ಹಾವಾಡಿಸೋರು ಹಾವು ಬಿಡ್ತೀವಿ ಅಂತಾ ಹೆದರಿಸ್ತಾರಲ್ಲ ಹಂಗೇ ಎಚ್ಡಿಕೆ ಆರೋಪ: ರಾಜಣ್ಣ ಟಾಂಗ್

By Ravi JanekalFirst Published Aug 5, 2023, 1:05 PM IST
Highlights

ರಾಜ್ಯ ಸರ್ಕಾರ ವರ್ಗಾವಣೆ ದಂಧೆ ನಡೆಸಿದೆ ಎಂಬುದೆಲ್ಲ ಸುಳ್ಳು, ಅದೇನಾದರೂ ನಿಜವಾಗಿದ್ರೆ ಇಂತಹವರು ಇಂಥ ಇಲಾಖೆಯಲ್ಲಿ ಆಗಿದೆ ಎಂದು ನಿಖರವಾಗಿ ಹೇಳಲಿ ಎಂದು ಹಾಸನದಲ್ಲಿ ಸಚಿವ ಕೆಎನ್‌ ರಾಜಣ್ಣ ಹೇಳಿದರು.

ಹಾಸನ (ಆ.5) : ರಾಜ್ಯ ಸರ್ಕಾರ ವರ್ಗಾವಣೆ ದಂಧೆ ನಡೆಸಿದೆ ಎಂಬುದೆಲ್ಲ ಸುಳ್ಳು, ಅದೇನಾದರೂ ನಿಜವಾಗಿದ್ರೆ ಇಂತಹವರು ಇಂಥ ಇಲಾಖೆಯಲ್ಲಿ ಆಗಿದೆ ಎಂದು ನಿಖರವಾಗಿ ಹೇಳಲಿ ಎಂದು ಹಾಸನದಲ್ಲಿ ಸಚಿವ ಕೆಎನ್‌ ರಾಜಣ್ಣ ಹೇಳಿದರು.

ವರ್ಗಾವಣೆ ದಂಧೆ ನಡೆಯುತ್ತಿವೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವರ್ಗಾವಣೆ ಎಂಬುದೆಲ್ಲ ಸುಳ್ಳು ಈ ಹಿಂದೆ ಅದೇನೋ ಹೇಳ್ತಿದ್ರಲ್ಲ ಜೇಬಿನಲ್ಲಿ ತೋರಿಸಿಕೊಂಡು ಇಲ್ಲೈತೆ ಇಲ್ಲೈತೆ ಅಂತಾ ಏನಿದೆ ಅದ್ರಲ್ಲಿ? ಮೊದಲು ಅದರಲ್ಲೇನಿದೆ ಅಂತಾ ಹೊರಹಾಕೋದಕ್ಕೆ ಹೇಳಿ. ಹೊರಹಾಕಿದ್ರೆ ತಪ್ಪಿಸ್ಥರು ಯಾರು ಅಂತಾ ಗೊತ್ತಾಗ್ತದೆ. ಅದುಬಿಟ್ಟು ಜೇಬಲ್ಲಿಟ್ಕೊಂಡು ಇಲ್ಲೈತೆ ಇಲ್ಲೈತೆ ಅಂತಾ ಸುಳ್ಳೂ ಆರೋಪ ಮಾಡುವುದುಯಾರಿಗೂ ಶೋಭೆ ತರುವಂತದ್ದಲ್ಲ ಎಂದು ಮಾಜಿ ಸಿಎಂ ಎಚ್‌ಡಿಕೆಗೆ ತಿವಿದರು.\

