ಡಿಕೆಶಿ ಬೇರೆ ಪಕ್ಷದವರನ್ನು ಕರೆದುಕೊಂಡರೆ, ಕಾಂಗ್ರೆಸ್ ಶಾಸಕರೇ ಹೊರಗೆ ಹೋಗ್ತಾರೆ: ಪ್ರಹ್ಲಾದ್ ಜೋಶಿ

Published : Dec 16, 2023, 01:30 PM IST
ಡಿಕೆಶಿ ಬೇರೆ ಪಕ್ಷದವರನ್ನು ಕರೆದುಕೊಂಡರೆ, ಕಾಂಗ್ರೆಸ್ ಶಾಸಕರೇ ಹೊರಗೆ ಹೋಗ್ತಾರೆ: ಪ್ರಹ್ಲಾದ್ ಜೋಶಿ

ಸಾರಾಂಶ

ಅನ್ಯ ಪಕ್ಷಗಳಿಂದ ಬೇರೆಯವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಕರೆದುಕೊಂಡ್ರೆ ನಾವು ಪಕ್ಷದಿಂದ ಹೊರ ಹೋಗತ್ತಿವಿ ಅಂತ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ.

ಹುಬ್ಬಳ್ಳಿ (ಡಿ.16): ರಾಜ್ಯದಲ್ಲಿ ಕಾಂಗ್ರೆಸ್‌ಗೆ 136 ಶಾಸಕರ ಬೆಂಬಲವಿದ್ದರೂ ಅವರು ಪುನಃ ಬಿಜೆಪಿ ಹಾಗೂ ಜೆಡಿಎಸ್ ಶಾಸಕರನ್ನು ಸೆಳೆಯಲು ಮುಂದಾಗಿದ್ದಾರೆ. ಆದರೆ, ಅನ್ಯ ಪಕ್ಷಗಳಿಂದ ಬೇರೆಯವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಕರೆದುಕೊಂಡ್ರೆ ನಾವು ಪಕ್ಷದ ಹೊರ ಹೋಗತ್ತಿವಿ ಅಂತ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಗೆ ತಮ್ಮಲ್ಲಿದ್ದವರಿಗೆ ವ್ಯವಸ್ಥೆ ಮಾಡಲು ಆಗ್ತಿಲ್ಲ. ಇನ್ನು ಬೇರೆ ಪಕ್ಷದವರನ್ನು ಕರೆದುಕೊಂಡು ಏನು ಮಾಡ್ತಾರೆ? ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಔತಣ ಕೂಟದಲ್ಲಿ ಬಿಜೆಪಿಯ ಕೆಲ ಶಾಸಕರು ಭಾಗಿಯಾಗಿದ್ದಾರೆ ಮಾಹಿತಿ ಇದೆ. ನಾಳೆ ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ಈ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ. ಶಾಸಕರಿಗೆ ಏನಾದರೂ ವಿವರಣೆ ಕೇಳಬೇಕಾ ಅಥವಾ ಮುಂದೆ ಏನು ಮಾಡಬೇಕೆಂದು ತೀರ್ಮಾನ ಮಾಡತ್ತಿವಿ ಎಂದು ತಿಳಿಸಿದರು.

ಭಾರತದಲ್ಲಿ ವಾಸಿಸೋಕೆ ಅತ್ಯುತ್ತಮ ನಗರ ಯಾವುದು? ಬೆಂಗಳೂರಿಗೆ ಎಷ್ಟನೇ ಸ್ಥಾನ?

ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಠಿಣವಾಗುತ್ತಿದೆ. ಅವರಲ್ಲೆ ಆಂತರಿಕ ಕಚ್ಚಾಟ ನಡೆದಿದೆ. ಈಗ ಇದ್ದವರಿಗೆ ಸಚಿವ ಸ್ಥಾನಕ್ಕೆ ಕೊಡೊದವುದಕ್ಕೆ ಆಗುವುದಿಲ್ಲ. ನನಗೆ ಮುಖ್ಯ ಮಂತ್ರಿ ಮಾಡಿಲ್ಲ, ನಿನಗೆ ಸಚಿವನ ಮಾಡಿಲ್ಲ, ನಿಗಮ ಮಂಡಳಿ ಕೊಟ್ಟಿಲ್ಲ ಅಂತ ಜಗಳ ಶುರುವಾಗಿದೆ. ಆಡಳಿತ ಯಂತ್ರ ಸಂಪೂರ್ಣ ಕುಸಿದು ಬಿದ್ದಿದೆ. ಸದ್ಯ ಮಾಧ್ಯಮಗಳು ನಡೆಸಿರುವ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ 20- 22 ಸೀಟ್ ಬಿಜೆಪಿ ಗೆಲುವು ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಸಿದ್ಧಾಂತ ಒಪ್ಪದ ಮಾಧ್ಯಮಗಳ ಸಮೀಕ್ಷೆಯಲ್ಲಿ ಬಿಜೆಪಿ ವಾಪಸು ಅಧಿಕಾರಕ್ಕೆ ಬರೋದು ಪಕ್ಕಾ ಆಗಿದೆ. ನಾವು 25 ಸಿಟ್ ಗೆಲ್ಲುತ್ತೇವೆ ಎಂದರು.

