ಸಮಸ್ಯೆ ಕೇಳದೆ ಅಧಿವೇಶನದಲ್ಲಿ ರಾಜಕಾರಣ ಮಾಡಿದ ಬಿಜೆಪಿ: ಸಚಿವ ತಿಮ್ಮಾಪುರ ಕಿಡಿ

Published : Dec 16, 2023, 01:14 PM IST
ಸಮಸ್ಯೆ ಕೇಳದೆ ಅಧಿವೇಶನದಲ್ಲಿ ರಾಜಕಾರಣ ಮಾಡಿದ ಬಿಜೆಪಿ: ಸಚಿವ ತಿಮ್ಮಾಪುರ ಕಿಡಿ

ಸಾರಾಂಶ

ಉತ್ತರ ಕರ್ನಾಟಕದಲ್ಲಿ ಚಳಿಗಾಲದ ಅಧಿವೇಶನ ನಡೆಸಿದ್ದೇವೆ. ದುರ್ದೈವ ಎಂದರೆ ಇಲ್ಲಿನ ಸಮಸ್ಯೆಗಳನ್ನು ಕೇಳದೇ ಬಿಜೆಪಿ ರಾಜಕಾರಣ ಮಾಡಿದೆ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಕಿಡಿಕಾರಿದರು. 

ಬೆಳಗಾವಿ (ಡಿ.16): ಉತ್ತರ ಕರ್ನಾಟಕದಲ್ಲಿ ಚಳಿಗಾಲದ ಅಧಿವೇಶನ ನಡೆಸಿದ್ದೇವೆ. ದುರ್ದೈವ ಎಂದರೆ ಇಲ್ಲಿನ ಸಮಸ್ಯೆಗಳನ್ನು ಕೇಳದೇ ಬಿಜೆಪಿ ರಾಜಕಾರಣ ಮಾಡಿದೆ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಕಿಡಿಕಾರಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ರೈತರ ಕೆಲಸ, ನೀರಾವರಿ ಕೆಲಸ ಆಗಬೇಕು ಎಂದು ಕೇಳಲಿಲ್ಲ. ಸದನದ ಸಮಯವನ್ನು ಸಂಪೂರ್ಣವಾಗಿ ಹಾಳು ಮಾಡಿದರು. ನಮ್ಮ ಕಾರ್ಯಕರ್ತರನ್ನು ಬಡಿದರು.

ಪೊಲೀಸರನ್ನು ಬೈಯ್ದದ್ದನ್ನು ಬಿಟ್ಟು ಏನೂ ಮಾಡಲಿಲ್ಲ. ಅವರ ರಾಜಕೀಯ ತೀಟೆಗಾಗಿ ಅಧಿವೇಶನ ಉಪಯೋಗ ಮಾಡಿಕೊಂಡರು ಎಂದು ವಾಗ್ದಾಳಿ ನಡೆಸಿದರು. ಸಿಎಂ ಸೇರಿ ಐವರನ್ನು ರಾಕ್ಷಸ ಗಣದವರು ಎಂಬ ಕೆ.ಎಸ್‌.ಈಶ್ವರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪನ ಕಣ್ಣಲ್ಲಿ ನಮ್ಮವರು ರಾಕ್ಷಸ ರೀತಿ ಕಾಣುತ್ತಾರೆ. ರಾಜ್ಯದ ಜನರು ರಾಕ್ಷಸರನ್ನು ಆಯ್ಕೆ ಮಾಡಿ ಕಳಿಸುತ್ತಾರಾ? ಮಾತು ನಡವಳಿಕೆ ಹೇಗಿರಬೇಕು ಈಶ್ವರಪ್ಪನವರಿಗೆ ಗೊತ್ತಿಲ್ಲ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಿತ್ಯ 85 ಜನರಿಗೆ ಕಚ್ಚುತ್ತಿವೆ ನಾಯಿಗಳು: ಬಿಬಿಎಂಪಿ ಅಂಕಿ ಅಂಶದಲ್ಲಿ ಏನಿದೆ?

