ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ವಾಭಿಮಾನ ಇದ್ದರೆ ರಾಹುಲ್ ಗಾಂಧಿಯನ್ನ ವಿರೋಧಿಸಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ

By Govindaraj S  |  First Published Mar 17, 2023, 2:00 AM IST

‘ಕಾಂಗ್ರೆಸ್ ಕಾರ್ಯಕರ್ತರಲ್ಲಿ‌ ಸ್ವಾಭಿಮಾನ ಇದ್ದರೆ, ಈ ಮಣ್ಣಿನ ಮೇಲೆ ಪ್ರೀತಿ ಇದ್ದರೆ ರಾಹುಲ್ ಗಾಂಧಿಯನ್ನು ವಿರೋಧಿಸಬೇಕು’ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದರು.


ಗದಗ (ಮಾ.17): ‘ಕಾಂಗ್ರೆಸ್ ಕಾರ್ಯಕರ್ತರಲ್ಲಿ‌ ಸ್ವಾಭಿಮಾನ ಇದ್ದರೆ, ಈ ಮಣ್ಣಿನ ಮೇಲೆ ಪ್ರೀತಿ ಇದ್ದರೆ ರಾಹುಲ್ ಗಾಂಧಿಯನ್ನು ವಿರೋಧಿಸಬೇಕು’ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದರು. ಗದಗ ನಗರದಲ್ಲಿ ಗುರುವಾರ ಬೃಹತ್‌ ಶೋ ನಡೆಸಿದ ಅವರು ಮಾರ್ಗ ಮಧ್ಯೆ ಮಾತನಾಡಿ, ‘ಒಂದು ಕಡೆ ಮಾತೃಭೂಮಿಯನ್ನು ತಾಯಿ ಅಂತ ಬಿಜೆಪಿ ಪೂಜಿಸುತ್ತದೆ. ಮತ್ತೊಂದು ಕಡೆ ರಾಷ್ಟ್ರದ ಹೊರಗೆ ನಿಂತು ಕಾಂಗ್ರೆಸ್‌ ದೇಶದ ನಿಂದನೆ ಮಾಡುತ್ತದೆ. ರಾಜ್ಯದಲ್ಲಿ ನಡೆಯುವ ಚುನಾವಣೆ ರಾಜ್ಯಕ್ಕೆ ಮಾತ್ರ ಸಂಬಂಧಿಸಿಲ್ಲ. ಇದೊಂದು ರಾಷ್ಟ್ರದ ಸ್ವಾಭಿಮಾನ ಮತ್ತು ರಾಷ್ಟ್ರಕ್ಕೆ ಅಪಮಾನ ಮಾಡುವ ರಾಹುಲ್ ಗಾಂಧಿಯ ಕುಟುಂಬದ ನಡುವಿನ ಹೋರಾಟವಾಗಿದೆ’ ಎಂದು ಹರಿಹಾಯ್ದರು. 

‘ಈ ಭೂಮಿ ಬರೀ ಮಣ್ಣಲ್ಲ. ವಂದನೀಯ ಭೂಮಿ. ಇಲ್ಲಿ ಹರಿಯುವ ನದಿಗಳು ನಮಗೆ ಗಂಗೆಯ ಸ್ವರೂಪ. ಈ ಭೂಮಿಯಲ್ಲಿರುವ ಕಲ್ಲುಗಳು ನಮಗೆ ಶಂಕರನ ಸ್ವರೂಪ. ನಮ್ಮ ಜೀವನ, ಪ್ರಾಣ ಎಲ್ಲವೂ ಭಾರತ ಮಾತೆಗೆ ಮುಡಿಪು. ನದಿಯಲ್ಲಿ ತೇಲುವ ಅಸ್ಥಿಗಳಿಗೆ ಕಿವಿ ಕೊಟ್ಟು ಕೇಳಿದರೆ ಅಲ್ಲಿ ಭಾರತಮಾತೆಯ ಜಯಕಾರ ಕೇಳುತ್ತದೆ‌’ ಎಂದು ಹೇಳಿದರು. ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿ ಕಿಸಾನ್‌ ಸಮ್ಮಾನ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ಒಟ್ಟು . 10 ಸಾವಿರ ನೀಡುವ ಮೂಲಕ ರೈತರಿಗೆ ಆಸರೆಯಾಗಿದೆ. ಮುದ್ರಾ ಯೋಜನೆಯಡಿ ಎಲ್ಲ ವರ್ಗದವರ ನಿರುದ್ಯೋಗ ನಿವಾರಣೆಗಾಗಿ ಸ್ವಯಂ ಉದ್ಯೋಗಕ್ಕಾಗಿ ಬ್ಯಾಂಕುಗಳ ಮೂಲಕ ಕೋಟ್ಯಂತರ ರು. ನೆರವು ನೀಡಿದೆ. 

