Dharwad: ಸಿದ್ದರಾಮಯ್ಯ ಮತ್ತೆ ಸಿಎಂ ಆಗಲ್ಲ: ಕಾಂಗ್ರೆಸ್ ವಿರುದ್ದ ಹರಿಹಾಯ್ದ ಪ್ರಹ್ಲಾದ್ ಜೋಶಿ!

By Govindaraj S  |  First Published May 26, 2022, 7:40 PM IST

ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಬಸವರಾಜ ಹೊರಟ್ಟಿ ಅವರು ಇಂದು ನಾಮಪತ್ರವನ್ನ ಸಲ್ಲಿಸಿದ್ದಾರೆ. ಇನ್ನು ಧಾರವಾಡದ ಕಡಪಾ ಮೈದಾನದಲ್ಲಿ ಬಹಿರಂಗ ಸಮಾವೇಶವನ್ನ ಆಯೋಜನೆ ಮಾಡಿ ಕಾರ್ಯಕರ್ತರ ಜೊತೆ ಪಾದ ಯಾತ್ರೆ ಮುಖಾಂತರ ಜಿಲ್ಲಾಧಿಕಾರಿಗಳ ಜೊತೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. 


ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ (ಮೇ.26): ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಬಸವರಾಜ ಹೊರಟ್ಟಿ ಅವರು ಇಂದು ನಾಮಪತ್ರವನ್ನ ಸಲ್ಲಿಸಿದ್ದಾರೆ. ಇನ್ನು ಧಾರವಾಡದ ಕಡಪಾ ಮೈದಾನದಲ್ಲಿ ಬಹಿರಂಗ ಸಮಾವೇಶವನ್ನ ಆಯೋಜನೆ ಮಾಡಿ ಕಾರ್ಯಕರ್ತರ ಜೊತೆ ಪಾದಯಾತ್ರೆ ಮುಖಾಂತರ ಜಿಲ್ಲಾಧಿಕಾರಿಗಳ ಜೊತೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು  ಬಸವರಾಜ ಹೊರಟ್ಟಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಮುನೇನಕೊಪ್ಪ, ಜಗದೀಶ್ ಶಟ್ಟರ್, ಹಾಲಪ್ಪಾ ಆಚಾರ, ಶಿವರಾಂ ಹೆಬ್ಬಾರ್, ಸಿಸಿ ಪಾಟೀಲ ಸಾಥ್ ಶಾಸಕ ಅಮೃತ ದೇಸಾಯಿ ಉಪಸ್ಥಿತರಿದ್ದರು.

Tap to resize

Latest Videos

ಕಾಂಗ್ರೆಸ್ ವಿರುದ್ದ ಹರಿಹಾಯ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ: ಧಾರವಾಡದಲ್ಲಿ ಮಾತನಾಡಿದ ಕೇಂದ್ರ ಸಚವ ಪ್ರಹ್ಲಾದ ಜೋಶಿ ಕಾಂಗ್ರೆಸ್ ಪಕ್ಷದ ವಿರುದ್ದ ಭಾಷಣದುದ್ದಕ್ಕೂ ಹರಿಹಾಯ್ದರು. ಕಾಂಗ್ರೆಸ್ ಪಕ್ಷ ಬೌದ್ದಿಕ ದಿವಾಳಿ ಕೋರವಾಗಿದೆ ಅಸಹಿಷ್ಣತೆಯ ಬಗ್ಗೆ ಮಾತನಾಡುತ್ತಾರೆ ಇವರು ಅಧಿಕಾರದಲ್ಲಿ ಇದ್ದಾಗ ಎರಡು ಬಾರಿ ಚುನಾಯಿತ ಪ್ರಧಾನಿಯ ಬಗ್ಗೆ ಮಾತನಾಡುತ್ತಾರೆ ಪಠ್ಯಪುಸ್ತಕದಲ್ಲಿ ಸಂಘದ ಸಂಸ್ಥಾಪಕರ ಹೆಸರು ಸೇರಿಸಿದಕ್ಕೆ ದೊಡ್ಡ ಪ್ರಮಾಣದಲ್ಲಿ ವಿವಾದ ಮಾಡುತ್ತಿದ್ದಾರೆ. ನಿಮ್ಮ‌ ಕಾಲದಲ್ಲಿ ಪಠ್ಯಪುಸ್ತಕ ಹೇಗೆ ಇತ್ತು ಇವಾಗ ಹೇಗೆ ಇದೆ ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ ಮತ್ತು ಎಡಪಂಥೀಯರು ನಿಸ್ಸಿಮರು.

