ಕರ್ನಾಟಕದಲ್ಲಿನ ಶಾಲಾ ಪಠ್ಯಪುಸ್ತಕದಲ್ಲಿ ಕಾಂಗ್ರೆಸ್ ಪಠ್ಯ ಪರಿಷ್ಕರಣೆಗೆ ಮುಂದಾಗಿರುವುದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಇತಿಹಾಸವನ್ನು ಗಾಂಧಿ ಮತ್ತು ನೆಹರು ಕುಟುಂಬಕ್ಕೆ ಮಾತ್ರ ಸೀಮಿತಗೊಳಿಸಲು ಕಾಂಗ್ರೆಸ್ ಎದುರು ನೋಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಜೂ.10): ಕರ್ನಾಟಕದಲ್ಲಿನ ಶಾಲಾ ಪಠ್ಯಪುಸ್ತಕದಲ್ಲಿ ಕಾಂಗ್ರೆಸ್ ಪಠ್ಯ ಪರಿಷ್ಕರಣೆಗೆ ಮುಂದಾಗಿರುವುದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಇತಿಹಾಸವನ್ನು ಗಾಂಧಿ ಮತ್ತು ನೆಹರು ಕುಟುಂಬಕ್ಕೆ ಮಾತ್ರ ಸೀಮಿತಗೊಳಿಸಲು ಕಾಂಗ್ರೆಸ್ ಎದುರು ನೋಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪಠ್ಯದಿಂದ ಆರ್‌ಎಸ್‌ಎಸ್ ಸ್ಥಾಪಕ ಕೇಶವ ಬಲಿರಾಮ್ ಹೆಗಡೇವಾರ್ ಅವರ ಪಠ್ಯವನ್ನು ಕೈಬಿಡುವುದಾಗಿ ಹೇಳಿರುವುದು ಇದನ್ನು ನಿರೂಪಿಸುತ್ತದೆ. ತಮ್ಮ ಮನೆತನಕ್ಕೆ (ಗಾಂಧಿ ಕುಟುಂಬದ) ಸೇರದ ಪಠ್ಯಗಳನ್ನು ತೆಗೆದು ಹೊಸ ಇತಿಹಾಸವನ್ನು ಸೃಷ್ಟಿಮಾಡಲು ಕಾಂಗ್ರೆಸ್ ಮುಂದಾಗಿದೆ ಎಂದು ಹೇಳಿದರು.
‘ಅವರು ಏನು ಮಾಡುತ್ತಾರೋ ಅಥವಾ ಏನು ಹೇಳುತ್ತಾರೋ ಎಂಬುದು ನನ್ನ ನಿಯಂತ್ರಣದಲ್ಲಿಲ್ಲ. ಆದರೆ ಪಠ್ಯವನ್ನು ಕೈಬಿಡುವುದು ಸಂಪೂರ್ಣ ತಪ್ಪು. ತಮ್ಮ ಮನೆತನಕ್ಕೆ ಸೇರದವರಇತಿಹಾಸವನ್ನು ಅಳಿಸಿಹಾಕುವುದು ಅವರ ಡಿಎನ್‌ಎ ಅಲ್ಲೇ ಇದೆ’ ಎಂದು ಅವರು ಹೇಳಿದರು. ಇದೇ ವೇಳೆ, ಕೇಂದ್ರದ ಹಿಂದಿನ ಯುಪಿಎ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್‌ನ ಆಡಳಿತಾವಧಿ ಕಳೆದು ಹೋದ ಅವಧಿಯಾಗಿದ್ದು ಅದು ‘ಭ್ರಷ್ಟಾಚಾರದ ಅಂಗಡಿಯಾಗಿತ್ತು’ ಎಂದು ಟೀಕಿಸಿದರು. ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯನ್ನು ಈ ವರ್ಷವೇ ಮಾಡಲಾಗುವುದು. ಸಚಿವ ಸಂಪುಟ ಮುಂದಿನ ಸಭೆ ಸೇರಿದ ದಿನವೇ ಪುಸ್ತಕ ಪರಿಷ್ಕರಣೆಯ ಬಗ್ಗೆ ಚರ್ಚಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಗುರುವಾರ ಹೇಳಿದ್ದರು.
