ಹೆಚ್‌ಡಿಕೆ ಮತ್ತು ಸಿದ್ದರಾಮಯ್ಯ ವಿರುದ್ಧ ಪ್ರಹ್ಲಾದ್ ಜೋಶಿ ಕಿಡಿ

Published : Jan 06, 2023, 06:15 PM IST
ಹೆಚ್‌ಡಿಕೆ ಮತ್ತು  ಸಿದ್ದರಾಮಯ್ಯ  ವಿರುದ್ಧ ಪ್ರಹ್ಲಾದ್ ಜೋಶಿ ಕಿಡಿ

ಸಾರಾಂಶ

 ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು  ಮಾಜಿ‌ ಸಿಎಂ ಕುಮಾರಸ್ವಾಮಿ, ಮತ್ತು ಸಿದ್ದರಾಮಯ್ಯ ಅವರ ವಿರುದ್ದ ಕಿಡಿಕಾರಿದ್ದಾರೆ. ಚುನಾವಣೆಗೆ ಬಂದಿದೆ ಅಂದರೆ ಚಿಲ್ಲರೆ ಲೆವೆಲ್ ಗೆ ಇಳಿಯಬಾರದು ಯಾರು ಯಾರ ಬಗ್ಗೆನೂ ಮಾತನಾಡಬಾರದು ಎಂದಿದ್ದಾರೆ.

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್  

ಧಾರವಾಡ (ಜ.6): ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು  ಮಾಜಿ‌ ಸಿಎಂ ಕುಮಾರಸ್ವಾಮಿ, ಮತ್ತು ಸಿದ್ದರಾಮಯ್ಯ ಅವರ ವಿರುದ್ದ ಕಿಡಿ ಕಾರಿದರು. ಸಿದ್ದರಾಮಯ್ಯ ಅವರು ಘನತೆ ಗೌರವ ಬಿಟ್ಟು ಮಾತನಾಡುತ್ತಿದ್ದಾರೆ. ಸೆಂಟ್ರೋ ರವಿ ರೌಡಿಶಿಟರ್ ಬಗ್ಗೆ ಸಿಎಂ ಹೇಳಿದ್ದಾರೆ ಎನ್ ಪ್ರತಿಕ್ರಿಯೆ ಕೊಡಬೇಕು ಅದನ್ನ ಪ್ರತಿಕ್ರಿಯೆ ನೀಡಿದ್ದಾರೆ ನಾವು ಯಾವುದೇ ಆಧಾರ ಇಲ್ಲದೆ ಮಾತನಾಡಬಾರದು. ಒಬ್ಬರು ನಾಯಿ‌ ಅಂತ ಮಾತನಾಡುತ್ತಾರೆ, ಒಬ್ರು ಸೆಂಟ್ರೋ ರವಿ ಅಂತ ಮಾತಾಡ್ತಾರೆ ಚುನಾವಣೆಗೆ ಬಂದಿದೆ ಅಂದರೆ ಚಿಲ್ಲರೆ ಲೆವೆಲ್ ಗೆ ಇಳಿಯಬಾರದು ಯಾರು ಯಾರ ಬಗ್ಗೆನೂ ಮಾತನಾಡಬಾರದು. ಸೆಂಟ್ರೋ ರವಿ, ಸೈಲೆಂಟ್ ಸುನಿಲ್, ಎನಿದೆಲ್ಲ ಈ ತರಹದ ವಿಷಯಗಳ ಬಗ್ಗೆ ದೂರು ದಾಖಲಿಸಿ ಎಂದು ಎದುರಾಳಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

ಕುಮಾರಸ್ವಾಮಿ ಪಾರ್ಟಿ ಅಂದ್ರೆ ಹೆಂಗೆ‌ ಎಂದು ಕುಮಾರಸ್ವಾಮಿ ಗೆ ಟಾಂಗ್ ಕೊಟ್ಟ ಜೋಶಿ,  ಆರ್ ದಿ ಪ್ಯಾಮಲಿ, ಆಪ್ ದಿ ಪ್ಯಾಮಿಲಿ, ಬೈದಿ ಪ್ಯಾಮಲಿ ಅದನ್ನ ಬಿಟ್ರೆ ಅವರಿಗೆ ಎನ್ ಗೊತ್ತಿದೆ ರಸ್ತೆ ಗಳಿಗೆ ರೇವಣ್ಣ ಕುಮಾರಸ್ವಾಮಿ, ಬ್ರಿಡ್ಜಗಳಿಗೆ ಪ್ರಜ್ವಲ್ ರೇವಣ್ಣ ಹೆಸರಿಡಿ ಅಂಡರ್ ಪಾಸ್ ರಸ್ತೆಗಳಿಗೆ ನಿಖಿಲ್ ಕುಮಾರಸ್ವಾಮಿ‌ ಹೆಸರು ಇಡಿ, ಮೇಲ್ ಸೇತುವೆಯ ರಸ್ತೆಗಳಿಗೆ ಅನಿತಾ ಕುಮಾರಸ್ವಾಮಿ ಹೆಸರಿಡಿ ಇದೆ ಎಲ್ಲ‌ ನಡೆದು ಕ್ಕೊಂಡು ಬಂದಿದೆ ಇದು ಕುಮಾರಸ್ವಾಮಿಯ ಕಥೆಯಾಯ್ತು.? ಎಂದು ಮಾಜಿ‌ ಸಿಎಂ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದರು.