ಪಾಲಿಕೆ ವಾಹನ, ಕಚೇರಿ ಮೇಲೆ ಕಲ್ಲು ತೂರಾಟ: ಹಳೇ ಹುಬ್ಬಳ್ಳಿ ಗಲಭೆಯಿಂದ ಪ್ರಚೋದನೆ?

ನಾರಾಯಣಗುರು ಪಾಠವನ್ನ ತೆಗೆದಿಲ್ಲ ಇವರು ಯಾವುದು ಹೇಳ್ತಾರೆ ಯಾವುದನ್ನ ತೆಗೆದಿಲ್ಲ ಸಿದ್ದರಾಮಯ್ಯ ಆ್ಯಂಡ್ ಕಂಪನಿಗೆ ನಿಮ್ಮ‌ ನೇತಾರ ರಾಹುಲ್. ಗಾಂಧಿಯ ಮುಂದೆ ಕೈ ಕಟ್ಡಿ ನಿಲ್ಲುತ್ತಿರಿ ಸಿ...ಸೋ ...ಎಂದು ರಾಹುಲ್ ಗಾಂಧಿಯ ಮುಂದೆ ಕೈ ಕಟ್ಟಿ ನಿಲ್ಲುತ್ತಿರಲ್ಲ, ನಾನು ನಿಮಗೆ ಪ್ರಶ್ನೆ ಮಾಡುತ್ತೆನೆ 58 ವರ್ಷದಲ್ಲಿ ಅಧಿಕಾರದಲ್ಲಿದ್ರಿ ನೀವು ಭಗತ್ ಸಿಂಗ್,  ಸುಭಾಷ್ ಚಂದ್ರ, ಅವರ ಹೆಸರು ಎಷ್ಟು ಯೋಜನೆಗೆ ಇಟ್ಟಿದ್ಸಿರಿ ಎಂಬುದನ್ನ ಹೇಳಿ. ದೆಹಲಿವೊಂದರಲ್ಲಿ ಇಂದಿರಾ ಗಾಂಧಿ ನೆಹರೂ , ರಾಜೀವ್ ಗಾಂಧಿ ಹೆಸರಿನಲ್ಲಿ 298 ಯೋಜನೆಗಳಿಗೆ ಹೆಸರು ಇಟ್ಟಿಟ್ಟಿರಿ ಎಂದು ಕಾಂಗ್ರೆಸ್ ಪಕ್ಷದ ವಿರುದ್ದ ಕಿಡಿಕಾರಿದರು.

