ಹಾಲಿ ಶಾಸಕ ಜ್ಯೋತಿ ಗಣೇಶ್ ಅವರು ಮೌನಮುರಿದು ಮಾತನಾಡಿದ್ದು, ನಾನು ಬಿಜೆಪಿ ಬಿಡಲ್ಲ. ನನಗೆ ಬಿಜೆಪಿ ಟಿಕೆಟ್ ಫಿಕ್ಸ್ ಎಂದು ಹೇಳುವ ಬಿಜೆಪಿ ಟಿಕೆಟ್ ಲಾಭಿಗೆ ಬ್ರೇಕ್ ಹಾಕಿದ್ದಾರೆ.
ವರದಿ : ಮಹಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್
ತುಮಕೂರು (ಫೆ.21): ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜ್ಯೋತಿಗಣೇಶ್ ಅವರು ಬಿಜೆಪಿಯನ್ನು ತೊರೆಯಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ಈ ಮೂಲಕ ಬಿಜೆಪಿ ಟಿಕೆಟ್ ಮೇಲೆ ಹಲವರು ಕಣ್ಣು ಹಾಕಿದ್ದರು. ಆದರೆ, ಸ್ವತಃ ಹಾಲಿ ಶಾಸಕ ಜ್ಯೋತಿ ಗಣೇಶ್ ಅವರು ಮೌನಮುರಿದು ಮಾತನಾಡಿದ್ದು, ನಾನು ಬಿಜೆಪಿ ಬಿಡಲ್ಲ. ನನಗೆ ಬಿಜೆಪಿ ಟಿಕೆಟ್ ಫಿಕ್ಸ್ ಎಂದು ಹೇಳುವ ಬಿಜೆಪಿ ಟಿಕೆಟ್ ಲಾಭಿಗೆ ಬ್ರೇಕ್ ಹಾಕಿದ್ದಾರೆ.
undefined
ಜ್ಯೋತಿಗಣೇಶ್ ತಂದೆ ಸಂಸದ ಜಿ.ಎಸ್ ಬಸವರಾಜು ಕಾಂಗ್ರೆಸ್‌ನಿಂದ ಬಿಜೆಪಿ ಸೇರ್ಪಡೆಯಾದ ಬಳಿಕ ತಂದೆಯಂತೆ ಮಗ ಜ್ಯೋತಿಗಣೇಶ್ ಕೂಡ ಬಿಜೆಪಿ ಸೇರ್ಪಡೆಯಾಗಿ ತುಮಕೂರು ನಗರ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಕಳೆದ ಲೋಕಸಭೆ ಚುನಾವಣೆ ವೇಳೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಕೆ.ಎನ್ ರಾಜಣ್ಣ ಹಾಗೂ ಜಿ.ಎಸ್ ಬಸವರಾಜು ನಡುವೆ ಸ್ನೇಹದಿಂದ ಬಸವರಾಜು ಗೆಲುವು ಕೂಡ ಸಾಧಿಸಿದ್ದರು. ಈ ಬೆಳವಣಿಗೆ ಬಳಿಕ ಜಿ.ಎಸ್ ಬಸವರಾಜು ಹಾಗೂ ಶಾಸಕ ಜ್ಯೋತಿಗಣೇಶ್ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬರುತ್ತಾರೆ ಎಂದು ಕ್ಷೇತ್ರದಲ್ಲಿ ಮಾತುಗಳು ಶುರುವಾಗಿತ್ತು. ಇದು ದಿನೇ ದಿನೇ ದೊಡ್ಡದಾಗುತ್ತಾ ಬಂದಿತ್ತು.
BIG3: ಬೆಸ್ಕಾಂ ಉಗ್ರಾಣದಲ್ಲಿ ತುಕ್ಕು ಹಿಡಿಯುತ್ತಿವೆ 2 ಸಾವಿರ ಟಿಸಿಗಳು! ರೈತರಿಗೆ ಟಿಸಿ ಕೊಡಲು ಹಿಂದೇಟು!
