ಸಿದ್ದರಾಮಯ್ಯ ಯಾರೆಂಬುದು ನಮಗೇನು ಗೊತ್ತು?: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

By Kannadaprabha News  |  First Published Sep 2, 2024, 1:01 PM IST

ಸಿದ್ದರಾಮಯ್ಯ ಟಗರೋ, ಹುಲಿಯೋ, ಸಿಂಹನೋ, ಕುರಿಯೋ ಆಗಿದ್ದರೆ ಯಾಕಿಷ್ಟು ಹೊಯ್ದಾಡ್ತಾ ಇದ್ದಾರಂತೆ. ಸುಮ್ಮನೆ ಕುಳಿತು ಬಿಡಲಿ ಹಾಗಾದರೆ...! ಸಿದ್ದರಾಮಯ್ಯ ಟಗರು ಇದ್ದಂತೆ, ಅವರನ್ನು ಬಿಜೆಪಿ ಏನೂ ಮಾಡಲು ಆಗಲ್ಲ ಎಂದು ವಸತಿ ಸಚಿವ ಜಮೀರ್ ಅಹಮದ್‌ ಖಾನ್ ಹೇಳಿದ್ದಕ್ಕೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ನೀಡಿದ ತಿರುಗೇಟು.
 


ಹುಬ್ಬಳ್ಳಿ (ಸೆ.02): ಸಿದ್ದರಾಮಯ್ಯ ಟಗರೋ, ಹುಲಿಯೋ, ಸಿಂಹನೋ, ಕುರಿಯೋ ಆಗಿದ್ದರೆ ಯಾಕಿಷ್ಟು ಹೊಯ್ದಾಡ್ತಾ ಇದ್ದಾರಂತೆ. ಸುಮ್ಮನೆ ಕುಳಿತು ಬಿಡಲಿ ಹಾಗಾದರೆ...! ಸಿದ್ದರಾಮಯ್ಯ ಟಗರು ಇದ್ದಂತೆ, ಅವರನ್ನು ಬಿಜೆಪಿ ಏನೂ ಮಾಡಲು ಆಗಲ್ಲ ಎಂದು ವಸತಿ ಸಚಿವ ಜಮೀರ್ ಅಹಮದ್‌ ಖಾನ್ ಹೇಳಿದ್ದಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೀಡಿದ ತಿರುಗೇಟು. ಸಿದ್ದರಾಮಯ್ಯ ಟಗರೋ, ಹುಲಿನೋ, ಸಿಂಹನೋ, ಕುರಿನೋ ಯಾರಿಗೆ ಗೊತ್ತು. ನಾವೇನು ಹೇಳಿಯೇ ಇಲ್ಲ. ಎಲ್ಲವನ್ನೂ ಅವರೇ ( ಕಾಂಗ್ರೆಸ್) ಹೇಳುತ್ತಾ ಇದ್ದಾರೆ. ನಾವೇನು ಹೇಳ್ತಾ ಇದ್ದೇವೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಿ ಎಂದು ಕೇಳ್ತಾ ಇದ್ದೇವೆ ಅಷ್ಟೇ ಎಂದರು.

ರಾಜಕಾರಣಕ್ಕೆ ಯುವಪೀಳಿಗೆ ಬರಲಿ: ಬಹುತೇಕ ಪಾಲಕರು ತಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಬೇಕೆಂದು ಬಯಸುತ್ತಾರೆ. ಜನಪ್ರತಿನಿಧಿ ಆಗಬೇಕೆಂದು ಬಯಸುವವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಉತ್ತಮ ರಾಜಕಾರಣಿಯ ಅವಶ್ಯಕತೆಯಿದೆ. ರಾಜಕೀಯ ಕ್ಷೇತ್ರಕ್ಕೆ ಯುವಪೀಳಿಗೆ ಬರಬೇಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಭಾರತೀಯ ಕೈಗಾರಿಕಾ ಒಕ್ಕೂಟದ ಅಂಗ ಸಂಸ್ಥೆ ಯಂಗ್ ಇಂಡಿಯನ್ಸ್ ನಗರದಲ್ಲಿ ಹಮ್ಮಿಕೊಂಡಿದ್ದ ‘ಪ್ರಾದೇಶಿಕ ಮಟ್ಟದ ಕಲ್ಪಿತ ಸಂಸತ್ ಸ್ಪರ್ಧೆ’ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Tap to resize

Latest Videos

ವೈದ್ಯಕೀಯ, ತಂತ್ರಜ್ಞಾನ, ಶಿಕ್ಷಣ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ನಾಯಕರಾಗುವಂತೆ ರಾಜಕೀಯ ನಾಯಕತ್ವದ ಅವಶ್ಯಕತೆಯೂ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜನಸಾಮಾನ್ಯರ ಬೇಕು-ಬೇಡಗಳನ್ನು ಅರ್ಥ ಮಾಡಿಕೊಳ್ಳುವ, ‌ಉತ್ತಮ ನಡತೆ ಮತ್ತು ಬದ್ಧತೆಯುಳ್ಳ ಜನಪ್ರತಿನಿಧಿ ದೇಶದ ಸ್ಥಿತಿ ಬದಲಾಯಿಸಬಲ್ಲ. ಬುದ್ಧಿವಂತರು, ಪ್ರತಿಭೆಯುಳ್ಳವರು ರಾಜಕೀಯಕ್ಕೆ ಬಂದು ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢಗೊಳಿಸಬೇಕು ಎಂದರು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ಯುವ ಸಮುದಾಯ ಗೊಂದಲಕ್ಕೆ ಒಳಗಾಗಬಾರದು. ಯುವಕರು ರಾಜಕೀಯ ಕ್ಷೇತ್ರದ ಬಗ್ಗೆ ನಕಾರಾತ್ಮಕವಾಗಿ ಯೋಚಿಸುವುದನ್ನು ಬಿಟ್ಟು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸರ್ಕಾರದ ಜೊತೆ ಕೈಜೋಡಿಸಬೇಕು ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಟಗರು, ಹುಲಿಯಿದ್ದಂತೆ ಭಯದ ಅಗತ್ಯವಿಲ್ಲ: ಸಚಿವ ಜಮೀ‌ರ್

ಪ್ರಸ್ತುತ ರಾಜಕಾರಣಿಗಳು ಅನುಭವಿಸುತ್ತಿರುವ ಕಷ್ಟ, ಎದುರಿಸುತ್ತಿರುವ ಸವಾಲುಗಳು ಜನರಿಗೆ ತಿಳಿಯುವುದಿಲ್ಲ. ಸಂಸತ್ತಿನಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಹಾರಿಕೆ ಉತ್ತರ ನೀಡುವಂತಿಲ್ಲ. ಅಧಿಕಾರಿಗಳೊಂದಿಗೆ ಸಂವಾದ ನಡೆಸಲು ಅಧ್ಯಯನ, ಪೂರ್ವ ತಯಾರಿ ಅಗತ್ಯವಿದೆ. ಪಾಕಿಸ್ತಾನದಲ್ಲಿ ಶಾಸನವಿಲ್ಲದ ಸರ್ಕಾರವಿದೆ. ಕೆಲವು ದೇಶಗಳಲ್ಲಿ ಸೇನೆಯ ಆಡಳಿತವಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತಕ್ಕೆ ಸಂವಿಧಾನ ರೂಪಿಸಿಕೊಡುವ ಮೂಲಕ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿದ್ದಾರೆ ಎಂದರು.

click me!