Latest Videos

ದುರಹಂಕಾರದಿಂದ ಜನರನ್ನು ಹೆದರಿಸಲಾಗೊಲ್ಲ; ಡಿಕೆ ಬ್ರದರ್ಸ್ ವಿರುದ್ಧ ಗುಡುಗಿದ ಕೇಂದ್ರ ಸಚಿವ ಕುಮಾರಸ್ವಾಮಿ

By Sathish Kumar KHFirst Published Jun 15, 2024, 8:22 PM IST
Highlights

ದುರಂಕಾರದಿಂದ ಜನರನ್ನ ಹೆದರಿಸಲು ಆಗಲ್ಲ. ಡಾ.ಸಿ.ಎನ್. ಮಂಜುನಾಥ್ ಅವರನ್ನು ಗೆಲ್ಲಿಸುವ ಮೂಲಕ ಜನರೇ ಅವರಿಗೆ ಪಾಠ ಕಲಿಸಿದ್ದಾರೆ ಎಂದು ಡಿ.ಕೆ. ಬ್ರದರ್ಸ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ರಾಮನಗರ (ಜೂ.15): ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ನಮ್ಮನ್ನ ಸೋಲಿಸುವವರು ಇಲ್ಲ ಅಂತ ಕೆಲವರು ದುರಹಂಕಾರ ತೋರಿದ್ದರು. ಆದರೆ, ದುರಂಕಾರದಿಂದ ಜನರನ್ನ ಹೆದರಿಸಲು ಆಗಲ್ಲ. ಡಾ.ಸಿ.ಎನ್. ಮಂಜುನಾಥ್ ಅವರನ್ನು ಗೆಲ್ಲಿಸುವ ಮೂಲಕ ಜನರೇ ಅವರಿಗೆ ಪಾಠ ಕಲಿಸಿದ್ದಾರೆ ಎಂದು ಡಿ.ಕೆ. ಬ್ರದರ್ಸ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಕೇಂದ್ರ ಸಚಿವರಾದ ನಂತರ ತಮ್ಮ ವಿಧಾನಸಭಾ ಕ್ಷೇತ್ರ ಚನ್ನಪಟ್ಟಣದಲ್ಲಿ ಪಕ್ಷ ಕಾರ್ಯಕರ್ತರು ಹಾಗೂ ಮುಖಂಡರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಡಾ.ಮಂಜುನಾಥ್ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ನಮ್ಮನ್ನ ಸೋಲಿಸುವವರು ಇಲ್ಲ ಅಂತ ಕೆಲವರು ದುರಹಂಕಾರ ತೋರಿದ್ದರು. ಕೆಲಸ ಮಾಡಿದ್ದೀವಿ ಕೂಲಿ ಕೇಳ್ತೀವಿ ಅಂದರು. ಹಾಗಿದ್ರೆ ನಾವೇನು ಕೆಲಸ ಮಾಡಿಲ್ವಾ.? ಅವರು ಸಾಕ್ಷಿಗುಡ್ಡೆ ಮಾಡಿದ್ದೀವಿ ಅಂತ ಹೇಳ್ಕೊತಾರೆ. ಆ ಸಾಕ್ಷಿಗುಡ್ಡೆ ಇರೋದು ಕನಕಪುರದಲ್ಲಿ ಮಾತ್ರ. ಉಳಿದ ಕ್ಷೇತ್ರದಲ್ಲಿ ನಿಮ್ಮ ಕೊಡುಗೆ ಏನು.? ಈಗ ಚನ್ನಪಟ್ಟಣದ ಮೇಲೆ ಅವರು ಕಣ್ಣುಹಾಕಿದ್ದಾರೆ. ಆದರೆ, ಚನ್ನಪಟ್ಟಣದ ಜನ ಅವರಿಗೆ ಮಣೆ ಹಾಕಲ್ಲ ಎಂಬುದು ಗೊತ್ತಿದೆ. ದುರಂಕಾರದಿಂದ ಜನರನ್ನ ಹೆದರಿಸಲು ಆಗಲ್ಲ ಎಂದು ವಾಗ್ದಾಳಿ ಮಾಡಿದರು.

ದರ್ಶನ್‌ಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ಕೇಳಿದ್ದಕ್ಕೆ ಮುಖಕ್ಕೆ ಡಿಚ್ಚಿ, ಮೈಮೇಲೆ ಬಾಸುಂಡೆ ಕೊಟ್ಟರು!