 ಇನ್ನು ಸಿದ್ದರಾಮಯ್ಯ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಜೋಶಿ ಸಿದ್ದರಾಮಯ್ಯ ಅವರು ಒಬ್ಬ ಲೀಡರ್ ಅವರ ಬಗ್ಗೆ ನನಗೆ ಗೌರವವಿದೆ. ರಾಹುಲ್ ಗಾಂಧಿಯ ಎದುರು ಕೈ ಕಟ್ಟಿ ಕುಳಿತುಕೊಳ್ಳುತ್ತಾರೆ. ಬೊಮ್ಮಾಯಿ‌ ಬಗ್ಗೆ‌ ಮಾತನಾಡುತ್ತಾರೆ ಪ್ರಧಾನಿ ಮೋದಿ ಅವರು ಚುನಾಯಿತ ನಾಯಕ, ಜನರಿಂದ ಆಯ್ಕೆ‌ ಆದವರು, ಅವರು ಸೆಲೆಕ್ಡೆಡ್ ಅಲ್ಲ, ಇಲೆಕ್ಟೆಡ್ ನಾಯಕ ಅವರು ನಿಮ್ಮಲ್ಲಿ ಸೆಲೆಕ್ಟೆಡ್ ನಾಯಕರ ಮುಂದೆ ಹೋಗಿ ಕೈ ಕಟ್ಟುತ್ತಿರಿ, 5 ವರ್ಷ ಸಿಎಂ ಆದವರು, 11 ಬಜೆಟ್ ಮಂಡಿಸಿದವರು ನೀವು ಅವರ ಮುಂದೆ ಕೈ ಕಟ್ಟುತ್ತೀರಿ , ನಿಮಗೆ ಅಪಾಯಿಂಟ್ ಮೆಂಟ್ ಸಿಗ್ತಿರಲಿಲ್ಲ ಭೇಟಿಗೆ ಅನ್ನೋದನ್ನ ಮರೆಯಬೇಡಿ ಯುಪಿಎ ಸರಕಾರ ಇದ್ದಾಗ ಇದೆ‌ ಸಿದ್ದರಾಮಯ್ಯಗೆ ಬೇಟಿಗೆ ಅವಕಾಶ ಸಿಗ್ತಾ‌ ಇರಲಿಲ್ಲ ಮೋದಿ‌ ಅವರು ಎಲ್ಲರಿಗೂ ಸಿಗ್ತಾರೆ ಮೋದಿ‌ ಅವರು ಆಡಳಿತ ಮಾಡಿ ಬಂದವರು.

ಬೊಮ್ಮಾಯಿ ನಾಯಿಮರಿ ಹೇಳಿಕೆ ಸಮರ್ಥಿಸಿದ ಸಿದ್ದು

ರಾಹುಲ್‌ ಗಾಂಧಿ ಅವರನ್ನ‌ ಭೇಟಿಯಾದಾಗ ಕಾಂಗ್ರೆಸ್ ನಾಯಕರುಗಳು ಹೋದಾಗ ನಾಯಿಗೆ ಬಿಸ್ಕಿಟ್ ಹಾಕ್ಕೊಂತ ಮಾತನಾಡಿದ್ದಾರೆ ಇವರು ನಾಯಿ‌ ಬಗ್ಗೆ‌ ಮಾತನಾಡುತ್ತಾರೆ, ಸಿದ್ದರಾಮಯ್ಯ ಅವರೆ ಪಾಲಿಟಿಕಲ್ ಆಗಿ ನಮಗೆ ನಿಮಗೆ ಬಹಳ ವ್ಯತ್ಯಾಸವಿದೆ ನಿಮ್ಮ ಬ್ರಷ್ಟಾಚಾರದ ಬಗ್ಗೆ‌ ವಿರೋಧವಿದೆ ನೀವು ಮಾಜಿ‌ ಸಿಎಂ ಆಗಿದ್ರಿ, ಲೋ ಲೇವಲ್ ಮಾತನಾಡೋದು ಬಿಡಿ ನಿಮ್ಮ ಘನತೆಗೆ‌ ಇದು ಒಪ್ಪಲ್ಲ ರಾಜಕಾರಣದಲ್ಲಿರುವವರನ್ನ ಲೋ ಲೇವಲ್ ಇಳಿಸಬೇಡಿ ಎಂದ ಜೋಶಿ.

ನಾವು ಸಿದ್ದರಾಮಯ್ಯರನ್ನ ಹಂದಿ, ಕತ್ತೆ, ಕೋಣ ಎಂದು ಕರೆಯುತ್ತೇವೆ; ಹಳ್ಳಿ ಭಾಷೆ ನಮಗೂ ಬರುತ್ತೆ : ಈಶ್ವರಪ್ಪ

ಸಿದ್ದರಾಮಯ್ಯ ಗೆ ಹುಲಿ ಮರಿ ‌ಅನ್ನಾಕೆ ಆಗುತ್ತಾ? ಯಾರು ಅನುದಾನ ಎಷ್ಟು ತಂದಿರಿ ಎಲ್ಲವೂ ಗೊತ್ತಿದೆ. 2014 ರಲ್ಲಿ 91 ಸಾವಿರ ಕೋಟಿ ಹಣ ಬಿಡುಗಡೆ ಯಾಗಿತ್ತು. ಆದರೆ ಇಗ 1,41,000 ಕೋಟಿ ಅನುದಾನ ಬರ್ತಾ ಇದೆ ಎಂದು  ಮಾಜಿ‌ ಸಿಎಂ ಸಿದ್ದರಾಮಯ್ಯ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!
ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?