ಇಡ್ಲಿ ಮಾರುತ್ತಿದ್ದ ಮುನಿರತ್ನ ಈ ಎತ್ತರಕ್ಕೆ ಬೆಳೆದಿದ್ದು ಹೇಗೆ?

By Suvarna News  |  First Published Sep 18, 2024, 11:01 AM IST

ಸ್ವಯಂಕೃತ ಪ್ರಮಾದದಿಂದಲೇ ಖೆಡ್ಡಾಗೆ ಬಿದ್ದರಾ ಮಾಜಿ ಸಚಿವ ಮುನಿರತ್ನ..? ಇಡ್ಲಿ ಮಾರುತ್ತಿದ್ದ ಮುನಿರತ್ನ ರಾಜಕೀಯದಲ್ಲಿ ಬೆಳೆದದ್ದು ಹೇಗೆ..? ರಾಜರಾಜೇಶ್ವರಿ ರಣರಂಗದಲ್ಲಿ ಮುನಿರತ್ನ ರಾಜಕೀಯ ಹೆಜ್ಜೆ ಎಂಥದ್ದು..? ಇದೆಲ್ಲವನ್ನು ತಿಳಿಯೋದೇ ಈ ಕ್ಷಣದ ವಿಶೇಷ ಮುನಿ ಕುರುಕ್ಷೇತ್ರ


ಬೆಂಗಳೂರು: ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಬಿಬಿಎಂಪಿ ಗುತ್ತಿದಾರನಿಗೆ ಜೀವ ಬೆದರಿಕೆ ಮತ್ತು ಜಾತಿ ನಿಂದನೆ ಆರೋಪದಲ್ಲಿ ಮುನಿರತ್ನ ಬಂಧನಕ್ಕೊಳಗಾಗಿದ್ದಾರೆ. ಈ ಮುನಿರತ್ನ ಯಾರು? ಮೊದಲು ಅವರು ಏನಾಗಿದ್ದರು? ನಂತರ ಅವರು ಸಿನಿಮಾ ನಿರ್ಮಾಪಕರು ಆಗಿದ್ದು ಹೇಗೆ ಮತ್ತು ರಾಜಕೀಯವಾಗಿ ಅವರು ಇಷ್ಟು ಎತ್ತರಕ್ಕೆ ಬೆಳೆದಿದ್ದು ಹೇಗೆ? ಇದೆಲ್ಲದರ ಕುರಿತು ಇಲ್ಲಿದೆ ಡಿಟೇಲ್ ಸ್ಟೋರಿ..

ಜೀವ ಬೆದರಿಕೆ ಪ್ರಕರಣದಲ್ಲಿ ಮುನಿರತ್ನ ಬಂಧನ
ಬಿಬಿಎಂಪಿ ಗುತ್ತಿಗೆದಾರನಿಗೆ ಜೀವ ಬೆದರಿಕೆ ಮತ್ತು ಜಾತಿ ನಿಂದನೆ  ಆರೋಪದಲ್ಲಿ ಆರ್ ಆರ್ ನಗರ ಶಾಸಕ ಮುನಿರತ್ನ ಅವರನ್ನು ಮೊನ್ನೆ ಬಂಧಿಸಲಾಗಿದೆ. ಸಧ್ಯ ಮುನಿರತ್ನ ಬಂಧನ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಇದು ರಾಜಕೀಯ ದ್ವೇಷವೆಂದು ಬಿಜೆಪಿ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದೆ.

Tap to resize

Latest Videos

ಬಿಜೆಪಿಯ ಈ ಆರೋಪಕ್ಕೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದು, ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಕಾಂಗ್ರೆಸ್ ಪಕ್ಷ ಈ ರೀತಿಯ ರಾಜಕಾರಣ ಮಾಡುವುದಿಲ್ಲ. ಅವರದ್ದೇ ಅನ್ನಲಾದ ಆಡಿಯೋ ವೈರಲ್ ಆಗಿದ್ದರಿಂದ ಮತ್ತು ಮಾಜಿ ಗುತ್ತಿಗೆದಾರ ದೂರು ಕೊಟ್ಟಿದ್ದರಿಂದ ಪೊಲೀಸರು ಅವರನ್ನು ಬಂಧಿಸಿದ್ದಾರೆಂದು ಕಾಂಗ್ರೆಸ್ ಹೇಳುತ್ತಿದೆ. 

