷರತ್ತಿನ ಬಗ್ಗೆ ಹೇಳದೆ ಎಲ್ಲ ಉಚಿತ, ಖಚಿತ ಹಾಗೂ ನಿಶ್ಚಿತ ಎಂದು ಘೋಷಣೆ ಮಾಡಿದ್ದ ಕಾಂಗ್ರೆಸ್ ಸರ್ಕಾರ ಈಗ ಷರತ್ತುಗಳನ್ನು ವಿಧಿಸಿ ಕರ್ನಾಟಕದ ಮಹಾಜನತೆಗೆ ಮೋಸ ಮಾಡಿದೆ: ಬಸನಗೌಡ ಪಾಟೀಲ ಯತ್ನಾಳ
ವಿಜಯಪುರ(ಜೂ.11): ಹೆಚ್ಚಾದ ವಿದ್ಯುತ್ ಬಿಲ್ ಕಟ್ಟಬೇಡಿ, ಎಲ್ಲ ಮಹಿಳೆಯರು ಬಸ್ಸಿನಲ್ಲಿ ಟಿಕೆಟ್ ತಗೆದುಕೊಳ್ಳಬೇಡಿ. 2000 ಪಡೆಯಲು ಎಲ್ಲ ಮಹಿಳೆಯರು ನೋಂದಾಯಿಸಿಕೊಳ್ಳಬೇಕು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಫೇಸ್‌ಬುಕ್, ಟ್ವೀಟರ್‌ನಲ್ಲಿ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.
ಸರ್ಕಾರದಿಂದ ಉಚಿತ ಘೋಷಣೆ ವಿಚಾರವಾಗಿ ಯತ್ನಾಳ ಅವರು ಫೇಸ್‌ಬುಕ್ ಹಾಗೂ ಟ್ವೀಟರ್‌ನಲ್ಲಿ ಯಾವುದೇ ಷರತ್ತಿನ ಬಗ್ಗೆ ಹೇಳದೆ ಎಲ್ಲ ಉಚಿತ, ಖಚಿತ ಹಾಗೂ ನಿಶ್ಚಿತ ಎಂದು ಘೋಷಣೆ ಮಾಡಿದ್ದ ಕಾಂಗ್ರೆಸ್ ಸರ್ಕಾರ ಈಗ ಷರತ್ತುಗಳನ್ನು ವಿಧಿಸಿ ಕರ್ನಾಟಕದ ಮಹಾಜನತೆಗೆ ಮೋಸ ಮಾಡಿದೆ ಎಂದು ಪೋಸ್ಟ್ ಮಾಡಿದ್ದಾರೆ.
undefined
ರಾಜ್ಯದಲ್ಲಿ ಮತ್ತೆ ತಾಲಿಬಾನ್ ಸರ್ಕಾರ ಬರುತ್ತಿದೆ: ಬಸನಗೌಡ ಯತ್ನಾಳ್
ಯಾರೂ ಹೆಚ್ಚಾದ ವಿದ್ಯುತ್ ಬಿಲ್ ಪಾವತಿ ಮಾಡಬೇಡಿ. 200 ಯುನಿಟ್ ಒಳಗೆ ಬಳಸುವವರು ವಿದ್ಯುತ್ ಬಿಲ್ ನೀಡುವವರನ್ನು ವಿನಮ್ರತೆಯಿಂದ ವಾಪಸ್ ಕಳುಹಿಸಬೇಕು ಎಂದು ಹೇಳಿದ್ದಾರೆ. ಮಹಿಳೆಯರು ಎಲ್ಲ ಬಸ್ಸುಗಳಲ್ಲಿ ಟಿಕೆಟ್ ಪಡೆಯಬೇಡಿ. ಬಸ್ ನಿರ್ವಾಹಕ ಹಾಗೂ ಸಿಬ್ಬಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೇಳಿ ಎಂದು ಹೇಳಬೇಕು. 2000 ಪಡೆಯಲು ಎಲ್ಲ ಮಹಿಳೆಯರು ನೋಂದಾಯಿಸಿಕೊಳ್ಳಬೇಕು. ನೀರಿನ ಬಿಲ್ ಹೆಚ್ಚಾದರೆ ವಾಪಸ್ ಕಳುಹಿಸಬೇಕು ಎಂದು ಅವರು ಸಾರ್ವಜನಿಕರಲ್ಲಿ ಪೋಸ್ಟ್ ಮೂಲಕ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಂದೋಲನ ಆಗಬೇಕಿದೆ. ಜನರಿಗೆ ವಾಗ್ದಾನ ಮಾಡಿದ್ದನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಬೇಕು. ಮಹಾದೇವಪ್ಪನಿಗೂ ಕೊಡಬೇಕು. ಕಾಕಾ ಪಾಟೀಲನಿಗೂ ಕೊಡಬೇಕು. ಎಲ್ಲರಿಗೂ ಕೊಡಬೇಕು ಎಂದು ಶಾಸಕ ಯತ್ನಾಳ ಪೋಸ್ಟ್ ಮಾಡಿದ್ದಾರೆ.