ಭಾರತ್ ಜೋಡೋ ಯಾತ್ರೆಯನ್ನ ಭಾರತದ ಒಳಗಡೆ ಮಾಡುವ ಅವಶ್ಯಕತೆಯಿಲ್ಲ: ಶೋಭಾ ಕರಂದ್ಲಾಜೆ

By Govindaraj S  |  First Published Oct 22, 2022, 3:02 PM IST

ಕಾಂಗ್ರೆಸ್‌ನವರು ಭಾರತ್ ಜೋಡೋ ಯಾತ್ರೆಯನ್ನ ಭಾರತದ ಒಳಗಡೆ ಮಾಡುವ ಅವಶ್ಯಕತೆಯಿಲ್ಲ. ಭಾರತದಾಚೆಗೆ ಒಡೆದು ಹೋಗಿರುವ ಗಡಿ ಭಾಗಗಳನ್ನ ಜೋಡಿಸುವ ಕೆಲಸ ಮಾಡಬೇಕಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. 


ಹುಬ್ಬಳ್ಳಿ (ಅ.22): ಕಾಂಗ್ರೆಸ್‌ನವರು ಭಾರತ್ ಜೋಡೋ ಯಾತ್ರೆಯನ್ನ ಭಾರತದ ಒಳಗಡೆ ಮಾಡುವ ಅವಶ್ಯಕತೆಯಿಲ್ಲ. ಭಾರತದಾಚೆಗೆ ಒಡೆದು ಹೋಗಿರುವ ಗಡಿ ಭಾಗಗಳನ್ನ ಜೋಡಿಸುವ ಕೆಲಸ ಮಾಡಬೇಕಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ದೇಶದ ಒಳಗೆ ಜೋಡಿಸುವ ಕೆಲಸವನ್ನು ಬಿಡಬೇಕು. ಈ ದೇಶವನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್‌ನವರು ಮಾಡಿದ್ದಾರೆ. 1947ರಲ್ಲಿ  ದೇಶವನ್ನ ವಿಭಜನೆ ಮಾಡಿರುವುದಕ್ಕೆ ಕಾರಣ ಕಾಂಗ್ರೆಸ್. ಪಾಕ್ ಆಕ್ರಮಿತ ಕಾಶ್ಮೀರವನ್ನಾಗಿ ಮಾಡಿರುವುದೇ ಕಾಂಗ್ರೆಸ್. ದೇಶದ ರಕ್ಷಣಾ ಪ್ರದೇಶಗಳನ್ನು ಬಹುತೇಕ ಕಾಂಗ್ರೆಸ್ ಈ ಹಿಂದೆ ಬಿಟ್ಟುಕೊಟ್ಟಿದೆ. ಎಲ್ಲಿ ಭಾರತದ ಕೈ ಕಾಲುಗಳನ್ನ ಕತ್ತರಿಸುವ ಕೆಲಸಗಳನ್ನ ಮಾಡಿದ್ದಾರೆ ಅಲ್ಲಿ ಭಾರತ್ ಜೋಡೋ ಪಾದಯಾತ್ರೆ ಮಾಡಲಿ ಎಂದರು.

ಭೂತಾರಾದನೆ ಹಾಗೂ ದೈವಾರಾದನೆ ಕುರಿತ ವಿವಾದ ಹಿನ್ನೆಲೆ, ನಾವು ದಕ್ಷಿಣ ಕನ್ನಡ ಭಾಗದ ಜನರು. ನಾವು ಭೂತಾರಾಧನೆ ಹಾಗೂ ದೈವಾರಾದನೆಯನ್ನು ನಮ್ಮದೇ ಆದ ಶೈಲಿಯಲ್ಲಿ ಆರಾಧನೆ ಮಾಡುತ್ತೇವೆ. ಬಣ್ಣ ಹಚ್ಚಿ ಅದರದೇ ಆದ ಶೈಲಿ ಸಂಸ್ಕೃತಿ ಸಂಪ್ರದಾಯದಂತೆ ಆಚರಣೆ ಮಾಡುತ್ತೇವೆ. ಈ ಹಿಂದಿನಿಂದಲೂ ಈ ಆಚರಣೆ‌ ಮಾಡಿಕೊಂಡು ಬಂದಿದ್ದೇವೆ. ಈ ಮೂಲಕ ನಾವು ದೇವರನ್ನು ಕಾಣುತ್ತೇವೆ. ಇದರ ಬಗ್ಗೆ ಮಾತನಾಡುವಂತವರು ಈ ಆರಾಧನೆ ಬಗ್ಗೆ ಆಳವಾದ ಅಧ್ಯಯನ ಮಾಡಬೇಕು. ಯಾರು ಈ ಆರಾಧನೆ ನಂಬುವುದಿಲ್ಲವೋ ಅಂತವರು ಈ  ಬಗ್ಗೆ ಮಾತನಾಡುವುದನ್ನು ಬಿಡಬೇಕು. ಈ ದೇಶದಲ್ಲಿ ಆಸ್ತಿಕನಿಗೂ ಜಾಗವಿದೆ ನಾಸ್ತಿಕನಿಗೂ ಜಾಗವಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

