Assembly election: ಯುವ ಮತದಾರರನ್ನು ಸೆಳೆಯಲು ಜೆಡಿಎಸ್ ಮಾಸ್ಟರ್ ಪ್ಲಾನ್!

By Ravi Janekal  |  First Published Feb 22, 2023, 12:44 PM IST
  • ಗುರಮಠಕಲ್ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರು ಮಾಸ್ಟರ್ ಪ್ಲಾನ್!
  • ನಾಯಕ ಹೇಗಿರಬೇಕೆಂದು ಯುವ ಮನಸ್ಸುಗಳ ಜೊತೆ ಸಂವಾದ

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಫೆ.22): ರಾಜ್ಯ ವಿಧಾನಸಭೆ ಚುನಾವಣೆ ಕೆಲವೇ ದಿನಗಳು ಬಾಕಿ ಉಳಿದಿವೆ. ಮತದಾರರನ್ನು ಸೆಳೆಯಲು ಮೂರು ಪಕ್ಷಗಳು ನೂರು ಲೆಕ್ಕಾಚಾರ ಹಾಕುತ್ತಿವೆ. 

Tap to resize

Latest Videos

undefined

ಈಗಾಗಲೇ ರಾಜ್ಯದಲ್ಲಿ ಚುನಾವಣೆಯ ಕಾವು ನಿಧಾನವಾಗಿ ಏರುತ್ತಿದೆ ಇಂತಹ ಸಂದರ್ಭದಲ್ಲಿ ಯಾದಗಿರಿ(Yadgir) ಜಿಲ್ಲೆಯ ಗುರಮಠಕಲ್ ಮತಕ್ಷೇತ್ರ(Gurumitkal assembly constituency)ದ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರು(Sharanagowda kandakur) ಯುವ ಮತದಾರರತ್ತ ಚಿತ್ತ ಹರಿಸ್ತಿದ್ದಾರೆ. ಇದಕ್ಕಾಗಿ ಯುವ ಮನಸ್ಸುಗಳೊಂದಿಗೆ ಗುರಮಠಕಲ್ ಮತಕ್ಷೇತ್ರದ ನಾಯಕ ಹೇಗಿರಬೇಕು ಎಂಬ ವಿಷಯದ ಕುರಿತು ಸಂವಾದ ನಡೆಸಿದ್ದಾರೆ.

Yadgir: ಜೋಳ ತೆನೆ ಬಿಡುವ ಸಿಹಿತಿನಿ ತಿಂದು ಏಂಜಾಯ್ ಮಾಡಿದ ಯುವಕರು

ಯುವ ಮತದಾರರ ಮನ ಸೆಳೆಯಲು ಕಂದಕೂರ್ ಪ್ಲಾನ್!

ರಾಜ್ಯ ವಿಧಾನಸಭೆ ಚುನಾವಣೆ(Karnataka assembly election)ಗೆ ಕೆಲವೇ ದಿನಗಳು ಉಳಿದಿವೆ. ಯುವ ಮತದಾರರು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ಹೊಂದಿರುತ್ತಾರೆ. ಅಂತಹ ಯುವಕರ ಮನ ಸೆಳೆಯಲು ಗುರಮಠಕಲ್ ಘೋಷಿತ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರು ಯಾದಗಿರಿ ತಾಲೂಕಿನ ಸೈದಾಪುರ ಪಟ್ಟಣದಲ್ಲಿ ಯುವ ಮನಸ್ಸುಗಳೊಂದಿಗೆ ಯುವ ನಾಯಕನ ಮುಕ್ತ ಚರ್ಚೆ ಎಂಬ ವಿಷಯದ ಕುರಿತು ಸಂವಾದ ನಡೆಸಿದರು. 

