ರಾಜ್ಯದ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯ ಕೊರುತ್ತೇನೆ. ಹಲವಾರು ರೀತಿಯಲ್ಲಿ ಕೊಡುಗೆ ಕೊಟ್ಟ ಜಿಲ್ಲೆ ಶಿವಮೊಗ್ಗ, ಬೇರೆ ನಗರಗಳಿಗೆ ಹೋಲಿಸಿದರೆ ಇಲ್ಲಿ ಸ್ವಲ್ಪ ಅಭಿವೃದ್ಧಿಯಾಗಿದೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ತಿಳಿಸಿದರು.
ಶಿವಮೊಗ್ಗ (ಸೆ.5): ರಾಜ್ಯದ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯ ಕೊರುತ್ತೇನೆ. ಹಲವಾರು ರೀತಿಯಲ್ಲಿ ಕೊಡುಗೆ ಕೊಟ್ಟ ಜಿಲ್ಲೆ ಶಿವಮೊಗ್ಗ, ಬೇರೆ ನಗರಗಳಿಗೆ ಹೋಲಿಸಿದರೆ ಇಲ್ಲಿ ಸ್ವಲ್ಪ ಅಭಿವೃದ್ಧಿಯಾಗಿದೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು, ಸರ್ಕಾರ ಯೋಜನೆಗೆಳು ಜಾರಿಗೆ ತರುವ ವಿಚಾರ ದಲ್ಲಿ ಲೋಪದೋಷಗಳು ಆಗ್ತಿವೆ. ಈ ಹಿಂದೆ ಯಾವತ್ತೂ ಈ ರೀತಿ ಕಂಡಿರಲಿಲ್ಲ. ಆಡಳಿತ ಪಕ್ಷದ ಅವಧಿ ಕೊನೆ ದಿನಗಳಿಗೆ ಬಂದ ರೀತಿಯಲ್ಲಿ ಟೀಕೆ ಟಿಪ್ಪಣಿ ನಡೆಯುತ್ತವೆ. ಆದರೆ ಅಧಿಕಾರಕ್ಕೆ ಬಂದ ಮೊದಲ ವರ್ಷವೇ ಸರ್ಕಾರದ ಬಗ್ಗೆ ಟೀಕೆ ಶುರುವಾಗಿವೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Channapatna Byelection: ಚನ್ನಪಟ್ಟಣ ಸೋತ್ರೆ ಕುಮಾರಸ್ವಾಮಿಗೆ ಹಿನ್ನಡೆ, ಯೋಗೇಶ್ವರ್
ಕಳೆದ ಸರ್ಕಾರ ಬಗ್ಗೆ ದೊಡ್ಡ ಮಟ್ಟದಲ್ಲಿ ಟೀಕೆ ಮಾಡಿ ಅಧಿಕಾರ ಹಿಡಿದ್ರು. ಕಾಂಗ್ರೆಸ್ ನವರು ಸ್ವಲ್ಪ ಬದಲಾವಣೆ ತರಬಹುದು ಅಂತಾ ಜನ ನಿರೀಕ್ಷೆ ಮಾಡಿದ್ರು. ಕಾಂಗ್ರೆಸ್ ಸ್ನೇಹಿತರೇ ಸರ್ಕಾರದ ಬಗ್ಗೆ 40 % ಮೀರಿದೆ ಅಂತಾ ಹೇಳ್ತಾ ಇದ್ದಾರೆ. ರಾಜ್ಯದ ಅಭಿವೃದ್ಧಿ ಗೆ ಪೂರಕವಾಗಿ ಹಣ ಬಳಕೆ ಆಗ್ತಿದ್ದೀಯಾ ಅನ್ನೋದು ಪ್ರಶ್ನೆಯಾಗಿದೆ. ಅಭಿವೃದ್ಧಿ ಪೂರಕ ಯೋಜನೆ ತರಬೇಕು. ನೀರಾವರಿ, ರಸ್ತೆ, ಕೃಷಿ ವಲಯದ ಪರಿಸ್ಥಿತಿ ಏನಾಗಿದೆ ಅನ್ನೋದು ನೋಡಬೇಕು. ಪ್ರಕೃತಿ ವಿಕೋಪದ ಬಗ್ಗೆ ಇವರ ಕೊಡುಗೆ ಏನು ಅಂತಾ ನೋಡಬೇಕು. ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ಬಗ್ಗೆ, ಅಧಿಕಾರಿಗಳ ವರ್ಗಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ನಿಗಮಗಳಲ್ಲಿ ನೂರಾರು ಕೋಟಿ ಹಗರಣ ನಡೆಸಲಾಗಿದೆ. ಬಡವರ ಹೆಸರಲ್ಲಿ ಲೂಟಿ ಮಾಡುತ್ತಿದ್ದಾರೆ. ನಾವು ಹಿಂದೂಳಿದ ವರ್ಗದವರು ಅಂತಾ ಸಿಎಂ ಹೇಳ್ತಾರೆ. ಸಂಗೊಳ್ಳಿ ರಾಯಣ್ಣ ಆಗಿರುವ ಘಟನೆಗಳನ್ನು ಸಿಎಂ ನೆನಪು ಮಾಡಿಕೊಂಡಿದ್ದಾರೆ. ಸ್ವಪಕ್ಷದವರೇ ಹುಡುಕಿ ಕೊಟ್ಟಿದ್ದಾರೆಂದು, ಸ್ವಪಕ್ಷದವರೇ ನನ್ನನ್ನು ಮುಳುಗಿಸೋಕೆ ಪ್ರಯತ್ನ ಮಾಡ್ತಾ ಇದ್ದಾರೆ ಎಂದು ಸಿದ್ದರಾಮಯ್ಯ ಅವರೇ ಹೇಳಿಕೊಂಡಿದ್ದಾರೆ. ಹೀಗಾಗಿ ವಿರೋಧ ಪಕ್ಷದ ಬಗ್ಗೆ ಮಾತನಾಡೋದು ನಿಲ್ಲಿಸಿದ್ದಾರೆ ಎಂದು ಕಿಡಿಕಾರಿದರು.
ಕಳೆದ ಬಾರಿ ಜಾಹೀರಾತು ನೀಡಿದ್ದ ವರದಿಗಳ ಬಗ್ಗೆ ತನಿಖೆ ಮಾಡಿದ್ರಾ ಇವರು? ಸಿಎಂ ಕುಟುಂಬದ ಬಗ್ಗೆ ಕೇಳಿಬಂದಿರುವ ಆರೋಪದ ಬಗ್ಗೆ ಇದೀಗ ಕೋರ್ಟ್ ನಲ್ಲಿ ವಾದ ನಡೆಯುತ್ತಿವೆ. ಅದರ ಬಗ್ಗೆ ನಾನು ಚರ್ಚೆ ಮಾಡೋದು ಅನಾವಶ್ಯಕ. ದಾಖಲೆಗಳನ್ನ ಇಟ್ಟೇ ಕೋರ್ಟ್ ನಲ್ಲಿ ಪ್ರಸ್ತಾಪ ಆಗಿದೆ. ಅಂತಿಮವಾಗಿ ಇದನ್ನ ಕೋರ್ಟ್ ಗೆ ಬಿಡಬೇಕು. ಈ ಬಗ್ಗೆ ಚರ್ಚೆ ಮಾಡೋದು ಸೂಕ್ತ ಅಲ್ಲ ಎಂದರು.
ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತ ಆಗಿದೆ. ಗುಂಡಿ ಮುಚ್ಚೋಕು ದುಡ್ಡಿಲ್ಲ. ಕಂದಾಯ ಸಚಿವರ ಕ್ಷೇತ್ರದಲ್ಲೂ ಗುಂಡಿ ಮುಚ್ಚೋಕೆ ಆಗದ ದಯಾನೀಯ ಪರಿಸ್ಥಿತಿ ಗೆ ರಾಜ್ಯ ತಲುಪಿದೆ. ಕೈಮುಗಿದು ಸಚಿವರೇ ಗುಂಡಿ ಮುಚ್ಚಿ ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಹಿಮಾಲಯ ಪ್ರದೇಶದಲ್ಲಿ ಸಂಬಳ ಕೋಡುವುದಕ್ಕೂ ಹಣ ಇಲ್ಲ. ಅಲ್ಲೂ ಕೂಡ ಕಾಂಗ್ರೆಸ್ ಸರ್ಕಾರ ಇದೆ. ಸಮಾನತೆ ಅನ್ನೋದು ಎಲ್ಲರಿಗೂ ಅನ್ವಯವಾಗಬೇಕು. ನಾನು ರೈತರ ಸಾಲಮನ್ನ ಮಾಡ್ತೀನಿ ಅಂದೆ. ಆಗ ಅಭಿವೃದ್ಧಿ ನಿಲ್ಲಿಸಿದ್ನಾ? ಎಂದು ಪ್ರಶ್ನಿಸಿದರು.
