Assembly election: ಜನಾರ್ಧನರೆಡ್ಡಿ ಹೊಸ ಪಕ್ಷದ ನಿರ್ಧಾರ ವಾಪಸ್‌ ಪಡೆಯಲಿ: ಸಚಿವ ಸುಧಾಕರ್ ಮನವಿ

By Sathish Kumar KHFirst Published Dec 25, 2022, 2:32 PM IST
Highlights

ಜನಾರ್ದನ್ ರೆಡ್ಡಿ ಅವರು ಬಿಜೆಪಿ ಪಕ್ಷಕ್ಕೆ ಸಾಕಷ್ಟು ದುಡಿದಿದ್ದಾರೆ. ಅಸಮಾಧಾನ ಏನೇ ಇದ್ರೂ ಪಕ್ಷದ ವರಿಷ್ಠರ ಜೊತೆ ಕೂತು ಮಾತಾಡೋಣ. ಕೂಡಲೇ ತಮ್ಮ ನಿರ್ಧಾರವನ್ನು ವಾಪಸ್ ಪಡೆಯಬೇಕೆಂದು ಮನವಿ ಮಾಡುತ್ತೇನೆ ಎಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರು (ಡಿ.25): ಮಾಜಿ ಸಚಿವ ಜನಾರ್ದನ್ ರೆಡ್ಡಿ ಅವರು ಬಿಜೆಪಿ ಪಕ್ಷಕ್ಕೆ ಸಾಕಷ್ಟು ದುಡಿದಿದ್ದಾರೆ. ಅಸಮಾಧಾನ ಏನೇ ಇದ್ರೂ ಪಕ್ಷದ ವರಿಷ್ಠರ ಜೊತೆ ಕೂತು ಮಾತಾಡೋಣ. ಕೂಡಲೇ ತಮ್ಮ ನಿರ್ಧಾರವನ್ನು ವಾಪಸ್ ಪಡೆಯಬೇಕೆಂದು ಮನವಿ ಮಾಡುತ್ತೇನೆ ಎಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪೆ ಪಕ್ಷಕ್ಕೆ ಸಾಕಷ್ಟು ಕೆಲಸ ಮಾಡಿರುವ  ಜನಾರ್ಧನರೆಡ್ಡಿ ಅವರು ಆತುರದ ನಿರ್ಧಾರ ಹೇಳಿದ್ದಾರೆ. ಅವರು ತಮ್ಮ ನಿರ್ಧಾರ ವಾಪಸ್‌ ಪಡೆದು ಹೈಕಮಾಂಡ್‌ ಜೊತೆ ಮಾತನಾಡುವುದು ಒಳಿತು ಎಂದಿದ್ದಾರೆ. ಜೊತೆಗೆ, ಈ ಹಿಂದೆ ಪಕ್ಷ ಕಟ್ಟಿದಾಗ  ಏನೆಲ್ಲ ಆಗಿತ್ತೋ ಅದಕ್ಕಿಂತ ಭಿನ್ನವಾಗಿ ಇರಲು ಸಾಧ್ಯವಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಮತ್ತೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರೋಣ. ಈ ಹಿಂದೆ ನಾನು ಬಳ್ಳಾರಿಗೆ ಹೋಗಿದ್ದಾಗ ಕೆಲವೊಂದು ವಿಚಾರವನ್ನು  ಹೇಳಿಕೊಂಡಿದ್ದರು. ಈ ವಿಚಾರವಾಗಿ ಸಿಎಂ ಹಾಗೂ ರಾಜ್ಯಾಧ್ಯಕ್ಷರಾದ ಕಟೀಲ್ ಅವರ ಜೊತೆ ಮಾತನಾಡುತ್ತೇವೆ ಎಂದರು.

ಪ್ರಾದೇಶಿಕ ಪಕ್ಷ ಯಶಸ್ಸು ಕಂಡಿಲ್ಲ: ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ಯಾವುದೇ ಪ್ರಾದೇಶಿಕ ಪಕ್ಷ ರಾಜ್ಯದಲ್ಲಿ ಯಶಸ್ಸು ಕಂಡಿಲ್ಲ. ಜನಾರ್ದನ ರೆಡ್ಡಿ ಪಕ್ಷ ಕಟ್ಟಿರುವ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಇದರ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ. ಆದರೆ, ಜನಾರ್ದನ ರೆಡ್ಡಿ ಅವರ ಮನವೊಲಿಕೆ ಬಿಜೆಪಿ ವಿಫಲ ಆಗಿದೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾನು ಎಲ್ಲವನ್ನೂ ತಿಳಿದುಕೊಂಡೇ ಮಾತನಾಡುತ್ತೇನೆ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಯಶಸ್ಸು ಕಂಡಿಲ್ಲ ಅಂತೇ ಹೇಳುತ್ತೇನೆ ಎಂದರು.

