Yogi Adityanath : ಗೋರಖ್ ಪುರದಿಂದ ನಾಮಪತ್ರ ಸಲ್ಲಿಸಿದ ಯೋಗಿ, ಮುಖ್ಯಮಂತ್ರಿಯ ಆದಾಯದಲ್ಲಿ ಗಣನೀಯ ಇಳಿಕೆ!

Suvarna News   | Asianet News
Published : Feb 04, 2022, 04:29 PM ISTUpdated : Feb 04, 2022, 04:45 PM IST
Yogi Adityanath : ಗೋರಖ್ ಪುರದಿಂದ ನಾಮಪತ್ರ ಸಲ್ಲಿಸಿದ ಯೋಗಿ, ಮುಖ್ಯಮಂತ್ರಿಯ ಆದಾಯದಲ್ಲಿ ಗಣನೀಯ ಇಳಿಕೆ!

ಸಾರಾಂಶ

ಗೋರಖ್ ಪುರದಿಂದ ನಾಮಪತ್ರ ಸಲ್ಲಿಸಿದ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯ ಆದಾಯದಲ್ಲಿ ಇಳಿಕೆ ರಿವಾಲ್ವರ್ ಹಾಗೂ ರೈಫಲ್ ಕೂಡ ಹೊಂದಿರುವ ಯೋಗಿ

ಲಖನೌ (ಫೆ.4): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (UP CM Yogi Adityanath ), ಶುಕ್ರವಾರ ಉತ್ತರ ಪ್ರದೇಶ ವಿಧಾನಸಭಾ (Uttar Pradesh Election) ಚುನಾವಣೆಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಈ ವೇಳೆ ತಮ್ಮಲ್ಲಿರುವ ಆಸ್ತಿಪಾಸ್ತಿಗಳ (assets detail) ವಿವರವನ್ನೂ ಅವರು ವಿವರಿಸಿದ್ದಾರೆ. ನಾಮಪತ್ರ ಸಲ್ಲಿಯ ವೇಳೆ, ತಮ್ಮಲ್ಲಿರುವ ಒಟ್ಟು ಆಸ್ತಿ, ಆದಾಯ, ಸ್ಥಿರ ಹಾಗೂ ಚರಾಸ್ತಿಗಳ ಮಾಹಿತಿಯನ್ನು ಅವರು ನೀಡಿದ್ದಾರೆ. ಯೋಗಿ ಆದಿತ್ಯನಾಥ್ ಗೋರಖ್‌ಪುರ (gorakhpur) ನಗರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸಿಎಂ ಯೋಗಿ ತಮ್ಮ ಒಟ್ಟು ಆಸ್ತಿ ವಿವರವನ್ನೂ ನೀಡಿದರು. ನಾಮಪತ್ರದ ಆಧಾರದಲ್ಲಿ ಹೇಳುವುದಾದರೆ, 2020-2021 ರ ಹಣಕಾಸು ವರ್ಷದಲ್ಲಿ ಸಿಎಂ ಯೋಗಿ ಅವರ ಆದಾಯ 13,20,653 ರೂ ಎಂದು ಹೇಳಲಾಗಿದೆ.

2020-21ರಲ್ಲಿ ಯೋಗಿ ಆದಾಯ ಇಳಿಕೆ:  2020-21ನೇ ಹಣಕಾಸು ವರ್ಷದಲ್ಲಿ ಸಿಎಂ ಯೋಗಿ ಅವರ ಆದಾಯ 13,20,653 ರೂಪಾಯಿ ಎಂದು ಅರ್ಜಿ ಸಲ್ಲಿಸುವ ವೇಳೆ ಹೇಳಲಾಗಿದೆ. 2019-20ರಲ್ಲಿ ಈ ಆದಾಯ 16,68,799 ಆಗಿತ್ತು. 2019-20 ಮತ್ತು 2020-21ರ ಹಣಕಾಸು ವರ್ಷಗಳಲ್ಲಿ ಮುಖ್ಯಮಂತ್ರಿಗಳ ಆದಾಯದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.  ಈ ಹಿಂದೆ 2018-19ರಲ್ಲಿ ಅವರ ಆದಾಯ 18,27,639 ಆಗಿತ್ತು.