ಇದನ್ನೂ ಓದಿ:ಕೃಷ್ಣ ಜನ್ಮ ಸ್ಥಾನ ಸೇರಿದ ನಟ ದರ್ಶನ್ ಮತ್ತು ನಿರ್ಮಾಪಕ ಮುನಿರತ್ನ; 'ಕುರುಕ್ಷೇತ್ರ'ದಲ್ಲಿ ಆಗಿದ್ದ ಎಡವಟ್ಟು ಏನು?

ಮುನಿರತ್ನ ಅವರ ಬಂಧನ ವಿಚಾರ ಏನೇ ಇರ್ಲಿ, ಇದು ರಾಜಕೀಯ ಪ್ರೇರಿತವಾದ್ರೂ ಆಗಿರ್ಲಿ ಅಥವಾ ಆಗದೇನೇ ಇರ್ಲಿ, ಮುನಿರತ್ನ ಅವರ ಬಂಧನ ಮಾಡಿದ್ದು ಏಕೆ ಅನ್ನೋದನ್ನು ಸಮಯ ಬಂದಾಗ ಅವರನ್ನು ಬಂಧಿಸಿದ ಪೊಲೀಸರೇ ಹೇಳ್ತಾರೆ. ನಾವಿಲ್ಲಿ ಹೇಳೋದಕ್ಕೆ ಹೊರಟಿರೋದು ಮುನಿರತ್ನ ಯಾರು? ಮೊದರಲು ಅವರು ಏನಾಗಿದ್ದರು? ಸಿನಿಮಾ ನಿರ್ಮಾಪಕರು ಹೇಗಾದ್ರು ಮತ್ತು ರಾಜಕೀಯವಾಗಿ ಹೇಗೆ ಬೆಳೆದರು ಅನ್ನೋದನ್ನ ಮಾತ್ರ.

ಇಡ್ಲಿ ಮಾರ್ತಿದ್ದ ಮುನಿರತ್ನ:
ಹೌದು, ಮುನಿರತ್ನ ಅವರು ಚಿಕ್ಕವರಾಗಿದ್ದಾಗ ಬೆಂಗಳೂರಿನ ಮಲ್ಲೇಶ್ವರಂನ ರಸ್ತೆಯೊಂದಲ್ಲಿ ಇಡ್ಲಿ ಮಾರುತ್ತಿದ್ದರು. ಮುನಿರತ್ನ ಚಿಕ್ಕವರಾಗಿದ್ದಾಗ ಮನೆಯಲ್ಲಿ ತುಂಬಾ ಬಡತನವಿತ್ತಂತೆ. ಅವರೇ ಹೇಳುವಂತೆ ಕಡುಬಡತನದಲ್ಲಿ ಬೆಳೆದಿದ್ದಾರಂತೆ. ಅವರ ತಂದೆ ಸುಬ್ರಮಣಿ ನಾಯ್ಡು ಅಂದು ದುಡಿದರೇ ಮಾತ್ರ ಇವರ ಹೊಟ್ಟೆಗೆ ಅನ್ನವಂತೆ. ಅಷ್ಟೊಂದು ಕೆಟ್ಟ ಬಡತನವನ್ನು ಮುನಿರತ್ನ ಅವರು ನೋಡಿದ್ದಾರಂತೆ.  

