ಬಿಜೆಪಿ 2ನೇ ಪಟ್ಟಿಯಲ್ಲಿ ವಸುಂದರಾ ರಾಜೆಗೆ ಟಿಕೆಟ್, ಕಾಂಗ್ರೆಸ್ 1ನೇ ಲಿಸ್ಟ್‌ನಲ್ಲಿ ಹಾಲಿಂ ಸಿಎಂಗೆ ಟಿಕೆಟ್!

Published : Oct 21, 2023, 03:58 PM ISTUpdated : Oct 21, 2023, 04:06 PM IST
ಬಿಜೆಪಿ 2ನೇ ಪಟ್ಟಿಯಲ್ಲಿ ವಸುಂದರಾ ರಾಜೆಗೆ ಟಿಕೆಟ್, ಕಾಂಗ್ರೆಸ್ 1ನೇ ಲಿಸ್ಟ್‌ನಲ್ಲಿ ಹಾಲಿಂ ಸಿಎಂಗೆ ಟಿಕೆಟ್!

ಸಾರಾಂಶ

ರಾಜಸ್ಥಾನ ವಿಧಾಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಯಾಗಿದೆ. ಇತ್ತ ಕಾಂಗ್ರೆಸ್ ಮೊದಲ ಪಟ್ಟಿ ರಿಲೀಸ್ ಮಾಡಿದೆ. ಮಾಜಿ ಸಿಎಂ ವಸುಂದರ ರಾಜೆಗೆ ಕೊನೆಗೂ ಟಿಕೆಟ್ ನೀಡಲಾಗಿದೆ. ಇತ್ತ ಹಾಲಿ ಸಿಎಂ ಅಶೋಕ್ ಗೆಹ್ಲೋಟ್, ಬಂಡಾಯ ನಾಯಕ ಸಚಿನ್ ಪೈಲೆಟ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ

ಜೈಪುರ(ಅ.21) ರಾಜಸ್ಥಾನ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಮಾಜಿ ಸಿಎಂ ವಸುಂದರಾ ರಾಜೆಯನ್ನು ಬಿಜೆಪಿ ಕಡೆಗಣಿಸಿದೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿರುವ ಬೆನ್ನಲ್ಲೇ ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ವಸುಂದರಾ ರಾಜೆ ಸ್ಥಾನ ಪಡೆದಿದ್ದಾರೆ. ರಾಜೆಗೆ ಸಾಂಪ್ರದಾಯಿಕ ಕ್ಷೇತ್ರವಾದ ಜಾಲ್ರಾಪಟಣದಿಂದ ಟಿಕೆಟ್  ನೀಡಲಾಗಿದೆ. ಬಿಜೆಪಿ 2ನೇ ಲಿಸ್ಟ್‌ನಲ್ಲಿ 83 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ. ಇತ್ತ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲೇ ಹಾಲಿ ಸಿಎಂ ಅಶೋಕ್ ಗೆಹ್ಲೋಟ್, ಬಂಡಾಯ ನಾಯಕ ಸಚಿನ್ ಪೈಲೆಟ್ ಸೇರಿದಂತೆ 33 ನಾಯಕರಿಗೆ ಟಿಕೆಟ್ ಘೋಷಿಸಿದೆ.

ಅಶೋಕ್ ಗೆಹ್ಲೋಟ್‌ನೆ ಸರ್ದಾಪುರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಿದೆ. ಇನ್ನು ಟಾಂಕ್ ಕ್ಷೇತ್ರದಿಂದ ಸಚಿನ್ ಪೈಲೆಟ್‌ಗೆ ಟಿಕೆಟ್ ಘೋಷಿಸಲಾಗಿದೆ.  ನಥದ್ವಾರ ವಿಧಾನಸಭಾ ಕ್ಷೇತ್ರದಿಂದ ರಾಜಸ್ಥಾನ ವಿಧಾನಸಭಾ ಸ್ಪೀಕರ್, ಕಾಂಗ್ರೆಸ್ ನಾಯಕ ಸಿಪಿ ಜೋಶಿ ಸ್ಪರ್ದಿಸುತ್ತಿದ್ದಾರೆ. ಲಚ್‌ಮಂಗ್ರಾದಿಂದ ಕಾಂಗ್ರೆಸ್ ರಾಜಸ್ಥಾನ ಅಧ್ಯಕ್ಷ ಗೋವಿಂದ್ ಸಿಂಗ್ ದೋತಸ್ರಗೆ ಟಿಕೆಟ್ ನೀಡಲಾಗಿದೆ.

