ಐನೋಳ್ಳಿ ಗ್ರಾಪಂ ಚುನಾವಣೆ: ಪುಣೆ ಲಾಡ್ಜ್‌ನಿಂದ ಸಿನಿಮೀಯ ರೀತಿ ಬಿಜೆಪಿ ಬೆಂಬಲಿತ ಸದಸ್ಯರ ಅಪಹರಣ

By Ravi Janekal  |  First Published Aug 5, 2023, 11:40 AM IST

ತಾಲೂಕಿನ ಐನೋಳ್ಳಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್-ಬಿಜೆಪಿ ಪಕ್ಷಗಳ ನಡುವೆ ನಡೆದ ತೀವ್ರ ಹಣಾಹಣಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರನ್ನು ಸಿನಿಮೀಯ ರೀತಿಯಲ್ಲಿ ಅಪಹಿರಿಸಿರುವ ಘಟನೆ ನಡೆದಿದೆ.


ಚಿಂಚೋಳಿ (ಆ.5) ತಾಲೂಕಿನ ಐನೋಳ್ಳಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್-ಬಿಜೆಪಿ ಪಕ್ಷಗಳ ನಡುವೆ ನಡೆದ ತೀವ್ರ ಹಣಾಹಣಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರನ್ನು ಸಿನಿಮೀಯ ರೀತಿಯಲ್ಲಿ ಅಪಹಿರಿಸಿರುವ ಘಟನೆ ನಡೆದಿದೆ.

18 ಸದಸ್ಯರನ್ನೊಳಗೊಂಡಿರುವ ಐನೊಳ್ಳಿ ಗ್ರಾಮ ಪಂಚಾಯತಿ. ಈ ಬಾರಿ ಅಧಿಕಾರಕ್ಕೇರುವ ನಿಟ್ಟಿನಲ್ಲಿ ತಂತ್ರ ರೂಪಿಸಿ ಬಿಜೆಪಿ ಬೆಂಬಲಿತ 11 ಸದಸ್ಯರು ಕಳೆದ ಹದಿನೈದು ದಿನಗಳಿಂದ ಮಹಾರಾಷ್ಟ್ರ ಪ್ರವಾಸಕ್ಕೆ ತೆರಳಿದ್ದರು. ಕಾಂಗ್ರೆಸ್ ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಕೆಲವು ಸದಸ್ಯರು ಮಹಾರಾಷ್ಟ್ರದ ಲಾಡ್ಜ್‌ನಲ್ಲಿರುವ ಮಾಹಿತಿ ತಿಳಿದು ಬೆನ್ನತ್ತಿ ಮಹಾರಾಷ್ಟ್ರದ ಪುಣೆಯ ಲಾಡ್ಜನಲ್ಲಿ ತಂಗಿದ್ದ 6  ಜನ ಬಿಜೆಪಿ ಸದಸ್ಯರನ್ನು ಸಿನೀಮಿಯ ರೀತಿಯಲ್ಲಿ ಅಪಹರಣ ಮಾಡಲಾಗಿತ್ತ. ಪುಣೆಯ ಲಾಡ್ಜ್‌ನಿಂದ ಅಪಹರಣ ಮಾಡುವ ದೃಶ್ಯ ಸಿಸಿಟಿಟಿಯಲ್ಲಿ ಸೆರೆಯಾಗಿದೆ.  ಹತ್ತಕ್ಕೂ ಹೆಚ್ಚು ಜನ ಲಾಡ್ಜಗೆ ನುಗ್ಗಿ ನಾಲ್ವರು ಸದಸ್ಯರ ಅಪಹರಣ ಮಾಡಿದ್ದಾರೆ.

Latest Videos

undefined

ಸವದಿ ವಿರುದ್ಧ ಪ್ರತಿಷ್ಠೆಯ ಗ್ರಾಪಂ ಚುನಾವಣೆ ಗೆದ್ದ ಜಾರಕಿಹೊಳಿ..!

