ಮಹಾರಾಷ್ಟ್ರ ಸರ್ಕಾರಕ್ಕೆ ಭಾರೀ ಮುಖಭಂಗ: ಮರಾಠಿ ಭಾಷಿಗರಿಂದ ಕರ್ನಾಟಕಕ್ಕೆ ಸೇರುವ ಬಗ್ಗೆ ಠರಾವು..!
ಕೊಲ್ಲಾಪುರ ಜಿಲ್ಲೆಯ ಕಾಗಲ್ ತಾಲೂಕಿನ ಹತ್ತು ಗ್ರಾಮ ಪಂಚಾಯತಿಗಳಿಂದ ಕರ್ನಾಟಕಕ್ಕೆ ಸೇರುವ ಬಗ್ಗೆ ನಿರ್ಣಯ ತೆಗೆದುಕೊಂಡಿದೆ. 10 ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಮುಖಂಡರಿಂದ ಸರ್ವಾನುಮತದಿಂದ ಠರಾವು ಪಾಸ್ ಮಾಡಿದೆ. ಈ ಹಿಂದೆಯೂ ಜತ್ತ ತಾಲೂಕಿನ 42 ಹಳ್ಳಿಗಳೂ ಕರ್ನಾಟಕಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿದ್ದವು.
ಬೆಳಗಾವಿ(ಜು.25): ಕರ್ನಾಟಕದ ಹಳ್ಳಿಗಳನ್ನ ಕೇಳುತ್ತಿರೋ ಮಹಾರಾಷ್ಟ್ರ ಸರ್ಕಾರಕ್ಕೆ ಮತ್ತೊಮ್ಮೆ ಭಾರೀ ಮುಖಭಂಗವಾಗಿದೆ. ಶೇ. 90ರಷ್ಟು ಮರಾಠಿ ಭಾಷಿಕರಿರುವ ಜನರಿಂದ ಕರ್ನಾಟಕಕ್ಕೆ ಸೇರುವ ಬಗ್ಗೆ ಠರಾವು ಪಾಸ್ ಮಾಡಿದೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್ ತಾಲೂಕಿನ 10 ಗ್ರಾಮ ಪಂಚಾಯತಿಗಳಿಂದ ಕರ್ನಾಟಕಕ್ಕೆ ಸೇರುವ ಠರಾವು ಪಾಸ್ ಮಾಡಿದೆ.
ಕೊಲ್ಲಾಪುರ ಜಿಲ್ಲೆಯ ಕಾಗಲ್ ತಾಲೂಕಿನ ಹತ್ತು ಗ್ರಾಮ ಪಂಚಾಯತಿಗಳಿಂದ ಕರ್ನಾಟಕಕ್ಕೆ ಸೇರುವ ಬಗ್ಗೆ ನಿರ್ಣಯ ತೆಗೆದುಕೊಂಡಿದೆ. 10 ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಮುಖಂಡರಿಂದ ಸರ್ವಾನುಮತದಿಂದ ಠರಾವು ಪಾಸ್ ಮಾಡಿದೆ. ಈ ಹಿಂದೆಯೂ ಜತ್ತ ತಾಲೂಕಿನ 42 ಹಳ್ಳಿಗಳೂ ಕರ್ನಾಟಕಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿದ್ದವು.
ಬೆಳಗಾವಿ, ಕಾರವಾರ, ಬೀದರ್ ಸೇರಿ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು: ಮಹಾ ಸದನದಲ್ಲಿ ನಿರ್ಣಯ
ಸೂಕ್ತ ಮೂಲಸೌಕರ್ಯ ಒದಗಿಸುವಲ್ಲಿ ವಿಫಲವಾಗಿದ್ದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅಲ್ಲಿನ ಜನತೆ ಆಕ್ರೋಶ ವ್ಯಕ್ತಪಡಿಸಿತ್ತು. ಆಗ 1900 ಕೋಟಿ ಅನುದಾನದ ಅಭಿವೃದ್ಧಿ ಪ್ಯಾಕೇಜ್ ಕೊಡುವುದಾಗಿ ಮಹಾರಾಷ್ಟ್ರ ಸಿಎಂ ಏಕನಾಥ್ ಸಿಂಧೆ ಭರವಸೆ ನೀಡಿದ್ದರು.
