ಮುಸ್ಲಿಂ ಮತಗಳ ಓಲೈಕೆಗೆ ಕಾಂಗ್ರೆಸ್ ರಾಜಕಾರಣ ಮಾಡ್ತಿದೆ: ಸಿದ್ದು ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ

By Suvarna News  |  First Published Feb 22, 2023, 1:18 PM IST

ಅಹಿಂದ ಹೆಸರಿನಲ್ಲಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ್ರು. ಅವರು ಅಧಿಕಾರಕ್ಕೆ ಬಂದ ತಕ್ಷಣವೇ ಟಿಪ್ಪು ಜಯಂತಿ ಮಾಡಿದರು. ವ್ಯಕ್ತಿ ಪೂಜೆ ಮಾಡೋದು ಮುಸ್ಲಿಂ ಧರ್ಮದಲ್ಲಿ ಇಲ್ಲ. ಆದ್ರೆ ಶಾಲಾ ಮಕ್ಕಳಲ್ಲಿ ಜಾತಿ ತಂದರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.


ಕೊಪ್ಪಳ (ಫೆ.22): ಅಹಿಂದ ಹೆಸರಿನಲ್ಲಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ್ರು. ಅವರು ಅಧಿಕಾರಕ್ಕೆ ಬಂದ ತಕ್ಷಣವೇ ಟಿಪ್ಪು ಜಯಂತಿ ಮಾಡಿದರು. ವ್ಯಕ್ತಿ ಪೂಜೆ ಮಾಡೋದು ಮುಸ್ಲಿಂ ಧರ್ಮದಲ್ಲಿ ಇಲ್ಲ. ಆದ್ರೆ ಶಾಲಾ ಮಕ್ಕಳಲ್ಲಿ ಜಾತಿ ತಂದರು, ವೀರಶೈವ ಧರ್ಮ ಹೊಡೆಯೋಕೆ ನೋಡಿದ್ರು. ಇಡೀ ವ್ಯವಸ್ಥೆ ಹಾಳು ಮಾಡುವ ಕೆಲಸ ಸಿದ್ದರಾಮಯ್ಯ ಮಾಡಿದ್ರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು. ಅವರು ಕೊಪ್ಪಳದ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ರಾಜ್ಯ ಸರಕಾರ ಪಿ.ಎಫ್.ಐ ಇವತ್ತು ಬ್ಯಾನ್ ಆಗಿದೆ. ಮಂಗಳೂರು, ಬೆಂಗಳೂರು, ಮೈಸೂರಿನ ಜೈಲಿನಲ್ಲಿ ಪಿ.ಎಫ್.ಐ ಕಾರ್ಯಕರ್ತರು ಸಿದ್ದರಾಮಯ್ಯ ಸರ್ಕಾರ ಬಿಡುಗಡೆ ಮಾಡ್ತು.

ಮುಸ್ಲಿಂ ಮತಗಳ ಓಲೈಕೆಗೆ ಕಾಂಗ್ರೆಸ್ ರಾಜಕಾರಣ ಮಾಡ್ತಾ ಇದೆ ಎಂದರು. ನಾವು ಒಲೈಕೆಯಂಥ  ರಾಜಕಾರಣ ಮಾಡುವುದಿಲ್ಲ. ಶಾದಿ ಭಾಗ್ಯ ಒಂದು ವರ್ಗಕ್ಕೆ ಯಾಕೆ ಕೊಟ್ರು. ಓಲೈಕೆ, ಧರ್ಮದ ರಾಜಕಾರಣ ಮಾಡ್ತಾ ಇರೋದು ಕಾಂಗ್ರೆಸ್ ನವರದು ಎಂದರು. ಟಿಪ್ಪುವನ್ನು ಹೊಡೆದಂತೆ ಸಿದ್ದರಾಮಯ್ಯನವರನ್ನು ಹೊಡೆಯುವ ಅಶ್ವಥ್ ನಾರಾಯಣ ಹೇಳಿರುವ ವಿಚಾರವಾಗಿ ಮಾತನಾಡಿ ನೂರಕ್ಕೆ ನೂರು ತಪ್ಪು, ಆ ರೀತಿ ಯಾರೂ ಹೇಳಬಾರದು. ಪ್ರಜಾ ತಂತ್ರ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತನಾಡುವ ಅವಕಾಶ ಇದೆ. ಅವರವರ ಪಕ್ಷ ಅವರವರ ಸಿದ್ದಾಂತದ ಮೇಲೆ ಮಾತನಾಡುತ್ತೆ. ಸಿದ್ದಾಂತದ ಆಧಾರದ ಮೇಲೆ ಪಕ್ಷ ಕಟ್ಟಬೇಕು. 

