ಕಿತ್ತೂರು ಕರ್ನಾಟಕದಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಂದಿದ್ದಾಯ್ತು ಈಗ ಅಮಿತ್ ಶಾ ಸರದಿ. ಇದೇ ಜ.27 ಹಾಗೂ 28ರಂದು ಎರಡು ದಿನ ಧಾರವಾಡ, ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ ಅಮಿತ್ ಶಾ.
ಬೆಳಗಾವಿ(ಜ.25): ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿಗೆ ಶಕ್ತಿ ತುಂಬಲು ಚುನಾವಣಾ ಚಾಣಕ್ಯ ಅಮಿತ್ ಶಾ ಬರುತ್ತಿದ್ದಾರೆ. ಕಿತ್ತೂರು ಕರ್ನಾಟಕದಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಂದಿದ್ದಾಯ್ತು ಈಗ ಅಮಿತ್ ಶಾ ಸರದಿ. ಇದೇ ಜ.27 ಹಾಗೂ 28ರಂದು ಎರಡು ದಿನ ಅಮಿತ್ ಶಾ ಧಾರವಾಡ, ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಜ.27ರ ರಾತ್ರಿ ಹುಬ್ಬಳ್ಳಿಗೆ ಅಗಮಿಸಿ ಅಮಿತ್ ಶಾ ವಾಸ್ತವ್ಯ ಹೂಡಲಿದ್ದಾರೆ. ಜ.28ರ ಬೆಳಗ್ಗೆ 10ಗಂಟೆಗೆ ಅಮಿತ್ ಶಾ ಕುಂದಗೋಳಕ್ಕೆ ತೆರಳಲಿದ್ದಾರೆ. ಕುಂದಗೋಳದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗಿಯಾಗಿ ಬಳಿಕ ಕೆಎಲ್‌ಇ ಸಂಸ್ಥೆಯ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ. ಬಳಿಕ ರಾಷ್ಟ್ರೀಯ ವಿಧಿವಿಜ್ಞಾನ ವಿಜ್ಞಾನ ಕೇಂದ್ರದ ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ 3.45ಕ್ಕೆ ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿಗೆ ಆಗಮಿಸಿ ಬೆಳಗಾವಿಯಲ್ಲಿ ಸರಣಿ ಸಭೆಗಳನ್ನ ಅಮಿತ್ ಶಾ ನಡೆಸಲಿದ್ದಾರೆ.
ಕಡಿಮೆ ಸೀಟು ಬಂದ್ರೂ ಗುದ್ದಾಡಿ ಬಿಜೆಪಿ ಅಧಿಕಾರಕ್ಕೆ: ರಮೇಶ್ ಜಾರಕಿಹೊಳಿ
ಜನವರಿ 28ರಂದು ಕಿತ್ತೂರು ವಿಧಾನಸಭಾ ಕ್ಷೇತ್ರದ ಎಂ.ಕೆ.ಹುಬ್ಬಳ್ಳಿಯಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ. ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳನ್ನೇ ಟಾರ್ಗೆಟ್ ಮಾಡಿ ಬಿಜೆಪಿ ಶಾಸಕ ಇರುವ ಕ್ಷೇತ್ರ ಕೇಂದ್ರವಾಗಿಸಿ ಬೃಹತ್ ಸಮಾವೇಶವನ್ನ ಆಯೋಜನೆ ಮಾಡಲಾಗಿದೆ.
