ಮತ್ತೊಮ್ಮೆ ಬಾದಾಮಿಯಿಂದಲೇ ಸಿದ್ದರಾಮಯ್ಯ ಸ್ಪರ್ಧೆ: ಸಿದ್ದು ಆಪ್ತ ಹೊಳಬಸು ಶೆಟ್ಟರ

By Govindaraj S  |  First Published Oct 22, 2022, 1:19 PM IST

ಮುಂಬರುವ 2022-23ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ಶಾಸಕ ಸಿದ್ದರಾಮಯ್ಯವರು ಬಾದಾಮಿ ಮತಕ್ಷೇತ್ರದಿಂದಲೇ  ಸ್ಪರ್ಧಿಸಿ ಗೆಲುವು ಸಾಧಿಸಿ ಮುಖ್ಯಮಂತ್ರಿ ಹುದ್ದೆಗೇರಿಸುವ ಹೊಣೆಗಾರಿಕೆ ಬಾದಾಮಿ ಜನರ ಮೇಲಿದೆ ಎಂದು ಸಿದ್ದರಾಮಯ್ಯನವರ ಆಪ್ತ, ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ ಹೇಳಿದರು.


ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ 

ಬಾಗಲಕೋಟೆ (ಅ.22): ಮುಂಬರುವ 2022-23ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ಶಾಸಕ ಸಿದ್ದರಾಮಯ್ಯವರು ಬಾದಾಮಿ ಮತಕ್ಷೇತ್ರದಿಂದಲೇ  ಸ್ಪರ್ಧಿಸಿ ಗೆಲುವು ಸಾಧಿಸಿ ಮುಖ್ಯಮಂತ್ರಿ ಹುದ್ದೆಗೇರಿಸುವ ಹೊಣೆಗಾರಿಕೆ ಬಾದಾಮಿ ಜನರ ಮೇಲಿದೆ ಎಂದು ಸಿದ್ದರಾಮಯ್ಯನವರ ಆಪ್ತ, ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ ಹೇಳಿದರು. ಅವರು ಬಾದಾಮಿಯ ಪಟ್ಟಣದ ಶ್ರೀ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಬಸವಭವನದಲ್ಲಿ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಹೊಳಬಸು ಶೆಟ್ಟರ 46 ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

Tap to resize

Latest Videos

undefined

ನನಗೆ ಯಾವುದೇ ಹುದ್ದೆಯ ಆಸೆ ಇಲ್ಲ. ರಾಜಕಾರಣ ಮಾಡುವುದಿಲ್ಲ: ಈ ಸಂದರ್ಭದಲ್ಲಿ ಮಾತನಾಡಿದ ಹೊಳಬಸು ಶೆಟ್ಟರ್, ನನಗೆ ಯಾವುದೇ ಹುದ್ದೆಯ ಆಸೆ ಇಲ್ಲ. ರಾಜಕಾರಣ ಮಾಡುವುದಿಲ್ಲ , ಬಾದಾಮಿ ಶಾಸಕರಾಗಿರುವ ಸಿದ್ದರಾಮಯ್ಯನವರು ಕಳೆದ 4 ವರ್ಷಗಳಲ್ಲಿ ಸಾವಿರಾರು ಕೋಟಿ ರೂ.ಅನುದಾನವನ್ನು ಬಾದಾಮಿ ಮತಕ್ಷೇತ್ರಕ್ಕೆ ತಂದಿದ್ದಾರೆ. ಇಂತಹವರು ಮತ್ತೆ ಆಯ್ಕೆಯಾಗಿ ಮುಖ್ಯಮಂತ್ರಿಯಾದರೆ ಬಾದಾಮಿ ಮತಕ್ಷೇತ್ರ ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಲಿದೆ ಎಂದು ಹೇಳಿದರು.

ಬಾಗಲಕೋಟೆಯಲ್ಲಿ ನಿಲ್ಲದ ಕಬ್ಬು ಬೆಳೆಗಾರರ ಹೋರಾಟ, ಡಿಸಿ ಸಭೆ

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ ಹೊಳಬಸು ಶೆಟ್ಟರ ಇವರು ಕಳೆದ 1989ರಿಂದ ಇಲ್ಲಿಯವರೆಗೆ ಮಾಜಿ ಸಚಿವ ಎಚ್.ವೈ.ಮೇಟಿ ಮತ್ತು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯನವರ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಅವರ ಪ್ರಮಾಣಿಕತೆ, ನಿಷ್ಠೆಗೆ ಬದ್ದರಾಗಿದ್ದಾರೆ. ಇವರು ಮಾಡಿದ ಕೆಲಸಗಳೇ ಇವರಿಗೆ ಈಗ ಜನರ ಮನಸ್ಸಿನಲ್ಲಿದೆ ಎಂದರು. ಮಾಜಿ ಸಚಿವ ಎಚ್.ವೈ.ಮೇಟಿ ಮಾತನಾಡಿ ಹೊಳಬಸು ಶೆಟ್ಟರ ಇವರು ನಡೆದ ಬಂದ ದಾರಿ, ಅವರು ಕೆಲಸ ಮಾಡಿದ ಕುರಿತು ಸುದೀರ್ಘವಾಗಿ ಮಾತನಾಡಿದರು.

