ಜಗತ್ತೇ ಪ್ರಧಾನಿ ಮೋದಿ ಮೇಲೆ ಭರವಸೆ ಇಟ್ಟಿದೆ: ಕೇಂದ್ರ ಸಚಿವ ಧಮೇಂದ್ರ ಪ್ರಧಾನ್‌

Published : Mar 19, 2023, 03:00 AM IST
ಜಗತ್ತೇ ಪ್ರಧಾನಿ ಮೋದಿ ಮೇಲೆ ಭರವಸೆ ಇಟ್ಟಿದೆ: ಕೇಂದ್ರ ಸಚಿವ ಧಮೇಂದ್ರ ಪ್ರಧಾನ್‌

ಸಾರಾಂಶ

ಕರ್ನಾಟಕದ ಬಗ್ಗೆ ವಿಶೇಷ ಪ್ರೀತಿ, ಕಾಳಜಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ನಡೆಸಿದ್ದ ಹುಬ್ಬಳ್ಳಿ, ಬೆಳಗಾವಿ, ಮಂಡ್ಯದ ದಾಖಲೆಯ ರೋಡ್‌ ಶೋಗಳನ್ನೂ ಮೀರಿ ಸುವಂತಹ ಐತಿಹಾಸಿಕ ರೋಡ್‌ ಶೋ, ಸಮಾವೇಶ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಮಾ.25ರಂದು ಆಗಬೇಕು. 

ದಾವಣಗೆರೆ (ಮಾ.19): ಕರ್ನಾಟಕದ ಬಗ್ಗೆ ವಿಶೇಷ ಪ್ರೀತಿ, ಕಾಳಜಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ನಡೆಸಿದ್ದ ಹುಬ್ಬಳ್ಳಿ, ಬೆಳಗಾವಿ, ಮಂಡ್ಯದ ದಾಖಲೆಯ ರೋಡ್‌ ಶೋಗಳನ್ನೂ ಮೀರಿ ಸುವಂತಹ ಐತಿಹಾಸಿಕ ರೋಡ್‌ ಶೋ, ಸಮಾವೇಶ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಮಾ.25ರಂದು ಆಗಬೇಕು. 10 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳಬೇಕು ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದರು. ನಗರದ ಜಿಎಂಐಟಿ ಕಾಲೇಜು ಸಮೀಪ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಮಹಾಸಂಗಮ ಹಾಗೂ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಮಾ.25ರ ಐತಿಹಾಸಿಕ ಸಮಾ ವೇಶದ ಪೂರ್ವ ಸಿದ್ಧತೆ ವೀಕ್ಷಿಸಿದ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಮೂರೂ ನಗರಗಳಲ್ಲಿ ರೋಡ್‌ ಶೋ ನಂತರ ಈಗ ಮಧ್ಯ ಕರ್ನಾಟಕದ ದಾವಣಗೆರೆ ಸಮಾವೇಶದ ಮೇಲೆ ಎಲ್ಲರ ದೃಷ್ಟಿನೆಟ್ಟಿದೆ ಎಂದರು.

ಮೋದಿ ಅವರು ಸಮಾವೇಶದಂದು ಜನರ ಮಧ್ಯದಿಂದ ವೇದಿಕೆಯನ್ನೇರುವುದಾಗಿ ಹೇಳಿದ್ದಾರೆ. ರೈತರು, ಬಡವರು, ಮಹಿಳೆಯರು, ಯುವ ಜನರು ಹೀಗೆ ಎಲ್ಲಾ ವರ್ಗದ ಜನರ ಹಿತ ಕಾಯುವ ಪ್ರಧಾನಿ ಮೋದಿ ಜನರ ಮಧ್ಯದಿಂದ ವೇದಿಕೆಗೆ ಬರಲು ಆಲೋಚಿಸಿದ್ದಾರೆ. ವಿಧಾನಸಭೆ ಚುನಾವಣೆ ತಲೆಯ ಮೇಲೆ ಬಂದು ನಿಂತಿದೆ. ರಾಜ್ಯದಲ್ಲಿ ಯಾವುದೇ ಕ್ಷಣದಲ್ಲಾದರೂ ಚುನಾವಣೆ ಘೋಷಣೆಯಾಗಲಿದೆ. ರಾಜ್ಯದ ಫಲಿತಾಂಶವು ಮೋದಿ ಕಾರ್ಯಕ್ರಮದ ಮೂಲಕ ಸ್ಪಷ್ಟವಾಗಿದೆ. ನಮ್ಮ ಕಾರ್ಯಕರ್ತರು ಚುನಾವಣೆಗೆ ಸಜ್ಜಾಗಬೇಕಿದೆ ಎಂದು ಅವರು ಕರೆ ನೀಡಿದರು.

