ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಬಡವರ ಬಗ್ಗೆ ಗೊತ್ತಿಲ್ಲ. ಅದಕ್ಕಾಗಿಯೇ ಬಡವರಿಗಾಗಿ ರೂಪಿಸಿದ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡುತ್ತಿದ್ದಾರೆÜ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.
ವಿಜಯಪುರ (ಜು.9) : ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಬಡವರ ಬಗ್ಗೆ ಗೊತ್ತಿಲ್ಲ. ಅದಕ್ಕಾಗಿಯೇ ಬಡವರಿಗಾಗಿ ರೂಪಿಸಿದ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡುತ್ತಿದ್ದಾರೆÜ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಹ್ಲಾದ ಜೋಶಿ ಅವರು ಹೊಟ್ಟೆಉರಿಯಿಂದಾಗಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಟೀಕಿಸುತ್ತಿದ್ದಾರೆ. ಕೇಂದ್ರ ಸಚಿವ ಜೋಶಿ ಅವರು ಬಹಳ ತಿಳಿದುಕೊಂಡವರು. ಅವರು ಹೀಗೆ ಮಾತನಾಡಬಾರದು. ಬಡವರ ಬಗ್ಗೆ ಜೋಶಿಯವರಿಗೆ ಗೊತ್ತಿಲ್ಲ. ಗೊತ್ತಿದ್ದರೆ ಅವರು ಈ ರೀತಿ ಮಾತನಾಡುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿ ನಾಯಕರ ವಿರುದ್ಧ ಎಂ.ಬಿ.ಪಾಟೀಲ್ ಹೊಸ ಬಾಂಬ್: ವಿಪಕ್ಷ ನಾಯಕನ ಆಯ್ಕೆಗೆ ಕೋಟಿ ಕೋಟಿ ಡೀಲ್ ?
ಭಾಗ್ಯಗಳನ್ನು ನಾವು ಶ್ರೀಮಂತರಿಗೆ ನೀಡುತ್ತಿಲ್ಲ. ಅನ್ನಭಾಗ್ಯ, ಬಸ್‌ಪಾಸ್, 200 ಯುನಿಟ್ ವಿದ್ಯುತ್, ಯುವನಿಧಿ ಶ್ರೀಮಂತರಿಗೆ ನೀಡಿಲ್ಲ. ಬಡವರಿಗೆ ನೀಡಿದ್ದೇವೆ ಎಂದ ಅವರು, ಬಿಜೆಪಿಯವರು ವಿರೋಧ ಪಕ್ಷದ ಸ್ಥಾನವನ್ನು ಸೇಲ್‌ಗೆ ಇಟ್ಟಿದ್ದಾರೆಯೇ ಏನೋ ನೋಡಿ ಎಂದು ಕುಟುಕಿದರು.
ಮುಖ್ಯಮಂತ್ರಿ ಸ್ಥಾನವನ್ನು ಸೇಲ್‌ಗೆ ಇಟ್ಟರೀತಿಯಲ್ಲಿ ಬಿಜೆಪಿಯವರು ವಿರೋಧ ಪÜಕ್ಷದ ನಾಯಕನ ಸ್ಥಾನವನ್ನು ಮಾರಾಟಕ್ಕೆ ಇಟ್ಟರಾ? ವಿರೋಧ ಪಕ್ಷದ ಸ್ಥಾನಕ್ಕೆ ನೂರಾರು ಕೋಟಿ ನಿಗದಿ ಮಾಡಿದ್ದಾರೋ ಏನೋ ಯಾರಿಗೆ ಗೊತ್ತು ಎಂದು ಬಿಜೆಪಿ ವರಿಷ್ಠರನ್ನು ಲೇವಡಿ ಮಾಡಿದರು.