ನನಗೀಗ ಸಿಕ್ಕ ಅವಕಾಶದಲ್ಲಿ ಹಲವು ಯೋಜನೆಗಳು ಜಾರಿ ತರಬೇಕು ಎಂದುಕೊಂಡಿದ್ದೇನೆ. ಸುನಾಮಿ ವಿರುದ್ಧ ಈಜುವ ಪರಿಸ್ಥಿತಿ ಇದೆ.
ಸಿಕ್ಕ ಅವಕಾಶ ಹಲವಾರು ಯೋಜನೆ ಜಾರಿ ತರಬೇಕು ಅಂದುಕೊಂಡಿದ್ದೇನೆ. ಭದ್ರಾವತಿಯ ವಿಐಎಸ್ ಎಲ್ ಉಳಿಸೋಕೆ ಎಲ್ಲಾ ಪ್ರಯತ್ನ ಮಾಡ್ತಾ ಇದ್ದೀನಿ. ರಾಜ್ಯ ಸರ್ಕಾರದಲ್ಲಿ ಅನುಭವಸ್ಥರು ಇದ್ದೀರಿ. ಏನಾಗಿದೆ ನಿಮ್ಮಗೆ, ರಾಜ್ಯವನ್ನ ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಅಂದುಕೊಂಡಿದ್ದೀರಾ? ಕುದುರೆಮುಖ ಮೈನಿಂಗ್ ಕಂಪನಿ ಗೆ 1700 ಕೋಟಿ ಬಿಡುಗಡೆಗೆ ನಾನು ಸಹಿ ಹಾಕಿದ್ದೇನೆ. ಅರಣ್ಯ ಸಚಿವರಿಗೆ ತಲೆಬುಡ ಗೊತ್ತಿಲ್ಲ. ಸಣ್ಣಪುಟ್ಟ ದೋಷ ಇದ್ರು ಸರಿ ಮಾಡಿ ಕೊಡ್ತೀವಿ ಅಂತಾ ಕುದುರೆಮುಖದವರು ಹೇಳಿದ್ದಾರೆ. ಕುದುರೆಮುಖ ದ ಕಂಪನಿಗೆ ದಿನಕ್ಕೆ 27 ಕೋಟಿ ನಷ್ಟ ಆಗ್ತಿದೆ. ನಮ್ಮ ಮೇಲೆ ದ್ವೇಷ ಇದ್ರೆ ಬೇರೆ ತರಾ ತೀರಿಸಿಕೊಳ್ಳಿ. ನಮ್ಮ ಮೇಲಿನ ದ್ವೇಷ ಕ್ಕೆ ಕಾರ್ಮಿಕರನ್ನ ಯಾಕೆ ಬೀದಿಗೆ ತರ್ತೀರಾ? ಎಂದು ಕಿಡಿಕಾರಿದರು.