ಸೊಗಡು ಶಿವಣ್ಣ ಟಿಕೆಟ್ ಲಾಭಿಗೆ ಹಿನ್ನಡೆ: ಈ ನಡುವೆ ಮಾಜಿ ಸಚಿವ ಬಿಜೆಪಿ ಕಟ್ಟಾಳು ಸೊಗಡು ಶಿವಣ್ಣ ಕೂಡ ಬಿಜೆಪಿ ಟಿಕೆಟ್ ಗೆ ಅವಿರತ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಪಕ್ಷದಲ್ಲಿ ಸೊಗಡು ಶಿವಣ್ಣರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನ ನಡೆದಿದ್ದು, ಈ ಬಾರಿ ತುಮಕೂರು ನಗರದ ಶಾಸಕ ಸ್ಥಾನದ ಟಿಕೆಟ್ ಸೊಗಡು ಶಿವಣ್ಣಗೆ ನೀಡಿ, ಸಂಸದ ಟಿಕೆಟ್ ಅನ್ನು ಜ್ಯೋತಿ ಗಣೇಶ್‌ಗೆ ನೀಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಾಗಿ ಶಾಸಕ ಜ್ಯೋತಿಗಣೇಶ್ ಇದೀಗ ಮೌನ ಮುರಿದು ಮಾತನಾಡುವ ಮೂಲಕ ಸ್ಪಷ್ಟನೆ ನೀಡಿದ್ದು, ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಬಿಜೆಪಿ ಟಿಕೆಟ್ ನೂರಕ್ಕೆ ನೂರರಷ್ಟು ನನಗೆ ಫಿಕ್ಸ್: ಇಂದು ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಜ್ಯೋತಿಗಣೇಶ್, ಈಗ ನಾನು ಹಾಲಿ ಶಾಸಕ ಇದ್ದಿನಿ, 2018 ರಲ್ಲಿ ಯಡಿಯೂರಪ್ಪನವರು ಟಿಕೆಟ್ ಕೊಟ್ಟು ಆಶಿರ್ವಾದ ಮಾಡಿದ್ದಾರೆ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಆಶಿರ್ವಾದದಿಂದ ನಾನು ಗೆದಿದ್ದೇನೆ. ಚುನಾವಣಾ ಸಂದರ್ಭದಲ್ಲಿ ಅಮಿತ್ ಷಾ, ಮೋದಿ ಅವರು ಬಂದು ನಮ್ಮನ್ನ ಟೆಕ್ ಆಫ್ ಮಾಡಿದ್ದರು. ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳಿಂದ ನನಗೆ ಬಿಜೆಪಿ ಟಿಕೆಟ್ ಸಿಗುವ ಭರವಸೆ ನೂರಕ್ಕೆ ನೂರರಷ್ಟು ಇದೆ. ಇದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ಸಂಸದರಾಗುವ ಸನ್ನಿವೇಶ ಈಗಿಲ್ಲ: ಲೋಕಸಭೆಗೆ ಹೋಗುವಂತಹ ಯಾವುದೇ ಸನ್ನಿವೇಶ ಇಲ್ಲ. ನನ್ನ ಇದುವರೆಗೆ ಯಾರು ಈ ಬಗ್ಗೆ ಕೇಳಿಲ್ಲ. ಅಂತಹ ಯಾವುದೇ ಚರ್ಚೆನು ಆಗಿಲ್ಲ. ಆ ರೀತಿಯಾಗಿ ಆಗಿದ್ದರೆ ನಾನೆ ಹೇಳುತ್ತಿದ್ದೆನು. ಪುನಃ ಬಿಜೆಪಿ ಸರ್ಕಾರವನ್ನ ಅಧಿಕಾರಕ್ಕೆ ತರೋದಿಕ್ಕೆ ಭದ್ರವಾಗಿ ನಿಂತುಕೊಳ್ಳುತ್ತೀನಿ. ಯಾವುದೋ ರಾಜಕೀಯ ವೈರಿಗಳ ಮಾತಿಗೆಲ್ಲಾ ದಯವಿಟ್ಟು ಕಿವಿಗೊಡಬೇಡಿ ಎಂದು ಮನವಿ ಮಾಡಿದರು.