Latest Videos

ದೇವೇಗೌಡ್ರು ಮಧುಗಿರಿಗೆ ಬಂದು ಎದೆ ಬಡಕೊಂಡ್ರೂ ನನ್ನ ಸೋಲಿಸಲಾಗಲಿಲ್ಲ: ಕೆಎನ್ ರಾಜಣ್ಣ

ಬಿಡಿಎನಲ್ಲಿ‌ ಹಣ ವಸೂಲಿ ಮಾಡೋದಕ್ಕೆ ಅಧಿಕಾರಿಗಳನ್ನ ನೇಮಕ‌ ಮಾಡಿದ್ದಾರೆ ಎಂದು ಹೇಳ್ತಾರೆ. ಆದರೆ ಅವೂ ಕೂಡ ಸುಳ್ಳು. ನಮ್ಮ ಸರ್ಕಾರ  ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ.  ಏನೇ ಆಪಾದನೆ ಮಾಡಿದ್ರೂ ಕೂಡಾ  ಆ ಆಪಾದನೆ ಏನಾದ್ರೂ ಆಧಾರ ಇರಬೇಕು ಆಧಾರ ಇಟ್ಟು ಹೇಳಿದ್ರೆ ಒಪ್ತೇವೆ, ಆಧಾರ ಇಟ್ಮೊಂಡು ನೀವೆಲ್ಲ ತೋರಿಸಿದ್ರೆ ತೋರಿಸಿದ್ರೆ ನಾನು ಬಹಳ ಸಾರಿ ನೋಡಿದೆ. ಅದರಬದಲು ಇಲ್ಲೆಲ್ಲಾ ಇಟ್ಕೊಂಡಿದ್ದೀನಿ, ತೋರಿಸ್ತೀನಿ.. ನಾಳೆ ಕೊಡ್ತೀನಿ, ನಾಳಿದ್ದು ಕೊಡ್ತೀನಿ ಅನ್ನೋದು ಕೇಳಿದ್ರೆ, ಹಾವಾಡಿಗರು ಹಾವು ಬಿಡ್ತಿವಿ ಅಂತಾ ಹೇಳಿ ಹೆದರಿಸ್ತಾರಲ್ಲ ಆತರ ಕೆಲಸ ಮಾಡಬಾರದು ಈ ಲೂ ತೋರಿಸೋದಕ್ಕೆ ಹೇಳಿ ಅರ್ಜೆಂಟಾಗಿ. ವೈಯಕ್ತಿಕವಾಗಿ ಅಪಾದನೆ ಮಾಡ್ತಾರಲ್ಲ, ಇಷ್ಟು ದಿನ ಏನು ಮಾಡಿದ್ರು? ಯಾಕೆ ಸುಮ್ನಿದ್ರು? ಈಗ ಜೇಬಿನಲ್ಲಿಟ್ಟುಕೊಂಡು ದಂಧೆ ನಡೆದಿದೆ ಅಂತಾ ಸುಳ್ಳು ಹೇಳ್ತಾರೆ. ನಿಜ ಇದ್ರೆ ಪುರಾವೆ ತೋರಿಸಲಿ. ಜೇಬಿನಲ್ಲಿರೋದು ಬಹಿರಂಗ ಪಡಿಸಲಿ ಸವಾಲು ಹಾಕಿದರು.

 

Karnataka Govt Formation: ಮೇ.18 ಕ್ಕೆ ಸಿಎಂ ಪ್ರಮಾಣ ವಚನ ಕಾರ್ಯಕ್ರಮ

ಗೃಹಜ್ಯೋತಿ ಇಂದಿನ ಕಾರ್ಯರೂಪಕ್ಕೆ:

ಯಾರು ಏನೇ ಅಪಾದನೆ ಮಾಡಲಿ. ಕಾಂಗ್ರೆಸ್ ಪಕ್ಷದ ಸರ್ಕಾರ, ಸಿದ್ದರಾಮಯ್ಯರ ಸರ್ಕಾರ ಎಂದರೆ ನುಡಿದಂತೆ ನಡೆಯುವ ಸರ್ಕಾರ. ನಾವು ಕೊಟ್ಟ ಭರವಸೆಯಂತೆ ಗ್ಯಾರಂಟಿ ಯೋಜನೆಗಳು ಜಾರಿ ಮಾಡಿದ್ದೇವೆ. ಇಂದು ಗೃಹಜ್ಯೋತಿ ಯೋಜನೆ ಕಾರ್ಯರೂಪಕ್ಕೆ ತರ್ತಾಇದ್ದೇವೆ ಎಂದರು. ಇದೇ ವೇಳೆ ಎಸ್ಸಿಪಿಟಿಎಸ್ಪಿ ಅನುದಾನ ಬೇರೆಡೆ ಬಳಸಲಾಗುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು. ದುಡ್ಡು ಆ ಸಮುಯದಾಯದ ಜನರ ಅಭ್ಯುದಯಕ್ಕೆ ಖರ್ಚು ಮಾಡೋದಕ್ಕೆ ಅಂತಾನೇ ಇರೋದು. ಅದು ವೈಯಕ್ತಿವಾಗಿ ಹಸು ಕೊಡಿಸಬಹುದು, ಮನೆ ಕಟ್ಟಿಸಿಕೊಡಬಹುದು.  ಆರ್ಥಿಕ ಚಟುವಟಿಕೆಗಳನ್ನ ಮಾಡೋದಕ್ಕೆ ಬೇಕಿರುವ ಕಾರ್ಯಕ್ರಮವನ್ನ ರೂಪಿಸಿಬೇಕು ಅಂತಿದ್ದೇವೆ. ಈ ಸಂಬಂಧ ನಾನು ಈಗಾಗಲೇ ಮಹದೇವಪ್ಪನವರ ಜೊತೆ ಈಗಾಗಲೇ ಮಾತಾಡಿದ್ದೇನೆ.  ಯಾರಿಗೆಲ್ಲಾ ಬೋರ್ ವೆಲ್ ಗಳನ್ನ ಹಾಕಿಸಿಕೊಡ್ತಾರೆ, ಯಾರೆಲ್ಲಾ ಮೇವನ್ನ ಒದಗಿಸಿಕೊಳ್ಳೋದಕ್ಕೆ ಶಕ್ತಿ ಇರುತ್ತೋ ಅವರಿಗೆ ಮೊದಲನೇ ಎರಡು ಹಸುಗಳನ್ನ ಕೊಡಿಸಬೇಕು ಅನ್ನೋ ಯೋಜನೆಗಳಿವೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರ ವೈಯಕ್ತಿಕ ಜೀವನದ ಮಟ್ಟವನ್ನ ಹೆಚ್ಚಿಸುವಂತಹದ್ದು ಎಲ್ಲವನ್ನೂ ಕಾನೂನಿನ ಅನ್ವಯ ಮಾಡುತ್ತೇವೆ ಎಂದರು

click me!