ಕಾಗಲ್ ಪಂಚಾಯತಿ ಠರಾವು ನಿರ್ಧಾರ ಇದೀಗ ಮಹಾರಾಷ್ಟ್ರ ನಾಯಕರಿಗೆ ಟೆನ್ಶನ್ ತಂದಿದೆ. ಕರ್ನಾಟಕದೊಂದಿಗೆ ವೀಲನಕ್ಕೆ ಪಂಚಾಯತಿಗಳು ಸರ್ವಾನುಮತದ ನಿರ್ಣಯ ಕೈಗೊಂಡಿವೆ. ಮಹಾರಾಷ್ಟ್ರ ಸರ್ಕಾರ ಮೂಲಭೂತ ಸೌಕರ್ಯ ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಮಳೆಗಾಲ ಇದ್ರೂ ಕಾಗಲ್ ತಾಲೂಕಿನಲ್ಲಿ ನೀರಿನ ಸಮಸ್ಯೆ ಇದೆ. ಹೀಗಿದ್ದರೂ ದೂಧಗಂಗಾ ನದಿಯಿಂದ ಇಂಚಲಕರಂಜಿಗೆ ನೀರು ಸರಬರಾಜು ಮಾಡುತ್ತಿರುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಕಾಗಲ್ ತಾಲೂಕಿನಲ್ಲಿ ಶೇ. 90 ಕ್ಕಿಂತ ಹೆಚ್ಚಿನ ಜನರು ಮರಾಠಿ ಭಾಷಿಕರಿದ್ದಾರೆ. ಈಗ ಅವರಿಂದಲೇ ಕರ್ನಾಟಕಕ್ಕೆ ಸೇರ್ಪಡೆಯಾಗುವ ಬಗ್ಗೆ ನಿರ್ಣಯ ತೆಗೆದುಕೊಂಡಿದ್ದಾರೆ. ಸರ್ಕಾರದ ಯಾವುದೇ ಆಶ್ವಾಸನೆಗೂ ಒಳಗಾಗಲ್ಲ ಎಂದು ಮುಖಂಡರು ತಿಳಿಸಿದ್ದಾರೆ. ತುಂಬಿದ ಸಭೆಯಲ್ಲಿ ಕೈ ಮೇಲಕ್ಕೆತ್ತಿ ಕರ್ನಾಟಕಕ್ಕೆ ಸೇರುವ ನಿರ್ಧಾರ ವ್ಯಕ್ತಪಡಿಸಿದ್ದಾರೆ.
ಕಾಗಲ್ ತಾಲೂಕಿನ ಪಂಚಾಯತಿಗಳು ಕೈಗೊಂಡ ನಿರ್ಧಾರದಿಂದ ಮಹಾರಾಷ್ಟ್ರ ಸರ್ಕಾರ ತೀವ್ರ ಮುಜುಗರಕ್ಕೆ ಒಳಗಾಗಿದೆ. ದೂಧಗಂಗಾ ನದಿ ನೀರನ್ನು ಇಂಚಲಕರಂಜಿಗೆ ಕೊಡುವುಕ್ಕೆ ಇಲ್ಲಿನ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನೀರು ಸರಬರಾಜು ಮಾಡುವ ನಿರ್ಧಾರ ಕೈಬಿಡದಿದ್ದರೆ ಕರ್ನಾಟಕಕ್ಕೆ ಸೇರುವುದು ಹೋರಾಟ ನಿಲ್ಲದು ಎಂದು ಮುಖಂಡರು ಹೇಳುತ್ತಿದ್ದಾರೆ.
ಬೆಳಗಾವಿ ಗಡಿ ವಿವಾದ ಹಳೇ ವಿವಾದಕ್ಕೆ ಮರುಜೀವ, ನಿಪ್ಪಾಣಿ ನಗರಸಭೆ ಮೇಲಿನ ಭಗವಾ ಧ್ವಜ ತೆರವಿಗೆ ಆಗ್ರಹ
ಮಹಾರಾಷ್ಟ್ರ ಇನ್ನಾದರೂ ಕಣ್ತೇರೆದು ಗಡಿ ಭಾಗದ ಹಳ್ಳಿಗಳ ಅಭಿವೃದ್ಧಿಗೆ ಕ್ರಮ ವಹಿಸಬೇಕು. ತನ್ನ ರಾಜ್ಯದಲ್ಲಿ ಇರೋ ಹಳ್ಳಿಗಳನ್ನೇ ಅಭಿವೃದ್ಧಿಪಡಿಸಲಿ, ಅದನ್ನು ಬಿಟ್ಟು ಕರ್ನಾಟಕದ ಐದು ಜಿಲ್ಲೆಯ 850 ಹಳ್ಳಿಗಳು ಮಹಾರಾಷ್ಟ್ರ ಸೇರಬೇಕೆಂದು ಸುಪ್ರೀಂನಲ್ಲಿ ಕೇಸ್ ಹಾಕಿದೆ. ಕರ್ನಾಟಕದ ಪ್ರದೇಶ ಕೇಳ್ತಿರೋ ಮಹಾರಾಷ್ಟ್ರಕ್ಕೆ ತಮ್ಮ ಹಳ್ಳಿಗಳನ್ನಾದರೂ ಅಭಿವೃದ್ಧಿ ಮಾಡಲಿ ಎಂದು ಕನ್ನಡಿಗರು ಹೇಳುತ್ತಿದ್ದಾರೆ.
ಈಗ ಅವರ ರಾಜ್ಯದ ಹಳ್ಳಿಗಳೇ ಮಹಾರಾಷ್ಟ್ರ ಸರ್ಕಾರಕ್ಕೆ ತಿರುಗುಬಾಣವಾಗಿ ಪರಿಣಮಿಸಿದೆ. ಕರ್ನಾಟಕದ 850 ಹಳ್ಳಿಗಳನ್ನ ಕೇಳುತ್ತಿರುವ ಮಹಾರಾಷ್ಟ್ರಕ್ಕೆ ಕಾಗಲ್ ತಾಲೂಕಿನ ಬೇಡಿಕೆಯೇ ತಿರುಗುಬಾಣವಾಗಿದೆ.