ಕೇಂದ್ರ ಸಚಿವ ಕುಮಾರಸ್ವಾಮಿ ಮಾತಿನಲ್ಲಿ ಬುದ್ದಿವಂತರು, ಅಭಿವೃದ್ಧಿಯಲ್ಲಲ್ಲ: ಸಚಿವ ಚಲುವರಾಯಸ್ವಾಮಿ

By Sathish Kumar KH  |  First Published Nov 4, 2024, 1:47 PM IST

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾತಿನಲ್ಲಿ ಬುದ್ಧಿವಂತರಾಗಿದ್ದರೂ ಕ್ಷೇತ್ರದ ಅಭಿವೃದ್ಧಿಯಲ್ಲಿ ಬುದ್ಧಿವಂತರಲ್ಲ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಟೀಕಿಸಿದ್ದಾರೆ. 


ಮಂಡ್ಯ (ಅ.04): ಕೇಂದ್ರ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜಕಾರಣದಲ್ಲಿ ಹಾಗೂ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡುವಲ್ಲಿ ಬುದ್ದಿವಂತರು. ಆದರೆ, ಕ್ಷೇತ್ರದ ಅಭಿವೃದ್ದಿಯಲ್ಲಿ ಯೋಜನತ್ಮಕ ಕೊಡುಗೆ ನೀಡುವಲ್ಲಿ ವಿಫಲರು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಟೀಕೆ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದ ಶಾಸಕ ಕದಲೂರು ಉದಯ್.ಕೆ.ಎಂ ಅವರ ನಿವಾಸದಲ್ಲಿ ಸುದ್ಧಿಗಾರರರೊಂದಿಗೆ ಮಾತನಾಡಿದ ಅವರು, ನಾವು ಕ್ಷೇತ್ರದಲ್ಲಿಯೇ ಇದ್ದು ಅಭಿವೃದ್ಧಿ ಮಾಡುವಂತೆ ಜೆಡಿಎಸ್ ಬೆಂಬಲಿಗರೇ ಹೇಳಿಕೊಳ್ಳುತಿದ್ದಾರೆ. ಕೇಂದ್ರದಲ್ಲಿ ಮಂತ್ರಿಯಾಗುವ ಆಸೆಯಿಂದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ತ್ಯಜಿಸಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದು ಕೇಂದ್ರ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಅಭಿವೃದ್ಧಿ ಮಾಡುವಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ಹೇಳಿದರು.

Tap to resize

Latest Videos

undefined

ರಾಜ್ಯದ ಪ್ರಾದೇಶಿಕ ಪಕ್ಷ ಜೆಡಿಎಸ್ ಪಕ್ಷಕ್ಕೆ ಹೆಚ್.ಡಿ. ಕುಮಾರಸ್ವಾಮಿ ಅವರ ಮನೆಯೇ ಅವರಿಗೆ ಕಂಟ್ ಎನ್ನುವ ಮಾತಿದೆ. ಚನ್ನಪಟ್ಟಣದಲ್ಲಿ ಚುನಾವಣೆ ಎದುರಿಸಿ ನಿಖಿಲ್ ಕುಮಾರಸ್ವಾಮಿ ಸೋತಿಲ್ಲ. ಆದರೆ, ಒಮ್ಮೆ ರಾಮನಗರ ವಿಧಾನಸಭಾ ಕ್ಷೇತ್ರ, ಒಮ್ಮೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಈಗಾಗಲೇ ಎರಡು ಬಾರಿ ಸೋತಿದ್ದಾರೆ. ಮಂಡ್ಯದ ಜನರಂತೆಯೇ ನಿಖಿಲ್ ಕುಮಾರಸ್ವಾಮಿ ಅವರು ಸ್ಥಳೀಯರು ಅಲ್ಲ ಅನ್ನೋದನ್ನ ಚನ್ನಪಟ್ಟಣ ಜನ ತಿಳಿದಿದ್ದಾರೆ ಎಂದರು.

ಇದನ್ನೂ ಓದಿ: ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್? ಎಟಿಎಂ ಕಾರ್ಡ್‌ನಂತೆ ಸ್ವೈಪ್ ಮಾಡಬೇಕು!

ಸಿ.ಪಿ.ಯೋಗೇಶ್ವರ್ ಸ್ಥಳೀಯರು, ಚನ್ನಪಟ್ಟಣ ಅಭಿವೃದ್ಧಿಯನ್ನೇ ಜೀವನದ ಗುರಿಯಾಗಿಸಿಕೊಂಡಿದ್ದಾರೆ. ಚನ್ನಪಟ್ಟಣದಲ್ಲಿ ಸ್ಥಳೀಯರನ್ನು ಗೆಲ್ಲಿಸಬೇಕೆ ಅಥವಾ ಕ್ಷೇತ್ರಬಿಟ್ಟು ಕ್ಷೇತ್ರಗಳನ್ನು ಹುಡುಕಿಕೊಂಡು ಹೋದ ಹೊರಗಿನವರನ್ನು ಗೆಲ್ಲಿಸಬೇಕೆ? ಎಂಬ ಪ್ರಶ್ನೆಗೆ ಚನ್ನಪಟ್ಟಣ ಜನರೇ ಉತ್ತರ ನೀಡುವರು. ಎರಡು ಬಾರಿ ಸೋತು ಅನ್ಯಾಯವಾಗಿದೆ ಎಂದು ನಿಖಿಲ್ ಹೇಳುತಿದ್ದಾರೆ, ಇವರು ಸೋತದ್ದು ಚನ್ನಪಟ್ಟಣದಲ್ಲಿ ಅಲ್ಲ, ಚನ್ನಪಟ್ಟಣದ ಅಭಿವೃದ್ಧಿಗೆ ನಿಂತ ಯೋಗಿಶ್ವರ್ ಚನ್ನಪಟ್ಟಣದಲ್ಲೇ ಎರಡು ಬಾರಿ ಸೋತಿದ್ದಾರೆ. ಮುಖ್ಯವಾಗಿ ಚನ್ನಪಟ್ಟಣದಲ್ಲಿ ಯೋಗಿಶ್ವರ್ ಅವರಿಗೆ ಅನ್ಯಾಯವಾಗಿದೆ. ಯೋಗಿಶ್ವರ್ ಗೆದ್ದು ಮೂರುವರೆ ವರ್ಷಗಳ ಕಾಲ ಚನ್ನಪಟ್ಟಣದ ಅಭಿವೃದ್ಧಿ ಮಾಡಲಿದ್ದಾರೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಶಾಸಕ ಕದಲೂರು ಉದಯ್. ಕೆ.ಎಂ, ಮನ್ಮುಲ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಮುಖಂಡರಾದ ಚಿದಂಬರ್, ಕದಲೂರು ರಾಮಕೃಷ್ಣ ಇತರರಿದ್ದರು.

click me!