ಖರ್ಗೆ ಸಿಎಂ ಅವಕಾಶ ತಪ್ಪಿಸಿದ್ದು ಸಿದ್ದರಾಮಯ್ಯ : ಗಂಭೀರ ಆರೋಪ
ಬಿಜೆಪಿ ಬಾವುಟ ಹಾರಿಸಲು ಬಿಜೆಪಿ ಮಾಸ್ಟರ್ ಪ್ಲ್ಯಾನ್
ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಖಾನಾಪುರ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಬೆಳಗಾವಿ ಗ್ರಾಮೀಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್, ಬೈಲಹೊಂಗಲದಲ್ಲಿ - ಮಹಾಂತೇಶ ಕೌಜಲಗಿ, ಖಾನಾಪುರದಲ್ಲಿ ಅಂಜಲಿ ನಿಂಬಾಳ್ಕರ್ ಹಾಲಿ ಕಾಂಗ್ರೆಸ್ ಶಾಸಕರಿದ್ದಾರೆ. ಹೀಗಾಗಿ ಈ ಮೂರು ಕ್ಷೇತ್ರಗಳ ಸಮೀಪದಲ್ಲಿರುವ ಎಂ.ಕೆ.ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶವನ್ನ ಹಮ್ಮಿಕೊಳ್ಳಲಾಗಿದೆ.
ಜ.28ರಂದು ಬೆಳಗಾವಿಯಲ್ಲಿ ಜ.28ರ ಸಂಜೆ 6.30ರಿಂದ 7.30ರವರೆಗೆ ಸಂಘ ಪರಿವಾರದ ಹಿರಿಯರ ಜೊತೆ ಸಭೆ, ಬಳಿಕ ಸಂಜೆ 7.30 ರಿಂದ 8.30ರವರೆಗೆ ಪಕ್ಷದ ಪದಾಧಿಕಾರಿಗಳ ಸಭೆ, ಬೆಳಗಾವಿ ಮಹಾನಗರ, ಬೆಳಗಾವಿ ಗ್ರಾಮಾಂತರ, ಚಿಕ್ಕೋಡಿ ಸಂಘಟನಾತ್ಮಕ ಜಿಲ್ಲೆಗಳ ಪದಾಧಿಕಾರಿಗಳ ಸಭೆ, ರಾತ್ರಿ 8.30ರಿಂದ 10 ಗಂಟೆಯವರೆಗೆ ಬೆಳಗಾವಿ ಜಿಲ್ಲೆಯ ಹಿರಿಯ ಬಿಜೆಪಿ ನಾಯಕರ ಜೊತೆ ಅಮಿತ್ ಶಾ ಸಭೆ ನಡೆಸಲಿದ್ದಾರೆ. ಜ.28ರ ರಾತ್ರಿ 10.30ಕ್ಕೆ ಬೆಳಗಾವಿಯಿಂದ ದೆಹಲಿಗೆ ಅಮಿತ್ ಶಾ ವಾಪಸ್ ತೆರಳಲಿದ್ದಾರೆ.
ಕಿತ್ತೂರು ಕರ್ನಾಟಕ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಅಮಿತ್ ಶಾ ಒತ್ತು
ಕಿತ್ತೂರು ಕರ್ನಾಟಕ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಅಮಿತ್ ಶಾ ಒತ್ತು ಕೊಟ್ಟಿದ್ದಾರೆ. ಬಿಜೆಪಿ ಶಕ್ತಿ ಕೇಂದ್ರ ಬೆಳಗಾವಿ ಜಿಲ್ಲೆಯಲ್ಲಿ ಅಮಿತ್ ಶಾ ಹೈವೋಲ್ಟೇಜ್ ಸಭೆಗಳನ್ನ ನಡೆಸಲಿದ್ದಾರೆ. ಜನವರಿ 28ರಂದು ಅಮಿತ್ ಶಾ ಬೆಳಗಾವಿ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಸಲಿದ್ದಾರೆ. ಬೆಳಗಾವಿ ಜಿಲ್ಲೆ ವ್ಯಾಪ್ತಿಯ ಮೂರು ಸಂಘಟನಾತ್ಮಕ ಜಿಲ್ಲೆಗಳ ಪದಾಧಿಕಾರಿಗಳು, ನಾಯಕರ ಸಭೆ, ಬೆಳಗಾವಿ ನಗರ, ಬೆಳಗಾವಿ ಗ್ರಾಮಾಂತರ, ಚಿಕ್ಕೋಡಿ ಸಂಘಟನಾತ್ಮಕ ಜಿಲ್ಲೆಗಳ ಸಭೆ ನಡೆಸಲಿದ್ದಾರೆ.