ಬೈಕ್ ರ‍್ಯಾಲಿ ಮೂಲಕ ತೆರೆದ ವಾಹನದಲ್ಲಿ ಮೆರವಣಿಗೆ: ಇನ್ನು ಹುಟ್ಟುಹಬ್ಬ ಕಾರ್ಯಕ್ರಮದ ಪೂರ್ವದಲ್ಲಿ ಪಟ್ಟಣದ ಹೊರವಲಯದ ಕೋರ್ಟ್‌ ಹೊಟೇಲ್‌ನಿಂದ ಮುಖ್ಯ ರಸ್ತೆಯ ಮುಖಾಂತ 300 ಬೈಕ್ ರ‍್ಯಾಲಿ ಮೂಲಕ ಹೊಳಬಸು ಶೆಟ್ಟರ ಅವರನ್ನು ಸ್ವಾಗತಿಸಿ, ಮೆರವಣಿಗೆಯ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ಶ್ರೀ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಬಸವಭವನಕ್ಕೆ ಕರೆತರಲಾಯಿತು. ಈ ಸಂದರ್ಭದಲ್ಲಿ ಸಿದ್ದು ಅಭಿಮಾನಿಗಳ ಸಂಘದ ಸಾವಿರಾರು ಜನರು ಸೇರಿದ್ದರು.

ಬಾಗಲಕೋಟೆ ಜಿಲ್ಲೆಯಲ್ಲಿ ನಿಲ್ಲದ ಮೊಸಳೆ ಆತಂಕ: ಭಯಭೀತರಾದ ಜನತೆ..!

ಪರಮಪೂಜ್ಯ ಕಲ್ಲಯ್ಯಜ್ಜನವರ ತುಲಾಭಾರ ಕಾರ್ಯಕ್ರಮ: ಇದೇ ಸಂದರ್ಭದಲ್ಲಿ ಹೊಳಬಸು ಶೆಟ್ಟರ ಇವರ 46ನೇ ಜನ್ಮ ದಿನಾಚರಣೆಯ ಪ್ರಯುಕ್ತ 46ಕೆಜಿಯ ಕೇಕ್‌ನ್ನು ಕತ್ತರಿಸಿ ಸಿಹಿ ವಿತರಿಸಿದರು. ನಂತರ ಗದಗ ಪುಟ್ಟರಾಜ ಗವಾಯಿಗಳ ಮಠದ ಪರಮಪೂಜ್ಯ ಕಲ್ಲಯ್ಯಜ್ಜನವರ ತುಲಾಭಾರ ಕಾರ್ಯಕ್ರಮ ಜರುಗಿತು. ಇದೇ ಸಂದರ್ಭದಲ್ಲಿ ಜಿಲ್ಲೆಯ ಹಾಗೂ ತಾಲೂಕಿನ ವಿವಿದ ಪಕ್ಷಗಳ ಮುಖಂಡರು, ಬಾದಾಮಿ ಮತಕ್ಷೇತ್ರದ ವಿವಿದ ಭಾಗ, ಗ್ರಾಮಗಳಿಂದ ಆಗಮಿಸಿದ್ದ ಅಸಂಖ್ಯಾತ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಆಗಮಿಸಿ ಹೊಳಬಸು ಶೆಟ್ಟರ ಅವರಿಗೆ ಜನ್ಮ ದಿನಾಚರಣೆಯ ಶುಭ ಕೋರಿದರು. ಈ ಸಂದರ್ಭದಲ್ಲಿ ಮುಖಂಡರಾದ ಪುರಸಭೆಯ ಅಧ್ಯಕ್ಷ ರಾಜಮಹ್ಮದ ಬಾಗವಾನ, ಎಂ.ಡಿ.ಯಲಿಗಾರ, ಶಶಿಕಾಂತ ಉದಗಟ್ಟಿ, ಎಂ.ಬಿ.ಹಂಗರಗಿ  ಸೇರಿದಂತೆ ಇತರರು ಹಾಜರಿದ್ದರು.

click me!