ನಾನು ಲೋಕಸಭಾ ಚುನಾವಣೆಯಲ್ಲಿ ಅನಿವಾರ್ಯವಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕಾಯಿತು. ನಿಮ್ಮೆಲ್ಲರ ಒಪ್ಪಿಗೆ ಪಡೆದು ಮಂಡ್ಯದಲ್ಲಿ ಅಭ್ಯರ್ಥಿ ಆದೆ. ಇದು ಹಲವಾರು ಜನರಿಗೆ ಅಸಮಾಧಾನ ಇದೆ. ನಾನು ರಾಮನಗರದಲ್ಲಿ ಶಾಸಕನಾಗಿದ್ದಾಗ ಒತ್ತಾಯ ಮಾಡಿ ಚನ್ನಪಟ್ಟಣಕ್ಕೆ ಕರೆಸಿದ್ದರು. ಆಗಲೂ ಜನರೇ ಚುನಾವಣೆ ನಡೆಸಿ ಗೆಲ್ಲಿಸಿದ್ದರು. ನಾನು ಶಾಸಕನಾಗಿದ್ದ ಯಶಸ್ಸು ಸಂಪೂರ್ಣವಾಗಿ ನಿಮಗೆ ಸಲ್ಲಬೇಕು. ಆದರೆ, ನಾನು ಲೋಕಸಭೆಯಲ್ಲಿ ನಿಲ್ಲಬೇಕು ಅನ್ನೋ ವಿಚಾರ ಇರಲಿಲ್ಲ. ಪಕ್ಷದ ಹಿತದಿಂದ ಜೊತೆಗೆ ಮಂಡ್ಯದ ಕಾರ್ಯಕರ್ತರ ಒತ್ತಡದಿಂದ ಮಂಡ್ಯದಲ್ಲಿ ಸ್ಪರ್ಧೆ ಮಾಡಿದೆ. ಮಂಡ್ಯದ ಜನರೇ ಚುನಾವಣೆ ಮಾಡಿ ನನ್ನ ಗೆಲ್ಲಿಸಿದ್ದಾರೆ. ದೇಶದ ಪ್ರಧಾನಿ ಮೋದಿಯವರು ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ. ಅದಕ್ಕಾಗಿ ಎಲ್ಲರಿಗೂ ನಾನು ಚಿರರುಣಿ ಎಂದು ಹೇಳಿದರು.

ತುಮಕೂರು ಕಲುಷಿತ ನೀರು ಕುಡಿದು 6 ಮಂದಿ ದುರ್ಮರಣ: ಸತ್ತವರ ಲೆಕ್ಕ ಮುಚ್ಚಿಡೋ ಕೆಲಸ ಮಾಡಿತಾ ಸರ್ಕಾರ?

ದೇವೇಗೌಡರ ಬಗ್ಗೆ ಮೋದಿಯವರು ವಿಶೇಷ ಗೌರವ ಹೊಂದಿದ್ದಾರೆ. ನನಗೂ ಒಂದು ಗೌರವಕೊಟ್ಟು ನಡೆಸಿಕೊಂಡಿದ್ದಾರೆ. ರಾಜ್ಯದ ಅಭಿವೃದ್ಧಿಗೆ ನಾನು ಪ್ರಾಮಾಣಿಕವಾಗಿ ಕೆಲಸ ಮಾಡ್ತೇನೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಬಗೆಹರಿಸುವ ಅವಕಾಶ ಸಿಕ್ಕಿದೆ. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ. ರಾಜಕೀಯವಾಗಿ ಜನ್ಮ ಕೊಟ್ಟಿದ್ದು ರಾಮನಗರ ಜನತೆ. ನೀವು ಕೊಟ್ಟ ಆಶೀರ್ವಾದಿಂದ ಈ ಮಟ್ಟಕ್ಕೆ ಬಂದಿದ್ದೇವೆ. ನಾನು ಯಾವತ್ತೂ ನಿಮಗೆ ಅನ್ಯಾಯ ಮಾಡಲ್ಲ. ನಾನು ಎಲ್ಲೇ ಇದ್ರೂ ನನ್ನ ಮನಸ್ಸು ಇಲ್ಲೇ ಇರುತ್ತದೆ. ಮೋದಿ ನಮ್ಮನ್ನ ಗುರುತಿಸಿದ್ರೆ ಅದಕ್ಕೆ ನೀವೆ ಕಾರಣ. ಅಣ್ಣತಮ್ಮಂದಿರು ಆಗಲೇ ಬೋರ್ಡ್ ಹಾಕಿಕೊಂಡಿದ್ದಾರೆ. ಜನ ಎಚ್ಚರಿಕೆಯಿಂದ ಇರಿ. ಅವರಿಗೆ ಅಧಿಕಾರ ಕೊಟ್ರೆ ಆಮೇಲೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.

click me!