ಇದು ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಿಸಿಕೊಂಡಂತೆ ಸಮಾವೇಶ ಮಾಡುವುದಿಲ್ಲ, ಯಾರೀಗೋ ಸವಾಲ್ ಹಾಕುವ ಸಲುವಾಗಿ ಮಾಡ್ತಿರುವ ಕಾರ್ಯಕ್ರಮ ಅಲ್ವೇ ಅಲ್ಲ, ಇದು ವಿಜಯ ಸಂಕಲ್ಪ ಯಾತ್ರೆಯ ಮಹಾಸಂಗಮದ ಸಮಾರೋಪದಲ್ಲಿ ಪ್ರಧಾನಿ ಮೋದಿ ಭಾಗಿಯಾಗುವ ಕಾರ್ಯಕ್ರಮ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ದಾವಣಗೆರೆ
ದಾವಣಗೆರೆ (ಮಾ.17): ಇದು ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಿಸಿಕೊಂಡಂತೆ ಸಮಾವೇಶ ಮಾಡುವುದಿಲ್ಲ, ಯಾರೀಗೋ ಸವಾಲ್ ಹಾಕುವ ಸಲುವಾಗಿ ಮಾಡ್ತಿರುವ ಕಾರ್ಯಕ್ರಮ ಅಲ್ವೇ ಅಲ್ಲ, ಇದು ವಿಜಯ ಸಂಕಲ್ಪ ಯಾತ್ರೆಯ ಮಹಾಸಂಗಮದ ಸಮಾರೋಪದಲ್ಲಿ ಪ್ರಧಾನಿ ಮೋದಿ ಭಾಗಿಯಾಗುವ ಕಾರ್ಯಕ್ರಮ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು. ದಾವಣಗೆರೆ ನಗರದಲ್ಲಿ ಮಾತನಾಡಿದ ಅವರು ಈ ಬಿಜೆಪಿ ಮಹಾಸಂಗಮ ಕಾರ್ಯಕ್ರಮಕ್ಕೆ ನಾಲ್ಕು ಜಿಲ್ಲೆಯ ಜನ ಭಾಗಿಯಾಗಲಿದ್ದಾರೆ.
ಇನ್ನು ಕಾಂಗ್ರೆಸ್ ಪಟ್ಟಿ ನಾಳೆ ಬಿಡುಗಡೆ ಆಗಲಿದೆ, ಅ ಪಟ್ಟಿ ಬಿಡುಗಡೆಯಾದ ಬಳಿಕ ನೋಡಿ ಒಳಜಗಳ ಶುರುವಾಗುತ್ತೇ, ರಂಪಾಟ ಕಣ್ಣೀರು ಬೀಳುತ್ತೆ ಜಗಳ ಕಲ್ಲು ಒಡೆಯುತ್ತೇ ಎಂದ ಕಟೀಲ್ ವ್ಯಂಗ್ಯ ಮಾಡಿದ್ರು. ಇನ್ನು ಹಾಲಿ ಶಾಸಕರಿಗೆ ಟಿಕೆಟ್ ನೀಡುವ ವಿಚಾರವಾಗಿ ಮಾತನಾಡಿದ ಅವರು ಟಿಕೆಟ್ ಕೊಡುವ ಬಗ್ಗೆ ಪಾರ್ಲಿಮೆಂಟರಿ ಬೋರ್ಡ್ ನಿರ್ಧಾರ ಮಾಡುತ್ತೇ ಎಂದರು. ಇನ್ನು ರಾಜ್ಯಕ್ಕೆ ಮೋದಿ ಪದೇ ಪದೇ ಬರ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೆ ಪ್ರತಿಕ್ರಿಯಿಸಿದ ಕಟೀಲ್ ಪ್ರಧಾನಿ ಮೋದಿಯವರು ಕರ್ನಾಟಕದಲ್ಲಿ ಸುತ್ತು ಹಾಕಿದಂತೆ ಯಾವ ಪ್ರಧಾನಿ ಕೂಡ ಮಾಡಿಲ್ಲ, ಇವರು ಕಾಂಗ್ರೆಸ್‌ನವರು 70 ವರ್ಷ ಆಡಳಿದವರು ಏಕೆ ಮೋದಿ ಬಂದಂತೆ ರಾಜ್ಯಕ್ಕೆ ಇವರ ಪ್ರಧಾನಿಗಳು ಬರಲಿಲ್ಲ ಎಂದು ಸಿದ್ದರಾಮಯ್ಯನವರಿಗೆ ಟಾಂಗ್ ಕೊಟ್ಟರು.