Assembly election:ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ: ಜನಾರ್ಧನರೆಡ್ಡಿ ಅಧಿಕೃತ ಘೋಷಣೆ

ರೆಡ್ಡಿ ವೈಯಕ್ತಿಕ ಸಂಪರ್ಕದಲ್ಲಿ ಇರಲಿಲ್ಲ: ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ, ನೋಡೋಣ ಏನಾಗುತ್ತದೆ ಅಂತಾ. ಯಾವ ರೀತಿ ಪರಿಣಾಮ ಆಗಬಹುದು ನೋಡುತ್ತೇವೆ. ಪಕ್ಷದ ನಾಯಕರ ಜೊತೆ ಮಾತನಾಡುತ್ತೇವೆ. ಕೆಜೆಪಿಯಂತೆ ಪರಿಣಾಮ ಆಗಬಹುದೆಂಬ ವಿಚಾರ. ಅದರಿಂದ ಏನಾಗಬಹುದು ಅಂತಾ ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ. ಅದಕ್ಕೆ ನಮ್ಮ ಪಕ್ಷ ಏನು ತಿರ್ಮಾನ ಕೈಗೊಳ್ಳುತ್ತಾರೆ ನೋಡೋಣ. ನಮ್ಮ ಜೊತೆ ರೆಡ್ಡಿ ಮತ್ತು ಯಾರೂ ಮಾತನಾಡಿಲ್ಲ. ಇತ್ತೀಚೆಗೆ ರೆಡ್ಡಿ ವೈಯಕ್ತಿಕ ಸಂಪರ್ಕದಲ್ಲಿ ಇರಲಿಲ್ಲ. ಹೀಗಾಗಿ ಪಕ್ಷ ಸ್ಥಾಪನೆ ಮುನ್ಸೂಚನೆ ನಮಗೆ ಗೊತ್ತಿಲ್ಲ. ರೆಡ್ಡಿ ಪಕ್ಷ ಬಿಜೆಪಿ ಬಿ ಟೀಮ್ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು. 

ಹೊಸ ಪಕ್ಷ ಮೋದಿ ಗಾಳಿಗೆ ತೇಲಿ ಹೋಗುತ್ತದೆ: ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಸಚಿವ ಗೋವಿಂದ ಕಾರಜೋಳ ಅವರು, ಜನಾರ್ಧನ ರೆಡ್ಡಿ ಅವರು ನಾವು ಒಂದೇ ಪಕ್ಷದಲ್ಲಿ, ಸಚಿವ ಸಂಪುಟದಲ್ಲೂ ಅವರು ಇದ್ದರು. ಆದರೆ ನಾನು ಅವರೊಂದಿಗೆ ಅಷ್ಟೊಂದು ಆತ್ಮೀಯವಾಗಿ ಇಲ್ಲ. ಹಾಗಾಗಿ ಹೊಸ ಪಕ್ಷ ಕಟ್ಟುವ ವಿಚಾರ, ಪಕ್ಷ ಬಿಡುವ ವಿಚಾರವನ್ನು ನನ್ನ ಬಳಿ ಅವರು ಹೇಳಿಲ್ಲ, ಅದರ ಬಗ್ಗೆ ಯಾವತ್ತೂ ಕೂಡ ಅವರು ಮಾತಾಡಿಲ್ಲ. ರೆಡ್ಡಿ ಪಕ್ಷ ಕಟ್ಟಿದ್ರೆ ಪಕ್ಷಕ್ಕೆ ಸಮಸ್ಯೆ ಆಗುವುದಿಲ್ಲ. ಎಷ್ಟೋ ಪಕ್ಷಗಳು ಕಟ್ಟಿದ್ರೂ, ನರೇಂದ್ರ ಮೋದಿ ಅವರ ಗಾಳಿಯಲ್ಲಿ ಎಲ್ಲಾ ಪಕ್ಷಗಳು ತೇಲಿ ಹೋದವು. ಗುಜರಾತ್ ನಲ್ಲಿ ಆಮ್ ಆದ್ಮಿ ಬರಬಹುದು ಎಂದು ಹೇಳಲಾಯಿತು, ಅದೆಲ್ಲಾ‌ ಏನೂ ಆಗೋದಿಲ್ಲ ಎಂದು ತಿಳಿಸಿದರು.

Assembly election:ಬಿಜೆಪಿಯ ಕುತಂತ್ರ ಬಯಲಿಗೆಳೆಯುತ್ತೇನೆ: ಹೊಸ ಪಕ್ಷ ಘೋಷಣೆ ಬೆನ್ನಲ್ಲೇ ಬಾಂಬ್‌ ಹಾಕಿದ ರೆಡ್ಡಿ

ಜನಾರ್ಧನ ರೆಡ್ಡಿ ಹೊಸ ಪಕ್ಷಕ್ಕೆ ಒಳಿತಾಗಲಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾಯಕರು ಬೆಳೆಯಬೇಕು. ರಾಜ್ಯಕ್ಕೆ ಅವರು ಕೂಡ ಸೇವೆ ನೀಡಲಿ. ನಾವು ಯಾರನ್ನೂ ಟೀಕೆ ಮಾಡಲ್ಲ. ಇದು ಅವರ ವೈಯಕ್ತಿಕ ವಿಚಾರವಾಗಿದೆ. ಪಕ್ಷದಲ್ಲಿ ಬೆಳೆದು ಬಂದಿರುವುದರ ಬಗ್ಗೆ ವೈಯಕ್ತಿಕವಾಗಿ ಹೇಳಿದ್ದಾರೆ. ನಾವು ನೀತಿ ಮೇಲೆ ರಾಜಕೀಯ ಮಾಡೋರು. ಪಕ್ಷ ಈಗ ಉದಯ ಆಗಿದೆ. ಬೆಳೆದು ಮರವಾಗಬೇಕಾದರೆ ವರ್ಷಗಳು ಬೇಕಾಗುತ್ತವೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

click me!