ಚಿಂಚೋಳಿ 5 ಗ್ರಾಪಂನಲ್ಲಿ ಕಾಂಗ್ರೆಸ್‌ ಬೆಂಬಲಿತರ ಆಡಳಿತ

ಚಿಂಚೋಳಿ: ತಾಲೂಕಿನ ಸುಲೇಪೇಟ, ಕುಂಚಾವರಂ, ದೇಗಲಮಡಿ, ಶಿರೋಳಿ, ಹಸರಗುಂಡಗಿ ಗ್ರಾಪಂ ಅಧ್ಯಕ್ಷ/ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಗ್ರಾಪಂ ಸದಸ್ಯರು ಭರ್ಜರಿ ವಿಜಯಸಾ​ಸಿ ಗೆಲುವಿನ ನಗೆ ಬೀರಿ ಸಂಭ್ರಮಿಸಿದರು. ಐನಾಪೂರ ಗ್ರಾಪಂದಲ್ಲಿ ಮಾತ್ರ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು ವಿಜಯ ಸಾ​ಧಿಸಿದರು.

ತಾಲೂಕಿನ ಪೋಲಕಪಳ್ಳಿ ಗ್ರಾಪಂಗೆ ಜಯಮ್ಮ ನರಸಪ್ಪ ಪೂಜಾರಿ ಅಧ್ಯಕ್ಷೆಯಾಗಿ, ರಾಜಶೇಖರ ಅಣ್ಣೆಪ್ಪ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿ​ಕಾರಿ ಮಲ್ಲಿಕಾರ್ಜುನ ಕಟ್ಟಿಮನಿ ಮತ್ತು ಸಹಾಯಕ ನಿರ್ದೇಶಕ ನಾಗೇಂದ್ರಪ್ಪ ಬೆಡಕಪಳ್ಳಿ ಚುನಾವಣಾ ಫಲಿತಾಂಶ ಘೋಷಿಸಿದರು.

ತಾಲೂಕಿನ ಸುಲೇಪೇಟ ಗ್ರಾಪಂಗೆ ಸಂತೋಷಕುಮಾರ ಮೇಘರಾಜ ರಾಠೋಡ ಅಧ್ಯಕ್ಷರಾಗಿ ಮತ್ತು ಬಿಸಿಎ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪ​ರ್ಧಿಸಿದ ಮೀರಾಜಬೇಗಮ ಮಹ್ಮದ ಫಾಜಿಲ್‌ ಸುಲೇಪೇಟ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿ​ಕಾರಿ ಎಇಇ ರಾಜೇಶ ಪಾಟೀಲ ಚುನಾವಣಾ ಫಲಿತಾಂಶ ಪ್ರಕಟಿಸಿದರು.

ತಾಲೂಕಿನ ಐನಾಪುರ ಗ್ರಾಪಂಗೆ ಬಿಜೆಪಿ ಬೆಂಬಲಿತ ಸಂಜೀವಕುಮಾರ ದೇವೇಂದ್ರಪ್ಪ ಭೂಯ್ಯಾರ(ಕೆ) ಮತ್ತು ಉಮಲಿಬಾಯಿ ಬನಸಿಲಾಲ ಫತ್ತುನಾಯಕ ತಾಂಡಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿ​ಕಾರಿ ಪ್ರಭುಲಿಂಗ ಬುಳ್ಳ ಚುನಾವಣಾ ಫಲಿತಾಂಶ ಘೋಷಣೆ ಮಾಡಿದರು.

ತಾಲೂಕಿನ ಗಡಿಪ್ರದೇಶದ ಕುಂಚಾವರಂ ಗ್ರಾಪಂಗೆ ರಮೇಶ ಚಂದ್ರಯ್ಯ ಅಧ್ಯಕ್ಷರಾಗಿ, ಸುಮಲತಾ ಶ್ರೀಕಾಂತ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು. ಚುನಾವಣಾ​ಧಿಕಾರಿ ಬಿಇಒ ಸುಧಾರಾಣಿ ಫಲಿತಾಂಶ ಪ್ರಕಟಿಸಿದರು.

ಶಿರೋಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ಈರಮ್ಮ ನಾಗಪ್ಪ ಹೂವಿನಬಾವಿ ಮತ್ತು ಉಪಾಧ್ಯಕ್ಷರಾಗಿ ಬಂದಿಗೆಪ್ಪ ರಾಮಣ್ಣ ರುದನೂರ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ತಾಪಂ ಇಒ ಅಧಿ​ಕಾರಿ ಶಂಕರ ರಾಠೋಡ ತಿಳಿಸಿದ್ದಾರೆ.

ಹಳೇಬೀಡು ಗ್ರಾಪಂ ಚುನಾವಣೆ: ಅಧಿಕಾರಕ್ಕಾಗಿ ಬೀದಿಯಲ್ಲಿ ಬಡಿದಾಡಿಕೊಂಡ ಜನಪ್ರತಿನಿಧಿಗಳು!

ಹಸರಗುಂಡಗಿ ಗ್ರಾಪಂಗೆ ಪದ್ಮಾವತಿ ಮಾರುತಿ ಅಧ್ಯಕ್ಷರಾಗಿ, ಉಪಾಧ್ಯಕ್ಷ ಸ್ಥಾನಕ್ಕೆ ಸಿದ್ದಮ್ಮ ವಿಠಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ​ಧಿಕಾರಿ ಡಾ. ಧನರಾಜ ಬೊಮ್ಮ ತಿಳಿಸಿದ್ದಾರೆ.

ದೇಗಲಮಡಿ ಗ್ರಾಪಂ ಸಾಮಾನ್ಯ ಅಧ್ಯಕ್ಷ ಸ್ಥಾನಕ್ಕೆ ಸ್ಪ​ರ್ಧಿಸಿದ ಮಧುಮತಿ ಮಾರುತಿ-8 ಮತಗಳು ಮತ್ತು ಪ್ರತಿಸ್ಪ​ರ್ಧಿ ವಿನೋದ ರೇವಣಸಿದ್ದಪ್ಪ-7 ಮತಗಳು ಪಡೆದರು. ಆದರೆ ಒಂದು ಮತಗಳ ಅಂತರದಿಂದ ಮಧುಮತಿ ಗೆಲುವು ಸಾಧಿ​ಸಿ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಬಿಸಿಎ ಸ್ಥಾನಕ್ಕೆ ಸ್ಪ​ರ್ಧಿಸಿದ ರಿಜ್ವಾನ ಬೇಗಂ ಕಾಶಿಮ-8 ಘಾಸಿಬೀ ಲಾಲ ಅಹೆಮದ-7 ಮತಗಳನ್ನು ಪಡೆದುಕೊಂಡರು ಒಂದು ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿ​ಸಿದ ಕಾಂಗ್ರೆಸ್‌ ಬೆಂಬಲಿತ ಮಧುಮತಿ ಅಧ್ಯಕ್ಷರಾಗಿ ಮತ್ತು ರಿಜ್ವಾನಬೇಗಂ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾ​ಧಿಕಾರಿ ಗುರುಪ್ರಸಾದ ಕವಿತಾಳ ತಿಳಿಸಿದ್ದಾರೆ.

ಈ ಬಗ್ಗೆ ಬಿಜೆಪಿ ಪ್ರತಿಕ್ರಿಯಿಸಿದ್ದು ಇದು ಕಾಂಗ್ರೆಸ್ ಮುಖಂಡರದ್ದೇ ಕೃತ್ಯ ಎಂದು ಆರೋಪಿಸಿದ್ದಾರೆ. ಸದ್ಯ ಅಪಹರಣ ಘಟನೆ ಸಂಬಂಧ ಮಹಾರಾಷ್ಟ್ರದ ಪುಣೆ ನಗರದ ಚಿಕ್ಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐ ಆರ್ ದಾಖಲಾಗಿದೆ.

click me!