1 ಲಕ್ಷ ರೂಪಾಯಿ ನಗದು: ಈಗ ಪ್ರಸ್ತುತ ತಮ್ಮ ಬಳಿ ಇರುವ ನಗದು ಹಣದ ಬಗ್ಗೆಯೂ ಯೋಗಿ ಆದಿತ್ಯನಾಥ್ ನಾಮಪತ್ರದಲ್ಲಿ ಮಾಹಿತಿ ನೀಡಿದ್ದು, ಪ್ರಸ್ತುತ ತಮ್ಮ ಬಳಿ 1 ಲಕ್ಷ ರೂಪಾಯಿ ನಗದು ಹಣ ಇದೆ ಎಂದಿದ್ದಾರೆ.
"
ಕಿವಿಯೋಲೆಯಲ್ಲಿ 20 ಗ್ರಾಮ್ ಚಿನ್ನ: ತಮ್ಮ ಬಳಿ ಇರುವ ಚಿನ್ನಾಭರಣಗಳ ಬಗ್ಗೆಯೂ ಯೋಗಿ ಆದಿತ್ಯನಾಥ್ ಮಾಹಿತಿ ನೀಡಿದ್ದಾರೆ. ತಾವು ಕಿವಿಗೆ ಓಲೆಗಳನ್ನು (ear coil) ಧರಿಸುವ ಬಗ್ಗೆ ಅವರು ಮಾಹಿತಿ ನೀಡಿದ್ದು, ಇದು ಸ್ವರ್ಣದ್ದಾಗಿದೆ ಎಂದು ಹೇಳಿದ್ದಾರೆ. ಇದು 20 ಗ್ರಾಮ್ ನ ಚಿನ್ನವಾಗಿದ್ದು, ಖರೀದಿಯ ವೇಳೆ ಇದರ ಮೌಲ್ಯ 49 ಸಾವಿರ ರೂಪಾಯಿ ಆಗಿದ್ದವು. ಅದರೊಂದಿಗೆ ರುದ್ರಾಕ್ಷಿಯನ್ನು ಹೊಂದಿರುವ ಚಿನ್ನದ ಸರವನ್ನೂ (Rudraksh garland) ತಾವು ಧರಿಸುತ್ತಿರುವುದಾಗಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಇದನ್ನು ಖರೀದಿ ಮಾಡುವ ವೇಳೆ ಇದರ ಮೌಲ್ಯ 20 ಸಾವಿರ ರೂಪಾಯಿ ಆಗಿದ್ದವು ಎಂದು ಮಾಹಿತಿ ನೀಡಿದ್ದಾರೆ.

5 States Election: ಯೋಗಿ ಆದಿತ್ಯನಾಥ್ ಕುರ್ಚಿ ಭವಿಷ್ಯ ನಿರ್ಧಾರವಾಗೋದು ಇಲ್ಲಿ!
ಯೋಗಿ ಬಳಿ ಇದೆ ರಿವಾಲ್ವರ್ ಹಾಗೂ ರೈಫಲ್ : ತಮ್ಮ ಬಳಿ ರಿವಾಲ್ವರ್ (revolver) ಹಾಗೂ ರೈಫಲ್ ಗಳು (rifle ) ಇವೆ ಎಂದು ಯೋಗಿ ಮಾಹಿತಿ ನೀಡಿದ್ದಾರೆ. ರಿವಾಲ್ವರ್ ಖರೀದಿಯ ವೇಳೆ ಇದರ ಮೌಲ್ಯ 1 ಲಕ್ಷ ರೂಪಾಯಿ ಆಗಿತ್ತು ಎಂದು ಹೇಳಿದ್ದಾರೆ. ಇನ್ನು ರೈಫಲ್ ಕೂಡ ತಾವು ಹೊಂದಿರುವುದಾಗಿ ತಿಳಿಸಿದ್ದು, ಖರೀದಿಯ ವೇಳೆ ಇದರ ಮೌಲ್ಯ 80 ಸಾವಿರ ರೂಪಾಯಿ ಆಗಿತ್ತು ಎಂದಿದ್ದಾರೆ. ಸಂಸದ ಹಾಗೂ ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಯಾಗಿರುವ ಕಾರಣ ಸಂಬಳ ಹಾಗೂ ಭತ್ಯೆಗಳೇ ತಮ್ಮ ಆದಾಯದ ಮೂಲ ಅದರ ಹೊರತಾಗಿ ಬೇರೇನನ್ನೂ ಹೊಂದಿಲ್ಲ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.