ಯಾದಗಿರಿ ಜಿಲ್ಲೆಯಲ್ಲಿ ಏಕೈಕ ಜೆಡಿಎಸ್ ಶಾಸಕರು ಅಂದ್ರೆ ಅವ್ರು ನಾಗನಗೌಡ ಕಂದಕೂರು(Nagangowda Kandakur) ಅವ್ರ ಬದಲಾಗಿ 2023 ಕ್ಕೆ ಅವರ ಪುತ್ರ ಶರಣಗೌಡ ಕಂದಕೂರು ಚುನಾವಣೆಗೆ ಸ್ಪರ್ಧೆ ಮಾಡ್ತಿದ್ದಾರೆ. ಗುರಮಠಕಲ್ ಮತಕ್ಷೇತ್ರದಲ್ಲಿ ಮತ್ತೊಮ್ಮೆ 'ತೆನೆ ಹೊತ್ತ ಮಹಿಳೆ' ಯನ್ನು ಹೊತ್ತು‌ ಮರೆಸಲೆಬೇಕು ಅಂತ ಶರಣಗೌಡ ಕಂದಕೂರು ಹಠಕ್ಕೆ ಬಿದ್ದಿದ್ದಾರೆ. 

ಹೀಗಾಗಿ ರಾಜಕೀಯ ಚದುರಂಗದಾಟ ಎಲ್ಲಾ ಪಟ್ಟುಗಳನ್ನ ಪ್ರಯೋಗ ಮಾಡ್ತಿದ್ದಾರೆ. ಸಂವಾದದಲ್ಲಿ ಸುಮಾರು 1000 ಕ್ಕೂ ಯುವಕ-ಯುವತಿಯರೂ ಭಗಾವಹಿಸಿದ್ದರು. ಗುರಮಠಕಲ್ ಮತಕ್ಷೇತ್ರದ ಶಾಸಕ ಹೇಗಿರಬೇಕು ಎನ್ನುವುದನ್ನು ಸಂವಾದದಲ್ಲಿ ಹಲವು ವಿಷಯಗಳನ್ನು ಚರ್ಚೆ ಮಾಡಲಾಯಿತು.

ಯುವ ಜನತೆಯನ್ನು ಉದ್ಯೋಗಿಗಳಾಗಿ ಮಾಡುವುದೇ ನನ್ನ ಗುರಿ: ಶರಣಗೌಡ ಕಂದಕೂರು

ಯುವ ಮನಸ್ಸುಗಳೊಂದಿಗೆ ಯುವ ನಾಯಕನ ಮುಕ್ತ ಚರ್ಚೆ ಗುರಮಠಕಲ್ ಮತಕ್ಷೇತ್ರದ ವಿವಿಧ ಹಳ್ಳಿಗಳಿಂದ ಬಂದಿದ್ದ ಯುವಕ-ಯುವತಿಯರು 2023 ರ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರು ಅವರಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದರು. ನೀವು ಶಾಸಕರಾಗಿ ಆಯ್ಕೆ ಆದ್ರೆ ಯುವ ಜನತೆಗಾಗಿ ಯಾವ ಯೋಜನೆ-ಕಾರ್ಯಕ್ರಮ, ನಿಮ್ಮ ನೀಲನಕ್ಷೆ ಯಾವ ರೀತಿ ಇರುತ್ತದೆ ಎಂಬ ಹತ್ತಾರು ಪ್ರಶ್ನೆಗಳನ್ನು ಕೇಳಿದರು. ಗುರಮಠಕಲ್ ಮತಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳು ಉಲ್ಬಣವಾಗಿವೆ. ವಿಶೇಷವಾಗಿ ನಿರುದ್ಯೋಗ, ನಗರಗಳಿಗೆ ಯುವಕರು ಸಹ ಗೂಳೆ ಹೋಗುತ್ತಿದ್ದಾರೆ. ಎಸ್.ಎಸ್.ಎಲ್.ಸಿ ಮುಗಿಸಿದ ನಂತರ ಉನ್ನತ ವಿದ್ಯಾಭ್ಯಾಸ ಕಲಿಯಲು ಪಿಯು ಕಾಲೇಜುಗಳು ಇಲ್ಲ, ಶೈಕ್ಷಣಿಕವಾಗಿ ಹಿಂದುಳಿದ ಈ ಭಾಗಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದು ಪ್ರಶ್ನೆಗಳನ್ನು ಕೇಳಿದರು. ಜೊತೆಗೆ ಯುವಕ-ಯುವತಿಯರ ಎಲ್ಲಾ  ಪ್ರಶ್ನೆಗಳಿಗೆ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರು ನಯವಾಗಿ ಉತ್ತರಿಸಿದರು. ನಾನು ಶಾಸಕನಾದ್ರೆ ಕಡೇಚೂರ್-ಬಾಡಿಯಾಳ ಭಾಗದಲ್ಲಿ ಕೈಗಾರಿಕೆಗೆ ಒತ್ತು ನೀಡುತ್ತೇನೆ. ಯುವಕ-ಯುವತಿಯರನ್ನು ಉದ್ಯೋಗಿಗನ್ನಾಗಿ ಮಾಡುವುದೇ ನನ್ನ ಗುರಿ ಎಂದರು.

