ದೇಶದ ಜನ ಇವರಿಗೆ ತಕ್ಕ ಪಾಠ ಕಲಿಸಲಿದ್ದು, ಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಅಧಿಕಾರವನ್ನು ಮತ್ತೊಮ್ಮೆ ಕೊಡಲು ಮೋದಿಯವರಿಗೆ ಆಶೀರ್ವದಿಸಲಿದ್ದಾರೆ ಎಂದ ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ
ಬೈಲಹೊಂಗಲ(ಜು.30): ಮೋದಿಯವರನ್ನು ಸೋಲಿಸಲಿಕ್ಕೆ ವಿರೋಧ ಪಕ್ಷಗಳು ಒಗ್ಗಟ್ಟಾಗುತ್ತಿವೆ. ಇವರ ಒಗ್ಗಟ್ಟು ಈಸ್ಟ್ ಇಂಡಿಯಾ ಕಂಪನಿಯ ಪ್ರತಿರೂಪವಾಗಿದ್ದು, ಮತ್ತೊಮ್ಮೆ ಭಾರತವನ್ನು ಸೋಲಿಸಲಿಕ್ಕೆ ಹೊರಟಿದ್ದಾರೆ ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು.
ಪಟ್ಟಣದ ಬ್ಯಾಡಮಿಂಟನ್ ಹಾಲ್‌ನಲ್ಲಿ ಶನಿವಾರ ನಡೆದ ಬಿಜೆಪಿ ಪದಾಧಿಕಾರಿಗಳಿಗೆ ಹೆಲ್ಮೆಟ್ ವಿತರಣೆ ಹಾಗೂ ಮಂಡಲ ಮಟ್ಟದ ಸಂಯುಕ್ತ ಮೋರ್ಚಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಜನ ಇವರಿಗೆ ತಕ್ಕ ಪಾಠ ಕಲಿಸಲಿದ್ದು, ಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಅಧಿಕಾರವನ್ನು ಮತ್ತೊಮ್ಮೆ ಕೊಡಲು ಮೋದಿಯವರಿಗೆ ಆಶೀರ್ವದಿಸಲಿದ್ದಾರೆ ಎಂದರು.
ಆರ್‌ಎಸ್‌ಎಸ್ ಮುಖಂಡರ ಮನೆಗೆ ಈಶ್ವರಪ್ಪ ದಿಢೀರ್ ಭೇಟಿ: ಬಿಜೆಪಿ ವಲಯದಲ್ಲಿ ಭಾರೀ ಕುತೂಹಲ
ಭಾರತದ ಶಕ್ತಿಯನ್ನು ಜಗತ್ತಿಗೆ ಅನಾವರಣಗೊಳಿಸಿ ಬರುವ ದಿನಗಳಲ್ಲಿ ಆರ್ಥಿಕವಾಗಿ ಪ್ರಪಂಚದ 3ನೇ ಬಲಾಢ್ಯ ರಾಷ್ಟ್ರಮಾಡುವ ಗ್ಯಾರಂಟಿ ನೀಡಿರುವ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ದೇಶವೇ ಕೊಂಡಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಜಿಯವ ಕಾರ್ಯವನ್ನು ಪ್ರಪಂಚವೇ ಮೆಚ್ಚುತ್ತಿದೆ. ಇದನ್ನು ಸಹಿಸದ ವಿರೋಧ ಪಕ್ಷಗಳು ತಾವು ಪರಸ್ಪರ ಕೆರಚಾಟ ನಡೆಸಿದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಭಾರತ ದೇಶಾದ್ಯಂತ ಅಭಿವೃದ್ಧಿ ಪರ್ವವನ್ನೇ ಹರಿಸಿದ್ದಾರೆ. 4 ನೂರು ವರ್ಷಗಳ ರಾಮಮಂದಿರ ವಿವಾದಕ್ಕೆ ತೆರೆ ಎಳೆದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಒಂದು ಕಡೆಯಾದರೆ, ಅದೇ ನಗರದಲ್ಲಿ ಮಸೀದಿ ನಿರ್ಮಿಸಲು ಜಾಗ ನೀಡಿ ಸಹಬಾಳ್ವೆ ನಿರ್ಮಿಸಿದ್ದಾರೆ ಎಂದು ತಿಳಿಸಿದರು.
ಮಾಜಿ ಶಾಸಕ ಜಗದೀಶ ಮೆಟಗುಡ್ ಮಾತನಾಡಿ, ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಉತ್ತಮ ಕಾರ್ಯ ನಿರ್ವಹಿಸಿ ಬೂತ್‌ಮಟ್ಟದಿಂದ ಮಂಡಲ ಪದಾಧಿಕಾರಿಗಳಿಗೆ ಜೀವ ರಕ್ಷಣೆಗೆ ಬಿಜೆಪಿ ಗುರುತು ಕಮಲ ಚಿಹ್ನೆಯುಳ್ಳ ಹೆಲ್ಮೆಟ್ ನೀಡಿರುವುದು ಶ್ಲಾಘನೀಯ. ಬಿಜೆಪಿ ಪದಾಧಿಕಾರಿಗಳು ತಮ್ಮ ಬೂತ್‌ನಲ್ಲಿ ಪಕ್ಷದ ಸಾಧನೆ ತಿಳಿಸುವುದಾಗಬೇಕು. ರಾಜ್ಯದಲ್ಲಿ ಬಿಟ್ಟಿಭಾಗ್ಯಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಮತ್ತೆ ಬಿಟ್ಟಿಭಾಗ್ಯಗಳನ್ನು ನೀಡುವ ಯೋಜನೆ ಮಾಡುತ್ತಿದ್ದು ಯಾವುದೇ ಕಾರಣಕ್ಕೂ ಜನ ಮೋಸ ಹೊಗಬಾರದು. ಮೋದಿಯವರ ಕಾರ್ಯಕ್ಷಮತೆಯನ್ನು ಮತ್ತು ಇಲ್ಲಿಯವರೆಗೆ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ದೇಶದ ಸುಭದ್ರತೆಗೆ ಜನತೆ ಮತ್ತೆ ಬಿಜಿಪಿಗೆ ಅಧಿಕಾರ ನೀಡಲಿದ್ದಾರೆ ಎಂದರು.
ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಕಳೆದ 9 ವರ್ಷದಲ್ಲಿ ಮೋದಿಜಿಯವರ ನೇತೃತ್ವದ ಕೇಂದ್ರ ಸರ್ಕಾರ ಸಾಧನೆಯ ಕರಪತ್ರವನ್ನು ಮನೆ ಮನೆಗೆ ಮುಟ್ಟಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಮಹಾರಾಷ್ಟ್ರ ಸರ್ಕಾರಕ್ಕೆ ಭಾರೀ ಮುಖಭಂಗ: ಮರಾಠಿ ಭಾಷಿಗರಿಂದ ಕರ್ನಾಟಕಕ್ಕೆ ಸೇರುವ ಬಗ್ಗೆ ಠರಾವು..!
ಅಧ್ಯಕ್ಷತೆ ವಹಿಸಿದ್ದ ಮಂಡಲ ಅಧ್ಯಕ್ಷ ಗುರುಪಾದ ಕಳ್ಳಿ ಮಾತನಾಡಿದರು. ವೇದಿಕೆಯ ಮೇಲೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ ದೇಶಪಾಂಡೆ, ಸುಭಾಷ ಪಾಟೀಲ, ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ, ರತ್ನಾ ಗೋಧಿ, ಗುರು ಮೆಟಗುಡ್, ಲಚ್ಚಪ್ಪ ದೊಡಮನಿ, ಲಕ್ಕಪ್ಪ ಕಾರ್ಗಿ, ಸುಭಾಷ ತುರಮರಿ ಇದ್ದರು. ಹರಕುಣಿ ಕಾಲೋನಿಯಲ್ಲಿ ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರದ 9 ವರ್ಷದ ಸಾಧನೆ ಕರಪತ್ರ ಮತ್ತು ಪುಸ್ತಕ ಹಂಚಿದರು. ಕಾರ್ಯಕ್ರಮದಲ್ಲಿ ಮಂಡಲದ ಪದಾಧಿಕಾರಿಗಳಾದ ಶಂಕರ ಚೌಡಣ್ಣವರ, ಸುನೀಲ ಮರಕುಂಬಿ, ರಾಚ್ಚಪ್ಪ ಮಟ್ಟಿ, ಮಂಜು ಜೋರಾಪುರ, ಅಶೋಕ ಯರಗುದ್ದಿ, ನಾಗಪ್ಪ ಸಂಗೋಳ್ಳಿ, ಸುರೇಶ ಮಾಟೋಳ್ಳಿ, ಬಸವರಾಜ ಬಂಡಿವಡ್ಡರ್, ಸುರೇಶ ಮ್ಯಾಕಲ…, ಜಗದೀಶ ಬುದಿಹಾಳ, ಸಂಜು ನಾಯ್ಕರ, ಕುಮಾರ ಬೊರಕನವರ, ಶಿವಾನಂದ ಬಡ್ಡಿಮನಿ, ಮುಶೆಪ್ಪ ಜಡಿ, ಶಿವಾನಂದ ಇಂಚಲ, ಸಂಗಪ್ಪ ಮುನವಳ್ಳಿ, ಸಂತೋಷ ಹಡಪದ ನೂರಾರು ಕಾರ್ಯಕರ್ತರು ಇದ್ದರು. ಜಗದೀಶ ಬೂದಿಹಾಳ ಸ್ವಾಗತಿಸಿದರು. ಕುಮಾರ ಬೊರಕನವರ ನಿರೂಪಿಸಿದರು. ಬಸವರಾಜ ಯಾಸನ್ನವರ ವಂದಿಸಿದರು.
ಲೊಕಸಭೆಯ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾಗಲಿ ಬಿಜೆಪಿ ಪರವಾಗಿ ದುಡಿಯುವ ಜಾಯಮಾನ ನನ್ನದು. ಸಮೀಪದ ರಾಮದುರ್ಗ ಮಂಡಲದ ಬಿಜೆಪಿ ಕಾರ್ಯಕರ್ತ ನರೇಂದ್ರ ನಿಲಗುಂದ ಅಪಘಾತದಲ್ಲಿ ಮರಣ ಹೊಂದಿದ್ದರಿಂದ ಎಲ್ಲ ಮಂಡಲದಲ್ಲಿ ಸುಮಾರು 5 ನೂರು ಪದಾಧಿಕಾರಿಗಳಿಗೆ ಹೆಲ್ಮೆಟ್ ವಿತರಿಸುತ್ತಿದ್ದೇನೆ ಹೊರತು ಇದರ ಹಿಂದೆ ಯಾವುದೇ ಸ್ವಾರ್ಥವಿಲ್ಲ. ನನಗೆ ಬಿಜೆಪಿ ಪಕ್ಷ ಬೆಳೆಸುವುದು ಒಂದೇ ಗುರಿ. ಪಕ್ಷ ನೀಡುವ ಕಾರ್ಯವನ್ನು ಚಾಚುತಪ್ಪದೆ ಮಾಡುವುದೇ ನನ್ನ ಮೊದಲ ಆದ್ಯತೆ ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ತಿಳಿಸಿದ್ದಾರೆ.