ಸಿದ್ದರಾಮಯ್ಯ ಮೊದಲಿನಂತಿಲ್ಲ, ಒದ್ದಾಡುತ್ತಿದ್ದಾರೆ: ಸಚಿವ ಸೋಮಣ್ಣ

By Kannadaprabha News  |  First Published Sep 18, 2024, 12:17 PM IST

ಭಾರತದಲ್ಲಿ ಕರ್ನಾಟಕ ಮೇಲ್ಪಂಕ್ತಿಯಲ್ಲಿರಬೇಕು ಎಂದು ಕಾಂಗ್ರೆಸ್‌ಗೆ ಚಿಂತನೆ ಇದ್ದರೆ ಈ ರೀತಿ ಕೋಮುಗಲಭೆಗೆ ಅವಕಾಶ ನೀಡದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ ಎಂದ ಕೇಂದ್ರ ಸಚಿವ ವಿ.ಸೋಮಣ್ಣ 
 


ತುಮಕೂರು(ಸೆ.18): ಕಳೆದ ಒಂದೂವರೆ ವರ್ಷದಿಂದ ರಾಜ್ಯದಲ್ಲಿ ಸರ್ಕಾರ ಎಲ್ಲಿದೆ ಎಂದು ಹುಡುಕಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಹಿಂದಿನ 5 ವರ್ಷದಂತೆ ಈಗ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ಹಳೇ ಸಿದ್ದರಾಮಯ್ಯನವರು ಈಗಿಲ್ಲ, ಹೊಸ ಸಿದ್ದರಾಮಯ್ಯ ಈ ಸರ್ಕಾರದಲ್ಲಿ ಒದ್ದಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಆರೋಪಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿ, `ನಾಗಮಂಗಲದಲ್ಲಿ 2023ರಲ್ಲಿಯೂ ಇದೇ ರೀತಿ ಘಟನೆಯಾಗಿತ್ತು. ಈಗ ಮತ್ತೆ ಮರುಕಳಿಸಿದೆ. ನಿಷೇಧಿತ ಸಂಘಟನೆಗಳು ಮುನ್ನಲೆಗೆ ಬರುತ್ತಿವೆ ಎಂದರೆ ಏನರ್ಥ? ಎಂದು ಪ್ರಶ್ನಿಸಿದ್ದಾರೆ. 

Tap to resize

Latest Videos

undefined

2027ಕ್ಕೆ ಮುಂಬೈ-ದಿಲ್ಲಿ ಮಧ್ಯೆ ಹೈಸ್ಪೀಡ್‌ ರೈಲು: ಕೇಂದ್ರ ಸಚಿವ ಸೋಮಣ್ಣ

ಭಾರತದಲ್ಲಿ ಕರ್ನಾಟಕ ಮೇಲ್ಪಂಕ್ತಿಯಲ್ಲಿರಬೇಕು ಎಂದು ಕಾಂಗ್ರೆಸ್‌ಗೆ ಚಿಂತನೆ ಇದ್ದರೆ ಈ ರೀತಿ ಕೋಮುಗಲಭೆಗೆ ಅವಕಾಶ ನೀಡದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ ಎಂದರು.

click me!