ರಾಯಚೂರು: ಇಂದು ಗಬ್ಬೂರಿಗೆ ಕೇಂದ್ರ ಗೃಹ ಸಚಿವ ಅಮಿತ ಶಾ ಭೇಟಿ

Published : Mar 26, 2023, 10:15 AM IST
ರಾಯಚೂರು: ಇಂದು ಗಬ್ಬೂರಿಗೆ ಕೇಂದ್ರ ಗೃಹ ಸಚಿವ ಅಮಿತ ಶಾ ಭೇಟಿ

ಸಾರಾಂಶ

ದೇವದುರ್ಗ ವಿಧಾ​ನ​ಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾ​ರಂಭ​ವನ್ನು ತಾಲೂಕಿನ ಗಬ್ಬೂರು ಗ್ರಾಮ​ದ​ಲ್ಲಿ ಮಾ.26 ಭಾನು​ವಾ​ರ ಬೆಳಗ್ಗೆ 11ಗಂಟೆಗೆ ಹಮ್ಮಿ​ಕೊಂಡಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಸೇರಿ​ದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾ​ರ​ಗಳ ಸಚಿ​ವರು, ಸಂಸ​ದ​ರು,​ ಶಾ​ಸ​ಕರು ಭಾಗ​ವ​ಹಿ​ಸ​ಲಿ​ದ್ದಾರೆ.

ದೇವದುರ್ಗ (ಮಾ.26) : ಇಲ್ಲಿನ ವಿಧಾ​ನ​ಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾ​ರಂಭ​ವನ್ನು ತಾಲೂಕಿನ ಗಬ್ಬೂರು ಗ್ರಾಮ​ದ​ಲ್ಲಿ ಮಾ.26 ಭಾನು​ವಾ​ರ ಬೆಳಗ್ಗೆ 11ಗಂಟೆಗೆ ಹಮ್ಮಿ​ಕೊಂಡಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit shah) ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಸೇರಿ​ದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾ​ರ​ಗಳ ಸಚಿ​ವರು, ಸಂಸ​ದ​ರು,​ ಶಾ​ಸ​ಕರು ಭಾಗ​ವ​ಹಿ​ಸ​ಲಿ​ದ್ದಾರೆ.

ಈಗಾ​ಗಲೇ ಕಾರ್ಯ​ಕ್ರ​ಮದ ಪೂರ್ವ ಸಿದ್ಧ​ತೆ​ಗಳು ಅಂತಿ​ಮ​ಗೊಂಡಿದ್ದು, ಗಬ್ಬೂರು ಸಮೀ​ಪದ 5 ಎಕರೆ ಪ್ರದೇ​ಶ​ದಲ್ಲಿ 5 ಹೆಲಿ​ಕಾ​ಪ್ಟ​ರ್‌​ಗ​ಳನ್ನು ನಿಲ್ಲಿ​ಸು​ವು​ದ​ಕ್ಕಾಗಿ ಹೆಲಿ​ಪ್ಯಾ​ಡ್‌​ಗ​ಳನ್ನು ನಿರ್ಮಿ​ಸ​ಲಾ​ಗಿದೆ. 29 ಎಕ​ರೆ​ಯಲ್ಲಿ ಬೃಹತ್‌ ವೇದಿ​ಕೆ​ಯನ್ನು ನಿರ್ಮಿ​ಸ​ಲಾ​ಗಿದೆ. ಸುಮಾರು 1 ಲಕ್ಷ 30 ಸಾವಿರ ಆಸ​ನ​ಗಳ ವ್ಯವ​ಸ್ಥೆ​ಯನ್ನು ಮಾಡಿದ್ದು, 9 ಎಕರೆಯಲ್ಲಿ ಊಟದ ವಿಭಾ​ಗ​ವನ್ನು ಮಾಡ​ಲಾ​ಗಿದೆ. ಇಷ್ಟೇ ಅಲ್ಲದೇ ಕಾರ್ಯ​ಕ್ರ​ಮಕ್ಕೆ ಬರುವ ಲಕ್ಷಾಂತರ ಜನ​ರಿಗೆ ಲಡ್ಡು, ಅನ್ನ-ಸಾಂಬರ್‌, ಪಲ್ಯಾ, ಚಟ್ನಿ ಹಾಗೂ ಶುದ್ಧ ಕುಡಿ​ಯುವ ನೀರುನ್ನು ಒದ​ಗಿ​ಸಿ​ಕೊ​ಡ​ಲಾ​ಗು​ತ್ತಿ​ದೆ.