ನಿಮಗೆ ಒಂದು ದಿನಾನೂ ಸುಭಾಷ್ ಚಂದ್ರ ಬೋಸ್, ನಾರಾಯನ ಗುರು, ಬಾಲಗಂಗಾಧರ ತಿಲಕ್ ಹೆಸರು ನೆನಪಾಗಲಿಲ್ಲ ಇವತ್ತು ಬಾಳ್ ದೊಡ್ಡ ದೊಡ್ಡದಾಗಿ ಮಾತನಾಡುತ್ತಾರೆ ಸರ್ದಾರ ವಲ್ಲಭಬಾಯಿ ಪಟೇಲ್ ಅವರು ನೆಹರು ಸರಕಾರದಲ್ಲಿ ಉಪ ಮುಖ್ಯ ಮಂತ್ರಿಯಾಗಿದ್ರು,ಬಾಬಾಸಾಹೇಬ್ ಅಂಬೇಡ್ಕರ ಅವರಿಗೆ ಬಾರತ ರತ್ನ ಕೊಡಲಿಕ್ಕೆ ಎಷ್ಟು ದಿವಸ ಮಾಡಿದ್ರು. ಬಿಜೆಪಿ ಒತ್ತಡದ ಮೇಲೆ ವಿಪಿ ಸಿಂಗ್ ಸರಕಾರ ಇದ್ದಾಗ ಭಾರತ ರತ್ನ ಕೊಟ್ಟಿದ್ದಾರೆ ಸಿದ್ದರಾಮಯ್ಯ ಅವರೆ ಆಷಾಢ ಭೂತತೆಯನ್ನ ಬಿಡಬೇಕು ನಿಮ್ಮನ್ನ ಅವರು ಎರಡನೇಯ ಸಾರಿ ಸಿಎಂ ಮಾಡಲ್ಲ, ನಿಮ್ಮ ಪಾರ್ಟಿ ಅಧಿಕಾರಕ್ಕೆ ಬರಲ್ಲ ಡಿಕೆಶಿ ಮತ್ತು ನಿಮ್ಮ ನಡುವೆ ನಿಮ್ಮ ಪಕ್ಷ ಹಾಳಾಗಿ ಹೋಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ದ ಬಾಷಣದೂದ್ದಕ್ಕೂ ಹರಿಹಾಯ್ದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್ ಮಾತನಾಡಿ,ಇವತ್ತು ಮೂರು ಕಡೆ ನಾಮಪತ್ರ ಸಲ್ಲಿಸಲಿಕ್ಕೆ ಬಂದಿದ್ದೆನೆ, ಹನುಮಂತ ನಿರಾಣಿ, ಅರುಣ ಶಾಹಪೂರ ನಾಮಪತ್ರ ಸಲ್ಲಿಸಿದ್ದಾರೆ ಅಲ್ಲೂ ಭಾಗಿಯಾಗಿದ್ದೆ. ಧಾರವಾಡದಲ್ಲಿ ಬಸವರಾಜ ಹೊರಟ್ಟಿ ಅವರು ನಾಮಪತ್ರ ಸಲ್ಲಿಸಿದ್ದಾರೆ ಅವರು ಬಿಜೆಪಿ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ ಈ ಬಾರಿ ನಾಲ್ಕು ಕ್ಷೆತ್ರಗಳಲ್ಲಿ ಬಿಜೆಪಿ ಗೆಲವೂ ಪಕ್ಕಾ ಆಗಿದೆ. ಮೈಸೂರು, ಬೆಳಗಾವಿ, ಧಾರವಾಡದಲ್ಲಿ ಒಳ್ಳೆಯ ವಾತಾವರಣ ಇದೆ. ನಾಯಕರ ಸಭೆ ಕರೆಯಲಾಗಿದೆ ಸಭೆಯಲ್ಲಿ ಕಾರ್ಯತಂತ್ರದ ಬಗ್ಗೆ ಚರ್ಚೆ ಮಾಡಲಾಗುವುದು. 

Dharwad ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವೇತನ ತಾರತಮ್ಯ

ಮೋದಿ ಸರಕಾರಕ್ಕೆ 8 ವರ್ಷ ಹಿನ್ನಲೆ ಜಗತ್ತಿನಲ್ಲಿ ಭಾರತಕ್ಕೆ ಹೆಚ್ಚು ಗೌರವವಿದೆ. ಪ್ರಧಾನಿ ಮೋದಿ ಅವರ ಆಡಳಿತವನ್ನ ಎಲ್ಲ ದೇಶಗಳು ನೋಡುತ್ತಿವೆ ಭಾರತ ಎತ್ತರಕ್ಕೆ ಬೆಳೆಯಲೂ ಮೋದಿ ಕಾರಣ ಮಸೀದಿಗಳ ವಿವಾದ ವಿಚಾರವಾಗಿ ಮಾತನಾಡಿದ ಅವರು ಸಾರ್ವಜನಿಕ ವಿಚಾರಗಳಾಗಿವೆ. ಚರ್ಚೆ ಆಗ್ತಾಇದೆ ನ್ಯಾಯಾಲಯದಲ್ಲಿದೆ ಕೋರ್ಟ್ ತಿರ್ಮಾನ ಮಾಡುತ್ತದೆ. ನಮ್ಮಲ್ಲಿ ಯಾವುದೆ ಅಸಮಾಧಾನವಿಲ್ಲ, ನಮ್ಮ ಪಕ್ಷದ ನಿರ್ಧಾರಕ್ಕೆ ಎಲ್ಲರೂ ಒಪ್ಪಿಕ್ಕೊಳ್ಳುತ್ತಾರೆ. ಮುಂಬರುವ ವಿಧಾನ ಸಭೆಯ ಚುನಾವಣೆ ವಿಚಾರ ಸದ್ಯ ವಿಧಾನ ಪರಿಷ್ಯತ್  ಚುಣಾವಣೆ ಇದನ್ನ ಗೆಲ್ಲಬೇಕು ಅದೆ ನಮ್ಮ ಗುರಿಯಾಗಿದೆ ಎಂದರು.

click me!