ಮಂಡ್ಯದಲ್ಲಿ ಮೋದಿ ಪರ ಅಲೆ ಎದ್ದಿದೆ: ನಳಿನ್ ಕುಮಾರ್ ಕಟೀಲ್
ಯಡಿಯೂರಪ್ಪ ಅವರು ನಮ್ಮ ಪಕ್ಷದ ಸರ್ವೋಚ್ಚ ನಾಯಕ: ಬಿಜೆಪಿಯಲ್ಲಿ ಬಿಎಸ್‌ವೈ ಅವರನ್ನ ನಿರ್ಲಕ್ಷ್ಯ ಮಾಡುವ ಪ್ರಶ್ನೆಯೇ ಇಲ್ಲಾ. ಈಗಲೂ ಸಹ ಯಡಿಯೂರಪ್ಪ ಅವರು ನಮ್ಮ ಪಕ್ಷದ ಸರ್ವೋಚ್ಚ ನಾಯಕ. ಅವರ ಮಾರ್ಗದರ್ಶನದಲ್ಲಿಯೇ ಚುನಾವಣೆಗೆ ಹೋಗಲಿದ್ದೇವೆ. ಬಿಎಸ್‌ವೈ ಮೌನವಾಗಿದ್ದಾರೆ ಅಂದ್ರೆ ಅದು ಅವರ ದೌರ್ಬಲ್ಯ ಅಲ್ಲ ಎಂಬ ಬಿವೈ ವಿಜಯೇಂದ್ರ ಹೇಳಿಕೆಗೆ ಸ್ಪಷ್ಟನೆ ಕಟೀಲ್ ನೀಡಿದರು. ಇನ್ನು ದಾವಣಗೆರೆ ಮಹಾ ಸಂಗಮ ನಾಲ್ಕು ಜಿಲ್ಲೆಯ ಜನ ಬರಲಿದ್ದಾರೆ. ಇಚ್ಚೆ ಇದ್ದವರು ರಾಜ್ಯಾದ್ಯಂತ ಬರಬಹುದು. ಆದ್ರೆ ಪ್ರಧಾನಿ ಪಾಲ್ಗೊಳ್ಳುವ ಮಹಾ ಸಂಗಮ ನಾಲ್ಕು ಜಿಲ್ಲೆಗೆ ಸಿಮೀತವಾಗಲಿದೆ. ಸಿದ್ದರಾಮಯ್ಯನವರ ಸಿದ್ದರಾಮೋತ್ಸವಕ್ಕೆ ಟಕ್ಕರ್ ಕೊಡಲು ಮಹಾ ಸಂಗಮ ಮಾಡುತ್ತಿಲ್ಲ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಕಾಂಗ್ರೆಸ್‌ನಷ್ಟು ಅವಸರ ಇಲ್ಲ ಎಂದರು.
