ಉಪ್ಪು ತಿಂದವರು ನೀರು ಕುಡಿಯಲೇಬೇಕು. ತಪ್ಪು ಮಾಡಿದವರು ಅನುಭವಿಸಲೇಬೇಕು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಅವರು ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಬೀದರ್ (ಅ.21): ಉಪ್ಪು ತಿಂದವರು ನೀರು ಕುಡಿಯಲೇಬೇಕು. ತಪ್ಪು ಮಾಡಿದವರು ಅನುಭವಿಸಲೇಬೇಕು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಅವರು ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಭೇಟಿಯಾದ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಒಂದು ಬಾರಿ ಕಾನೂನು ಕ್ರಮ ಕೈಗೊಳ್ಳಾಗಿದೆ. ಈಗ ಸಿಬಿಐಗೆ ದೋಷಾರೋಪಣೆ ಪಟ್ಟಿ ಸಲ್ಲಿಕಗೆ ಅನುಮತಿ ಸಿಕ್ಕಿದೆ. ಸಿಬಿಐ ತನ್ನ ಕಾರ್ಯವ್ಯಾಪ್ತಿಯಲ್ಲಿ ಕಾನೂನು ಕ್ರಮ ತೆಗೆದಕೊಳ್ಳುತ್ತದೆ ಎಂದು ಖೂಬಾ ಭವಿಷ್ಯ ನುಡಿದರು.
ಡಿಕೆಶಿ ವರ್ಸಸ್ ಸತೀಶ ಜಾರಕಿಹೊಳ್ಳಿ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ ಜೋರಾಗಿದೆ. ಇದರಲ್ಲಿ ಸತೀಶ ಜಾರಕಿಹೊಳಿ ಅವರದ್ದು ಒಂದು ಉದಾಹರಣೆಯಾಗಿದೆ. ಕಾಂಗ್ರೆಸ್ ಸದ್ಯ ಗೊಂದಲದ ಗೂಡಾಗಿದೆ. ಅನೇಕ ಬಣಗಳಿದ್ದು ಯಾವುದರ ಬಗ್ಗೆಯೂ ಸ್ಪಷ್ಟತೆ ಇಲ್ಲ. ಕೇವಲ ತೋರಿಕೆಗೆ ಮಾತ್ರ ಸರ್ಕಾರ ನಡೆಯುತ್ತಿದೆ. ಇಂಥ ಸರ್ಕಾರ ಯಾಕೆ ಬೇಕು? ಎಂದು ಜನರು ಶಾಪ ಹಾಕುತ್ತಿದ್ದಾರೆ. ಈ ಸಿದ್ದರಾಮಯ್ಯ ಸರ್ಕಾರ ರಾಜ್ಯವನ್ನು ದಿವಾಳಿ ಮಾಡಿ ಹೋಗುತ್ತೆ. ಎಲ್ಲಾ ಕ್ಷೇತ್ರದಲ್ಲಿ ಶಾಸಕರಿಗೆ ಚೀಮಾರಿ ಹಾಕುತ್ತಿದ್ದಾರೆ ಎಂದರು.
ಕಲೆಕ್ಷನ್‌ನಲ್ಲೂ ಸಿದ್ದು, ಡಿಕೆಶಿ ನಡುವೆ ತೀವ್ರ ಸ್ಪರ್ಧೆ: ಸದಾನಂದಗೌಡ
ಸಿಎಂ ಇಬ್ರಾಹಿಂ ಜೆಡಿಎಸ್‌ನಿಂದ ಉಚ್ಚಾಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಿಎಂ ಇಬ್ರಾಹಿಂ ಯಾವ ಜೆಡಿಎಸ್ ಅಧ್ಯಕ್ಷರು ಇದ್ರು ಅವರು. ಅವರಲ್ಲಿ ಏನಾದ್ರು ನರನಾಡಿ ಇತ್ತಾ. ಅಧ್ಯಕ್ಷರನ್ನಾಗಿ ಮಾಡಿದ್ರು, ಆದ್ರೆ ಆ ಗೌರವವನ್ನು ಸಿಎಂ ಇಬ್ರಾಹಿಂ ಉಳಿಸಿಕೊಂಡಿಲ್ಲ ಎಂದು ಖೂಬಾ ಬೇಸರ ವ್ಯಕ್ತಪಡಿಸಿದರು. ಜೆಡಿಎಸ್ ಅಂದ್ರೆ ದೇವೇಗೌಡ್ರ ಕುಟುಂಬ. ಆದ್ರೆ ಸಿಎಂ ಇಬ್ರಾಹಿಂ ಅವರ ಯಾವ ಶಕ್ತಿ ಇತ್ತು ಎಂದರಲ್ಲದೆ ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಚಿವ ಭಗವಂತ್ ಖೂಬಾ ತೀವ್ರ ವಾಗ್ದಾಳಿ ನಡೆಸಿದರು.
ಶಿವಕುಮಾರ ಆತ್ಮಹತ್ಯೆ ಪ್ರಕರಣ, ಸಚಿವ ಪಾಟೀಲ್ ಬಂಧನಕ್ಕೆ ಆಗ್ರಹ: ಕಲಬುರಗಿಯ ಚಿಂಚೊಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆತ್ಮಹತ್ಯೆ ಪ್ರಕರಣದ ನೈತಿಕ ಹೊಣೆ ಹೊತ್ತು ಸಚಿವ ಡಾ. ಶರಣಪ್ರಕಾಶ ಪಾಟೀಲ್ ಈ ಕೂಡಲೆ ರಾಜಿನಾಮೆ ನೀಡಬೇಕು. ಇಲ್ಲವಾದಲ್ಲಿ ಸಚಿವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆಗ್ರಹಿಸಿದರು. ಅವರು ಈ ಕುರಿತಂತೆ ಭೇಟಿಯಾದ ಸುದ್ದಿಗಾರರಿಗೆ ಮಾತನಾಡಿ, ಆತ್ಮಹತ್ಯೆ ಮಾಡಿಕೊಂಡ ಕಾರ್ಯಕರ್ತರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು. ಆದರೆ, ಕಾಂಗ್ರೆಸ್ ನಾಯಕರು ಪ್ರಕರಣದಲ್ಲಿ ಪ್ರಭಾವ ಭೀರಿ ಸಾಕ್ಷಿಯನ್ನು ತಿರುಚಿದ್ದಾರೆ.
ವೀರಶೈವರ ಒಟ್ಟಾಗಿಸಲು ಮಠ-ಮಾನ್ಯ ಮುಂದಾಗಲಿ: ಸಚಿವ ಎಂ.ಬಿ.ಪಾಟೀಲ್
ಅವರ ಮನೆಯವರಿಗೆ ಆಸೆ ಆಮೀಷಗಳನ್ನು ತೋರಿಸಿದ್ದಾರೆ. ಹೀಗಾಗಿ ಸಾಲಾಬಾಧೆಯಿಂದ ರೈತ ಆತ್ಮಹತ್ಯೆ ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತ ತನ್ನ ಧ್ವನಿಯಲ್ಲಿ ಸಚಿವರ ಹೆಸರನ್ನು ಉಲ್ಲೇಖ ಮಾಡಿದ್ದಾನೆ. ಅದೇ ಬಹು ದೊಡ್ಡ ಸತ್ಯ ಮತ್ತು ಸಾಕ್ಷಿಯಾಗಿದೆ. ಹೀಗಾಗಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಖೂಬಾ ಆಗ್ರಹಿಸಿದರು.