ಕೋಲಾರ (ಅ.22) : ಮಾಜಿ ಸಚಿವ ದಿವಂಗತ ಸಿ.ಬೈರೇಗೌಡರು ಸಿಎಂ ಆಗುತ್ತಾರೆ ಎಂಬ ನಿರೀಕ್ಷೆ ಹೊಂದಿದ್ದೆವು, ಆದರೆ ಅವರ ಅಕಾಲಿಕ ಮರಣದ ನೋವು ಇಂದಿಗೂ ಸಹ ನಮ್ಮನ್ನು ಕಾಡುತ್ತಿದೆ. ಮುಂದಿನ ರಾಜಕೀಯ ಜೀವನದಲ್ಲಿ ಮಾಜಿ ಸಚಿವ ಕೃಷ್ಣಬೈರೇಗೌಡ ಸಿಎಂ ಆಗುವಂತಹ ನಾಯಕತ್ವದ ಎಲ್ಲಾ ಲಕ್ಷಣಗಳಿವೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಭವಿಷ್ಯ ನುಡಿದರು.\ ನಗರದ ಶಾಸಕರ ಗೃಹ ಕಚೇರಿಯಲ್ಲಿ ಇಫೊ್ಕೕ ಸೇವಾ ಸಂಸ್ಥೆಯಿಂದ 10 ಮಂದಿ ಬಡ ರೋಗಿಗಳಿಗೆ ಸುಮಾರು 2 ಲಕ್ಷದ ಇಪ್ಪತ್ತೈದು ಸಾವಿರ ರು.ಗಳ ವೈದ್ಯಕೀಯ ವೆಚ್ಚದ ಚೆಕ್‌ಗಳನ್ನು ವಿತರಿಸಿ ಸುದ್ದಿಗಾರೊಂದಿಗೆ ಅವರು ಮಾತನಾಡಿದರು.
ಕಾಂಗ್ರೆಸ್‌ನಲ್ಲಿ ತಂತ್ರಗಾರಿಕೆ ಇನ್ಮುಂದೆ ನಡೆಯಲ್ಲ
undefined
ಮಾಜಿ ಸಿಎಂ ಸಿದ್ದರಾಮಯ್ಯನವರು ತಾಲೂಕಿನ ಸೀತಿ ಗ್ರಾಮಕ್ಕೆ ಅ.27 ರಿಂದ 30ರೊಳಗೆ ಭೇಟಿ ನೀಡಲಿದ್ದಾರೆ. ಅಂದು ಸೀತಿ ಗ್ರಾಮದ ದೇವಾಲಯಕ್ಕೆ ಭೇಟಿ ನೀಡಿ ನಂತರ ಮಾಜಿ ಸಚಿವ ದಿ.ವೈರೇಗೌಡರ ಸಮಾಧಿಗೆ ತೆರಳಿ ಪೂಜೆ ಸಲ್ಲಿಸುವರು, ಈ ಸಂದರ್ಭದಲ್ಲಿ ತಮ್ಮ ಸ್ಪರ್ಧೆಗೆ ಸಂಬಂಧಿಸಿದಂತೆ ಶಾಸಕರೊಂದಿಗೆ ಮತ್ತು ಮುಖಂಡರೊಂದಿಗೆ ಚರ್ಚಿಸುವರು. ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿ ನೀಡಿದ್ದ ಕೋಲಾರ ಜಿಲ್ಲೆಯ ಕೀರ್ತಿಗೆ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಎರಡನೇ ಬಾರಿಗೆ ಜಿಲ್ಲೆಯಿಂದ ಸಿಎಂ ಮಾಡಿ ರಾಜ್ಯಕ್ಕೆ ಕಳುಹಿಸುವ ದಿಸೆಯಲ್ಲಿ ಅವರ ಸ್ಪರ್ಧೆಯನ್ನು ಬಯಸಲಾಗಿದೆ. ಜಿಲ್ಲೆಗೆ ಸಿಕ್ಕಿರುವಂತ ಈ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದರು.