ಮಂಡ್ಯದಲ್ಲಿ ಜನ ಸೇರುವುದಿಲ್ಲ ಎಂಬ ಭಯ ಇತ್ತು: ಮಂಡ್ಯದಲ್ಲಿ ನಡೆದ ಜನ ಸೇರುವುದಿಲ್ಲ ಎಂಬ ಭಯ ಇತ್ತು. ಮಂಡ್ಯ ಅದು ಜೆಡಿಎಸ್, ಕಾಂಗ್ರೆಸ್‌ನ ಭದ್ರಕೋಟೆ. ಅದರೆ ರೋಡ್ ಶೋ ಮಾಡಿ ಅ ಭದ್ರ ಕೋಟೆಯನ್ನು ಛಿದ್ರ ಮಾಡಿದ್ವಿ. ಅದರಲ್ಲೂ ದಾವಣಗೆರೆಯಲ್ಲಿ ನಡೆಸಲಿರುವ ಸಮಾವೇಶ ಇತಿಹಾಸ ಸೃಷ್ಠಿ ಮಾಡುತ್ತೇವೆ, ಸಿದ್ದರಾಮಯ್ಯ ಹುಟ್ಟುಹಬ್ಬ ಮಾಡಿಕೊಂಡು 3 ಲಕ್ಷ ಬಂದಿದ್ದರೆ 10 ಲಕ್ಷ ಎಂದು ಸುಳ್ಳು ಹೇಳುವುದಿಲ್ಲ. ಅವರಂತೆ ಎಲ್ಲೇಂದಲೋ ಜನರನ್ನು ಕರೆಸುವುದಿಲ್ಲ, ಜನರೇ ಈ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ, ಎಷ್ಟು ಸೇರುತ್ತಾರೋ ಅಷ್ಟು ಜನರ ಸಂಖ್ಯೆಯನ್ನೇ ನಾವು ಹೇಳ್ತಿವಿ, ಇದು ಕಾರ್ಯಕರ್ತರ ಸಮಾವೇಶ ಅಲ್ಲ ಇಡೀ ಮತದಾರರ ಸಮಾವೇಶ. ಇದು ರಾಜ್ಯದ ಕಾರ್ಯಕ್ರಮ ಅಲ್ಲ ಇಲ್ಲಿನ ಪ್ರಮುಖ ಕಾರ್ಯಕ್ರಮ, ಹತ್ತು ಲಕ್ಷ ಜನರನ್ನು ಸೇರಿಸುವ ಜವಾಬ್ದಾರಿ ಇಲ್ಲಿನ ನಾಯಕರದ್ದು, ಕಾರ್ಯಕರ್ತರದ್ದು.150 ಟಾರ್ಗೇಟ್ ಇಟ್ಟಿದ್ದೇವು ಆದರೆ ಈ ವಾತಾವರಣ ನೋಡಿದರೆ ಅದಕ್ಕಿಂತ ಜಾಸ್ತಿ ಸೀಟ್ ಗಳು ಬರ್ತಾವೆ, ಕಾಂಗ್ರೆಸ್ 50-60 ಬರೋದು ಕಷ್ಟ ಇದೆ ಎಂದರು.
ವಾಲ್ಮೀಕಿಗೆ ಗೌರವ ಸಿಗಬೇಕು ಅಂದ್ರೆ ಬಿಜೆಪಿ ಗೆಲ್ಲಿಸಿ: ನಳಿನ್ ಕುಮಾರ್ ಕಟೀಲ್
ಪ್ರಜಾಧ್ವನಿಯ ಧ್ವನಿ ಕೇಳೋದಿಲ್ಲ, ಪಂಚರತ್ನ ಇಂಜಿನ್ ಸೀಜ್ ಆಗಿದೆ: ಕಾಂಗ್ರೆಸ್‌ನ ಪ್ರಜಾಧ್ವನಿಯ ಧ್ವನಿ ಕೇಳೋದಿಲ್ಲ, ಪಂಚರತ್ನ ಹಾಸನಕ್ಕೆ ಮಾತ್ರ ಸೀಮಿತವಾಗಿದೆ. ಅದರ ಇಂಜಿನ್ ಸೀಜ್ ಆಗಿ ನಿಂತಿದೆ ಎಂದು ಕಟೀಲ್ ವ್ಯಂಗ್ಯ ಮಾಡಿದರು. ಹತ್ತು ಲಕ್ಷಕ್ಕೂ ಹೆಚ್ಚು ಜನರು ಆಗಮಿಸುತ್ತಾರೆ, ಒಂದು ಇಲ್ಲ ಎರಡು ಕಿಲೋಮೀಟರ್ ರೋಡ್ ಶೋ ಮಾಡಿಸಿಯೇ ಮಾಡಿಸುತ್ತೇವೆ, ಹೊರಗಿರುವ ಜನರು ಕೂಡ ಮೋದಿಯವರನ್ನು ನೋಡಬೇಕಲ್ವ, ದಾವಣಗೆರೆಯಲ್ಲೂ ಮೋದಿ ರೋಡ್ ಶೋ ಮಾಡಿಸುತ್ತೇವೆ ಎಂದು ಕಟೀಲ್ ಹೇಳಿದರು.