ಉತ್ತರ ಪ್ರದೇಶ ಸಿಎಂ, ಹಿಂದುತ್ವದ ಫೈರ್ ಬ್ರ್ಯಾಂಡ್ ಯೋಗಿ ಆದಿತ್ಯನಾಥ್ ಮಂಡ್ಯಕ್ಕೆ ಆಗಮಿಸಿದ್ದಾರೆ. ಜೆಡಿಎಸ್ ಭದ್ರಕೋಟೆಯಲ್ಲಿ ಸಿಎಂ ಆದಿತ್ಯನಾಥ್ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಯೋಗಿಗೆ ಹೂಮಳೆ ಸ್ವಾಗತ ಕೋರಲಾಗಿದೆ.
ಮಂಡ್ಯ(ಏ.26): ಕರ್ನಾಟಕ ವಿಧಾನಸಭಾ ಚುನಾವಣ ರಂಗೇರಿದೆ. ಬಿಜೆಪಿಯ ಅಥಿರಥ ಮಹಾನಾಯಕರು ಇದೀಗ ಕರ್ನಾಟಕದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಡ್ಯಕ್ಕೆ ಆಗಮಿಸಿದ್ದಾರೆ. ಜೆಡಿಎಸ್ ಭದ್ರಕೋಟೆಯಲ್ಲಿ ಯೋಗಿ ಆದಿತ್ಯನಾಥ್ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಯೋಗಿ ಆದಿತ್ಯನಾಥ್‌ಗೆ ಸಂಸದೆ ಸುಮಲತಾ, ಮಂಡ್ಯ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್, ಶ್ರೀರಂಗಪಟ್ಟಣ ಅಭ್ಯರ್ಥಿ ಹಿಂಡುವಾಳ ಸಚ್ಚಿದಾನಂದ ಸಾಥ್ ನೀಡಿದ್ದಾರೆ. ಯೋಗಿ ರೋಡ್ ಶೋಗೆ ಜನಸಾಗರವೇ ಹರಿದು ಬಂದಿದೆ. ಯೋಗಿ ಯೋಗಿ ಜಯಘೋಷಗಳು ಮೊಳಗಿದೆ.
ಹೆಲಿಕಾಪ್ಟರ್ ಮೂಲಕ ಮಂಡ್ಯದ ಸಂಜಯ್ ವೃತ್ತಕ್ಕೆ ಆಗಮಿಸಿದ ಯೋಗಿ ಆದಿತ್ಯನಾಥ್‌ಗೆ ಭರ್ಜರಿ ಸ್ವಾಗತ ಕೋರಲಾಯಿತು. ಯೋಗಿ ಜೊತೆಗೆ ಹೆಲಿಕಾಪ್ಟರ್ ಮೂಲಕ ಸಂಸದ ಪ್ರತಾಪ್ ಸಿಂಹ, ಸಚಿವ ಅಶ್ವತ್ಥ್ ನಾರಾಯಣ್ ಆಗಮಿಸಿದ್ದರು. ಮಂಗಳವಾದ್ಯ, ವೇದಘೋಷಗಳೊಂದಿಗೆ ಪೂರ್ಣಕುಂಭ ಸ್ವಾಗತ ಕೋರಲಾಗಿದೆ. ಬಳಿ ವೇದ ಮಂತ್ರ ಪಠಿಸುತ್ತಿದ್ದ ಅರ್ಚಕ ವೃಂದದ ಬಳಿ ತೆರಳಿ ಕೈಮುಗಿದು ನಮಸ್ಕರಿಸಿದ್ದಾರೆ. ಇದಾದ ಬಳಿಕ ತೆರೆದ ವಾಹನದ ಏರಿ ರೋಡ್ ಶೋ ಆರಂಭಿಸಿದರು.
