
ಬೀದರ್(ಆ.05): ಕಾಂಗ್ರೆಸ್ ಆಡಳಿತದಲ್ಲಿ ಬೀದರ್ ಮಾರ್ಗವಾಗಿ ಚಲಿಸುವ ಒಂದು ರೈಲಿನ ಸಮಯವನ್ನೂ ಬದಲಾಯಿಸಲು ಆಗಿರಲಿಲ್ಲಾ ಎಂದು ಕೇಂದ್ರ ಸಚಿವ ಭಗವಂತ ಖೂಬಾ ವ್ಯಂಗ್ಯವಾಡಿದ್ದಾರೆ.
ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಇದರ ಜೊತೆಗೆ 2 ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ಬೀದರ್-ಕಲಬುರಗಿ ರೈಲ್ವೆ ಲೈನ್ 1998-99ರಲ್ಲಿ ಪ್ರಾರಂಭಗೊಂಡು 2013-14ರವರೆಗೆ (16 ವರ್ಷದಲ್ಲಿ) 150 ಕೋಟಿ ಅನುದಾನದಲ್ಲಿ ಕೇವಲ 37 ಕಿಮೀ. ಪೂರ್ಣಗೊಳಿಸಿದ್ದರು. 2014ಕ್ಕೆ ನಾನು ಸಂಸದನಾದ ಮೇಲೆ ಕೇವಲ 3 ವರ್ಷದಲ್ಲಿ, 1392ಕೋಟಿ ಅನುದಾನದಲ್ಲಿ 73.193 ಕಿಮೀ ಕಾಮಗಾರಿ ಪೂರ್ಣಗೊಳಿಸಿ, ಅಕ್ಟೋಬರ್ 29, 2017ರಲ್ಲಿ ಪ್ರಧಾನಮಂತ್ರಿಗಳ ಅಮೃತ ಹಸ್ತದಿಂದ ಉದ್ಘಾಟನೆಗೊಳಿಸಿರುವೆ ಎಂದು ತಿಳಿಸಿದ್ದಾರೆ.
25 ಕೋಟಿ ರು. ವೆಚ್ಚದಲ್ಲಿ ಬೀದರ್ ರೈಲು ನಿಲ್ದಾಣ ಅಭಿವೃದ್ಧಿ: ಕೇಂದ್ರ ಸಚಿವ ಭಗವಂತ ಖೂಬಾ
ಬೀದರ್ ಯಶವಂತಪೂರ ವಾಯಾ ಕಲಬುರಗಿ ಶೀಘ್ರ ಆರಂಭ:
ವಾಯಾ ಕಲಬುರಗಿ ಮಾರ್ಗವಾಗಿ ಈಗಾಗಲೆ ಬೆಂಗಳೂರು, ತಿರುಪತಿ, ಹುಬ್ಬಳ್ಳಿ, ಮುಂಬೈಗೆ ಪ್ರಾಯೋಗಿಕವಾಗಿ ರೈಲುಗಳು ಚಲಿಸಿವೆ, ಜನತೆಯ ಆಶಯದಂತೆ ಬೀದರ್‌ನಿಂದ ಯಶವಂತಪೂರ ವಾಯಾ ಕಲಬುರಗಿ ಮಾರ್ಗವಾಗಿ ಶೀಘ್ರದಲ್ಲಿ ಹೊಸ ರೈಲು ಪ್ರಾರಂಭವಾಗಲಿದೆ ಎಂದು ಭರವಸೆ ನೀಡಿದ್ದಾರೆ. ನನ್ನ ಈ ಒಂಬತ್ತು ವರ್ಷಗಳ ಅವಧಿಯಲ್ಲಿ ಐತಿಹಾಸಿಕ ಸಾಧನೆಗಳು ಆಗಿವೆ. ಇವುಗಳ ಸಾಲಿಗೆ ರೈಲ್ವೆ ನಿಲ್ದಾಣ ಅಭಿವೃದ್ದಿ ಕಾಮಗಾರಿಗಳು ಸಹ ಸೇರ್ಪಡೆಗೊಳ್ಳುತ್ತಿವೆ, ಇವುಗಳೆಲ್ಲವೂ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ಸಾಧ್ಯವಾಗುತ್ತಿವೆ ಎಂದು ಸಚಿವ ಖೂಬಾ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.