ಕೆಲವು ಸಂದರ್ಭದಲ್ಲಿ ನಾವು ತೆಗೆದುಕೊಂಡ ನಿರ್ಧಾರದಿಂದ ನಾವು ಕರ್ನಾಟಕದಲ್ಲಿ ಸೋತ್ತಿದ್ದಿವೆ. ಆದರೆ ಈಗಾಗಲೇ ಕಾಂಗ್ರೆಸ್ ಡೌನ್ ಫಾಲ್ ಶುರುವಾಗಿದೆ. 136 ಶಾಸಕರುಗಳಿಗೆ ಸ್ಥಾನ ನೀಡಲು ಕಾಂಗ್ರೆಸ್ ಗೆ ಜಾಗನು ಇಲ್ಲ. ಅವರಿಗೆ ಈಗ ಸಮಯನೂ ಇಲ್ಲ, ವ್ಯವಧಾನ ಇಲ್ಲ. ಡಿ.ಕೆ. ಶಿವಕುಮಾರ್ ಸುಮ್ಮನೆ 10 ಮಂದಿ ಪಕ್ಷಕ್ಕೆ ಬರುತ್ತಾರೆ ಅಂತ ಹೇಳತ್ತಾರೆ. ಕಾಂಗ್ರೆಸ್‌ಗೆ ಬರುವವರನ್ನು ತೆಗೆದುಕೊಳ್ಳಲು ಅವರಿಗೂ ಆಗಲ್ಲ. ಮುಖ್ಯವಾಗಿ ಬೇರೆಯವರನ್ನು ಪಕ್ಷಕ್ಕೆ ಕರೆದುಕೊಂಡರೆ ನಾವು ಪಕ್ಷದಿಂದ ಹೊರಗೆ ಹೋಗತ್ತಿವಿ ಅಂತ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಅವರು ಯಾರು ಅಂತ ನನಗೆ ಗೊತ್ತು. ಆದರೆ ನಾವು ಅವರ ಹೆಸರು ಹೇಳಲ್ಲ. ಕಾಂಗ್ರೆಸ್ ಪಾರ್ಟಿಯಲ್ಲಿ ಕರ್ನಾಟಕದಲ್ಲಿ ಬರುವ ಎಲ್ಲಾ ಚುನಾವಣೆಯಲ್ಲಿ ಸೋಲುತ್ತದೆ. ಇನ್ನು ಸೋಮಣ್ಣ ನನ್ನ ಜೊತೆಗೆ ಮಾತನಾಡಿದ್ದಾರೆ. ಅಧಿವೇಶನ ಮುಗಿದ ಬಿಳಿಕ ನಾನು ಕುಳಿತು ಮಾತನಾಡುತ್ತೆನೆ ಏನೆ ಸಮಸ್ಯೆ ಇದ್ದರು ಅದನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಹೆಂಡತಿಯನ್ನು ಬಳಸಿಕೊಂಡು ಗಂಡನಿಂದ ಉದ್ಯಮಿಯ ಹನಿಟ್ರ್ಯಾಪ್, ಲಾಡ್ಜ್‌ನಲ್ಲಿದ್ದಾಗ ಸಿಸಿಬಿ ಬಲೆಗೆ!

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅನೈತಿಕತೆಗೆ ಕುಮ್ಮಕ್ಕು ಕೊಡಲಾಗ್ತಿದೆ: ಇನ್ನು ಬೆಳಗಾವಿಯಲ್ಲಿ ನಡೆದಂತಹ ಘಟನೆ ನಾಗರೀಕ‌ ಸಮಾಜ‌ ತಲೆ ತಗ್ಗಿಸುವಂತದ್ದಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಜಸ್ಥಾನದಲ್ಲೂ ಸಹ ಇದೇ ಪರಿಸ್ಥಿತಿ‌ ಇತ್ತು. 16 ಪ್ರತಿಶತ ಕ್ರೈಂ ಮಹಿಳೆಯರ ಮೇಲೆ ಆಗುತ್ತಿತ್ತು. ಎಲ್ಲೆಲ್ಲಿ ಕಾಂಗ್ರೆಸ್ ಸರ್ಕಾರ ಇದೆಯೋ ಇದೇ ರೀತಿ ಘಟನೆಗಳು ನಡಯುತ್ತಿವೆ. ಅನೈತಿಕತೆಗೆ ಕಾಂಗ್ರೆಸ್ ಕುಮ್ಮಕ್ಕು ಕೊಡುತ್ತಿರೋದೇ ಇದಕ್ಕೆ ಕಾರಣ. ಅಪರಾಧ ಜಗತ್ತು ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅವಿನಾಭಾವ ನಂಟಿದೆ. ಹಾಗಾಗಿ, ಈ ರೀತಿಯ ಘಟನೆಗಳು ನಡೆಯುತ್ತಿವೆ. ಸರ್ಕಾರದ ಮೇಲೆ ತೀವ್ರ ಒತ್ತಡ ಹಾಕುವ ಕೆಲಸ ಬಿಜೆಪಿಯಿಂದಲೂ ಸಹ ನಡೆಯುತ್ತಿದೆ. ಇವತ್ತು ರಾಷ್ಟ್ರೀಯ ಮಹಿಳಾ ಆಯೋಗ ಬೆಳಗಾವಿಗೆ ಭೇಟಿ ನೀಡುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮಹಿಳಾ ಸಂಸದರ ತಂಡ ಒಂದನ್ನು ಕಳಿಸಿದ್ದಾರೆ. ಈ ರೀತಿಯ ಘಟನೆಗಳು ಪುನರಾವರ್ತನೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ
ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್