ರಾಯಚೂರು: ಮೊದಲ ಪಟ್ಟಿ​ಯಲ್ಲಿ ಜಿಲ್ಲೆಯ ಇಬ್ಬರು ಹಾಲಿ ಶಾಸ​ಕ​ರಿಗೆ ಟಿಕೆಟ್‌

ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ, ಪ್ರಲ್ಹಾದ್‌ ಜೋಶಿ(Pralhad joshi), ಮುಖ್ಯಮಂತ್ರಿ ಬೊಮ್ಮಾಯಿ, ಬಿ.ಎಸ್‌. ಯಡಿಯೂರಪ್ಪ(BS Yadiyurappa), ಸಚಿವ ವಿ.ಸೋಮಣ್ಣ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್‌ ಕಟೀಲ್‌ ಸೇರಿ ಇತರರು ಭಾಗವಹಿಸಲಿದ್ದಾರೆ.

ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಭಾರಿ ಮತ್ತು ಮಧ್ಯಮ ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ಪಂಚಾಯತ್‌ ರಾಜ್‌ ಇಲಾಖೆ, ವಸತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ವಸತಿ ಇಲಾಖೆ, ಗೃಹ ಇಲಾಖೆ, ಸಾರಿಗೆ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ಸೇರಿದಂತೆ 4283 ಕೋಟಿ ರು. ಮೊತ್ತದ 220 ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮಾಡ​ಲಾ​ಗು​ತ್ತಿ​ದೆ.

ರಾಯ​ಚೂರು ಜಿಲ್ಲೆ ದೇವ​ದುರ್ಗ ಸೇರಿ​ ಏಳು ವಿಧಾ​ನ​ಸಭಾ ಕ್ಷೇತ್ರ​(Devadurga assembly constituency)ಗ​ಳಾದ ರಾಯ​ಚೂರು ನಗರ, ಗ್ರಾಮೀಣ, ಮಾನ್ವಿ, ಸಿಂಧ​ನೂ​ರು,​ಲಿಂಗ​ಸು​ಗೂರು, ಮಸ್ಕಿ ಹಾಗೂ ರಾಯ​ಚೂರು ಲೋಕ​ಸಭಾ ಕ್ಷೇತ್ರದ ವ್ಯಾಪ್ತಿಯ ರಾಯ​ಚೂರು ಜಿಲ್ಲೆ ಪಕ್ಕ​ದ ಯಾದ​ಗಿರಿ, ಶಹಾ​ಪುರ, ಸುರ​ಪು​ರ ಕ್ಷೇತ್ರ​ಗ​ಳಿಂದ ಸುಮಾರು 3 ಲಕ್ಷ ಜನರು ಕಾರ್ಯ​ಕ್ರ​ಮ​ದಲ್ಲಿ ಪಾಲ್ಗೊ​ಳ್ಳಿ​ದ್ದಾ​ರೆ.

ಕಾಂಗ್ರೆಸ್‌ನ ಬಸ​ನ​ಗೌ​ಡ​ರಿಗೆ ತಿರು​ಗೇಟು ​ನೀ​ಡು​ವುದೇ ಬಿಜೆಪಿ?: ರೆಡ್ಡಿ ಪಕ್ಷದಿಂದ ಎದುರಾಗಿದೆ ಮತ ವಿಭಜನೆಯ ಭೀತಿ

ದೇವ​ದುರ್ಗ ತಾಲೂ​ಕಿನ ಗಬ್ಬೂರು ಗ್ರಾಮ​ದಲ್ಲಿ ವಿವಿಧ ಅಭಿ​ವೃದ್ಧಿ ಕಾಮ​ಗಾ​ರಿ​ಗಳ ಉದ್ಘಾ​ಟನೆ ಹಾಗೂ ಶಂಕುಸ್ಥಾಪನೆ ಸಮಾ​ರಂಭಕ್ಕೆ ಕೆಂದ್ರ ಗೃಹ ಸಚಿವ ಅಮಿತ ಶಾ, ಸಿಎಂ ಬಸ​ವ​ರಾಜ ಬೊಮ್ಮಾಯಿ ಸೇರಿ ಹಲ​ವಾರು ಗಣ್ಯರು ಆಗ​ಮಿ​ಸು​ತ್ತಿದ್ದು, ಈ ಹಿನ್ನೆ​ಲೆ​ಯಲ್ಲಿ ಕಾರ್ಯ​ಕ್ರಮ ಅಚ್ಚು​ಕ​ಟ್ಟಾಗಿ ನಡೆ​ಸಲು ಅಗ​ತ್ಯ​ವಾದ ಎಲ್ಲ ರೀತಿಯ ಸಿದ್ಧ​ತೆ​ಗ​ಳನ್ನು ಮಾಡಿ​ಕೊ​ಳ್ಳ​ಲಾ​ಗಿದೆ.

-ಕೆ.ಶಿ​ವ​ನ​ಗೌಡ ನಾಯಕ, ದೇವ​ದುರ್ಗ ಶಾಸಕ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ
ಅಕ್ಕಿ ಅಕ್ರಮದಲ್ಲಿ ಬಿಜೆಪಿಯವರೇ ಶಾಮೀಲು: ಸಚಿವ ಪ್ರಿಯಾಂಕ್ ಖರ್ಗೆ