ಮುಸ್ಲಿಂರಿಗೆ ಸಂಪತ್ತು ಕೊಡುವುದರಲ್ಲಿ ತಪ್ಪೇನು?: ಮುಸ್ಲಿಮರು ಈ ನಾಡಿನವರು. ಅವರಿಗೂ ನಮ್ಮಷ್ಟೇ ಹಕ್ಕಿದೆ. ನಾಡಿನ ಸಂಪತ್ತನ್ನು ಮುಸ್ಲಿಮರಿಗೆ ಕೊಡುವುದರಲ್ಲಿ ತಪ್ಪೇನು? ಎಂದು ಸಚಿವ ಆರ್‌.ಬಿ. ತಿಮ್ಮಾಪುರ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿರುವ ಮುಸ್ಲಿಮರು ನಮ್ಮವರಲ್ಲವಾ?. ಅವರನ್ನ ಪಾಕಿಸ್ತಾನಕ್ಕೆ ಕಳುಹಿಸಬೇಕಾ? ಬೆಳಗ್ಗೆ ಎದ್ದರೆ ಹಿಂದು- ಮುಸ್ಲಿಂ ಗಲಾಟೆ, ಗದ್ದಲ ಮಾಡಿಸುವುದು ಈ ದೇಶದ ಸಂಸ್ಕೃತಿಯಲ್ಲ. ಅವರಿಗೂ ಈ ನಾಡಿನ ಮೇಲೆ ಹಕ್ಕಿದೆ. 

ಎಲ್ಲ ಸಮಾಜಕ್ಕೆ ನೀಡುವಂತೆ ಮುಸ್ಲಿಮರಿಗೂ ಹಕ್ಕು ನೀಡುತ್ತೇವೆ. ಇದರಲ್ಲಿ ತಪ್ಪೇನು? ಎಂದರು. ಮುಸ್ಲಿಂ ಸಮುದಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಓಲೈಕೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ತಿಮ್ಮಾಪುರ, ಮತ್ತೆ ಬಿಜೆಪಿಯವರು ಏನು ಮಾಡುತ್ತಿದ್ದಾರೆ? ಅವರು ಹಿಂದುಗಳನ್ನು ಓಲೈಕೆ ಮಾಡುತ್ತಿಲ್ಲವಾ? ಎಲ್ಲೆಂದರಲ್ಲಿ ಮುಸ್ಲಿಮರ ಮೇಲೆ ಗಲಾಟೆ ಮಾಡಿಸುತ್ತಿದ್ದಾರೆ. ನಾವೇನು ಹಿಂದೂಗಳಲ್ಲವಾ? ಮುಖ್ಯಮಂತ್ರಿಗಳು ಹಿಂದೂಗಳಲ್ಲವಾ? ಬಿಜೆಪಿಯವರು ಹಿಂದೂ ಇವರ ಮನೆಯ ಆಸ್ತಿಯಂತೆ ಮಾತನಾಡುತ್ತಿದ್ದಾರೆ. 

ಹಾಲಿನ ದರ ಏರಿಕೆಗೆ ಮುಖ್ಯಮಂತ್ರಿ ಸೂಚನೆ ನೀಡಿಲ್ಲ: ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ

ಅಸಹಾಯಕರಿಗೆ ಸಹಾಯ ಮಾಡುತ್ತಿರುವಾಗ ಈ ರೀತಿಯ ಹಿಂದುತ್ವ ಪದ ತರುವುದು ಸರಿಯಲ್ಲ. ಇದು ಈ ದೇಶದ ಸಂಸ್ಕೃತಿಯಲ್ಲ. ಎಲ್ಲರನ್ನೂ ಸಮಾನವಾಗಿ ದೇಶದ ಅಭಿವೃದ್ಧಿಯ ಕಡೆ ಒಯ್ಯುವ ಭಾವನೆ ಒಬ್ಬ ರಾಜಕಾರಣಿಗೆ ಬರಬೇಕು ಎಂದು ಪ್ರತಿಪಾದಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಮರಿಗೆ ಈ ದೇಶದ ಸಂಪತ್ತು ಹಂಚುತ್ತೇವೆ ಎಂದು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ. ಎಲ್ಲರಂತೆ ಮುಸ್ಲಿಮರಿಗೂ ಈ ನೆಲದ‌ ಮೇಲೆ ಹಕ್ಕಿದೆ. ಅವರಿಗಿರುವ ಹಕ್ಕು ಕೊಡುವುದರಲ್ಲಿ ತಪ್ಪೇನಿದೆ? ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್