Goa Election : ಮಾಸೆರೆಟಿ ಕಾರಿನ ಮಾಲೀಕ ಗೋವಾದಲ್ಲಿ ಆಪ್ ಸಿಎಂ ಅಭ್ಯರ್ಥಿ!

Suvarna News   | Asianet News
Published : Feb 03, 2022, 11:06 PM ISTUpdated : Feb 03, 2022, 11:10 PM IST
Goa Election : ಮಾಸೆರೆಟಿ ಕಾರಿನ ಮಾಲೀಕ ಗೋವಾದಲ್ಲಿ ಆಪ್ ಸಿಎಂ ಅಭ್ಯರ್ಥಿ!

ಸಾರಾಂಶ

ಆಮ್ ಆದ್ಮಿ ಪಾರ್ಟಿ ಮುಖ್ಯಮಂತ್ರಿ ಅಭ್ಯರ್ಥಿ ಮಾಸೆರೆಟಿ ಕಾರಿನ ಮಾಲೀಕ! ಕಷ್ಟಪಟ್ಟು ದುಡಿದ ಹಣದಿಂದ ಕಾರು ಖರೀದಿಸಿದ್ದಾರೆ ಎಂದ ಅರವಿಂದ್ ಕೇಜ್ರಿವಾಲ್ ಅಮಿತ್ ಪಾಲೇಕರ್ ಅವರನ್ನು ಡಿಫೆಂಡ್ ಮಾಡಿಕೊಂಡ ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಸಂಯೋಜಕ

ಪಣಜಿ (ಫೆ. 3): ಗೋವಾದಲ್ಲಿ(Goa)  ಆಮ್ ಆದ್ಮಿ ಪಕ್ಷದ (Aam Aadmi Party) ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಿಯುಕ್ತಿಯಾಗಿರುವ ವಕೀಲ ಅಮಿತ್ ಪಾಲೇಕರ್ (Amit Palekar ), ಇಟಲಿಯ ಐಷಾರಾಮಿ ಕಾರುಗಳಲ್ಲಿ ಒಂದಾಗಿರುವ ಮಾಸೆರೆಟಿಯನ್ನು ಹೊಂದಿದ್ದವರಾಗಿದ್ದಾರೆ. ಆಮ್ ಆದ್ಮಿ ಪಾರ್ಟಿಯ ಮುಖ್ಯಮಂತ್ರಿ ಅಭ್ಯರ್ಥಿ ಐಷಾರಾಮಿ ಮಾಸೆರೆಟಿ ಹೊಂದಿರುವುದರನ್ನು ವಿರೋಧ ಪಕ್ಷಗಳು ಟೀಕೆ ಮಾಡುತ್ತಿರುವ ಬೆನ್ನಲ್ಲಿಯೇ ಪಕ್ಷದ ರಾಷ್ಟ್ರೀಯ ಸಂಯೋಜಕ ಅರವಿಂದ್ ಕೇಜ್ರಿವಾಲ್ (national convener of the Aam Aadmi Party, Kejriwal) ಅವರ ರಕ್ಷಣೆಗೆ ಧಾವಿಸಿದ್ದಾರೆ.

ಗುರುವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅರವಿಂದ್ ಕೇಜ್ರಿವಾಲ್, ಮುಖ್ಯಮಂತ್ರಿ ಅಭ್ಯರ್ಥಿ ಅಮಿತ್ ಪಾಲೇಕರ್ ಅವರ ಪರವಾಗಿ ಮಾತನಾಡಿದರು. ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಅವರು ಗೋವಾದ ಎಎಪಿಯ (AAP) ಮುಖ್ಯಮಂತ್ರಿ ಅಭ್ಯರ್ಥಿ ಮಾಸೆರೆಟಿ ಕಾರಿನ ಮಾಲೀಕರು ಎಂಬ ವರದಿಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಅಮಿತ್ ಪಾಲೇಕರ್ ಅವರು ತಾವು ಕಷ್ಟಪಟ್ಟು ದುಡಿದ ಹಣದಿಂದ ತಮ್ಮ ಮಾಸೆರೆಟಿಯನ್ನು ಖರೀದಿಸಿದ್ದಾರೆಯೇ ಹೊರತು ಗೋವಾದ ಜನರನ್ನು ದರೋಡೆ ಮಾಡಿ ಅದನ್ನು ಖರೀದಿಸಿಲ್ಲ' ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಆಮ್ ಆದ್ಮಿ ಪಾರ್ಟಿ ಎಂದರೆ, ಪಕ್ಷದಲ್ಲಿರುವವರು ಅದ್ದೂರಿ ಕಾರು ಹೊಂದಿರಬಾರದು ಎಂದು ಅರ್ಥವಲ್ಲ. ಅಷ್ಟಕ್ಕೂ ನನ್ನಲ್ಲಿದ್ದ ಮಾಸೆರೆಟಿ ಕಾರ್ ಅನ್ನು ಈಗಾಗಲೇ ಮಾರಾಟ ಮಾಡಿದ್ದೇನೆ" 11.4 ಕೋಟಿ ರೂಪಾಯಿ ಆಸ್ತಿಯನ್ನು ಹಿಂದಿರುವ ಅಮಿತ್ ಪಾಲೇಕರ್ ಹೇಳಿದ್ದಾರೆ.