Tap to resize

Latest Videos

undefined

ರಾಹುಲ್ ಗಾಂಧಿ ಮಕ್ಕಳಂತೆ ಇದ್ದಾರೆ ಬುದ್ಧಿ ಬೆಳೆದಿಲ್ಲ: ಶಿವರಾಜ್ ಸಿಂಗ್ ಚೌಹಾಣ್

ಪ್ರತಿ ಹಳ್ಳಿ, ಮಂಡಲ, ಜಿಲ್ಲೆ, ರಾಜ್ಯ ಸಶಕ್ತವಾದರೆ ದೇಶದ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ ಎಂಬುದನ್ನು ತಿಳಿಸುವುದು, ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ವಿಜಯ ಸಂಕಲ್ಪ ಯಾತ್ರೆಯು ಪಕ್ಷದ ಗೆಲುವಿನ ಅಭಿಯಾನವೇ ಆಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಕಾಂಗ್ರೆಸ್ಸಿನ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಮೇಲೆ ಹರಿಹಾಯ್ದ ಅವರು, ಮಹದಾಯಿ ಹೋರಾಟದ ವೇಳೆ ರೈತರ ಮೇಲೆಯೇ ಲಾಠಿ ಪ್ರಹಾರ ಮಾಡಿಸಿ ಈಗ ತದ್ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಪಕ್ಷ ಗೆಲ್ಲುವುದಿಲ್ಲ ಎಂಬ ಹತಾಸೆಯಿಂದ ರಾಜ್ಯದ ಜನರಿಗೆ ಡುಪ್ಲಿಕೇಟ್‌ ಗ್ಯಾರಂಟಿ ಯೋಜನೆಗಳನ್ನು ಕೊಡುತ್ತೇವೆಂದು ಸುಳ್ಳು ಹೇಳುತ್ತಿದ್ದಾರೆ. ಮುಂಬರುವ ಚುನಾವಣೆಗೆ ಯುದ್ಧಭೂಮಿ ಸಿದ್ಧವಾಗಿದೆ. 

ರಾಹುಲ್‌ ಗಾಂಧಿ ದೇಶದ ಜನರ ಕ್ಷಮೆ ಕೇಳಲಿ: ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ

ಬಿಜೆಪಿ ಕಾರ್ಯಕರ್ತರು ಯುದ್ಧಭೂಮಿಗೆ ವಂದಿಸಿ ಪಕ್ಷದ ಗೆಲುವಿಗೆ ಸಂಕಲ್ಪದ ಹೆಜ್ಜೆ ಇಡಬೇಕು. ದೇಶ ಮತ್ತು ರಾಜ್ಯದಲ್ಲಿ ಮತ್ತೆ ಡಬಲ್‌ ಎಂಜಿನ್‌ ಸರ್ಕಾರ ರಚನೆ ಶತಃಸಿದ್ಧ. ಶಿರಹಟ್ಟಿವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿಸುವಲ್ಲಿ ಎಲ್ಲರೂ ಕೈ ಜೋಡಿಸಿ ಮೋದೀಜಿ ಕೈ ಬಲಪಡಿಸಬೇಕು ಎಂದರು. ನಗರದ ಮುಳಗುಂದ ನಾಕಾದಿಂದ ಆರಂಭವಾದ ರೋಡ್ ಶೋ ರಾಚೋಟೇಶ್ವರ ದೇವಸ್ಥಾನ ರಸ್ತೆ, ಬಸವೇಶ್ವರ ಸರ್ಕಲ್, ಸ್ಟೇಷನ್ ರಸ್ತೆ, ಮಹೇಂದ್ರಕರ್ ಸರ್ಕಲ್ ಮಾರ್ಗವಾಗಿ ಸಾಗಿತು. ಸಚಿವರಾದ ಸಿ.ಸಿ. ಪಾಟೀಲ, ಗೋವಿಂದ ಕಾರಜೋಳ, ಸಂಸದ ಶಿವಕುಮಾರ್ ಉದಾಸಿ, ಮುಖಂಡ ಅನಿಲ‌ಮೆಣಸಿನಕಾಯಿ ರೋಡ್‌ ಶೋದಲ್ಲಿ ಭಾಗಿಯಾಗಿದ್ದರು.

click me!