Tap to resize

Latest Videos

undefined

ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಲು ಮೋದಿ ಕಾರಣ: ಜೆ.ಪಿ.ನಡ್ಡಾ

ಅಶ್ವಥ್ ನಾರಾಯಣ ಮಾತನಾಡಿದ್ದು ತಪ್ಪು. ನಮ್ಮ ಪಕ್ಷದಲ್ಲಿ ಇಂತಹ ಸಿದ್ದಾಂತ ಇಲ್ಲ ಎಂದರು. ಶಿವಮೊಗ್ಗ ಏರೋಪೋರ್ಟ್‌ ಹೆಸರಿಡಬೇಕೆನ್ನುವುದು ಮಹತ್ವ ಅಲ್ಲ‌ ಐಎಎಸ್ ಹಾಗು ಐಪಿಎಸ್ ಅಧಿಕಾರಿಗಳ ಮಧ್ಯೆದ ಹೇಳಿಕೆಗಳು ಆರೋಪಗಳು ಸರಿ ಅಲ್ಲ ಎಂದು ಹೇಳಿದರು. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಸರಕಾರವಿದೆ. ಅಭಿವೃದ್ಧಿ ಕೆಲಸಕ್ಕೆ ಡಬಲ್ ಎಂಜಿನ್ ಸರಕಾರ ಬರಬೇಕೆಂದು ಮೋದಿ ಹೇಳಿದ್ದಾರೆ. ಹಿಂದೆ ಭಾರತ ಪ್ರಧಾನಿಗಳು ವಿದೇಶಕ್ಕೆ ಹೋದರೆ ಸಾಲಕ್ಕಾಗಿ, ಭಿಕ್ಷೆಗಾಗಿ ಬರುತ್ತಿದ್ದಾರೆ ಎನ್ನುತ್ತಿದ್ದರು. ಆದರೆ ಈಗ ಭಾರತ ಪ್ರಬಲವಾಗಿದೆ. ಉಕ್ರೇನ್ ರಷ್ಯಾದ ಯುದ್ದದಲ್ಲಿ ಭಾರತದ ಪ್ರಧಾನಿ ಹೇಳಿದಂತಾಗಿದೆ. 

ಮುಂದಿನ ಸಲ ಕಾಂಗ್ರೆಸ್‌ ಅಧಿಕಾರಕ್ಕೆ ತರುವುದು ಖಚಿತ: ಡಿ.ಕೆ.ಶಿವಕುಮಾರ್‌

ಪ್ರಧಾನಿಯವರು ಈಗಲೂ 2024 ರ ಚುನಾವಣೆಯ ಬಗ್ಗೆ ಮಾತನಾಡುತ್ತಿಲ್ಲ. ಪ್ರಧಾನಿಯವರು ಅಭಿವೃದ್ದಿ ಗುರಿಯಾಗಿಟ್ಟುಕೊಂಡು ಮಾತನಾಡುತ್ತಾರೆ ಎಂದರು. ಸಂಸದರ ನಿಧಿಯನ್ನು ಆಸ್ಪತ್ರೆಯ ಉನ್ನತೀಕರಣಕ್ಕೆ ಬಳಸಿಕೊಳ್ಳಲಾಗಿದೆ. ಕೃಷಿ ಬಜೆಟ್ ಯುಪಿಎ ಸರಕಾರದಲ್ಲಿ 23 ಸಾವಿರ ಕೋಟಿ ರೂಪಾಯಿ ಇತ್ತು. ಈಗ ಬಜೆಟ್‌ನಲ್ಲಿ 1.25 ಲಕ್ಷ ಕೋಟಿ ರೂಪಾಯಿ ಕೃಷಿಗೆ ಇಟ್ಟಿದೆ. ಕೃಷಿ ಮೂಲಭೂತ ಸೌಲಭ್ಯಕ್ಕೆ ಲಕ್ಷ ಕೋಟಿ ನೀಡಲಾಗಿದೆ.ಎಂಎಸ್ ಪಿ ದರ ಹೆಚ್ಚಳ ಮಾಡಿದೆ.‌ರಸಗೊಬ್ಬರಕ್ಕೆ ಹೆಚ್ಚಿನ ಸಬ್ಸಿಡಿ ನೀಡಲಾಗಿದೆ ಎಂದರು. ಅಮಿತಾ ಶಾ ಹಾಗು ಆಮೂಲ್ ಒಂದು ಮಾಡಲು ಹೇಳಿಲ್ಲ. ಅಮೂಲ್ ಮಾದರಿಯಲ್ಲಿ ಬೆಳೆಯಲು ಟೆಕ್ನಿಲಾಜಿ ಬಳಸಿಕೊಳ್ಳಲು ಹೇಳಿದೆ. ಇಂಧನ ಹಾಗು ಖಾದ್ಯ ತೈಲಗಳನ್ನು ಆತ್ಮ ನಿರ್ಭರ ಯೋಜನೆಗೆ ಒಳಪಡಿಸಲು ಮುಂದಾಗಿದೆ ಎಂದು ಹೇಳಿದರು.

click me!