ಇನ್ನು ಹೆಚ್ಎಂಟಿ ಕಂಪನಿನಿಂದ ಬಂದ ಲಾಭದಿಂದ ಆರು ಕಡೆ ಓಪನ್ ಆಗಿತ್ತು. ಅದು ಈಗ ನಿಂತು ಹೋಗಿವೆ. ಅದಕ್ಕೆ ಜೀವ ಕೊಡುವ ಕೆಲಸ ಮಾಡಬೇಕು ಅಂದುಕೊಂಡಿದ್ದೇನೆ. ವಿಐಎಸ್ ಎಲ್ ಮಾರಾಟ ಮಾಡಲು ನಿರ್ಧಾರವಾಗಿತ್ತು. ಸಾವಿರಾರು ಜನರಿಗೆ ಅನ್ನ ಕೊಟ್ಟಿರುವ ಕಂಪನಿ ಅದು. ಅದಕ್ಕೆ ಜೀವ ಕೊಡುವ ಕೆಲಸ ಮಾಡ್ತಾ ಇದ್ದೀನಿ. ಅದರ ಶ್ರಮ ನನಗೆ ಮಾತ್ರ ಗೊತ್ತು. ಆರ್ಥಿಕ ಏರಿಳಿತ ಆಗಿರುವ ಕಂಪನಿಗಳು ಖಾಸಗಿತನಕ್ಕೆ ಒಪ್ಪಿಸಬೇಕು ಅಂತಾ ತೀರ್ಮಾನ ಆಗಿದೆ. ಆದರೂ ವಿಐಎಸ್ ಎಲ್ ಉಳಿಸೋಕೆ ನಾನು ಪ್ರಯತ್ನ ಮಾಡ್ತಾ ಇದ್ದೀನಿ. ರಾಜ್ಯದಲ್ಲಿ ಆಡಳಿತ ಮಾಡಲು ಸುಲಭ. ಕೇಂದದಲ್ಲಿ ಆಡಳಿತ ಮಾಡೋದು ಅಷ್ಟು ಸುಲಭ ಅಲ್ಲ. ಪ್ರಧಾನ ಮಂತ್ರಿ ಗೌರವ ಉಳಿಸಿ ಕೆಲಸ ಮಾಡಬೇಕಿದೆ. ನನಗೀಗ ದೊಡ್ಡ ಮಟ್ಟದ ಸವಾಲು ಇದೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಕೆಲವರು ಲಘವಾಗಿ ಮಾತಾನಾಡುತ್ತಿದ್ದಾರೆ. ವ್ಯವಸ್ಥೆ ಸರಿಪಡಿಸುತ್ತಿದ್ದೇನೆ. ಸರ್ಕಾರ ಇದೆ ಅನ್ನೋ ಭಾವನೆ ಇಲ್ಲ. ಸಮಯ ವ್ಯರ್ಥ ಆದರೆ ಕಾಲ ಮತ್ತೆ ಸಿಗೋಲ್ಲ. ಅದನ್ನ ಸರಿಯಾಗಿ ಬಳಕೆ ಮಾಡಬೇಕು. ನಾನು ಎಂದು ಸಹ ಕೇಂದ್ರ ಸರ್ಕಾರ ಜೊತೆ ಸಂಘರ್ಷಕ್ಕೆ ಹೋಗಲಿಲ್ಲ. ಕೇಂದ್ರದ ಸಚಿವರ ಜೊತೆ ವಿಶ್ವಾಸ ಗಳಿಸಿ ಅಭಿವೃದ್ಧಿ ಕೆಲಸ ಮಾಡಿದ್ದೆ. ವಿಐಎಸ್ ಎಲ್ ಉಳಿಸೋಕೆ ಶತ ಪ್ರಯತ್ನ ಮಾಡ್ತೇನೆ. ಅದಕ್ಕೆ ಸಮಯಬೇಕು. ನಾನು ಕಾರ್ಮಿಕ ರಿಗೆ ಭರವಸೆ ನೀಡ್ತೇನೆ ವಿಐಎಸ್ ಎಲ್ ಉಳಿಸೋಕೆ ಎಲ್ಲಾ ಪ್ರಯತ್ನ ಮಾಡ್ತೇನೆ ಎಂದರು.
ಕುಮಾರಸ್ವಾಮಿ ಅವರ ಸೇವೆ ಇವತ್ತಿಗೂ ರಾಜ್ಯಕ್ಕೆ ಅನಿವಾರ್ಯ: ನಿಖಿಲ್ ಕುಮಾರಸ್ವಾಮಿ
ಇನ್ನು ಸಿಎಂ ಸ್ಥಾನದ ಬಗ್ಗೆ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅವರ ನಡೆವಳಿಕೆ ನಮಗೆ ಗೊತ್ತಿಲ್ಲ. ಸಿಎಂ ಬದಲಾವಣೆ ಬಗ್ಗೆ ಅವರೇ ಮಾತನಾಡಿಕೊಳ್ತಿದ್ದಾರೆ. ಆಡಳಿತ ನಿಯಂತ್ರಣದ ಮೇಲೆ ಇದು ಎಫೆಕ್ಟ್ ಆಗುತ್ತದೆ. ಜನರಲ್ಲಿ ವಿಶ್ವಾಸ ಮೂಡಲ್ಲ ಪ್ರತಿನಿತ್ಯ ಇದೇ ರೀತಿ ಮುಂದುವರಿದ್ರೆ ಅಧಿಕಾರಿಗಳು ಮಾತು ಕೇಳೊಲ್ಲ. ರಾಜ್ಯದಲ್ಲಿ ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ ಎಂದು ಟೀಕಿಸಿದರು.