ನಿಜವಾದ ರೈತ ನಾಯಕನೆಂದರೆ ಪ್ರಧಾನಿ ನರೇಂದ್ರ ಮೋದಿ: ಜೆ.ಪಿ.ನಡ್ಡಾ

By Ravi Janekal  |  First Published Feb 20, 2023, 11:25 PM IST

ಅಡಿಕೆ ಬೆಳೆಗಾರರ ಬಗ್ಗೆ ಕಾಂಗ್ರೆಸನದು ಮೊಸಳೆ ಕಣ್ಣೀರು, ನಕಲಿ ಅನುಕಂಪದ ಬಗ್ಗೆ ಬೆಳೆಗಾರರು ಅರ್ಥಮಾಡಿಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು. 


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಫೆ.20): ಅಡಿಕೆ ಬೆಳೆಗಾರರ ಬಗ್ಗೆ ಕಾಂಗ್ರೆಸನದು ಮೊಸಳೆ ಕಣ್ಣೀರು, ನಕಲಿ ಅನುಕಂಪದ ಬಗ್ಗೆ ಬೆಳೆಗಾರರು ಅರ್ಥಮಾಡಿಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು. 

Tap to resize

Latest Videos

ಚಿಕ್ಕಮಗಳೂರು(Chikkamagaluru) ಜಿಲ್ಲೆಯ ಕೊಪ್ಪ ಪಟ್ಟಣದ ಬಾಳಗಡಿಯಲ್ಲಿ ಶೃಂಗೇರಿ ಕ್ಷೇತ್ರ ಬಿಜೆಪಿ ವತಿಯಿಂದ ಏರ್ಪಡಿಸಲಾಗಿದ್ದ ಅಡಿಕೆ ಬೆಳೆಗಾರರ ಸಮಾವೇಶ(areca nut farmers Convention)ವನ್ನುದ್ದೇಶಿಸಿ ಮಾತನಾಡಿ ಜೆ ಪಿ ನಡ್ಡಾ(JP Nadda) ಯಡಿಯೂರಪ್ಪ(BS Yadiyurappa) ಹಾಗೂ ಬಸವರಾಜ ಬೊಮ್ಮಾಯಿ(Basavaraj bommai) ನೇತೃತ್ವದಲ್ಲಿ ರಾಜ್ಯದ ಅಡಿಕೆ ಬೆಳೆಗಾರರಿಗೆ ಬಿಜೆಪಿ ಸರ್ಕಾರ ಸಾಕಷ್ಟು ಕೊಡುಗೆ ನೀಡಿದೆ ಎಂದರು.

 

BJP Executive Meeting ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವಧಿ ವಿಸ್ತರಣೆ, 2024ರ ವರೆಗೆ ಅಧಿಕಾರ!

ಅಡಿಕೆ ಬೆಳೆಗಾರರ ಪರವಾದ ತೀರ್ಮಾನ ತೆಗೆದುಕೊಂಡ ಸರ್ಕಾರ ಇದ್ದರೆ ಅದು ಬಿಜೆಪಿ ಸರ್ಕಾರ ಮಾತ್ರ. ಈ ಸಂಬಂಧ ಯಾವುದೇ ಚರ್ಚೆಗೆ ಸಿದ್ಧ ಎಂದರು.1982 ರಲ್ಲಿ ಯಡಿಯೂರಪ್ಪ ಅವರು ಅಡಿಕೆ ಬೆಳೆಗಾರರಿಗೆ ನ್ಯಾಯ ಒದಗಿಸಲು ಪಾದಯಾತ್ರೆ ಮಾಡಿದ್ದರು. ಆದರೆ ಕಾಂಗ್ರೆಸ್‌ನ ಬಹಳಷ್ಟು ಜನ ನಾವು ರೈತರ ಮುಖಂಡ, ನಾಯಕರು ಎಂದು ಹೇಳಿಕೊಳ್ಳುತ್ತಾರೆ. ಆದರೆ ರೈತರಿಗಾಗಿ ಏನನ್ನೂ ಮಾಡಲಿಲ್ಲ ಎಂದು ದೂರಿದರು.