ನಾನು ರಾಜಕಾರಣದಲ್ಲಿ ಸಹಕಾರ ಕ್ಷೇತ್ರದಿಂದ ಬೇರು ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದವರೆಗೆ ಬೆಳೆದವನು. 4ಬಾರಿ ಶಾಸಕನಾಗಿ, ಕೃಷಿ ಸಚಿವರಾಗಿದ್ದ ಅವಧಿಯಲ್ಲಿ ನಾನಾ ಅಭಿವೃದ್ಧಿ ಕಾರ್ಯಗಳಿಂದ ಸಾಕಷ್ಟುಪ್ರಗತಿಯ ಸಾಧನೆ ಮಾಡಿದ್ದೇನೆಂದು ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರು.
ಬಿಜೆಪಿ ಆಡಳಿತ ಮಲತಾಯಿ ಧೋರಣೆ:
ನಾನು ಮಾಜಿ ಶಾಸಕನಾಗಿದ್ದರೂ ಮುಖ್ಯಮಂತ್ರಿ ನನ್ನ ಮನವಿಗೆ ಸ್ಪಂದಿಸಿ .50 ಕೋಟಿ ನಮ್ಮ ಕ್ಷೇತ್ರಕ್ಕೆ ಬಿಡುಗಡೆ ಮಾಡಿದ್ದಾರೆ. ಆದರೆ ಶಾಸಕರಾದವರೂ ಮೂರು ವರ್ಷವಾದರೂ ಸರ್ಕಾರದಿಂದ ಯಾವುದೇ ಅನುದಾನ ತಂದಿಲ್ಲ ಎಂಬ ವರ್ತೂರು ಪ್ರಕಾಶ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಮೊದಲು ಅವರು .50 ಕೋಟಿ ತಂದು ಆಮೇಲೆ ಮಾತನಾಡಲಿ ಎಂದರು. ತಮ್ಮ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಮಾತ್ರ ಭಾರತೀಯ ಜನತಾ ಪಾರ್ಟಿ ಅನುದಾನ ನೀಡುತ್ತಿದೆ. ಆದರೆ ಇತರೆ ಪಕ್ಷಗಳ ಶಾಸಕರಿಗೆ ಯಾವುದೇ ರೀತಿ ಆದ್ಯತೆ ನೀಡುತ್ತಿಲ್ಲ, ಬಿಜೆಪಿ ಪಕ್ಷವು ತಮ್ಮ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿದ್ದು, ಮಲತಾಯಿ ಧೋರಣೆ ಪಾಲಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಖಚಿತ
ಉಚ್ಚಾಟನೆ ನಂತರ ರಾಜೀನಾಮೆ ಅವಶ್ಯವಿಲ್ಲ:
ನನ್ನನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಿರುವಾಗ ನಾನು ರಾಜೀನಾಮೆ ಕೊಡುವಂತಹ ಪ್ರಶ್ನೆಯೇ ಇಲ್ಲ. ಈ ಮಾತನ್ನು ಬಹಳ ದಿನದ ಹಿಂದೆ ಪ್ರಜ್ವಲ್ ರೇವಣ್ಣ ಅವರೇ ಸ್ಪಷ್ಟಪಡಿಸಿದ್ದಾರೆ. ನನಗೆ ಜೆಡಿಎಸ್‌ನಿಂದ ಯಾವುದೇ ನೋಟಿಸ್ ಸಹ ಬಂದಿಲ್ಲ, ಅವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸುವಂತಹ ಅಗತ್ಯವಿಲ್ಲ, ಇಚ್ಛೆಯೂ ನನಗಿಲ್ಲ ಎಂದರು. ಸುದ್ದಿಗೋಷ್ಠಿ ವೇಳೆ ಮಾಜಿ ನಗರಸಭಾ ಸದಸ್ಯ ಚನ್ನವೀರಯ್ಯ, ಆಟೋ ಯೂನಿಯನ್ ಮುಖಂಡ ಕೆ.ವಿ.ಸುರೇಶ್‌ಕುಮಾರ್, ನಿವೃತ್ತ ಅರಣ್ಯ ಇಲಾಖೆಯ ಅಧಿಕಾರಿ ಶ್ರೀಧರ್ ಇದ್ದರು