ರಾಹುಲ್ ನಮ್ಮ ನಾಯಕ. ಅವರನ್ನು ಭೇಟಿಯಾಗಲು ಯಾರ ಅನುಮತಿ ಕೇಳಬೇಕು? ಅಲ್ಲದೆ, ರಾಹುಲ್ ಬಳಿ ಏನು ಚರ್ಚಿಸಿದೆ ಎಂಬುದನ್ನು ಬಹಿರಂಗವಾಗಿ ಹೇಳುವುದಿಲ್ಲ. ನನ್ನ ತಮ್ಮ, ಪತ್ನಿ, ಸ್ವಾಮೀಜಿಗಳ ಬಳಿ ಏನು ಚರ್ಚೆ ಮಾಡಿದೆ ಎಂಬುದನ್ನು ಮಾಧ್ಯಮಗಳಿಗೆ ಹೇಳಲಾಗುತ್ತದೆಯೇ. ಹಾಗೆಯೇ, ನಮ್ಮ ನಾಯಕರೊಂದಿಗಿನ ಚರ್ಚೆಯನ್ನೂ ಹೇಳುವುದಿಲ್ಲ ಎಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು(ಸೆ.18): ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನಮ್ಮ ಪಕ್ಷದ ನಾಯಕರು. ಅವರನ್ನು ಭೇಟಿಯಾಗಲು ಯಾರ ಅನುಮತಿ ಕೇಳಬೇಕು? ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಅಮೆರಿಕದಲ್ಲಿ ರಾಹುಲ್ ಗಾಂಧಿ ಅವರ ಜತೆಗಿನ ಭೇಟಿ ಹಾಗೂ ಚರ್ಚೆ ಕುರಿತು ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ರಾಹುಲ್ ನಮ್ಮ ನಾಯಕ. ಅವರನ್ನು ಭೇಟಿಯಾಗಲು ಯಾರ ಅನುಮತಿ ಕೇಳಬೇಕು? ಅಲ್ಲದೆ, ರಾಹುಲ್ ಬಳಿ ಏನು ಚರ್ಚಿಸಿದೆ ಎಂಬುದನ್ನು ಬಹಿರಂಗವಾಗಿ ಹೇಳುವುದಿಲ್ಲ. ನನ್ನ ತಮ್ಮ, ಪತ್ನಿ, ಸ್ವಾಮೀಜಿಗಳ ಬಳಿ ಏನು ಚರ್ಚೆ ಮಾಡಿದೆ ಎಂಬುದನ್ನು ಮಾಧ್ಯಮಗಳಿಗೆ ಹೇಳಲಾಗುತ್ತದೆಯೇ. ಹಾಗೆಯೇ, ನಮ್ಮ ನಾಯಕರೊಂದಿಗಿನ ಚರ್ಚೆಯನ್ನೂ ಹೇಳುವುದಿಲ್ಲ ಎಂದರು.
ಮುನಿರತ್ನ ಬಂಧನದ ಹಿಂದೆ ಡಿಕೆಶಿ, ಡಿಕೆಸು ಕೈವಾಡ: ರಮೇಶ ಜಾರಕಿಹೊಳಿ
ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ಬಂಧನದ ಕುರಿತಂತೆ ಪ್ರತಿಕ್ರಿಯಿಸಿ, ಶಾಸಕ ಮುನಿರತ್ನ ಒಕ್ಕಲಿಗ ಸಮುದಾಯದ ಕುರಿತು ಅವ ಹೇಳನಕಾರಿ ಮಾತುಗಳನ್ನಾಡಿದ್ದಾರೆ. ಅದರ ಬಗ್ಗೆ ಸಮುದಾಯದ ನಾಯಕರು, ಸ್ವಾಮೀಜಿಗಳು ಮಾತನಾಡಬೇಕು. ಅದರಲ್ಲೂ ಬಿಜೆಪಿಯ ದೊಡ್ಡ ದೊಡ್ಡ ನಾಯಕರು ಪ್ರತಿಕ್ರಿಯಿಸಲಿ. ಸಾಂವಿಧಾನಿಕ ಹುದ್ದೆ ಹೊಂದಿರುವ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ - ಹಲವು ನಾಯಕರಿದ್ದಾರೆ. ಅವರು ಮುನಿರತ್ನ ನುಡಿ ಸರಿಯೋ? ತಪ್ಪೋ ಎಂಬುದನ್ನು ಜನರಿಗೆ ಹೇಳಲಿ ಎಂದು ಹೇಳಿದರು.