UP Elections: ಮತ್ತೊಮ್ಮೆ ಭಾಜಪ ಸರ್ಕಾರ, ಬಿಜೆಪಿ ಮೊದಲ ಜಾಹೀರಾತು ಬಿಡುಗಡೆ
ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವ ಯೋಗಿ ಆದಿತ್ಯನಾಥ್, ಕೇಂದ್ರ ಗೃಹ ಸಚಿವ ಅಮಿತ್ ಷಾ (Union Home Minister Amith Shah) ಅವರ ಜೊತೆಗೂಡಿ ನಾಮಪತ್ರವನ್ನು ಸಲ್ಲಿಸಿದರು. ಯುಪಿ ಚುನಾವಣೆಗೆ ಹೋರಾಡಲು ತನ್ನ ಮೊದಲ ಔಪಚಾರಿಕ ಹೆಜ್ಜೆಯನ್ನು ಇಡುವ ಮೊದಲು, ಐದು ಬಾರಿ ಸಂಸದರಾಗಿರುವ ಅವರು ಗೋರಖನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ದೇವಸ್ಥಾನದ ಪ್ರಧಾನ ಅರ್ಚಕರೂ ಆಗಿರುವ ಯೋಗಿ ಆದಿತ್ಯನಾಥ್, ಹವನವನ್ನೂ ಮಾಡಿದರು.

ಪೂರ್ವ ಉತ್ತರ ಪ್ರದೇಶದ ಗೋರಖ್‌ಪುರ ಯೋಗಿ ಆದಿತ್ಯನಾಥ್ ಅವರ ಭದ್ರಕೋಟೆಯಾಗಿದ್ದು, ಇಲ್ಲಿಂದ ಅವರು ಸ್ಪರ್ಧಿಸಿದ ಪ್ರತಿ ಸಂಸತ್ ಚುನಾವಣೆಯನ್ನು ಗೆದ್ದಿದ್ದಾರೆ. ಪೂರ್ವ ಉತ್ತರ ಪ್ರದೇಶದಿಂದ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಕ್ಕೆ ಪ್ರತಿಸ್ಪರ್ಧಿಯಾಗಿ ಅನೇಕ ಪ್ರಮುಖ ಹಿಂದುಳಿದ ಜಾತಿಗಳ ನಾಯಕರನ್ನು ಕಳೆದುಕೊಂಡ ನಂತರ ಅಮಿತ್ ಶಾ ಮತ್ತು ಹಲವಾರು ಬಿಜೆಪಿ ನಾಯಕರು ಭಾರಿ ಶಕ್ತಿ ಪ್ರದರ್ಶನ ತೋರುವ ಮೂಲಕ ನಾಮಪತ್ರ ಸಲ್ಲಿಕೆಗೆ ಜೊತೆಯಾಗಿದ್ದರು. ಗೋರಖ್ ಪುರದಲ್ಲಿ ಈವರೆಗೂ ಯೋಗಿ ಆದಿತ್ಯನಾಥ್‌ ಅವರಿಗೆ ಪ್ರಮುಖ ಸ್ಪರ್ಧಿ ಭೀಮ್ ಆರ್ಮಿಯ ಚಂದ್ರಶೇಖರ್ ಆಜಾದ್ ಆಗಿದ್ದಾರೆ. ಸಮಾಜವಾದಿ ಪಕ್ಷವು ಈ ಕ್ಷೇತ್ರಕ್ಕೆ ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