ದೇಶದಲ್ಲಿ22 ಮೆಗಾ ಪಾರ್ಕ್ಗಳನ್ನು ಕೃಷಿ ಮತ್ತು ತೋಟಗಾರಿಕೆ ಬೆಳೆಗೆ ಪ್ರೋತ್ಸಾಹ ಕೊಡಲೆಂದೇ ಸ್ಥಾಪಿಸಿದ್ದೇವೆ. ಹಿಂದೆ ಕೇವಲ 2 ಪಾರ್ಕ್ಗಳು ಮಾತ್ರ ಇತ್ತು. ಅಡಿಕೆಗೆ ಪೂರಕ ವಾತಾವರಣವನ್ನು ನಮ್ಮ ಸರ್ಕಾರಗಳು ಸೃಷ್ಠಿಸಿವೆ. 2017 ರಲ್ಲಿ 2.79 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ಇಂದು ಅದು 5.49 ಲಕ್ಷ ಹೆಕ್ಟರ್ ಪ್ರದೇಶಕ್ಕೆ ವಿಸ್ತರಿಸಲಾಗಿದೆ. 2017 ರಲ್ಲಿ ಕ್ವಿಂಟಾಲ್ ಅಡಿಕೆಗೆ 17 ಸಾವಿರ ರೂ.ಬೆಲೆ ಇತ್ತು. 2021_22 ಅದು 25ರಿಂದ 30 ಸಾವಿರಕ್ಕೆ ಏರಿಕೆಯಾಯಿತು. ಚಾಲಿ ಅಡಿಕೆ ಬೆಲೆಯಲ್ಲಿ ಹೆಚ್ಚಳವಾಗಿದೆ. ರಾಜ್ಯದ ಸಾಗರ ಅಡಿಕೆ ಮಂಡಿಯಲ್ಲಿ ಇಂದು ಸುಮಾರು 40 ಸಾವಿರ ರೂ. ಬೆಲೆ ಇದೆ ಎಂದರು.

ಸಂಶೋಧನಾ ಕೇಂದ್ರ ಸ್ಥಾಪಿಸಲು ತೀರ್ಮಾನ : 

ಅಡಿಕೆ ಬೆಳೆಗಾರರು ಆಮದು ನೀತಿಯಿಂದ ಸಮಸ್ಯೆ ಅನುಭವಿಸುತ್ತಿರುವುದು ನಮ್ಮ ಗಮನದಲ್ಲಿದೆ.  ಈ ಕಾರಣಕ್ಕೆ ಬಿಜೆಪಿ ಸರ್ಕಾರ ಆಮದು ಶುಲ್ಕ ಹೆಚ್ಚಿಸಿದೆ. ಕಳಪೆ ಅಡಿಕೆ ಆಮದಾಗುವುದನ್ನು ತಡೆಯುವ ಉದ್ದೇಶದಿಂದ ಮೂರು ಪಟ್ಟು ಆಮದು ಶುಲ್ಕ ವಿಧಿಸಲಾಗುತ್ತಿದೆ. ಹಳದಿ ಎಲೆ ಮತ್ತು ಕಪ್ಪು ಚುಕ್ಕೆ ತಡೆಗಟ್ಟುವ ನಿಟ್ಟಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಲು ತೀರ್ಮಾನಿಸಿದೆ ಎಂದರು.ಹಳದಿ ಎಲೆ ನಿಯಂತ್ರಣ ಸಂಬಂಧ ರಾಷ್ಟ್ರಮಟ್ಟದಲ್ಲಿ ತಜ್ಞರ ಸಮಿತಿ ರಚಿಸಲಾಗುತ್ತಿದೆ. ಇತ್ತ ಕರ್ನಾಟಕ ಸರ್ಕಾರವೂ ಈ ವಿಚಾರದಲ್ಲಿ ಕಾಳಜಿ ತೋರಿದೆ. ಇದಕ್ಕಾಗಿ ತೀರ್ಥಹಳ್ಳಿ ಸಂಶೋಧನಾ ಕೇಂದ್ರಕ್ಕೆ ೧೦ ಕೊಟಿ ರೂ. ಮೀಸಲಿಟ್ಟಿದೆ. ಒಂದೆಡೆ ರೋಗ ನಿಯಂತ್ರಣ ಮತ್ತೊಂದೆಡೆ ಅಡಿಕೆ ಉತ್ಪಾದನೆ ಹೆಚ್ಚಳದ ಬಗ್ಗೆ ಹಲವು ಕ್ರಮಗಳನ್ನು ಏಕ ಕಾಲದಲ್ಲಿ ತೆಗೆದುಕೊಳ್ಳುತ್ತಿದ್ದೇವೆ ಎಂದರು.ನಮ್ಮ ಸರ್ಕಾರ ಕಾಪರ್ ಸಲ್ಫೇಟ್ ಮತ್ತು ಇತರೆ ರಾಸಾಯನಿಕಗಳ ಬಳಕೆಗೆ ಸಾಮಾನ್ಯ ವರ್ಗದ ಬೆಳೆಗಾರರಿಗೆ ಶೇ.75 ರಷ್ಟು ಸಹಾಯಧನ ಹಾಗೂ ಪರಿಶಿಷ್ಠ ಜಾತಿ, ಪಂಗಡಕ್ಕೆ ಶೇ.90 ರಷ್ಟು ಸಹಾಯಧನ ನೀಡುತ್ತಿದೆ. ಅಡಿಕೆ ಬೆಳೆಹಾನಿಗೆ ಬಜೆಟ್ನಲ್ಲಿ ಅನುದಾನ ಘೋಷಿಸಿದೆ ಎಂದರು.