21ನೇ ವಯಸ್ಸಿಗೆ ಐಟಿ ರಿಟರ್ನ್ ಫೈಲ್ ಮಾಡಿದ್ದ ಮುನಿರತ್ನ 

ಮುನಿರತ್ನ ಚಿಕ್ಕವರಿದ್ದಾಗ ತಂದೆ ದುಡಿದ್ರೆನೇ ಹೊಟ್ಟೆಗೆ ಅನ್ನ ಅನ್ನುವಂತಿತ್ತು. ಹೀಗಿದ್ದ ಮುನಿರತ್ನ ಮುಂದೆ ಹೇಗೆ ಬೆಳೆಯುತ್ತಾರೆ ಎಂದರೆ ಅವರೇ ಹೇಳಿದಂತೆ ತಮ್ಮ 21ನೇ ವಯಸ್ಸಿಗೆ ಐಟಿ ರಿಟರ್ನ್ ಫೈಲ್ ಮಾಡಿದ್ದಾರಂತೆ. ಕಡು ಬಡತನದಲ್ಲಿ ಬೆಳೆದಿದ್ದ ಮುನಿರತ್ನ ಅವರು ತನ್ನ 21ನೇ ವಯಸ್ಸಿಗೆ ಐಟಿ ರಿಟರ್ನ್ ಫೈಲ್ ಮಾಡುವಷ್ಟು ಹೇಗೆ ಬೆಳೆದರು, ಇಡ್ಲಿ ಮಾರಿಯೇ ಅಷ್ಟು ಸಂಪಾದನೆ ಮಾಡಿದ್ರಾ ಅಥವಾ ಅದರ ಜೊತೆ ಇನ್ನೇನಾದ್ರು ಬ್ಯುಜಿನೆಸ್ ಮಾಡಿ ಶ್ರೀಮಂತರಾದ್ರಾ ಅನ್ನೋದನ್ನು ಅವರು ಹೇಳಿಲ್ಲ.

ಕ್ಲಾಸ್ 1 A ಕಂಟ್ರಾಕ್ಟರ್ ಆಗಿದ್ದ ಮುನಿರತ್ನ
ಮುನಿರತ್ನ ಅವರು ಚಿಕ್ಕ ವಯಸ್ಸಿನಲ್ಲೇ ಬೆಂಗಳೂರಿನಲ್ಲಿ ಗುತ್ತಿಗೆದಾರರ ಸಂಪರ್ಕ ಬೆಳೆಸುತ್ತಾರೆ. ದೊಡ್ಡ ದೊಡ್ಡ ಗುತ್ತಿಗೆದಾರರ ಕೈ ಕೆಳಗೆ ಕೆಲಸವನ್ನು ಮಾಡ್ತಾರೆ. ನಂತರ ಅವರೂ ಸಣ್ಣ ಪುಟ್ಟ ಕಂಟ್ರಾಕ್ಟರ್ ಕೆಲಸಗಳನ್ನು ಮಾಡಿಸಲು ಆರಂಭಿಸುತ್ತಾರೆ. ಹೀಗೆ ಸಾಗುತ್ತಾ ಸಾಗುತ್ತಾ ಮುನಿರತ್ನ ಮುಂದೊಂದು ದಿನ ಕ್ಲಾಸ್‌ 1ಎ ಕಂಟ್ರಾಕ್ಟರ್ ಆಗಿ ಬೆಳೆಯುತ್ತಾರೆ. 

ಇದನ್ನೂ ಓದಿ:ಕುರುಕ್ಷೇತ್ರ ಸಿನಿಮಾ ದುರ್ಯೋಧನ ಹೋದ ಜಾಗಕ್ಕೆ, ನಿರ್ಮಾಪಕ ಮುನಿರತ್ನನೂ ಎಂಟ್ರಿ: 14 ದಿನ ನ್ಯಾಯಾಂಗ ಬಂಧನ!

ಕಂಟ್ರಾಕ್ಟರ್ ನಂತರ ಸಿನಿಮಾ ನಿರ್ಮಾಪಕ
ಮುನಿರತ್ನ ಅವರು ಕಂಟ್ರಾಕ್ಟರ್ ಆಗಿದ್ದಾಗಲೇ ಶ್ರೀಮಂತ ವ್ಯಕ್ತಿಯಾಗಿ ಬೆಳೆದಿದ್ದರು. ಬೆಂಗಳೂರಿನಲ್ಲಿ ಗುತ್ತಿಗೆದಾರನಾಗಿ ಬೆಳೆದಿದ್ದ ಮುನಿರತ್ನ ನಂತರ ಸಿನಿಮಾ ನಿರ್ಮಾಣಕ್ಕೆ ಎಂಟ್ರಿ ಕೊಡ್ತಾರೆ. ಮುನಿರತ್ನ ಅವರು ಕನ್ನಡ ಚಿತ್ರರಂಗದಲ್ಲಿ ಅನೇಕ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಆಂಟಿ ಪ್ರಿತ್ಸೆ, ಕಂಬಾಲಹಳ್ಳಿ, ರಕ್ತ ಕಣ್ಣೀರು, ಅನಾಥರು, ಕಠಾರಿವೀರ ಸುರಸುಂದರಾಂಗಿ ಮತ್ತು ಕುರುಕ್ಷೇತ್ರದಂತ ಪ್ರಮುಖ ಚಿತ್ರಗಳನ್ನು ಮುನಿರತ್ನ ನಿರ್ಮಾಣ ಮಾಡಿದ್ದಾರೆ. 

