ತಮಿಳುನಾಡಿಗೆ ನೀರು ಬಿಟ್ಟಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದು, I.N.D.I.A ನಲ್ಲಿ ಇದ್ದಾರೆಂಬ ಕಾರಣದ ಒತ್ತಡಕ್ಕೆ ನೀರು ಬಿಟ್ಟಿದ್ದಾರೆ ಎಂದರು.
ಚಿಕ್ಕಮಗಳೂರು (ಆ.19): ತಮಿಳುನಾಡಿಗೆ ನೀರು ಬಿಟ್ಟಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದು, I.N.D.I.A ನಲ್ಲಿ ಇದ್ದಾರೆಂಬ ಕಾರಣದ ಒತ್ತಡಕ್ಕೆ ನೀರು ಬಿಟ್ಟಿದ್ದಾರೆ ಎಂದರು. ರಾಜ್ಯದಲ್ಲಿ ಮಳೆ ಕಡಿಮೆ ಇದ್ದು, ಬಹಳ ಜಿಲ್ಲೆಗಳಲ್ಲಿ ಬರದ ವಾತಾವರಣವಿದೆ. ತಮಿಳುನಾಡು ಸರ್ಕಾರ ಹಾಗೂ ವ್ಯವಸ್ಥೆಗೆ ಮನವರಿಕೆ ಮಾಡಬೇಕಿತ್ತು. ನಮ್ಮ ರೈತರು, ಬೆಂಗಳೂರು ಜನಕ್ಕೆ ಕುಡಿಯೋಕು ನೀರಿಲ್ಲದಂತಹಾ ಸ್ಥಿತಿ ನಿರ್ಮಾಣವಾಗುತ್ತೆ. ಈಗಾಗಲೇ ಬೆಂಗಳೂರು ಸಿಟಿಯಲ್ಲಿ ಬೇಕಾದಷ್ಟು ನೀರು ಬಿಡುತ್ತಿಲ್ಲ. ವಿದ್ಯುತ್ ಇಲ್ಲ, ನೀರಿಲ್ಲ, ಮಳೆ ಇಲ್ಲ ಎಲ್ಲಾ ಕಾರಣದಿಂದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.
ಬೆಂಗಳೂರು, ಮೈಸೂರು, ಮಂಡ್ಯ ಜನರಿಗೆ ಕುಡಿಯೋ ನೀರಿಗೂ ತತ್ವರ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಜನರ ಬಗ್ಗೆ ಯೋಚಿಸ್ತಿಲ್ಲ, ಅವರವರ ಒಳ ರಾಜಕೀಯದ ಬಗ್ಗೆ ಯೋಚಿಸ್ತಿದೆ. ಸರ್ಕಾರ ಅವರೊಳಗಿನ ಗೊಂದಲಕ್ಕಾಗಿ ಕರ್ನಾಟಕದ ಜನರನ್ನ ಬಲಿ ಕೊಡ್ತಿದೆ. ಕಾವೇರಿ ಹಾಗೂ ಜಲಾಶಯದಲ್ಲಿ ನೀರಿಲ್ಲ ಎಂದು ಮನವರಿಕೆ ಮಾಡಬೇಕಿತ್ತು. ಬೇಕಾದರೆ ತಂಡ ಕಳಿಸಿ ಪರಿಶೀಲನೆ ಮಾಡಿ ಅನ್ನೋ ಗಟ್ಟಿ ಧೈರ್ಯದ ಧ್ವನಿ ಸರ್ಕಾರದ ಬಳಿ ಇಲ್ಲ. ರಾಜ್ಯ ಸರ್ಕಾರ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕು ಎಂದು ಶೋಭಾ ಮನವಿ ಮಾಡಿದರು.
undefined
ಡಿ.ಕೆ.ಶಿವಕುಮಾರ್‌ರನ್ನು ಭೇಟಿಯಾದ ಕೇಂದ್ರ ಸಚಿವ ನಾರಾಯಣಸ್ವಾಮಿ: ಯಾಕೆ ಗೊತ್ತಾ?
