ಕಾಂಗ್ರೆಸ್‌ ರಾಹುಲ್‌ ಗಾಂಧಿ ನಾಯಕತ್ವದಲ್ಲೇ ಕೊನೆಗಾಣಲಿದೆ: ಕೇಂದ್ರ ಗೃಹ ಸಚಿವ ಅಮಿತ್‌ ಶಾ

Published : Mar 27, 2023, 07:44 AM ISTUpdated : Mar 27, 2023, 08:12 AM IST
ಕಾಂಗ್ರೆಸ್‌ ರಾಹುಲ್‌ ಗಾಂಧಿ ನಾಯಕತ್ವದಲ್ಲೇ ಕೊನೆಗಾಣಲಿದೆ: ಕೇಂದ್ರ ಗೃಹ ಸಚಿವ ಅಮಿತ್‌ ಶಾ

ಸಾರಾಂಶ

ಕಾಂಗ್ರೆಸ್‌ ನಾಯ​ಕ​ರು ಕರ್ನಾ​ಟಕವನ್ನು ಎಟಿಎಂ ಆಗಿ​ಸಿ​ಕೊಂಡಿದ್ದಾರೆ. ಇಲ್ಲಿನ ಹಣ​ ತೆಗೆ​ದು​ಕೊಂಡು ಹೋಗಿ ದೆಹ​ಲಿಯಲ್ಲಿ ಸುರಿ​ಯ​ಲಿದ್ದು, ಅಂಥವರಿಗೆ ಅಧಿ​ಕಾ​ರ ನೀಡ​ಬೇಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು. 

ಗೋರ್ಟಾ/ರಾಯ​ಚೂರು (ಮಾ.27): ಕಾಂಗ್ರೆಸ್‌ ನಾಯ​ಕ​ರು ಕರ್ನಾ​ಟಕವನ್ನು ಎಟಿಎಂ ಆಗಿ​ಸಿ​ಕೊಂಡಿದ್ದಾರೆ. ಇಲ್ಲಿನ ಹಣ​ ತೆಗೆ​ದು​ಕೊಂಡು ಹೋಗಿ ದೆಹ​ಲಿಯಲ್ಲಿ ಸುರಿ​ಯ​ಲಿದ್ದು, ಅಂಥವರಿಗೆ ಅಧಿ​ಕಾ​ರ ನೀಡ​ಬೇಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು. ಬೀದರ್‌ ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದಲ್ಲಿ ಹುತಾತ್ಮರ ಸ್ಮಾರಕ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಪ್ರತಿಮೆ ಹಾಗೂ ಧ್ವಜಸ್ತಂಭ ಅನಾವರಣಗೊಳಿಸಿ ಹಾಗೂ ರಾಯಚೂರು ಜಿಲ್ಲೆ ದೇವ​ದುರ್ಗ ತಾಲೂ​ಕಿನ ಗಬ್ಬೂರು ಗ್ರಾಮ​ದಲ್ಲಿ 4 ಸಾವಿರ ಕೋಟಿಗೂ ಹೆಚ್ಚಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾ​ಟನೆ ಮತ್ತು ಶಂಕು ಸ್ಥಾಪನೆ ಕಾರ್ಯ​ಕ್ರ​ಮ​ ಉದ್ಘಾ​ಟಿಸಿ ಮಾತ​ನಾ​​ದರು.

ಕಾಂಗ್ರೆಸ್‌ನಿಂದ ರಾಜ್ಯ ಅಭಿವೃದ್ಧಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಕಳೆದ ಬಾರಿ ರಾಜ್ಯ​ದಲ್ಲಿ ಬಿಜೆಪಿ 104 ಸ್ಥಾನ​ಗ​ಳನ್ನು ಗಳಿ​ಸಿದ್ದರೂ ಕೇವಲ 40 ಸೀಟುಗಳನ್ನು ಗೆದ್ದಿದ್ದ ಜೆಡಿಎಸ್‌ನ ಎಚ್‌.​ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್‌ ಕುದುರೆ ಏರಿ ಸರ್ಕಾರ ರಚನೆ ಮಾಡಿ​ಕೊಂಡು ಅಕ್ರಮ, ಭ್ರಷ್ಟಾ​ಚಾ​ರ​ದಲ್ಲಿ ಮುಳು​ಗಿದ್ದರು. ಮುಂದೆ ರಾಜ್ಯ​ದಲ್ಲಿ ಅಂಥ ಪರಿ​ಸ್ಥಿ​ತಿ ತರಬೇಡಿ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಲೂಟಿ ಮಾಡುವುದನ್ನು ಬಿಟ್ಟರೆ ಬೇರೆನೂ ಮಾಡುವುದಿಲ್ಲ. ರಾಜ್ಯ​ವನ್ನು ಸಂಪೂರ್ಣ ಅಭಿವೃದ್ಧಿಯತ್ತ ತೆಗೆ​ದು​ಕೊಂಡು ಹೋಗು​ವ ಬಿಜೆ​ಪಿಗೆ ಸಂಪೂರ್ಣ ಬಹು​ಮತ ನೀಡಬೇಕು ಎಂದು ಮನವಿ ಮಾಡಿ​ದರು.