ಮುನಿರತ್ನ ರಾಜಕೀಯ ಎಂಟ್ರಿ ಹೇಗಾಯ್ತು..? 

ಬೆಂಗಳೂರಿನಲ್ಲಿ ಕ್ಲಾಸ್ 1ಎ ಕಂಟ್ರಾಕ್ಟರ್ ಆದವರಿಗೆ ಸಾಮಾನ್ಯವಾಗಿ ದೊಡ್ಡ ದೊಡ್ಡ ರಾಜಕಾರಣಿಗಳ ಪರಿಚಯ ಇದ್ದೇ ಇರುತ್ತೆ. ಹೀಗಾಗಿ ಮುನಿರತ್ನ ಅವರಿಗೂ ರಾಜಕಾರಣಿಗಳ ಸಂಪರ್ಕವಿತ್ತು. ಗುತ್ತಿಗೆದಾರ ಮತ್ತು ಸಿನಿಮಾ ನಿರ್ಮಾಪಕನಾಗಿದ್ದ ಮುನಿರತ್ನ ಅವರಿಗೆ ರಾಜಕಾರಣದತ್ತಲೂ ಒಲವು ಹೆಚ್ಚುತ್ತೆ. ಹಾಗೆನೇ ರಾಜಕೀಯ ಸಂಪರ್ಕ ಹೆಚ್ಚಿಸಿಕೊಂಡ ಮುನಿರತ್ನ ಯಶವಂತಪುರದ ಕೌನ್ಸಿಲರ್ ಆಗುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಆರಂಭಿಸುತ್ತಾರೆ. ಅದರ ನಂತರದ ದಿನಗಳಲ್ಲಿ ಮುನಿರತ್ನ ಅವರಿಗೆ ಡಿಕೆಶಿ ಸಂಪರ್ಕ ಬೆಳೆಯುತ್ತೆ. ಡಿಕೆಶಿಗೆ ಆಪ್ತರಾಗುತ್ತಾರೆ. ಈ ಆತ್ಮೀಯತೆಯಿಂದ ಮುನಿರತ್ನ ಅವರಿಗೆ 2013ರಲ್ಲಿ ರಾಜರಾಜೇಶ್ವರಿ ನಗರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಗುತ್ತೆ. ಕಾಂಗ್ರೆಸ್ ಪಕ್ಷದಿಂದ 2013ರ ವಿಧಾನಸಭಾ ಚುನಾವಣೆಯಲ್ಲಿ ಆರ್ ಆರ್ ನಗರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಶಾಸಕರಾಗ್ತಾರೆ. ಅದರ ನಂತರ 2018ರ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡನೇ ಗೆಲುವು ಪಡೆಯುತ್ತಾರೆ. 

ಕಾಂಗ್ರೆಸ್‌ನಿಂದ ಬಿಜೆಪಿಗೆ:

ಆರ್ ಆರ್ ನಗರ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಎರಡು ಬಾರಿ ಸಿಎಂ ಆಗಿದ್ದ ಮುನಿರತ್ನ ಅವರು 2019ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿಕೊಳ್ತಾರೆ. 2018ರ ವಿಧಾನಸಭಾ ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿರುತ್ತೆ. 2019ರಲ್ಲಿ ಸಮ್ಮಿಶ್ರ ಸರ್ಕಾರ ಕೆಡವುದುಕ್ಕೋಸ್ಕರ ಬಿಜೆಪಿ ಅಪರೇಷನ್ ಮಾಡುತ್ತೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಒಟ್ಟು 17 ಶಾಸಕರುಗಳು ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗ್ತಾರೆ. ಹೀಗೆ ಬಿಜೆಪಿಗೆ ಸೇರ್ಪಡೆಯಾಗಿ ಸಮ್ಮಿಶ್ರ ಸರ್ಕಾರ ಬೀಳಿಸಿದ್ದವರಲ್ಲಿ ಮುನಿರತ್ನ ಅವರೂ ಒಬ್ಬರು.