ಮೈತ್ರಿ ಉದ್ದೇಶಕ್ಕೆ ತ.ನಾಡಿಗೆ ನೀರು ಬಿಟ್ಟಿಲ್ಲ: ರಾಜ್ಯ ಸರ್ಕಾರವು ಮೈತ್ರಿ ಉದ್ದೇಶದಿಂದ ತಮಿಳುನಾಡಿಗೆ ನೀರು ಹರಿಸಿಲ್ಲ. ನ್ಯಾಯಾಲಯದ ಆದೇಶ ಗೌರವಿಸಿ, ಅದನ್ನು ಪಾಲಿಸಿದ್ದೇವೆ. ಕಾವೇರಿ ವಿಚಾರದಲ್ಲಿ ನಾವು ಕಾನೂನು, ಸಂವಿಧಾನ ಹಾಗೂ ಕೋರ್ಚ್ ಆದೇಶಕ್ಕೆ ಗೌರವ ನೀಡಬೇಕು. ಹಿಂದಿನ ಸರ್ಕಾರಗಳೂ ಇದನ್ನೇ ಮಾಡಿವೆ. ಅಗತ್ಯವಿದ್ದರೆ ಜೆಡಿಎಸ್, ಬಿಜೆಪಿ ನೀರು ಬಿಟ್ಟಿರುವ ದಾಖಲೆಗಳನ್ನು ಮುಂದಿಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಇದ್ದ ಸರ್ಕಾರಗಳು ನ್ಯಾಯಾಲಯದ ಆದೇಶಗಳನ್ನು ಇದೇ ರೀತಿ ಪಾಲಿಸಿವೆ. ಆದರೆ, ನಮ್ಮ ರೈತರ ಹಿತ ಕಾಪಾಡುವ ದೊಡ್ಡ ಜವಾಬ್ದಾರಿಯೂ ನಮ್ಮ ಮೇಲಿದೆ. ನೀರು ಬಿಟ್ಟಿರುವುದನ್ನು ಪ್ರಶ್ನಿಸಿ ವಿರೋಧ ಮಾಡುವುದು ಸಹಜ. ಮಳೆ ಕಡಿಮೆ ಆಗಿರುವುದರಿಂದ ಕೃಷಿಗೆ ಮಾತ್ರವಲ್ಲ, ಕುಡಿಯಲು ಸಹ ನೀರಿಲ್ಲದಂತಾಗಿದೆ. ಇದೇ ಕಾರಣಕ್ಕೆ ಪ್ರಾಧಿಕಾರಕ್ಕೆ ತನ್ನ ನಿರ್ಧಾರ ಪುನರ್‌ಪರಿಶೀಲಿಸಲು ಮನವಿ ಮಾಡಿದ್ದೇವೆ ಎಂದರು.
ಮಠಗಳು ಮನುಷ್ಯರ ಪಾಪ ತೊಳೆವ ಮಾರ್ಗದರ್ಶನ ಕೇಂದ್ರ: ಕೋಡಿಮಠ ಸ್ವಾಮೀಜಿ
ದಾಖಲೆ ನೀಡುತ್ತೇನೆ: ಈ ಹಿಂದೆ ಇಂತಹ ಪರಿಸ್ಥಿತಿಯಲ್ಲಿ ಜೆಡಿಸ್ ದಳ ಹಾಗೂ ಬಿಜೆಪಿ ಸರ್ಕಾರಗಳು ಎಷ್ಟುನೀರು ಬಿಟ್ಟಿದ್ದವು ಎಂಬ ಅಂಕಿ ಅಂಶ ಸಹಿತ ದಾಖಲೆ ನೀಡಬಲ್ಲೆ. ಆದರೆ, ಈ ವಿಚಾರದಲ್ಲಿ ರಾಜಕೀಯ ಮಾಡಲು ಇಷ್ಟವಿಲ್ಲ. ಕಾವೇರಿ, ಮಹಾದಾಯಿ, ಕೃಷ್ಣಾ ವಿಚಾರದಲ್ಲಿ ಸರ್ವಪಕ್ಷ ಸಭೆ ಕರೆಯಲು ಆಲೋಚಿಸಿದ್ದೇವೆ. ಕೇಂದ್ರದಲ್ಲಿ ಬಲಿಷ್ಠ ಸರ್ಕಾರ ಅಧಿಕಾರದಲ್ಲಿದ್ದರೂ ಮಹಾದಾಯಿ, ಕೃಷ್ಣ ವಿಚಾರ ಇತ್ಯರ್ಥವಾಗಿಲ್ಲ. ಈ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.