300 ಇದ್ದ ವಿದ್ಯುತ್ ಬಿಲ್ 1800ಕ್ಕೆ ಏರಿಕೆ: ದರ ಹೆಚ್ಚಳಕ್ಕೆ ಮಹಿಳೆಯರ ಆಕ್ರೋಶ
ಡಿಜಿಟಲ್ ಇಂಡಿಯಾ ಮಸೂದೆಯಲ್ಲಿ 11 ವಿಷಯಗಳಿಗೆ ನಿಷೇಧ: ದೇಶದ 85 ಕೋಟಿ ಇಂಟರ್ನೆಟ್ ಬಳಕೆದಾರರನ್ನು ಸೈಬರ್ ಅಪರಾಧಗಳಿಂದ ರಕ್ಷಿಸುವ, ಅಂತರ್ಜಾಲವನ್ನು ಮುಕ್ತ ಮತ್ತು ಸುರಕ್ಷಿತಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾ ಮಸೂದೆಯನ್ನು ಸಿದ್ಧಪಡಿಸುತ್ತಿದ್ದು, ಅದನ್ನು ಶೀಘ್ರವೇ ಸಂಸತ್ತಿನಲ್ಲಿ ಮಂಡಿಸಲಾಗುವುದು. ಒಟ್ಟು 11 ರೀತಿಯ ಅಂಶಗಳನ್ನು ಈ ಮಸೂದೆ ಮೂಲಕ ನಿಷೇಧಿಸಲಾಗುವುದು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
'ಮೇಡ್ ಇನ್ ಜೈಲ್' ಉತ್ಪನ್ನ ಇನ್ನು ಪೊಲೀಸ್ ಕ್ಯಾಂಟಿನ್‌ಗಳಲ್ಲೂ ಲಭ್ಯ!
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ 9 ವರ್ಷದಲ್ಲಿ ದೇಶದಲ್ಲಿ ಡಿಜಿಟಲೀಕರಣದ ಪ್ರಗತಿ ಬಗ್ಗೆ ಶುಕ್ರವಾರ ಮಾಹಿತಿ ನೀಡಿರುವ ರಾಜೀವ್ ಚಂದ್ರಶೇಖರ್, ‘ಉಪದ್ರವಕಾರಿ ಮತ್ತು ಅಪರಾಧೀಕರಣವು, ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್‌ನಲ್ಲಿ ವ್ಯಾಪಕವಾಗಿದೆ. ದೇಶದ ಹಾಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ 85 ಕೋಟಿ ತಲುಪಿದೆ. 2025ರ ವೇಳೆಗೆ 120 ಕೋಟಿ ತಲುಪುವ ನಿರೀಕ್ಷೆ ಇದೆ. ಈ ಹೊತ್ತಿನಲ್ಲಿ, ಡಿಜಿಟಲ್ ಪೌರರಿಗೆ ಹಾನಿ ಉಂಟು ಮಾಡುವ ಯಾವುದೇ ಬೆಳವಣಿಗೆಯನ್ನು ನಾವು ಸಹಿಸುವುದಿಲ್ಲ. ಇವುಗಳಿಗೆ ಕಡಿವಾಣ ಹಾಕಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯಗಳ ವಿಷಯವಾದರೂ, ಅವುಗಳ ಸಹಯೋಗದಲ್ಲಿ ಕೇಂದ್ರ ಸರ್ಕಾರ ಕೈಜೋಡಿಸಿ ನಾಗರಿಕರ ಹಿತರಕ್ಷಣೆಗೆ ಕ್ರಮ ಕೈಗೊಳ್ಳಲಿದೆ’ ಎಂದು ಹೇಳಿದರು.