ಈ ಕೇಸ್ ಮುನಿರತ್ನಗೆ ಮೊದಲಲ್ಲ:


ಜಾತಿ ನಿಂದನೆ ಆರೋಪದಲ್ಲಿ ಈಗ ಬಂಧನವಾಗಿರುವ ಮುನಿರತ್ನ ಅವರ ಮೇಲೆ ಈ ಹಿಂದೆನೂ ಸಹ ಅನೇಕ ಕೇಸ್ಗಳು ರಿಜಿಸ್ಟರ್ ಆಗಿವೆ. ಅವರ ರಾಜಕೀಯ ಜೀವನದಲ್ಲಿ ಹತ್ತಾರು ಆರೋಪಗಳನ್ನು ಮುನಿರತ್ನ ಅವರು ಈಗಲೂ ಎದುರಿಸುತ್ತಿದ್ದಾರೆ. ಹಾಗೆನೇ ಈ ಹಿಂದೆ ಮುನಿರತ್ನ ಅವರ ಮೇಲೆ ಅನೇಕ ಕೇ್‌ಗಳೂ ರಿಜಿಸ್ಟರ್ ಆಗಿದ್ದವು. 

ಮುನಿರತ್ನ ಒಬ್ಬ ಕಂಟ್ರಾಕ್ಟರ್ ಆಗಿ, ಚಿತ್ರ ನಿರ್ಮಾಪಕನಾಗಿ, ಕಾರ್ಪೋಟೇರಟ್ ಆಗಿ ಮತ್ತು ರಾಜ್ಯ ರಾಜಕಾರಣದ ರಾಜಕಾರಣಿಯಾಗಿ ಹೇಗೆ ಅನ್ನೋದು ನಿಮಗೆಲ್ಲ ಗೊತ್ತೇ ಇದೆ. ಯಾಕೆಂದ್ರೆ ಇದೆಲ್ಲ ಹೊರ ಜಗತ್ತಿಗೆ ಕಾಣಿಸುತ್ತದೆ. ಆದ್ರೆ ಮುನಿರತ್ನ ಮನುಷ್ಯ ಹೇಗೆ ಅನ್ನೋದು ಮಾತ್ರ ಅವರನ್ನು ತೀರಾ ಹತ್ತಿರದಿಂದ ನೋಡಿದವರಿಗೆ ಮಾತ್ರ ಗೊತ್ತು. ಮುನಿರತ್ನಗೆ ಕೋಪ ಬಂದ್ರೆ ಮನುಷ್ಯನಾಗಿ ಇರೋದಿಲ್ಲವಂತೆ, ತುಂಬಾ ಕೆಟ್ಟ-ಕೊಳಕಾ ಭಾಷೆ ಬಳಸಿ ಬೈಯುತ್ತಾರಂತೆ. ಈ ಕಾರಣಕ್ಕಾಗಿಯೇ ಮುನಿರತ್ನ ಈಗ ಬಂಧನಕ್ಕೊಳಗಾಗಿರೋದು. 

ನಿನ್ನೆ  ಜಾತಿ ನಿಂದನೆ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಅವರನ್ನು ಮುಂದಿನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಹೀಗಾಗಿ ಈ ತಿಂಗಳ 30ರ ವರೆಗೂ ಮುನಿರತ್ನ ಪರಪ್ಪನ ಅಗ್ರಹಾರದಲ್ಲೇ ಇರಬೇಕಾಗುತ್ತೆ. ಅದರೂ ಮುನಿರತ್ನ ಪರ ವಕೀಲರು ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ಇಂದು ನಡೆಯಲಿದೆ. 

ಇಲ್ಲಿದೆ ನೋಡಿ ವೀಡಿಯೋ ಸ್ಟೋರಿ:

 

click me!