ಹಳೆ ಮೈಸೂರು, ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಸೀಟು ಗೆಲ್ಲಿ: ಅಮಿತ್‌ ಶಾ

ದೇಶದ ಜನ ಮೋದಿ ನೇತೃತ್ವದಲ್ಲಿ ಪ್ರಗತಿ ಪಥದತ್ತ ಸಾಗುವ ಮನಸ್ಸು ಮಾಡಿದ್ದಾರೆ. ಕಾಂಗ್ರೆಸ್‌ ರಾಹುಲ್‌ ಗಾಂಧಿ ನಾಯಕತ್ವದಲ್ಲೇ ಕೊನೆಗಾಣಲಿದೆ. ಈಶಾನ್ಯ ರಾಜ್ಯಗಳಲ್ಲಿ ಈಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲು ಕಂಡಿದ್ದೇ ಇದಕ್ಕೆ ಸಾಕ್ಷಿ ಎಂದರು. ಇದೇ ವೇಳೆ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೈದರಾಬಾದ್‌ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕಾರಣ ಮಾಡಿದ್ದಲ್ಲದೆ, ಈ ಭಾಗದ ಅಭಿವೃದ್ಧಿಗೆ .3 ಸಾವಿರ ಕೋಟಿ ನೀಡಿದ್ದಾರೆ. ಇದೀಗ ಬೊಮ್ಮಾಯಿ .5 ಸಾವಿರ ಕೋಟಿ ಘೋಷಣೆ ಮಾಡಿದ್ದು, ಇಲ್ಲಿನವರ ಕುರಿತ ಕಾಳಜಿಯ ಪ್ರತೀಕ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತದ ಸರ್ಕಾರ ರಚಿಸುವ ಶಕ್ತಿಯನ್ನು ಮತದಾರ ನೀಡಬೇಕು. ಆಗ ರಾಜ್ಯದಲ್ಲಿ ಮತ್ತಷ್ಟುಅಭಿವೃದ್ಧಿ ಪರ್ವವನ್ನು ಕಾಣುತ್ತೀರಿ ಎಂದು ತಿಳಿಸಿದರು.

ಮುಸ್ಲಿಮರ ಮೀಸಲು ಲಿಂಗಾಯತ, ಒಕ್ಕಲಿಗರಿಗೆ ಹಂಚಿ ನ್ಯಾಯ: ಅಮಿತ್‌ ಶಾ

ಗೋರ್ಟಾ ಲಕ್ಷ್ಮಿ ದೇಗುಲಕ್ಕೆ ಶಾ ಭೇಟಿ: ಗೋರ್ಟಾ ಗ್ರಾಮದ ಲಕ್ಷ್ಮಿ ದೇವಸ್ಥಾನದ ಮುಂದೆಯೇ ನಿಜಾಮ ಬೆಂಬಲಿತ ರಜಾಕಾರರು ಹೈದರಾಬಾದ್‌ ವಿಮೋಚನಾ ಹೋರಾಟಗಾರರ ಹತ್ಯೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹುತಾತ್ಮರ ಸ್ಮಾರಕ ಉದ್ಘಾಟನೆಗೆ ಆಗಮಿಸಿದ್ದ ಅಮಿತ್‌ ಶಾ ಅವರು ಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ನಂತರ ಕೆಲ ಹೊತ್ತು ಅಲ್ಲಿನ ಗ್ರಾಮಸ್ಥರ ಜತೆ ಮಾತುಕತೆ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