ಮೋದಿ ನಿಜವಾದ ರೈತನಾಯಕ

ಪ್ರಧಾನಮಂತ್ರಿ ನರೇಂದ್ರ ಮೋದಿ(PM Narendra Modi) ಅವರು ರೈತರ ಪರ ನಿಜವಾದ ಕಾಳಜಿ ಇರುವ ನಾಯಕ ಎಂದು ಜೆ.ಪಿ.ನಡ್ಡಾ ಹೇಳಿದರು. ಫಸಲ್ ಭೀಮಾ ಯೋಜನೆ(Fasal Bhima Yojana) ಅಲ್ಲದೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ(Pradhan Mantri Kisan Samman Nidhi Yojana)ಯಡಿ 11.78 ಕೋಟಿ ರೈತರಿಗೆ ಪ್ರತಿ ವರ್ಷ 6 ಸಾವಿರ ರೂ.ಗಳನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ. 

ಪ್ರಧಾನ್ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ (Pradhan Mantri Kisan Maan Dhan Yojana), 20 ಲಕ್ಷ ರೈತರು ನೊಂದಾಯಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ 40ಸಾವಿರ ಮಂದಿ ನೊಂದಾಯಿಸಿಕೊಂಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಪ್ರಧಾನ ಮಂತ್ರಿ 1 ಲಕ್ಷ ಕೋಟಿ ರೂ.ಗಳನ್ನು ಕೃಷಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಿದ್ದಾರೆ. ಕೃಷಿ ಬಜೆಟ್ನ್ನು 1.32 ಲಕ್ಷ ಕೋಟಿ ಬಜೆಟ್ ನೀಡಿರುವುದು ಹರ್ಷದಾಯಕ. ಇದರೊಂದಿಗೆ ಕನಿಷ್ಠ ಬೆಂಬಲ ಬೆಲೆ, ಕೃಷಿ ಸಿಂಚಯಿ ಯೋಜನೆಗೆ 93 ಸಾವಿರ ಕೋಟಿ ರೂ. ಒದಗಿಸಿದೆ ಎಂದರು.

ಅಡಿಕೆಗೆ ಮಾನ, ಮರ್ಯಾದೆ ಕೊಡದೆ ಇದ್ದವರು ಕಾಂಗ್ರೆಸ್ : 

ಕೇಂದ್ರದವರು ಅಡಿಕೆ ನಿಷೇಧಿಸುತ್ತಾರೆ ಎಂದು ಕಾಂಗ್ರೆಸಿಗರು ರಸ್ತೆ ಮೇಲೆ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಅಡಿಕೆಗೆ ಮಾನ, ಮರ್ಯಾದೆ ಕೊಡದೆ ಇದ್ದವರು ಹಿಂದಿನ ಕಾಂಗ್ರೆಸ್ ಸರ್ಕಾರದವರು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಆರೋಪಿಸಿದರು.

9 ರಾಜ್ಯಗಳ ಚುನಾವಣೆಗೆ ಬಿಜೆಪಿ ಕಾರ್ಯತಂತ್ರ, ಪ್ರಧಾನಿ ಭರ್ಜರಿ ರೋಡ್‌ ಶೋ!

ಕ್ಷೇತ್ರಮಟ್ಟದ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಮಾತನಾಡಿ ಅವರು 2012 ರಲ್ಲಿ ಸುಪ್ರೀಂ ಕೋರ್ಟ್ಗೆ ಕಾಂಗ್ರೆಸ್ ಸರ್ಕಾರದ ಅಡಿಷನಲ್ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಅವರೇ ಅಡಿಕೆ ಕ್ಯಾನ್ಸರ್ ಕಾರಕ ಎಂದು ಸುಪ್ರೀಂ ಕೋರ್ಟ್ ಗೆ(Supreme court) ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಇದರ ವಿರುದ್ಧ ಹೋರಾಡಲು ಬಿ.ಎಸ್.ಯಡಿಯೂರಪ್ಪ ಅವರು ಸುಪ್ರೀಂ ಕೋರ್ಟ್ನಲ್ಲಿ ವಕೀಲರನ್ನು ನೇಮಿಸಿಕೊಟ್ಟಿದ್ದನ್ನು ನಾವು ಕಂಡಿದ್ದೇವೆ ಎಂದರು. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ವಿಭಾಗ ಪ್ರಭಾರಿ ಗಿರೀಶ್ ಕಾರಂತ್, ಜಿಲ್ಲಾ ಪ್ರಭಾರಿ ಚನ್ನಬಸಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಜಿ.ಪಂ. ಮಾಜಿ ಅಧ್ಯಕ್ಷ ಶೆಟ್ಟಿಗದ್ದೆ ರಾಮಸ್ವಾಮಿ, ಸತೀಶ್, ಅರುಣ್ ಕುಮಾರ್, ಉಮೇಶ್, ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ಬಿ.ರಾಜಪ್ಪ, ಕ್ಷೇತ್ರದ ಮೂರೂ ಮಂಡಲಗಳ ಅಧ್ಯಕ್ಷರು ಇತರರು ಇದ್ದರು.

click me!