ಆಪರೇಷನ್‌ ಹಸ್ತ: ಮತ್ತೊಬ್ಬ ಬಿಜೆಪಿ ಶಾಸಕ ಕಾಂಗ್ರೆಸ್‌ಗೆ..?

By Kannadaprabha News  |  First Published Aug 29, 2023, 8:56 AM IST

ಸುರೇಶ್‌ ಗೌಡ ಬಿಜೆಪಿಯ ಶಾಸಕರು. ನಾವು ಯಾರನ್ನೂ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡ್ತಿಲ್ಲ. ಎಲ್ಲ ಪಕ್ಷಗಳಲ್ಲೂ ನನಗೆ ಸ್ನೇಹಿತರಿದ್ದಾರೆ. ನಾವು ಸೇರಿದಾಗ ರಾಜಕೀಯ ಮಾತ್ರವೇ ಚರ್ಚೆಯಾಗಿದೆ ಎಂದಲ್ಲ. ಅಧಿಕಾರದಲ್ಲಿದ್ದಾಗ ಹೆಚ್ಚು ಆಸಕ್ತಿ ತೋರುತ್ತಾರೆ. ಎಲ್ಲಿ ನಮ್ಮ ಪಕ್ಷ ದುರ್ಬಲವಾಗಿದೆಯೋ ಅಲ್ಲಿ ಸಂಘಟನೆ ಗಟ್ಟಿಮಾಡಬೇಕು ಎಂಬುದು ನಮ್ಮ ನಿಲುವು ಎಂದ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ 


ಬೆಂಗಳೂರು(ಆ.29):  ‘ಆಪರೇಷನ್‌ ಹಸ್ತ ಮಾಡುವ ಅನಿವಾರ್ಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಇಲ್ಲ. ನಮ್ಮ ತತ್ವ ಸಿದ್ಧಾಂತವನ್ನು ಯಾರು ಒಪ್ಪಿಕೊಳ್ಳುತ್ತಾರೋ ಅಂತಹವರಿಗೆ ಸ್ವಾಗತವಿದೆ. ಸ್ಥಳೀಯ ಮಟ್ಟದಲ್ಲಿ ಯಾರಿಗೆ ವಿರೋಧ ಇಲ್ಲವೋ ಅಂತಹವರನ್ನು ಸೇರಿಸಿಕೊಳ್ಳುತ್ತೇವೆ’ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಾರೆ.

ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್‌ಗೌಡ ಭೇಟಿ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ‘ಸುರೇಶ್‌ ಗೌಡ ಬಿಜೆಪಿಯ ಶಾಸಕರು. ನಾವು ಯಾರನ್ನೂ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡ್ತಿಲ್ಲ. ಎಲ್ಲ ಪಕ್ಷಗಳಲ್ಲೂ ನನಗೆ ಸ್ನೇಹಿತರಿದ್ದಾರೆ. ನಾವು ಸೇರಿದಾಗ ರಾಜಕೀಯ ಮಾತ್ರವೇ ಚರ್ಚೆಯಾಗಿದೆ ಎಂದಲ್ಲ. ಅಧಿಕಾರದಲ್ಲಿದ್ದಾಗ ಹೆಚ್ಚು ಆಸಕ್ತಿ ತೋರುತ್ತಾರೆ. ಎಲ್ಲಿ ನಮ್ಮ ಪಕ್ಷ ದುರ್ಬಲವಾಗಿದೆಯೋ ಅಲ್ಲಿ ಸಂಘಟನೆ ಗಟ್ಟಿಮಾಡಬೇಕು ಎಂಬುದು ನಮ್ಮ ನಿಲುವು’ ಎಂದು ಕುತೂಹಲಕಾರಿ ಹೇಳಿಕೆ ನೀಡಿದರು.

Tap to resize

Latest Videos

ಕಾಂಗ್ರೆಸ್‌ ಸರ್ಕಾರದ ಗೃಹಲಕ್ಷ್ಮಿ ಜಾರಿಗೆ ಬಿಜೆಪಿ ನಾಯಕನ ಸಿದ್ಧತೆ..?

‘ಪಕ್ಷ ಸಂಘಟನೆ ನಮಗೆ ಆದ್ಯತೆ. ಎಲ್ಲಿ ನಮಗೆ ಸೋಲಾಗಿದೆ, ಕಾರ್ಯಕರ್ತರಿಗೆ ಸಮಸ್ಯೆ ಆಗಿದೆ ಎಂಬುದನ್ನು ಪರಿಶೀಲಿಸಿ ಅಲ್ಲಿ ನಾವು ಸಂಘಟನೆ ಕೆಲಸ ಮಾಡುತ್ತೇವೆ. ಸದ್ಯ ಲೋಕಸಭೆಗೆ ಅಭ್ಯರ್ಥಿಗಳ ಕೊರತೆ ಏನೂ ಕಾಣುತ್ತಿಲ್ಲ. ಆಪರೇಷನ್‌ ಹಸ್ತ ಎಂಬ ಪದವೂ ಅಪ್ರಸ್ತುತ. ಅಧಿಕಾರ ಬೇಕು ಎಂದರೆ ಆಪರೇಷನ್‌ ಹಸ್ತ ಬೇಕಾಗುತ್ತದೆ. ನಾವು ಸ್ವಂತ ಬಲದಿಂದಲೇ ಅಧಿಕಾರಕ್ಕೆ ಬಂದಿದ್ದೇವೆ’ ಎಂದು ಹೇಳಿದರು.

click me!