ಪಠ್ಯಕ್ರಮದಲ್ಲಿನ ಲೋಪಗಳನ್ನು ತಿದ್ದುಪಡಿ ಮಾಡಲು ಪಠ್ಯ ಪುಸ್ತಕ ಪರಿಷ್ಕರಣೆ ಮಾಡುತ್ತಿದ್ದೇವೆ. ರಾಷ್ಟ್ರ ನಾಯಕರ ಪಠ್ಯವನ್ನು ಅಳವಡಿಸಲಾಗುವುದು. ಬಸವಾದಿ ಶರಣರು, ಡಾ.ಅಂಬೇಡ್ಕರ್, ನಾರಾಯಣಗುರು, ಕುವೆಂಪು, ವಿವೇಕಾನಂದರು, ಭಗತ್‌ಸಿಂಗ್, ಮಹಾತ್ಮ ಗಾಂಧೀಜಿ, ಸುಭಾಶ್ಚಂದ್ರ ಭೋಸ್ ಪಠ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಸಿದ್ದೇಶ್ವರ ಸ್ವಾಮಿಗಳು, ಸಿದ್ದಗಂಗಾ ಸ್ವಾಮೀಜಿ, ಆದಿಚುಂಚನಗಿರಿ ಸ್ವಾಮೀಜಿ ಸೇರಿದಂತೆ ಅನೇಕ ಪುಣ್ಯ ಪುರುಷರ ಚರಿತ್ರೆ ಹಾಗೂ ಅವರು ಬರೆದ ವಿಷಯಗಳು ಪಠ್ಯದಲ್ಲಿ ಅಳವಡಿಕೆ ಆಗಬೇಕು ಎನ್ಮುವುದು ನನ್ನ ಆಶಯವಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14ನೇ ಬಜೆಟ್ ಮಂಡಿಸಿದ್ದಾರೆ. 5 ಗ್ಯಾರಂಟಿಗಳ ಅನುಷ್ಠಾನಕ್ಕೆ ಅಂದಾಜು . 52000 ಕೋಟಿ ತಗುಲಲಿದೆ. ಪ್ರಸಕ್ತ ವರ್ಷ .36000 ಕೋಟಿ ಅನುದಾನ ಒದಗಿಸುವ ಕೆಲಸ ಮಾಡಿದ್ದಾರೆ. ರೈತರಿಗೆ ಐದು ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡಲಾಗುವುದು. ಈ ಬಜೆಟ್‌ನಿಂದ ಅಭಿವೃದ್ಧಿಗೆ ಪೆಟ್ಟು ಬೀಳುತ್ತದೆ ಎಂದು ಜನರು ಮಾತನಾಡುತ್ತಿದ್ದರು. ಅದು ಹುಸಿಯಾಗಿದೆ ಎಂದರು.
ಆರ್ಥಿಕ ಶಿಸ್ತಿನ ಒಳಗಡೆಯೇ ಕೆಲಸ ಮಾಡಲಾಗಿದೆ. ಬಿಜೆಪಿಯವರು ತಪ್ಪು ಮಾಡಿದ್ದರು. ಬಜೆಟ್‌ನಲ್ಲಿ ಅದನ್ನು ಸರಿಪಡಿಸಲಾಗಿದೆ. ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ ಸೇರಿದಂತೆ ಇತರೆಡೆ ಬಜೆಟ್‌ಗಿಂತ ಹೆಚ್ಚಿನ ಹಣಕ್ಕೆ ಟೆಂಡರ್ ಕರೆಯಲಾಗಿತ್ತು ಎಂದು ತಿಳಿಸಿದರು.
ಸಿಎಂ ಆಗಲು 2400 ಕೋಟಿ ಬೇಕು: ಯತ್ನಾಳ್ ಹಳೆ ಹೇಳಿಕೆ ಜಟಾಪಟಿ
ಬೆಂಗಳೂರು ಅಭಿವೃದ್ಧಿಯಲ್ಲಿ ಭ್ರಷ್ಟಾಚಾರವಾಗಿದೆ. ಇದೆಲ್ಲವನ್ನು ಮುಖ್ಯಮಂತ್ರಿಗಳು ಬಜೆಟ್ ಪುಸ್ತಕದಲ್ಲಿಯೇ ಎಕ್ಸ್‌ಪೋಸ್ ಮಾಡಿದ್ದಾರೆ ಎಂದ ಅವರು, ಜಿಲ್ಲೆಗೆ ಒಂದರಂತೆ ಇರುವ ಗೋಶಾಲೆಗಳ ರದ್ದತಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಎಂ.ಬಿ.ಪಾಟೀಲ, ಗೋಶಾಲೆ ನಮ್ಮಲ್ಲಿವೆ. ಇರುವ ಗೋಶಾಲೆ ನಡೆಸುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಗೋಶಾಲೆಗೆ ಬೇಕಾದ ಸೌಲಭ್ಯ ಕಲ್ಪಿಸಲು ಸಂಪೂರ್ಣ ಬೆಂಬಲ ನೀಡುತ್ತೇನೆ. ಈಗಾಗಲೇ ಜಿಲ್ಲೆಯಲ್ಲಿ ಇರುವ ಗೋಶಾಲೆಗಳಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆÜ ಎಂದರು.