ಬಿಜೆಪಿ ವರಿಷ್ಠರ ಮಾತಿಗೆ ಬದ್ಧನಾಗಿರುತ್ತೇನೆ: ನಾನು ಸದಾ ವರಿಷ್ಠರ ಮಾತಿಗೆ ನಾನು ಬದ್ಧನಾಗಿದ್ದೇನೆ. ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಬಿಜೆಪಿಯನ್ನ ಮತ್ತೆ ಅಧಿಕಾರಕ್ಕೆ ತರೋದಿಕ್ಕೆ ನಾನು ಬಿಜೆಪಿ ಜೊತೆಗಿರುತ್ತೇನೆ. ಬಿಜೆಪಿಯಿಂದ ನನಗೆ ಟಿಕೆಟ್ ಸಿಕ್ಕೇ ಸಿಗುತ್ತದೆ. ಇನ್ನು ಕೆಲವು ರಾಜಕೀಯ ವೈರಿಗಳು ನನಗೆ ಟಿಕೆಟ್ ಸಿಗಲಿಲ್ಲವೆಂದರೂ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಿದ್ದಾರೆ. ಆದರೆ ನನ್ನದು ಆ ರೀತಿಯ ರಾಜಕೀಯವಲ್ಲ. ಬಿಜೆಪಿಯಲ್ಲೇ ಇರ್ತಿನಿ ಬಿಜೆಪಿಯನ್ನ ಮತ್ತೆ ಅಧಿಕಾರಕ್ಕೆ ತರೋದಿಕ್ಕೆ ನಮ್ಮ ಪೂರ್ತಿ ಪರಿಶ್ರಮ ಹಾಕುತ್ತೇನೆ. ಇದರಲ್ಲಿ ಯಾವುದೇ ಕಾಂಪ್ರಮೈಸ್ ಇಲ್ಲ ಎಂದು ಹೇಳಿದರು.
‘ದೇಶದ ಅಭಿವೃದ್ಧಿಯಲ್ಲಿ ಯುವಸಮುದಾಯದ ಪಾಲಿದೆ’
ಗೆಲ್ಲುವ ಕೆಪಾಸಿಟಿ ಇರುವವರಿಗೆ ಟಿಕೆಟ್ ಕೊಡ್ತಾರೆ: ರಾಜ್ಯದಲ್ಲಿ ಎಂತಹದ್ದೇ ಸಂದರ್ಭ ಬಂದರೂ ಪಕ್ಷವನ್ನು ತೊರೆಯುವಂತ ನಿಲುವು ತೆಗೆದುಕೊಳ್ಳುವುದಿಲ್ಲ. ನನ್ನ ನಿಲುವು ಯಾವಾಗಲೂ ಒಂದೇ ಇರುತ್ತದೆ. ಅದು ಬದಲಾಗಲ್ಲ. ನಮ್ಮ ಪಕ್ಷದಲ್ಲಿ ಯಾರಿಗೆ ಗೆಲ್ಲೋ ಕೆಪಾಸಿಟಿ ಇದೆ ಅಂತವರಿಗೆ ಟಿಕೆಟ್ ಕೊಡುತ್ತಾರೆ. ಅದೇ ರೀತಿ ನನಗೆ ಗೆಲ್ಲೋ ಕೆಪಾಸಿಟಿ ಇರುವ ಬಗ್ಗೆ ಭರವಸೆ ಇದೆ. ಹಾಗಾಗಿ, ನನಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾನು ಇದುವರೆಗೆ ಯಾರನ್ನೂ ಕೀಳಾಗಿ ಮಾಡಿ ರಾಜಕೀಯ ಮಾಡಿಲ್ಲ. ಅದರ ಅಗತ್ಯವೂ ನನಗಿಲ್ಲ. ಜನ ನಮ್ಮನ್ನ ಪ್ರೀತಿ ಮಾಡುತ್ತಿದ್ದು, ಅವರು ಕೇಳಿದ ಕೆಲಸ ಮಾಡುತ್ತೇನೆ. ಎಲ್ಲ ಕಾರ್ಯಗಳನ್ನು ಮಾಡುವುದಕ್ಕೆ ನಾನೇನು ಬ್ರಹ್ಮನು ಅಲ್ಲ. ತುಮಕೂರು ನಗರಕ್ಕೆ ತುಂಬಾ ಅಗತ್ಯವಿರುವ ಕೆಲಸಗಳು ಕೆಲಸಗಳು ಏನೆಂದು ಯೋಜನೆಗಳನ್ನು ಪಟ್ಟಿ ಮಾಡಿಕೊಂಡು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.