ಮಹಿಳಾ ಸಬಲೀಕರಣಕ್ಕೆ ಬಿಜೆಪಿ ಸರ್ಕಾರ ಬದ್ಧ: ಶೋಭಾ ಕರಂದ್ಲಾಜೆ

ವಿಶ್ವದ ಸಮಸ್ಯೆಗಳಿಗೆ ಪರಿಹಾರ ನರೇಂದ್ರ ಮೋದಿಯೆಂದು ಇಟಲಿ ಪ್ರಧಾನಿ ಹೇಳಿದ್ದಾರೆ. ವಿಶ್ವವೇ ಮೋದಿ ಮೇಲೆ ಸಾಕಷ್ಟುಭರವಸೆ ಇಟ್ಟಿದೆ. ಕರ್ನಾಟಕದಿಂದಲೂ ಮೋದಿ ನೇತೃತ್ವದ ಬಿಜೆಪಿಗೆ ದೊಡ್ಡ ಆಶೀರ್ವಾದವು ಈ ಸಮಾವೇಶದ ಮೂಲಕ ಸಿಗುವ ನಿರೀಕ್ಷೆ ಇದೆ. ಮತ್ತೆ ಡಬಲ್‌ ಇಂಜಿನ್‌ ಸರ್ಕಾರ ಅಧಿಕಾರಕ್ಕೆ ಬರಲಿದೆ. ಇನ್ನೊಂದು ವಾರಕ್ಕೆ ಮೋದಿ ಇಲ್ಲಿಗೆ ಆಗಮಿಸಲಿದ್ದಾರೆ. ಇಡೀ ದೇಶವೇ ರಾಜ್ಯದ ಚಿತ್ರಣ ನೋಡಿದೆ. ಮಂಡ್ಯ, ಹುಬ್ಬಳ್ಳಿ, ಬೆಳಗಾವಿ ಅದ್ಭುತ ರೋಡ್‌ ಶೋ, ಪುಷ್ಪವೃಷ್ಟಿಜೊತೆಗೆ ದಾವಣಗೆರೆಯ ಮೋದಿ ರೋಡ್‌ ಶೋ, ಐತಿಹಾಸಿಕ ಸಮಾವೇಶ ಮತ್ತಷ್ಟುರಂಗು ತರಲಿವೆ. ಅಂತ್ಯೋದಯ, ಬಡವರ ಕಲ್ಯಾಣ, ಸರ್ವರಿಗೂ ಸೂರು, ಪ್ರತಿ ಮನೆಗೂ ಶೌಚಾಲಯ, ಅನಿಲ ಸಂಪರ್ಕ, ಲಸಿಕೆ ಇವು ನಮ್ಮ ಉದ್ದೇಶಗಳು ಎಂದು ಹೇಳಿದರು.

