ಯಡಿಯೂರಪ್ಪ ರೀತಿಯಲ್ಲಿ ನನ್ನನ್ನು ಮುಗಿಸಲು ಪ್ರಯತ್ನ ಮಾಡ್ತಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ತಲೆ ಅಲ್ಲಾಡಿಸಿ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ ಡಿಕೆಶಿ
ಬೆಂಗಳೂರು (ಜೂ.15): ಬಿಟ್‌ಕಾಯಿನ್ ಪ್ರಕರಣದಲ್ಲಿ ಶಾಂತಿನಗರ ಶಾಸಕ ಎನ್‌ಎ ಹ್ಯಾರೀಸ್ ಪುತ್ರ ಮೊಹಮ್ಮದ್ ಹಾರಿಸ್ ನಲಪಾಡ್ ಅವರನ್ನು ಜೂ.13 ವಿಶೇಷ ತನಿಖಾ ತಂಡದ (ಎಸ್‌ಐಟಿ) ವಿಚಾರಣೆ ನಡೆಸಿತ್ತು. ಪ್ರಕರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಯಾನೆ ಶ್ರೀಕಿಯೊಂದಿಗೆ ನಂಟು ಹೊಂದಿದ್ದ ಆರೋಪದಡಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ವಿಚಾರಣೆಯಾಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ನಲಪಾಡ್ ಬಿಟ್ ಕಾಯಿನ್ ವಿಚಾರಣೆ ನಡೆಯುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ.
ಡಿ ಗ್ಯಾಂಗ್‌ನಲ್ಲಿ 19 ಮಂದಿ, ಇಂದು ಜೈಲಿಗೆ?, ಪರಪ್ಪನ ಅಗ್ರಹಾರದಲ್ಲಿನ ದರ್ಶನ್ ಆಪ್ತ ರೌಡಿಶೀಟರ್‌ಗಳು ಬೇರೆಡೆಗೆ!
ಹ್ಯಾಕರ್ ಶ್ರೀಕಿ ಮತ್ತು ನಲಪಾಡ್ ನಡುವೆ ಹಣದ ವ್ಯವಹಾರ ನಡೆದಿರುವ ಆರೋಪ ಕೇಳಿಬಂದಿತ್ತು. ಶ್ರೀಕಿ ಕಳವು ಮಾಡಿದ್ದ ಬಿಟ್ ಕಾಯಿನ್ ಪೈಕಿ ಸುಮಾರು ₹5 ಕೋಟಿಯನ್ನು ನಲಪಾಡ್‌ಗೆ ವರ್ಗಾಯಿಸಿದ್ದ ಎನ್ನಲಾಗಿತ್ತು. ಈ ಆರೋಪದ ಸಂಬಂಧ ಎಸ್‌ಐಟಿ ವಿಚಾರಣೆ ನಡೆಸಿತ್ತು.
ಹೆಚ್ಡಿಕೆ ಆರೋಪಕ್ಕೆ ಪ್ರತಿಕ್ರಿಯೆ ನೀಡದ ಡಿಕೆಶಿ: ಇನ್ನು ಯಡಿಯೂರಪ್ಪ ರೀತಿಯಲ್ಲಿ ನನ್ನನ್ನು ಮುಗಿಸಲು ಪ್ರಯತ್ನ ಮಾಡ್ತಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ತಲೆ ಅಲ್ಲಾಡಿಸಿ ಯಾವುದೇ ಪ್ರತಿಕ್ರಿಯೆ ನೀಡದೇ ಡಿ.ಕೆ ಶಿವಕುಮಾರ್ ಹೊರಟು ಹೋಗಿದ್ದಾರೆ. ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ಶುಕ್ರವಾರ ಕರ್ನಾಟಕಕ್ಕೆ ಬಂದಿದ್ದ ಕುಮಾರಸ್ವಾಮಿ ನನ್ನನ್ನು ರಾಜಕೀಯವಾಗಿ ಮುಗಿಸಲು ಹುನ್ನಾರ ನಡೆದಿದೆ ಎಂದಿದ್ದರು.
ನಟ ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲು, ಕೊಲೆ ಬೆದರಿಕೆ ಕೇಸ್‌ಗೆ ಮರು ಜೀವ!
ಪಾಲಿಕೆ ಚುನಾವಣೆಗೆ ತಯಾರಿ : ಪಾಲಿಕೆ ಚುನಾವಣೆ ತಯಾರು ಮಾಡಲು ನಮ್ಮ ಪಕ್ಷದ ಬ್ಲಾಕ್ ಅಧ್ಯಕ್ಷರ ಸಭೆ ಮಾಡಿದ್ದೇವೆ. ಯಾರು ಆ್ಯಕ್ಟಿವ್ ಇಲ್ಲ ಬದಲಾವಣೆ ಮಾಡಲು ತೀರ್ಮಾನ ಮಾಡಿದ್ದೇವೆ. ಒಂದು ತಿಂಗಳ ಒಳಗಾಗಿ ಬದಲಾವಣೆಗೆ ಸಿದ್ದತೆ ನಡೆಯಲಿದೆ. ಜನರ ಮಧ್ಯೆ ಹೋಗಬೇಕು. ಬೆಂಗಳೂರು ನಗರದಲ್ಲಿ ನಾಲ್ಕು ಕ್ಷೇತ್ರ ಸೋತಿರಬಹುದು. ಆದರೆ ಪಾಲಿಕೆ ಚುನಾವಣೆಯಲ್ಲಿ ಗೆಲ್ಲುತ್ತೇವೆ. ನಾವು 225 ವಾರ್ಡ್ ಗೆ ಮೊದಲು ತಯಾರಿ ಮಾಡಿಕೊಳ್ಳುತ್ತೇವೆ.