ಯಾದಗಿರಿ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ.ಭೀಮಣ್ಣ ಮೇಟಿಯಿಂದ ಗಿಫ್ಟ್ ಪಾಲಿಟಿಕ್ಸ್!

ಗುರಮಠಕಲ್ ನಲ್ಲಿ ಜೆಡಿಎಸ್ ಬೇರು ಗಟ್ಟಿಗೊಳಿಸಲು ಯತ್ನ

ಗುರಮಠಕಲ್ ಮತಕ್ಷೇತ್ರದಲ್ಲಿ ಇಂದಿಗೂ ನಗರಗಳಿಗೆ ಗೂಳೆ ಹೋಗುವುದು ತಪ್ಪಿಲ್ಲ. ಯಾಕಂದ್ರೆ ಇಲ್ಲಿ ನಿರುದ್ಯೋಗ ತಾಂಡವಾಡ್ತಿದೆ. ಇಂತಹ ಹತ್ರು ಹಲವು ಪ್ರಶ್ನೆಗಳನ್ನು ಬಗೆಹರಿಸುವುದಾಗಿ ಸಂವಾದದಲ್ಲಿ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರು ಆಶ್ವಾಸನೆ ನೀಡಿದರು. ಈ ನಿಟ್ಟಿನಲ್ಲಿ ಗುರಮಠಕಲ್ ನಲ್ಲಿ ಶರಣಗೌಡ ಕಂದಕೂರು ಜೆಡಿಎಸ್ ಬೇರು ಬಹಳ ಗಟ್ಟಿಗೊಳಿಸಲು ವಿವಿಧ ತಂತ್ರ ಮಾಡ್ತಿದ್ದಾರೆ. ಗುರಮಠಕಲ್ ಮತಕ್ಷೇತ್ರವೂ ರಾಜ್ಯ ರಾಜಕಾರಣದ ಪ್ರಮುಖ ಕೇಂದ್ರ ಬಿಂದು. ಯಾಕಂದ್ರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun kharge) ಅವರು ಸತತ ಏಂಟು ಬಾರಿ ಇದೇ ಕ್ಷೇತ್ರದಿಂದ ಗೆದ್ದಿದ್ದಾರೆ. ಈಗ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಹಾಗಾಗಿ ಖರ್ಗೆ ಅವರು ಕಾಂಗ್ರೆಸ್(Congress) ಪಕ್ಷದ ಅತ್ಯುನ್ನತ ಎಐಸಿಸಿ ಪಟ್ಟಕ್ಕೇರಿರುವುದರಲ್ಲಿ ಗುರಮಠಕಲ್ ಕ್ಷೇತ್ರದ ಜನರ ಪಾಲು ಇದೆ ಎಂಬುದು ರಾಜಕಾರಣದಲ್ಲಿ ಮರೆಯುವ ಆಗಿಲ್ಲ.

click me!