ನನ್ನ ತಂದೆ ಶಿಕ್ಷಕರಾಗಿದ್ದವರು ಮತ್ತು ನಮಗೆ ಪ್ರಾಮಾಣಿಕತೆಯ ಮೂಲ ತತ್ವಗಳನ್ನು ಕಲಿಸಿದವರು. ನನ್ನ ಮೊದಲ ಬೈಕು, ಸ್ಪ್ಲೆಂಡರ್ ಅನ್ನು ನನ್ನ ಸ್ವಂತ ಹಣದಿಂದ  ಖರೀದಿಸಿದೆ. ಈಗಲೂ ಆ ಬೈಕ್ ನನ್ನ ಬಳಿ ಇದೆ ಎಂದು ಹೇಳಿದರು. "ನಾನು ಏನು ಓಡಿಸಿದರೂ ಪರವಾಗಿಲ್ಲ. ಕನಿಷ್ಠ ನಾನು ದರೋಡೆಯನ್ನಂತೂ ಮಾಡುವುದಿಲ್ಲ. ನಾನು 22 ವರ್ಷಗಳಿಂದ ಹೀಗೆಯೇ ಇದ್ದೇನೆ" ಎಂದು ಅಮಿತ್ ಪಾಲೇಕರ್ ಹೇಳಿದರು. ವಕೀಲರಾಗಿ ತಮ್ಮ ದಿನಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಾಲೇಕರ್, "ನನ್ನ ವೃತ್ತಿಜೀವನವನ್ನು ನನ್ನ ರಾಜಕೀಯ ಪ್ರಯಾಣದೊಂದಿಗೆ ಬೆರೆಸಬಾರದು. ನನಗೆ ನನ್ನ ಬೇರುಗಳು ನನಗೆ ಗೊತ್ತಿದೆ ಮತ್ತು ನನಗೆ ಗೋವಾದ ಬಗ್ಗೆ ದೂರದೃಷ್ಟಿ ಇದೆ" ಎಂದು ಹೇಳಿದರು.

Loyalty Oath : "ದೇವ್ರ ಮೇಲೆ ಆಣೆ ಮಾಡಿ ಹೇಳಿ, ಬೇರೆ ಪಕ್ಷಕ್ಕೆ ಹೋಗಲ್ಲ ಅಂತ" ಮಣಿಪುರ, ಗೋವಾದಲ್ಲಿ ಪ್ರಮಾಣ ಪವರ್
ಗೋವಾ ಚುನಾವಣೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ನ ಮೈಕೆಲ್ ಲೋಬೋ (Michael Lobo) ಶ್ರೀಮಂತ ಅಭ್ಯರ್ಥಿ ಎನಿಸಿದ್ದಾರೆ.  ಮೈಕೆಲ್ ಲೋಬೋ ಅಂದಾಜು 84.38 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಇನ್ನು ಅವರ ಪತ್ನಿ ಡೆಲಿಲಾ ಅವರು 7.16 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ ಎಂದು ಅಫಡವಿಟ್ ನಲ್ಲಿ ತಿಳಿಸಲಾಗಿದೆ. ಲೋಬೋ ಅವರು ಕಲಾಂಗುಟ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದರೆ, ಡೆಲಿಲಾ ಅವರು ಸಿಯೋಲಿಮ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

5 State Elections: ಬಿಜೆಪಿಯ ಚಿನ್ನದ ಗೋವಾ ಬೇಕೆ? ಕಾಂಗ್ರೆಸ್‌ನ ಗಾಂಧಿ ಪರಿವಾರ ಗೋವಾ ಬೇಕೆ?
2017ರ ವಿಧಾನಸಭೆ ಚುನಾವಣೆಯಿಂದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Pramod Sawant) ಅವರ ಸಂಪತ್ತು 2.37 ಕೋಟಿ ರೂ.ನಿಂದ 7.15 ಕೋಟಿ ರೂ.ಗೆ ಮೂರು ಪಟ್ಟು ಹೆಚ್ಚಾಗಿದೆ.ಪಣಜಿಯ ತಾಲೀಗಾವೊ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಶಾಸಕ ಅಟಾನಾಸಿಯೊ ಮಾನ್ಸೆರೇಟ್ ಮತ್ತು ಅವರ ಪತ್ನಿ ಜೆನ್ನಿಫರ್ ಜಂಟಿಯಾಗಿ 48,40 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಪಣಜಿ ವಿಧಾನಸಭಾ ಕ್ಷೇತ್ರದಲ್ಲಿ ಮಾನ್ಸೆರೇಟ್ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಅವರ ಆಸ್ತಿ 8.84 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!