ದಾವಣಗೆರೆ, ಹರಿಹರ ಅವಳಿ ನಗರದ ಪ್ರತಿ ಮನೆಯಿಂದ ಕನಿಷ್ಠ 2 ಜನ ಮೋದಿ ಸಮಾವೇಶಕ್ಕೆ ಬರಬೇಕು. ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಸಹ ನೆರೆ ಹೊರೆಯವರು, ಸ್ನೇಹಿತರಿಗೆ ತಿಳಿಸುವ ಮೂಲಕ ಮೋದಿ ಕಾರ್ಯಕ್ರಮಕ್ಕೆ ಜನರನ್ನು ಕರೆ ತರಬೇಕು. ಹೊಟೆಲ್‌, ಟೀ ಸ್ಟಾಲ್‌, ಪಾರ್ಕ್, ಬೀದಿ ಬದಿ ವ್ಯಾಪಾರ ಸ್ಥಳ ಹೀಗೆ ಎಲ್ಲಾ ಕಡೆ ಹೋಗಿ ಜನರನ್ನು ಆಹ್ವಾನಿಸಿ. ಪ್ರಧಾನಿ ನರೇಂದ್ರ ಮೋದಿಗೆ ಆಶೀರ್ವದಿಸಲು ಬರುವಂತೆ ಆಹ್ವಾನಿಸಿ. ಸೋಷಿಯಲ್‌ ಮೀಡಿಯಾಗಳನ್ನೂ ಇದಕ್ಕಾಗಿ ಬಳಸಿಕೊಳ್ಳಿ. ಸ್ವಾತಂತ್ರ್ಯ ನಂತರ ದೇಶದ ಅತ್ಯಂತ ದೊಡ್ಡ, ಐತಿಹಾಸಿಕ ಕಾರ್ಯಕ್ರಮ ಇದಾಗಬೇಕು ಎಂದು ಅವರು ತಿಳಿಸಿದರು.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಮಾತನಾಡಿ, ಪ್ರತಿ ಹಳ್ಳಿಯಿಂದ ಅಪಾರ ಸಂಖ್ಯೆಯಲ್ಲಿ ಮಾ.25ರ ಮೋದಿ ಸಮಾವೇಶಕ್ಕೆ ಜನರು ಬರಬೇಕು. ನಮ್ಮ ಯಾತ್ರೆ ಅತ್ಯಂತ ಯಶಸ್ವಿಯಾಗಿ ಸಾಗುತ್ತಿದೆ. ವಿಪಕ್ಷ ಕಾಂಗ್ರೆಸ್ಸಿಗೆ ಏನು ಮಾಡಬೇಕೆಂಬುದೇ ತೋಚದಂತಾಗಿದೆ. ದಾವಣಗೆರೆ ರೋಡ್‌ ಶೋ ಎಲ್ಲಾ ದಾಖಲೆ ಮುರಿದು, ಹೊಸ ಇತಿಹಾಸ ರಚಿಸುವಂತಿರಬೇಕು. ನಮ್ಮೆಲಾ ಮುಖಂಡರು, ಕಾರ್ಯಕರ್ತರು ಚುನಾವಣೆವರೆಗೆ ಹಗಲು-ರಾತ್ರಿ ಎನ್ನದೇ ಕೆಲಸ ಮಾಡಬೇಕು ಎಂದರು. ಹಳ್ಳಿ ಹಳ್ಳಿಯಿಂದಲೂ ನರೇಂದ್ರ ಮೋದಿ ಅವರನ್ನು ನೋಡಲು ಜನ ಬರುತ್ತಾರೆ. ಮಕ್ಕಳಿಂದ ವಯೋವೃದ್ಧವರೆಗೆ ಎಲ್ಲರಿಗೂ ಮೋದಿ ಅಚ್ಚುಮೆಚ್ಚು. ಅಂತಹ ವಾತಾವರಣ ಇಡೀ ದೇಶ, ವಿಶ್ವದಲ್ಲೇ ಇದೆ. ರೆಕಾರ್ಡ್‌ ಬ್ರೇಕಿಂಗ್‌ ಮಹಾ ಸಂಗಮ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಆಗಬೇಕು. ನರೇಂದ್ರ ಮೋದಿ ಜನರ ಜೊತೆಗೆ ಬೆರೆಯುವ ಕಾರ್ಯಕ್ರಮ ಇದು ಎಂದು ಅರುಣ್‌ ಸಿಂಗ್‌ ಹೇಳಿದರು.

ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಶಾಸಕರಾದ ಮಾಜಿ ಸಚಿವ ಸಚಿವ ಎಸ್‌.ಎ.ರವೀಂದ್ರನಾಥ, ಪ್ರೊ.ಎನ್‌.ಲಿಂಗಣ್ಣ, ಕೇಶವ ಪ್ರಸಾದ್‌, ವಿಪ ಸದಸ್ಯ ಕೆ.ಎಸ್‌.ನವೀನ, ದೂಡಾ ಅಧ್ಯಕ್ಷ ಎ.ವೈ.ಪ್ರಕಾಶ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್‌.ಶಿವಯೋಗಿಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಮೇಯರ್‌ ಸುಧಾ ಜಯರುದ್ರೇಶ, ಮಾಜಿ ಶಾಸಕರಾದ ಬಿ.ಪಿ.ಹರೀಶ ಗೌಡ, ಎಂ.ಬಸವರಾಜ ನಾಯ್ಕ, ಉಪ ಮೇಯರ್‌ ಯಶೋಧ ಯೋಗೇಶ್ವರ ಪಕ್ಷದ ಜಿಲ್ಲಾಧ್ಯಕ್ಷ ಎಸ್‌.ಎಂ.ವೀರೇಶ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್‌.ಜಗದೀಶ, ಉಪಾಧ್ಯಕ್ಷರಾದ ಟಿ.ಶ್ರೀನಿವಾಸ ದಾಸಕರಿಯಪ್ಪ, ಮಂಜಾನಾಯ್ಕ, ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್‌ ಜಾಧವ್‌, ಯುವ ಮುಖಂಡ ಜಿ.ಎಸ್‌.ಅನಿತ್‌, ಎನ್‌.ರಾಜಶೇಖರ, ಪಿ.ಸಿ.ಶ್ರೀನಿವಾಸ ಭಟ್‌, ಗೌತಮ್‌ ಜೈನ್‌, ಬಿ.ಎಂ.ಸತೀಶ, ರಾಜನಹಳ್ಳಿ ಶಿವಕುಮಾರ, ಶಿವರಾಜ ಪಾಟೀಲ್‌, ಶಿವನಗೌಡ ಪಾಟೀಲ್‌, ಟಿಂಕರ್‌ ಮಂಜಣ್ಣ, ಮಂಜುಳಾ, ಗಾಯತ್ರಿ ಬಾಯಿ, ಪುಷ್ಪಾ ವಾಲಿ, ಭಾಗ್ಯ ಪಿಸಾಳೆ, ಎಚ್‌.ಸಿ.ಜಯಮ್ಮ, ರೇಣುಕಾ ಇತರರು ಇದ್ದರು.

ತಾಯಿ ಸ್ಥಾನದಲ್ಲಿ ನಿಂತು ಕೆಲಸ ಮಾಡುವ ಡಬಲ್‌ ಎಂಜಿನ್‌ ಸರ್ಕಾರ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಬಿಎಸ್‌ವೈ ಉತ್ತರಾಧಿಕಾರಿ ಬೊಮ್ಮಾಯಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಉತ್ತರಾಧಿಕಾರಿಯಾಗಿ ಬಸವರಾಜ ಬೊಮ್ಮಾಯಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದು, ಸರ್ಕಾರದ ಸೌಲಭ್ಯಗಳನ್ನು, ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ. ಅದನ್ನು ಪ್ರತಿಯೊಬ್ಬರಿಗೂ ತಿಳಿಸುವ ಕೆಲಸ ಮುಖಂಡರು, ಕಾರ್ಯಕರ್ತರಿಂದ ಆಗಬೇಕು ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಕರೆ ನೀಡಿದರು. ಯಡಿಯೂರಪ್ಪ ರಾಜ್ಯಕ್ಕೆ ಸಾಕಷ್ಟುಕೊಡುಗೆ ನೀಡಿದ್ದಾರೆ. ಅದನ್ನು ಬೊಮ್ಮಾಯಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದರು. ಯುಗಾದಿ ಮಾರನೆಯ ದಿನ ಕನ್ನಡಿಗರು ಏನು ಆಚರಿಸುತ್ತಾರೋ ಅಂತಹ ಆಚರಣೆ ಇಲ್ಲಿ ಆಗಬೇಕು. ದಾವಣಗೆರೆ ನಗರ ದೇವತೆ, ಶಕ್ತಿಯ ಅಧಿ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಯನ್ನು ಹೇಗೆ ಅದ್ಧೂರಿಯಾಗಿ ಇಲ್ಲಿ ಆಚರಣೆ ಮಾಡುತ್ತೀರೋ ಅಂತಹ ಜಾತ್ರೆ ಮಾ.25ಕ್ಕೆ ದಾವಣಗೆರೆ ನಗರದಲ್ಲಿ ಆಗಬೇಕು. ಅಂತಹ ಉತ್ಸವಕ್ಕೆ ಇದೇ ದಾವಣಗೆರೆ, ಹರಿಹರ ಜನತೆ ಕಾರಣರಾಗಬೇಕು. ಆ ಇತಿಹಾಸ ಇಲ್ಲಿನ ಜನರಿಂಗ ಆಗಬೇಕು ಎಂದು ಪ್ರಧಾನ್‌ ಮನವಿ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ - ಯತೀಂದ್ರ ಸಿದ್ದರಾಮಯ್ಯ