Latest Videos

undefined

ಮಂಡ್ಯ ಬಾಲಕಿ ರೇಪ್‌ ಕೇಸ್‌: ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಶೋಭಾ ಕರಂದ್ಲಾಜೆ

ಮುಸ್ಲಿಂ ಮಹಿಳೆಯರಿಗೆ ಇರಾನ್ ಮಾದರಿಯಾಗಬೇಕು: ಮುಸ್ಲಿಂ ಮಹಿಳೆಗೆ ಸ್ವಾತಂತ್ರ್ಯ ಸಿಗಬೇಕಾದರೆ ಹಿಜಾಬ್ ಗೆ ಅವಕಾಶ ಕೊಡಬಾರದು, ನಮ್ಮ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ, ಉದ್ಯೋಗ ಸಿಗುವುದು ಮುಖ್ಯ. ಮುಸ್ಲಿಂ ಹೆಣ್ಣು ಮಕ್ಕಳು ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕು. ಇರಾನ್ ನ ಮುಸ್ಲಿಂ ಮಹಿಳೆಯರು ಭಾರತಕ್ಕೆ ಮಾರ್ಗದರ್ಶಕ ಆಗಬೇಕು ಎಂದು ಕೇಂದ್ರ ಸಚಿವೆ ಮತ್ತು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಅವರು ಶುಕ್ರವಾರ ಉಡುಪಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿ ಹಿಜಾಬ್ ಪ್ರಕರಣ ಸಂವಿಧಾನಿಕ ಪೀಠಕ್ಕೆ ವರ್ಗಾವಣೆ ಆಗಬಹುದು, ಇಬ್ಬರು ನ್ಯಾಯಮೂರ್ತಿಗಳು ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. 

ಸಂವಿಧಾನಿಕ ಪೀಠದಲ್ಲಿ ಹಿಜಾಬ್ ದೇಶಕ್ಕೆ ಬೇಕೋ, ಬೇಡವೋ ಎಂದು ತೀರ್ಮಾನವಾಗುತ್ತದೆ, ಎಲ್ಲಾ ಮಹಿಳೆಯರು ಸ್ವಾತಂತ್ರ್ಯವಾಗಿ ಬದುಕಲು ನ್ಯಾಯಾಲಯ ಅವಕಾಶ ಮಾಡಿಕೊಡಬಹುದು ಎಂದರು. ಮನೆಯವರು, ಗಂಡಸರು ಹಿಜಾಬ್ ಗೆ ಒತ್ತಾಯ ಮಾಡುತ್ತಿದ್ದಾರೆ ಎಂದು ಗಂಡಸರು ಹಾಕುವ ತಾಳಕ್ಕೆ ಕುಣಿದು ಹೆಣ್ಣುಮಕ್ಕಳು ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳಬೇಡಿ, ಪ್ರಗತಿಶೀಲ ದೇಶಗಳು ಮತಗಳಲ್ಲಿ ಇರುವ ತಪ್ಪುಗಳನ್ನು ಗುರುತಿಸಿ ಸರಿ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಕಾಂಗ್ರೆಸ್ ನಾಯಕನ ಮಾತು ಕೇಳಿ ಶೋಭಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ

ಭಾರತ್ ಜೋಡೋ ವಿಚಾರವಾಗಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಿಂದ ಅವರ ದೇಹದ ಫಿಟ್ನೆಸ್ ಪ್ರದರ್ಶನವಾಗುತ್ತಿದೆ. ದೇಶದ ನೇತೃತ್ವ ವಹಿಸಲು ರಾಹುಲ್ ಗೆ ಸಾಧ್ಯಾನಾ? ಪಕ್ಷದ ನೇತೃತ್ವ ವಹಿಸದವರಿಗೆ ದೇಶದ ನೇತೃತ್ವ ವಹಿಸಲು ಸಾಧ್ಯವಿಲ್ಲ. ಮೋದಿಗೆ ಸರಿಸಾಟಿಯಾಗುವ ರಾಹುಲ್ ಕನಸು ಎಂದಿಗೂ ನನಸಾಗುವುದಿಲ್ಲ. ದೇಹದ ಫಿಟ್ನೆಸ್ ಇದ್ದರೆ ಮೆಂಟಲ್ ಫಿಟ್ನೆಸ್ ಇದ್ದಾರ? ದೇಶ ಆಳಲು ಮೆಂಟಲ್ ಫಿಟ್ನೆಸ್ ಇದ್ದಾರಾ ಅನ್ನುವುದನ್ನು ದೇಶದ ಜನ ತೀರ್ಮಾನ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು. 

click me!