ಮೋದಿ ವಿರೋಧಿಸುವ ಬರದಲ್ಲಿ ಕಾಂಗ್ರೆಸ್ ಉಗ್ರವಾದಕ್ಕೆ ಬೆಂಬಲ: ಆರ್.ಎಸ್.ಪಾಟೀಲ

ನವೆಂಬರ್ 25 ರಂದು ರಾಜಸ್ಥಾನ ವಿಧಾನಸಭಾ ಚುನಾವಣೆ ನಡೆಯಲಿದೆ. ಆರಂಭದಲ್ಲಿ ನವೆಂಬರ್ 23ಕ್ಕೆ ಚುನಾವಣೆ ದಿನಾಂಕ ಘೋಷಣೆ ಮಾಡಲಾಗಿತ್ತು. ಆದರೆ ಈ ದಿನ 1 ಲಕ್ಷಕ್ಕೂ ಅಧಿಕ ವಿವಾಹ ಮಹೋತ್ಸವ ನಡೆಯುವ ಕಾರಣ ಮತದಾನದ ಸಂಖ್ಯೆ ಕುಸಿತವಾಗಲಿದೆ ಅನ್ನೋ ಮನವಿಗೆ ಸ್ಪಂದಿಸಿದ ಚುನಾವಣಾ ಆಯೋಗ ದಿನಾಂಕ ಬದಲಿಸಿದೆ. ಇನ್ನು ಡಿಸೆಂಬರ್ 3 ರಂದು ರಾಜಸ್ಥಾನ ಸೇರಿದಂತೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.

ಹಿಮಾಚಲ ಪ್ರದೇಶದಲ್ಲಿ ಚುನಾವಣೆ ಗೆದ್ದಿರುವ ಕಾಂಗ್ರೆಸ್ ಇದೀಗ ರಾಜಸ್ಥಾನದಲ್ಲಿ ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಇದರ ಜೊತೆಗೆ ಮಧ್ಯಪ್ರದೇಶ, ತೆಲಂಗಾಣ, ಚತ್ತೀಸಘಡ ಹಾಗೂ ಮಿಜೋರಾಂಗಳಲ್ಲೂ ಅಧಿಕಾರಕ್ಕೇರಲು ರಣತಂತ್ರ ಹೂಡಿದೆ. ಭರ್ಜರಿ ಪ್ರಚಾರ, ಪಾದಯಾತ್ರೆಗಳ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿದೆ.

ಹಾಸನ ಲೋಕಸಭಾ ಅಭ್ಯರ್ಥಿಯಾಗಿ ದೇವೇಗೌಡರು ನಿಲ್ಲಲಿ: ಶಾಸಕ ಎ.ಮಂಜು

ರಾಜಸ್ಥಾನ ಬಿಜೆಪಿಯಲ್ಲಿ ವಸುಂದರ ರಾಜೆ ಮುನಿಸಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಲೇ ಇದೆ. ಇದಕ್ಕೆ ಪೂರಕವಾಗಿ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ವಸುಂದರ ರಾಜೆಗೆ ಸ್ಥಾನ ನೀಡಿರಲಿಲ್ಲ. ಇದೀಗ 2ನೇ ಪಟ್ಟಿಯಲ್ಲಿ ರಾಜೆಗೆ ಟಿಕೆಟ್ ಘೋಷಿಸಲಾಗಿದೆ. ಇತ್ತ ಕಾಂಗ್ರೆಸ್ ಆಡಳಿತ ವಿರೋಧಿ ಅಲೆ, ಗೆಹ್ಲೋಟ್ ಹಾಗೂ ಪೈಲೆಟ್ ನಡುವಿನ ಬಂಡಾಯದಿಂದ ಬಿಜೆಪಿ ಅಧಿಕಾರಕ್ಕೇರುವ ವಿಶ್ವಾಸದಲ್ಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!