ನಾಳೆ 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ಮೋದಿ ಸಂವಾದ
ಯೋಗಿ ಆದಿತ್ಯನಾಥ್ ನೋಡಿದ ಜನ ಘೋಷಣ ಕೂಗಿದ್ದಾರೆ. ಯೋಗಿಯತ್ತ ಹೂಮಳೆ ಸುರಿಸಿದ್ದಾರೆ. ತೆರೆದ ವಾಹನದಲ್ಲಿ ಯೋಗಿ ಕೈಬೀಸಿ ವಿಕ್ಟರಿ ಸನ್ನೆ ತೋರಿಸಿದ್ದಾರೆ. ಎಲ್ಲೆಡೆ ಯೋಗಿ ಯೋಗಿ ಎಂದು ಕೂಗು, ಬ್ಯಾನರ್ ಕಾಣಿಸುತ್ತಿದೆ. ಇತ್ತ ಯೋಗಿ ಆದಿತ್ಯನಾಥ್ ಆಗಮನದಿಂದ ಬಾರಿ ಭಿಗಿ ಭದ್ರತೆ ಕೈಗೊಳ್ಳಲಾಗಿದೆ. ಜೆಡಿಎಸ್ ಭದ್ರಕೋಟೆಯಲ್ಲಿ ಅಬ್ಬರದ ರೋಡ್ ಶೋ ಮೂಲಕ ಬಿಜೆಪಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ.
ಮಂಡ್ಯ ನಗರ, ಬಸವನಬಾಗೇವಾಡಿ, ಇಂಡಿ ಯಲ್ಲಿ ಯೋಗಿ ಆದಿತ್ಯನಾಥ್ ಮತಭೇಟೆ ನಡೆಸಲಿದ್ದಾರೆ. ಇಂದಿನ ಪ್ರಚಾರ ಬಳಿಕ ಮತ್ತೆ ಏಪ್ರಿಲ್ 30 ರಂದು ಯೋಗಿ ಆದಿತ್ಯನಾಥ್ ಮತ್ತೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. 30ರಂದು ಶೃಂಗೇರಿ, ಪುತ್ತೂರು, ಕಾರ್ಕಳ, ಬೈಂದೂರು, ಭಟ್ಕಳ, 3ರಂದು ಗಂಗಾವತಿ, ಜೇವರ್ಗಿ, ಶಹಾಪುರ, ಭಾಲ್ಕಿ ಕ್ಷೇತ್ರಗಳಲ್ಲಿ ಮತಯಾಚನೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೊಡ್ಡಬಳ್ಳಾಪುರ: ಅಮೆರಿಕಾದ ಉದ್ಯೋಗ ಬಿಟ್ಟು ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಎಂಎಸ್ ಪದವೀಧರ..!
ಕರ್ನಾಟಕ ವಿಧಾನಸಭಾ ಚುನಾವಣೆ ಮೇ.10 ರಂದು ನಡೆಯಲಿದೆ. ಮೇ.13ಕ್ಕೆ ಫಲಿತಾಂಶ ಘೋಷಣೆಯಾಗಲಿದೆ. ಈಗಾಗಲೇ ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದೆ. ಬಿಜೆಪಿ ಪರ ಅಮಿತ್ ಶಾ, ಯೋಗಿ ಆದಿತ್ಯನಾಥ್ ಈಗಾಗಲೇ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಆಗಮಿಸುತ್ತಿದ್ದಾರೆ. ಇದರ ಜೊತೆಗೆ ಹಲವು ನಾಯಕರು ಪ್ರಚಾರ ನಡೆಸಲು ಆಗಮಿಸಲಿದ್ದಾರೆ. ಇತ್ತ ಬೆಂಗಳೂರಿನಲ್ಲಿ ನಟ ಕಿಚ್ಚ ಸುದೀಪ್ ಬಿಜೆಪಿ ಅಭ್ಯರ್ಥಿಗ ಪರ ಪ್ರಚಾರ ನಡೆಸುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಪರವಾಗಿ ರಾಹುಲ್ ಗಾಂಧಿ ಭರ್ಜರಿ ಮತಭೇಟೆ ನಡೆಸುತ್ತಿದ್ದಾರೆ.